ETV Bharat / sukhibhava

ಮಾನವ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆ ಮಾಡಿದ ವಿಜ್ಞಾನಿಗಳು..! - ವಿಶ್ವದಲ್ಲಿ ಮೊದಲ ಬಾರಿಗೆ ಮಾನವನ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆ

ಈ ಮೈಕ್ರೋಪ್ಲಾಸ್ಟಿಕ್ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಮತ್ತು ಆಳವಾದ ಸಮುದ್ರವನ್ನು ಸಹ ತಲುಪಿದೆ. ಮಾನವರು ಈಗಾಗಲೇ ಆಹಾರ, ನೀರು ಮತ್ತು ಉಸಿರಾಟದ ಮೂಲಕ ಪ್ಲಾಸ್ಟಿಕ್​ನ ಸಣ್ಣ ಕಣಗಳನ್ನು ಉಸಿರಾಡುತ್ತಿದ್ದಾರಂತೆ.

ಮಾನವ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆ ಮಾಡಿದ ವಿಜ್ಞಾನಿಗಳು

author img

By

Published : Mar 27, 2022, 9:49 PM IST

ವಿಶ್ವದಲ್ಲಿ ಮೊದಲ ಬಾರಿಗೆ ಮಾನವನ ರಕ್ತದಲ್ಲಿ ಮೈಕ್ರೋಪ್ಲಾಸ್ಟಿಕ್ ಪತ್ತೆಯಾಗಿದೆ. 80 ರಷ್ಟು ಜನರಲ್ಲಿ ಈ ಸಣ್ಣ ಕಣಗಳು ಕಂಡುಬಂದಿವೆ ಎಂದು ವಿಜ್ಞಾನಿಗಳು ತಮ್ಮ ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಈ ಆವಿಷ್ಕಾರವು ಮೈಕ್ರೋಪ್ಲಾಸ್ಟಿಕ್‌ಗಳು ಮಾನವ ದೇಹದಲ್ಲಿ ಒಂದು ಸ್ಥಳದಿಂದ ಮತ್ತೊಂದು ಕಡೆ ಚಲಿಸಬಹುದು ಮತ್ತು ಮಾನವ ಅಂಗಗಳಲ್ಲಿ ಸಂಗ್ರಹಗೊಳ್ಳಬಹುದು ಎಂದು ತೋರಿಸುತ್ತದೆ. ಆದಾಗ್ಯೂ, ಮಾನವನ ಆರೋಗ್ಯದ ಮೇಲೆ ಇದರ ಪರಿಣಾಮ ಇನ್ನೂ ತಿಳಿದಿಲ್ಲ.

ಮೈಕ್ರೋಪ್ಲಾಸ್ಟಿಕ್‌ಗಳು ಮಾನವ ಕೋಶಗಳನ್ನು ಹಾನಿಗೊಳಿಸುತ್ತದೆಯೇ ಎಂದು ಸಂಶೋಧಕರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ವಾಯುಮಾಲಿನ್ಯದ ಕಣಗಳು ದೇಹದೊಳಗೆ ಪ್ರವೇಶಿಸುವುದನ್ನು ಈಗಾಗಲೇ ಕಂಡುಕೊಳ್ಳಲಾಗಿದೆ. ಪರಿಸರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸುರಿಯಲಾಗುತ್ತಿದೆ ಮತ್ತು ಮೈಕ್ರೋಪ್ಲಾಸ್ಟಿಕ್ ಇಡೀ ಭೂಮಿಯನ್ನು ಕಲುಷಿತಗೊಳಿಸಿದೆ.

ಮಾದರಿಗಳ ಒಳಗೆ ಪಿಇಟಿ ಪ್ಲಾಸ್ಟಿಕ್ ಕಂಡುಬಂದಿದೆ. ಈ ಮೈಕ್ರೋಪ್ಲಾಸ್ಟಿಕ್ ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಮತ್ತು ಆಳವಾದ ಸಮುದ್ರವನ್ನು ಸಹ ತಲುಪಿದೆ. ಮಾನವರು ಈಗಾಗಲೇ ಆಹಾರ, ನೀರು ಮತ್ತು ಉಸಿರಾಟದ ಮೂಲಕ ಸಣ್ಣ ಕಣಗಳನ್ನು ಉಸಿರಾಡುತ್ತಿದ್ದಾರಂತೆ. ಮಕ್ಕಳು ಮತ್ತು ವಯಸ್ಕರಲ್ಲಿ ಈ ಕಣಗಳು ಕಂಡುಬಂದಿವೆ. ಪ್ರಯೋಗದ ಸಮಯದಲ್ಲಿ, ವಿಜ್ಞಾನಿಗಳು 22 ವಯಸ್ಕ ಅಪರಿಚಿತ ದಾನಿಗಳಿಂದ ರಕ್ತದ ಮಾದರಿಗಳನ್ನು ತೆಗೆದುಕೊಂಡು ಪ್ರಯೋಗ ನಡೆಸಿದ್ದಾರೆ. ಈ ಪೈಕಿ 17 ಮಾದರಿಗಳಲ್ಲಿ ಪ್ಲಾಸ್ಟಿಕ್ ಪತ್ತೆಯಾಗಿದೆ.

ಈ ಮಾದರಿಗಳಲ್ಲಿ ಅರ್ಧದಷ್ಟು ಮಾದರಿಗಳಲ್ಲಿ ಪಿಇಟಿ ಪ್ಲಾಸ್ಟಿಕ್ ಇರುವುದು ಕಂಡುಬಂದಿದೆ. ತನಿಖೆಯ ಸಮಯದಲ್ಲಿ ಮೂರನೇ ಒಂದು ಭಾಗದಷ್ಟು ಜನರಲ್ಲಿ ಪಾಲಿಸ್ಟೈರೀನ್ ಕಂಡುಬಂದಿದೆ. ಇದು ಆಹಾರ ಪ್ಯಾಕೇಜಿಂಗ್ ಮತ್ತು ಇತರ ಉತ್ಪನ್ನದಿಂದ ದೇಹದ ಒಳಗೆ ಸೇರಿದೆ. ಕಾಲು ಭಾಗದ ಜನರಲ್ಲಿ ಪಾಲಿಥಿಲೀನ್ ಕಂಡುಬಂದಿದೆ. ಈ ಸಂಶೋಧನೆಗೆ ಸಂಬಂಧಿಸಿದಂತೆ ಪ್ರೊಫೆಸರ್ ಡಿಕ್ ವೆಥಕ್ ಅವರು, 'ನಮ್ಮ ಸಂಶೋಧನೆಯು ನಮ್ಮ ರಕ್ತದೊಳಗೆ ಪಾಲಿಮರಿಕ್ ಕಣಗಳಿವೆ ಎಂಬುದಕ್ಕೆ ಮೊದಲ ಸೂಚನೆಯಾಗಿದೆ. ಇದು ಒಂದು ಪ್ರಮುಖ ಆವಿಷ್ಕಾರವಾಗಿದೆ. ವಿಜ್ಞಾನಿಗಳು ಈಗ ಈ ಸಂಶೋಧನೆಯನ್ನು ಮತ್ತಷ್ಟು ಹೆಚ್ಚಿಸಲು ಮುಂದಾಗಿದ್ದಾರೆ ಎಂದಿದ್ದಾರೆ.

ಎನ್ವಿರಾನ್‌ಮೆಂಟ್ ಇಂಟರ್‌ನ್ಯಾಷನಲ್ ವೈಜ್ಞಾನಿಕ ಜರ್ನಲ್‌ನಲ್ಲಿ ಈ ಅಧ್ಯಯನದ ವರದಿ ಪ್ರಕಟವಾಗಿದೆ. ನಮ್ಮ ರಕ್ತಪ್ರವಾಹದಲ್ಲಿ ಹಾಗೂ ನಮ್ಮ ಜೀವನದಿಯಲ್ಲಿ ಪ್ಲಾಸ್ಟಿಕ್ ಇದೆ ಎಂದು ನಾವು ಈಗ ಸಾಬೀತುಪಡಿಸಿದ್ದೇವೆ ಎಂದು ಆಮ್ಸ್ಟರ್‌ಡ್ಯಾಮ್‌ನ ವ್ರಿಜೆ ಯೂನಿವರ್ಸಿಟಿಯ ಪರಿಸರವಿಜ್ಞಾನಿ ಹೀದರ್ ಲೆಸ್ಲಿ ಹೇಳಿದ್ದಾರೆ. ತಂಡವು ಸೂಕ್ಷ್ಮ ಮತ್ತು ನ್ಯಾನೊಪ್ಲಾಸ್ಟಿಕ್ ಕಣಗಳ ಜಾಡಿನ ಮಟ್ಟವನ್ನು ಪತ್ತೆ ಮಾಡಲು ವಿಶ್ಲೇಷಣಾತ್ಮಕ ವಿಧಾನವನ್ನು ಅಭಿವೃದ್ಧಿಪಡಿಸಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.