ನವದೆಹಲಿ: ಗ್ಲುಕೋಮಾವನ್ನು ಪತ್ತೆ ಮಾಡುವ ಹೊಸ ಕಾಂಟಾಕ್ಟ್ ಲೆನ್ಸ್ ಅನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಗ್ಲುಕೋಮಾ ಗಂಭೀರ ಕಣ್ಣಿನ ಸಮಸ್ಯೆಯಾಗಿದ್ದು, ಇದಕ್ಕೆ ಸೂಕ್ತ ಕಾಲದಲ್ಲಿ ಚಿಕಿತ್ಸೆ ಲಭ್ಯವಾಗದೇ ಹೋದಲ್ಲಿ ಕಣ್ಣಿನ ದೃಷ್ಟಿ ನಷ್ಟಕ್ಕೆ ಒಳಗಾಗಬಹುದು. ಗ್ಲುಕೋಮಾ ಪರಿಣಾಮಕ್ಕೆ ಜಗತ್ತಿನಾದ್ಯಂತ 70 ಮಿಲಿಯನ್ ಮಂದಿ ಒಳಗಾಗುತ್ತಿದ್ದಾರೆ. ಆದರೆ ಇದರಲ್ಲಿ ಶೇ ಅರ್ಧದಷ್ಟು ಮಂದಿ ಈ ಪರಿಸ್ಥಿತಿಯ ಬಗ್ಗೆ ಅರಿವನ್ನು ಹೊಂದಿಲ್ಲ.
ಗ್ಲುಕೋಮಾವು ನಿಧಾನವಾಗಿ ಉಲ್ಬಣಿಸುವ ಸಮಸ್ಯೆಯಾಗಿದೆ. ಅನೇಕ ಗ್ಲುಕೋಮಾ ಪ್ರಕರಣಗಳು ಕಣ್ಣಿನ ಸಾಮಾನ್ಯ ಪರೀಕ್ಷೆಯಲ್ಲಿ ಕಂಡು ಬರುತ್ತವೆ. ಈ ವೇಳೆಗಾಗಲೇ ಇದು ಹಾನಿಯನ್ನು ಮಾಡಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಯುಕೆಯ ನಾರ್ಥಂಬ್ರಿಯಾ ಯುನಿವರ್ಸಿಟಿ ಮತ್ತು ಟರ್ಕಿಯ ಗೊಗಜಿಸಿ ಯುನಿವರ್ಸಿಟಿಯ ಸಂಶೋಧಕರು ಈ ಹೊಸ ಕಾಂಟಾಕ್ಟ್ ಲೆನ್ಸ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಗ್ಲುಕೋಮಾದ ಸೂಚನೆಯಾದ ಕಣ್ಣಿನ ಒತ್ತಡದಲ್ಲಿನ ಬದಲಾವಣೆಯನ್ನು ಪತ್ತೆ ಮಾಡುತ್ತದೆ.
ಕಣ್ಣು ಮತ್ತು ಮೆದುಳಿಗೆ ಸಂಪರ್ಕ ಹೊಂದಿರುವ ಕಣ್ಣಿನ ಆಪ್ಟಿಕಲ್ ನರದಲ್ಲಿ ಈ ಗ್ಲುಕೋಮಾ ಉಂಟಾಗುತ್ತದೆ. ಇದು ಕಣ್ಣಿನ ಮುಂಭಾಗ ದ್ರವವನ್ನು ಸೃಷ್ಟಿಸಿ ಹಾನಿಯನ್ನು ಮಾಡುತ್ತದೆ. ಇದು ಕಣ್ಣಿನ ಒಳಗೆ ಒತ್ತಡವನ್ನು ಸೃಷ್ಟಿಸುತ್ತದೆ. ಇದನ್ನು ಐಒಪಿ ಎಂದು ಗುರುತಿಸಲಾಗಿದೆ.
ಹೊಸ ಕಾಂಟಾಕ್ಟ್ ಲೆನ್ಸ್ಗಳು ಮೈಕ್ರೋ ಸೆನ್ಸಾರ್ ಹೊಂದಿದ್ದು, ಐಒಪಿಯಲ್ಲಿನ ಬದಲಾವಣೆಗಳನ್ನು ಪತ್ತೆ ಹಚ್ಚುತ್ತವೆ. ಈ ರೀತಿ ಪತ್ತೆ ಕಾರ್ಯವು ನೇತ್ರತಜ್ಞರಿಗೆ ಸಮಸ್ಯೆ ಗುರುತಿಸುವಲ್ಲಿ ಸಹಾಯ ಮಾಡಲಿದೆ. ಈ ಅಧ್ಯಯನವನ್ನು ಕಾಂಟಾಕ್ಟ್ ಲೆನ್ಸ್ ಅಂಡ್ ಅಂಟೆರಿಯೊರ್ ಐನಲ್ಲಿ ಪ್ರಕಟಿಸಲಾಗಿದೆ. ಆರು ಭಾಗಿದಾರರ ಆರಂಭಿಕ ಪ್ರಯೋಗದ ಫಲಿತಾಂಶವನ್ನು ಈ ಅಧ್ಯಯನದಲ್ಲಿ ಮಾಡಲಾಗಿದೆ.
ಸಾಂಪ್ರದಾಯಿಕ ಐಒಪಿ ಮಾಪನದ ಮಾದರಿಯಲ್ಲಿ ರೋಗಿಯನ್ನು ದಿನವೊಂದರಲ್ಲಿ ಒಂದು ಬಾರಿ ಮಾಪನ ಮಾಡಲಾಗುವುದು. ಇದರ ಫಲಿತಾಂಶವು ಕೆಲವೊಮ್ಮೆ ಐಒಪಿಯ ನೈಸರ್ಗಿಕ ಬದಲಾವಣೆಯಿಂದ ತಪ್ಪು ದಾರಿಗೆ ಎಳೆಯಬಹುದು. ಈ ಲೆನ್ಸ್ಗಳನ್ನು ರೋಗಿಯು ಅಳವಡಿಸಿಕೊಂಡು ತನ್ನ ದೈನಂದಿನ ದಿನವನ್ನು ಸಾಮಾನ್ಯವಾಗಿ ಕಳೆಯಬಹುದಾಗಿದೆ. 24 ಗಂಟೆಗಳ ಪರೀಕ್ಷಾ ಅವಧಿ ಮುಗಿದ ಬಳಿಕ ಅವರ ಐಒಪಿ ಮಾದರಿಗಳು ಕಣ್ಣಿನ ಗ್ಲುಕೋಮಾವನ್ನು ಸಂಗ್ರಹಿಸಿ ಅದನ್ನು ವೈದ್ಯರ ವಿಶ್ಲೇಷಣೆಗೆ ಕಳುಹಿಸುತ್ತದೆ.
ಈ ತಂತ್ರಜ್ಞಾನವು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದು, ಸಂಶೋಧಕರು ಇದೀಗ ಈ ಅಧ್ಯಯನವನ್ನು ದೊಡ್ಡ ಗುಂಪಿನ ಭಾಗಿದಾರರ ಮೇಲೆ ನಡೆಸಲು ಚಿಂತಿಸುತ್ತಿದ್ದಾರೆ. ಮುಂದಿನ ವರ್ಷಕ್ಕೆ ಇದು ಕಾರ್ಯಸಾಧ್ಯವಾಗಬಹುದು. ಈ ಲೆನ್ಸ್ಗಳನ್ನು ಗ್ಲುಕೊಲೆನ್ಸ್ ಎಂಬ ಕಂಪನಿಯಿಂದ ಮಾಡಲಾಗಿದೆ.
ಇದನ್ನೂ ಓದಿ: ಅತಿ ಹೆಚ್ಚಿನ ವಿಡಿಯೋ ಗೇಮ್ಗಳು ಕಿವುಡುತನಕ್ಕೆ ಕಾರಣವಾಗಬಹುದು; ಅಧ್ಯಯನ