ETV Bharat / sukhibhava

ಲೈಂಗಿಕ ಸಮಸ್ಯೆಗಳಿಂದ ಒಟ್ಟಾರೆ ಆರೋಗ್ಯದ ಮೇಲೆ ಬೀರುತ್ತೆ ಪರಿಣಾಮ..

ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳು, ಅವುಗಳ ಚಿಕಿತ್ಸೆ ಹಾಗೂ ಲೈಂಗಿಕ ಆರೋಗ್ಯ ಮತ್ತು ಸಂತಾನೋತ್ಪತ್ತಿಗೆ ಸಂಬಂಧಿಸಿದ ಇತರ ಸಮಸ್ಯೆಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಫೆಬ್ರವರಿ 12ರಂದು ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಜಾಗೃತಿ ದಿನ ಆಚರಿಸಲಾಗುತ್ತದೆ.

Sexual and Reproductive Health Awareness Day 2023
ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಜಾಗೃತಿ ದಿನ
author img

By

Published : Feb 14, 2023, 7:40 PM IST

ಹೈದರಾಬಾದ್: ನಮ್ಮ ದೇಶದಲ್ಲಿ ಪುರುಷ ಮತ್ತು ಮಹಿಳೆಯರಲ್ಲಿ ಲೈಂಗಿಕ ಆರೋಗ್ಯದ ಬಗ್ಗೆ ಅಗತ್ಯ ಅರಿವಿನ ಕೊರತೆ ಹೆಚ್ಚಿದೆ. ಇದರ ಪರಿಣಾಮವು ಸಾಮಾನ್ಯವಾಗಿ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸಮಸ್ಯೆಗಳ ರೂಪದಲ್ಲಿ ಕಾಣಿಸುತ್ತದೆ. ನಿರ್ದಿಷ್ಟವಾಗಿ ಮಹಿಳೆಯರಿಗೆ ಅರಿವಿನ ಕೊರತೆ, ಸಾಮಾಜಿಕ ನಿಷೇಧಗಳು ಹಾಗೂ ಇತರ ಹಲವು ಕಾರಣಗಳಿಂದ ತಮ್ಮ ಸಮಸ್ಯೆಗಳ ಬಗ್ಗೆ ಹೆಚ್ಚು ಮಾತನಾಡಲು ಅಥವಾ ಸಮಯಕ್ಕೆ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಮಹಿಳೆಯರ ದೈಹಿಕ ಆರೋಗ್ಯ ಮಾತ್ರವಲ್ಲದೇ, ಅವರ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯ ಹಾಗೂ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಜಾಗೃತಿ ದಿನ: ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಫೆಬ್ರವರಿ 12ರಂದು ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಇದರ ಉದ್ದೇಶವು ಲೈಂಗಿಕ ಅಥವಾ ಸಂತಾನೋತ್ಪತ್ತಿ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರವಲ್ಲ, ಕಾನೂನಿನ ಸಮಸ್ಯೆಗಳು, ತಪ್ಪುಗ್ರಹಿಕೆಗಳು, ಸಾಮಾಜಿಕ ಗ್ರಹಿಕೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಜನರ ಆಲೋಚನೆಗಳ ಬಗ್ಗೆ ಚರ್ಚಿಸುವುದು ಆಗಿದೆ.

ಬಂಜೆತನದ ಪ್ರಕರಣಗಳು ಹೆಚ್ಚಳ: ಭಾರತದಲ್ಲಿ ಪುರುಷರು ಮತ್ತು ಮಹಿಳೆಯರಲ್ಲಿ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಇನ್ನೂ ಹೆಚ್ಚಿನ ಅರಿವಿನ ಕೊರತೆಯಿದೆ. ಆದರೆ, ಪ್ರಪಂಚದ ಬಹುತೇಕ ಜನರು ಕೂಡಾ ಸ್ವಯಂ ಅರಿವು ಹೊಂದಿಲ್ಲ. ಪ್ರತಿವರ್ಷ ಲೈಂಗಿಕತೆ ಮತ್ತು ಗರ್ಭನಿರೋಧಕಕ್ಕೆ ಸಂಬಂಧಿಸಿದ ಮಾಹಿತಿಯ ಕೊರತೆಯಿಂದಾಗಿ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಅನೇಕ ಗಂಭೀರ ಕಾಯಿಲೆಗಳು ಮತ್ತು ಸೋಂಕುಗಳಿಗೆ ತುತ್ತಾಗುತ್ತಿದ್ದಾರೆ. ಪ್ರಪಂಚದಾದ್ಯಂತ ಬಂಜೆತನದ ಪ್ರಕರಣಗಳೂ ನಿರಂತರ ಹೆಚ್ಚಳವಾಗುತ್ತಿವೆ.

ದೇಶದಲ್ಲಿ ಪ್ರತಿವರ್ಷ 15.6 ಮಿಲಿಯನ್ ಗರ್ಭಪಾತ: ಅಸುರಕ್ಷಿತ ಗರ್ಭಪಾತ ಅಥವಾ ಗರ್ಭಾವಸ್ಥೆ ಮುಕ್ತಾಯವು ಭಾರತದಲ್ಲಿ ತಾಯಂದಿರ ಸಾವಿಗೆ ಮೂರನೇ ಅತಿದೊಡ್ಡ ಕಾರಣವಾಗಿದೆ. ಭಾರತದಲ್ಲಿ ಪ್ರತಿವರ್ಷ ಸುಮಾರು 15.6 ಮಿಲಿಯನ್ ಗರ್ಭಪಾತಗಳು ಸಂಭವಿಸುತ್ತವೆ. ಮತ್ತೊಂದೆಡೆ, ಭಾರತದ ವಯಸ್ಕ ಜನಸಂಖ್ಯೆಯ ಸುಮಾರು 6 ಪ್ರತಿಶತದಷ್ಟು ಜನರು ಪ್ರತಿವರ್ಷ ಲೈಂಗಿಕವಾಗಿ ಹರಡುವ ರೋಗಗಳು (ಎಸ್​ಟಿಡಿಎಸ್​) ಮತ್ತು ಸಂತಾನೋತ್ಪತ್ತಿ ನಾಳದ ಸೋಂಕುಗಳಿಗೆ (ಆರ್​ಟಿಐಎಸ್​) ಚಿಕಿತ್ಸೆ ಪಡೆಯುತ್ತಾರೆ. ಅಂಕಿ - ಅಂಶಗಳ ಪ್ರಕಾರ, ಭಾರತದಲ್ಲಿ ಸುಮಾರು 30 ಮಿಲಿಯನ್ ಜನರು ಲೈಂಗಿಕವಾಗಿ ಹರಡುವ ಸೋಂಕಿನಿಂದ ಬಳಲುತ್ತಿದ್ದಾರೆ.

186 ಮಿಲಿಯನ್ ಜನರಲ್ಲಿ ಬಂಜೆತನ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಓ) ಪ್ರಕಾರ, ಜಾಗತಿಕವಾಗಿ ಸುಮಾರು 186 ಮಿಲಿಯನ್ ಜನರು ಬಂಜೆತನಕ್ಕೆ ಒಳಗಾಗುತ್ತಿದ್ದಾರೆ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. 2019ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಪ್ರಪಂಚದಾದ್ಯಂತ ಪ್ರತಿದಿನ ಒಂದು ಮಿಲಿಯನ್ ಜನರು ಲೈಂಗಿಕವಾಗಿ ಹರಡುವ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದರೆ, ಪ್ರತಿವರ್ಷ ಕೋಟಿಗಟ್ಟಲೆ ಜನರು ಗೊನೊರಿಯಾ, ಕ್ಲಮೈಡಿಯ, ಸಿಫಿಲಿಸ್ ಮತ್ತು ಟ್ರೈಕೊಮೋನಿಯಾಸಿಸ್‌ನಂತಹ ಲೈಂಗಿಕವಾಗಿ ಹರಡುವ ರೋಗಗಳಿಗೆ ಸೋಂಕಿಗೆ ಒಳಗಾಗುತ್ತಿದ್ದಾರೆ.

ಹೆಚ್ಚುತ್ತಿರುವ ಸಂತಾನೋತ್ಪತ್ತಿ ಸಂಬಂಧಿಸಿದ ಸಮಸ್ಯೆಗಳು: ಲೈಂಗಿಕ ಅಥವಾ ಸಂತಾನೋತ್ಪತ್ತಿ ಆರೋಗ್ಯವು ಕೇವಲ ಸೋಂಕುಗಳು ಅಥವಾ ಬಂಜೆತನಕ್ಕೆ ಸೀಮಿತವಾಗಿಲ್ಲ. ಸೋಂಕುಗಳು ಮತ್ತು ರೋಗಗಳು ಎಚ್​ಐವಿ, ಸಂತಾನೋತ್ಪತ್ತಿ ಕ್ಯಾನ್ಸರ್, ಎಸ್​ಟಿಡಿ, ಆರ್​ಟಿಐ, ಗೊನೊರಿಯಾ, ಕ್ಲಮೈಡಿಯ, ಸಿಫಿಲಿಸ್ ಮತ್ತು ಟ್ರೈಕೊಮೋನಿಯಾಸಿಸ್, ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆಗಳು, ಲೈಂಗಿಕ ಸಂಭೋಗದಲ್ಲಿ ಸಂವೇದನೆ ನಷ್ಟ, ಅಕಾಲಿಕ ಉದ್ಗಾರ, ಲೈಂಗಿಕ ತೃಪ್ತಿ ಅಥವಾ ಲೈಂಗಿಕ ಅಪಸಾಮಾನ್ಯತೆ, ಲೈಂಗಿಕ ಅಸ್ವಸ್ಥತೆ, ಲೈಂಗಿಕ ದೌರ್ಜನ್ಯ, ಸ್ತ್ರೀ ಜನನಾಂಗ ಊನಗೊಳಿಸುವಿಕೆ, ಮಹಿಳೆಯರು ಮತ್ತು ಪುರುಷರಲ್ಲಿ ಮಕ್ಕಳ ಫಲವತ್ತತೆ ಸಮಸ್ಯೆ, ಪುರುಷರಲ್ಲಿ ವೀರ್ಯ ಸಂಬಂಧಿ ಸಮಸ್ಯೆಗಳು ಮತ್ತು ಮಹಿಳೆಯರಲ್ಲಿ ಸಂತಾನೋತ್ಪತ್ತಿಗೆ ಸಂಬಂಧಿಸಿದ ಸಮಸ್ಯೆಗಳು ಈ ವರ್ಗಕ್ಕೆ ಸೇರುತ್ತವೆ.

ಲೈಂಗಿಕ ಮತ್ತು ಸಂತಾನೋತ್ಪತ್ತಿ ಮೂಲ ಹಕ್ಕು: ಲೈಂಗಿಕ ಮತ್ತು ಸಂತಾನೋತ್ಪತ್ತಿ ಮಾನವನ ಮೂಲ ಹಕ್ಕುಗಳಾಗಿವೆ. ಇವುಗಳ ಅಡಿ ಪ್ರತಿಯೊಬ್ಬ ಮಹಿಳೆ ಅಥವಾ ಪುರುಷನಿಗೆ ತಮ್ಮ ದೇಹದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕಿದೆ. ಬಹುತೇಕ ಜನರು ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಮಾತನಾಡುವುದಿಲ್ಲ. ವಿಶೇಷವಾಗಿ ಹದಿಹರೆಯದ ಹುಡುಗಿಯರು ಮತ್ತು ಮಹಿಳೆಯರು ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮುನ್ನೆಚ್ಚರಿಕೆಗಳನ್ನು ಇನ್ನೂ ತಿಳಿದುಕೊಂಡಿಲ್ಲ.

ಎಲ್ಲ ಸಮಸ್ಯೆಗಳು ನೇರವಾಗಿ ಅಥವಾ ಪರೋಕ್ಷವಾಗಿ ಮಹಿಳೆಯರ ಲೈಂಗಿಕ ಅಥವಾ ಸಂತಾನೋತ್ಪತ್ತಿ ಆರೋಗ್ಯದ ಭಾಗವಾಗಿವೆ. ಅವರ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಜಾಗೃತಿ ದಿನವು ಮಹಿಳೆಯರು ಮತ್ತು ಪುರುಷರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವುಗಳಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಲು ಅವಕಾಶ ನೀಡುತ್ತದೆ.

ಆರೋಗ್ಯ ಸೌಲಭ್ಯ ಒದಗಿಸಬೇಕಿದೆ: ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು, ಎಲ್ಲಾ ದೈಹಿಕ ಸಮಸ್ಯೆಗಳ ಕುರಿತು ಚಿಕಿತ್ಸೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಮಹಿಳೆಯರು ಮತ್ತು ಪುರುಷರಲ್ಲಿ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳ ಬಗ್ಗೆ ಮಾಹಿತಿಯನ್ನು ತಲುಪಿಸಲು ಪ್ರಯತ್ನಿಸಬೇಕು. ಶೋಷಿತ ವರ್ಗಗಳು, ಅಂಗವಿಕಲರು, ಲೈಂಗಿಕ ಕಾರ್ಯಕರ್ತರು ಮತ್ತು ಮಹಿಳೆಯರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ವಿವಿಧ ರೀತಿಯ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ.

ಮಹಿಳೆಯರು ಮತ್ತು ಬಾಲಕಿಯರಿಗೆ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಬಗ್ಗೆ ಮಾಹಿತಿ ಹೊಂದಿದ್ದರೆ, ಅವರು ಎಚ್ಐವಿ, ಲಿಂಗ ಆಧಾರಿತ ಹಿಂಸೆ, ತಾಯಿಯ ಮರಣ ಮತ್ತು ಲೈಂಗಿಕವಾಗಿ ಹರಡುವ ರೋಗಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಅವರ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ಸಹಾಯವಾಣಿ ಸೇವೆ: ಭಾರತ ಸರ್ಕಾರವು ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಈ ಉದ್ದೇಶಕ್ಕಾಗಿ ಜಾಗೃತಿ ಅಭಿಯಾನಗಳನ್ನು ನಡೆಸುತ್ತಿದೆ. ರಾಷ್ಟ್ರೀಯ ಜನಸಂಖ್ಯಾ ಸ್ಥಿರೀಕರಣ ನಿಧಿಯ ಸಹಾಯವಾಣಿ ಸೇವೆಯು ಪ್ರಮುಖವಾದ ಪ್ರಯತ್ನವಾಗಿದೆ. ಸಹಾಯವಾಣಿ (1800116555) ಪ್ರತಿದಿನ ಬೆಳಿಗ್ಗೆ 9ರಿಂದ ರಾತ್ರಿ 11ರವರೆಗೆ ಕಾರ್ಯನಿರ್ವಹಿಸುತ್ತದೆ.

ಲೈಂಗಿಕ ಆರೋಗ್ಯ ಸಮಸ್ಯೆಗಳು, ಲೈಂಗಿಕವಾಗಿ ಹರಡುವ ಸೋಂಕುಗಳು, ಗರ್ಭನಿರೋಧಕ, ಗರ್ಭಧಾರಣೆ, ಬಂಜೆತನ, ಗರ್ಭಪಾತ, ಋತುಬಂಧ ಮತ್ತು ಕುರಿತು ವೈದ್ಯರಿಂದ ಮಾಹಿತಿ ಮತ್ತು ಸಮಾಲೋಚನೆ ಪುರುಷರು ಮತ್ತು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಬಹುದು.

ಇದನ್ನೂ ಓದಿ: ಅನಿಯಮಿತ ಋತುಚಕ್ರದ ಸಮಸ್ಯೆಯೇ?: ಇಲ್ಲಿದೆ ಪರಿಹಾರ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.