ಲಂಡನ್( ಯುನೈಟೆಡ್ ಕಿಂಗ್ಡಮ್): ಎಲೆಕ್ಟ್ರಿಕ್ ಬೈಸಿಕಲ್ ಒಂದು ರೀತಿಯ ಮಧ್ಯಮ- ತೀವ್ರತೆಯ ವ್ಯಾಯಾಮ ಎಂದೇ ಗುರುತಿಸಲಾಗಗಿದೆ. ಇ- ಬೈಸಿಕಲ್ ರೈಡ್ ಮಾಡುವುದು ಟೈಪ್ 2 ಮಧುಮೇಹವನ್ನು ತಡೆಗಟ್ಟಲು ಮತ್ತು ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ ಎಂದು ಹೊಸ ಅಧ್ಯಯನವೊಂದು ಕಂಡುಕೊಂಡಿದೆ.
ಫ್ರಾಂಟಿಯರ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಈ ಅಚ್ಚರಿಯ ವಿಚಾರವನ್ನು ಹೊರಗಿಟ್ಟಿದೆ. ಇ-ಸೈಕ್ಲಿಂಗ್‌ನಲ್ಲಿ ತೊಡಗಿಸಿಕೊಳ್ಳುವುದು ಡಯೆಟ್ ಅಥವಾ ಇತರ ರೀತಿಯ ವ್ಯಾಯಾಮಗಳಿಗಿಂತ ಮಧುಮೇಹವನ್ನು ನಿರ್ವಹಿಸುವ ಸುಲಭ ಮಾರ್ಗವೆಂದು ಗ್ರಹಿಸಲಾಗಿದೆ. ಇ- ಬೈಸಿಕಲ್ ಸವಾರರು ಹೆಚ್ಚು ಆನಂದಿಂದ ಇರುತ್ತಾರೆ ಎಂದು ಅಧ್ಯಯನದಲ್ಲಿ ಸಾಬೀತಾಗಿದೆ.
ದೈಹಿಕ ಚಟುವಟಿಕೆ (PA) ಟೈಪ್ 2 ಡಯಾಬಿಟಿಸ್ ನಿರ್ವಹಣೆಯಲ್ಲಿ ಪ್ರಮುಖ ಅಂಶವಾಗಿದೆ. ಆದಾಗ್ಯೂ, ಈ ಜನಸಂಖ್ಯೆಯು ಕಡಿಮೆ ಪ್ರಮಾಣದ ದೈಹಿಕ ಚಟುವಟಿಕೆಗಳನ್ನು ಹೊಂದಿದೆ. ಎಲೆಕ್ಟ್ರಿಕಲ್ ಅಸಿಸ್ಟೆಡ್ ಸೈಕ್ಲಿಂಗ್ ಅನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ದೇಹಕ್ಕೆ ಪ್ರಯೋಜನಕಾರಿ. ಈ ಚಟುವಟಿಕೆಯನ್ನು ಮಾಡುವ ಮೂಲಕ PA ಅನ್ನು ಹೆಚ್ಚಿಸುವ ಸಾಧನವಾಗಿ ಗುರುತಿಸಲಾಗಿದೆ ಎಂದು ಅಧ್ಯಯನದ ಲೇಖಕರು ಹೇಳಿದ್ದಾರೆ.
ಅಧ್ಯಯನದ ವರದಿ ಪ್ರಕಾರ, ಪುರುಷರು ಮತ್ತು ಮಹಿಳೆಯರು ಹೀಗೆ ಇಬ್ಬರೂ ಇ-ಬೈಕ್ ಸವಾರಿ ಮಾಡುವುದರಿಂದ ವರ್ಧಿತ ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಂಡಿದ್ದಾರೆ. ಹೆಚ್ಚಿದ ಫಿಟ್‌ನೆಸ್ ಮತ್ತು ಮಧುಮೇಹ ನಿಯಂತ್ರಣ ಸೇರಿದಂತೆ ಹಲವಾರು ಆರೋಗ್ಯಕರ ಫಲಿತಾಂಶಗಳನ್ನು ನೀಡಿದೆ. ಇ ಸೈಕ್ಲಿಂಗ್ನಿಂದ ಆರೋಗ್ಯದ ಮೇಲೆ ಅನುಕೂಲಕರವಾದ ಪ್ರಭಾವವಿದೆ ಎಂದು ನಂಬಲಾಗಿದೆ, ಇ - ಬೈಸಿಕಲ್ ಸವಾರಿಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಗಮನಾರ್ಹ ಇಳಿಕೆಯ ಕಂಡು ಬಂದಿದೆ ಎನ್ನುವುದು ಅಧ್ಯಯನದ ಸಾರವಾಗಿದೆ.
ಸಾಮಾನ್ಯ ಬೈಕ್‌ಗಿಂತ ಕಡಿಮೆ ದೈಹಿಕ ಪರಿಶ್ರಮದಿಂದ ಆರಾಮವಾಗಿ ಇ- ಬೈಸಿಕಲ್ ಓಡಿಸುವ ಸಾಮರ್ಥ್ಯ ಹೆಚ್ಚಲಿದೆ. ಜೊತೆಗೆ ಬೆಟ್ಟದ ಭೂಪ್ರದೇಶದಲ್ಲಿ ವೇಗವಾಗಿ ಹೋಗುವ ಸಾಮರ್ಥ್ಯ ನೀಡುತ್ತದೆ ಹಾಗೂ ಸಂತೋಷವನ್ನು ನೀಡುತ್ತದೆ ಎಂದು ಅಧ್ಯಯನದ ವೇಳೆ ತಿಳಿದು ಬಂದಿದೆ. ಹೆಚ್ಚಿನ ಮಟ್ಟದ ತೃಪ್ತಿಯಿಂದಾಗಿ ಇ-ಸೈಕ್ಲಿಂಗ್ ಅಭ್ಯಾಸವನ್ನು ಹೆಚ್ಚಿಸಲು ಸಹ ಒಲವು ಕಂಡು ಬಂದಿದೆ. ಬಹುಪಾಲು ಅಧ್ಯಯನದಲ್ಲಿ ಭಾಗವಹಿಸಿದವರು, ಇ-ಬೈಕ್ ತರಬೇತಿಯು ಕಾಲಾನಂತರದಲ್ಲಿ ಇ - ಬೈಕ್ ಓಡಿಸುವ ಸಾಮರ್ಥ್ಯವನ್ನು ಸುಧಾರಿಸಿದೆ ಎಂದು ಹೇಳಿಕೊಂಡಿದ್ದಾರೆ.
ಡಯಾಬಿಟಿಸ್ ನಿರ್ವಹಣೆಯಲ್ಲಿ ಸೈಕ್ಲಿಂಗ್ ಹಲವು ಮಿತಿಗಳನ್ನು ಕೂಡಾ ಹೊಂದಿದೆ. ಸೈಕ್ಲಿಂಗ್ ಮೂಲಸೌಕರ್ಯ, ಪಾರ್ಕಿಂಗ್ ಸೌಲಭ್ಯಗಳು ಮತ್ತು ಟ್ರಾಫಿಕ್, ಸಮಯ ಮತ್ತು ಹವಾಮಾನ ನಿರ್ಬಂಧಗಳು ಹೀಗೆ ಹಲವು ಅಡೆ ತಡೆಗಳು ಇವೆ. ಇ-ಬೈಕ್ ನಿರ್ದಿಷ್ಟ ಸಮಸ್ಯೆಗಳನ್ನು ಹೊಂದಿದೆ. ತೂಕ ಮತ್ತು ಬೈಕ್‌ನ ಗಾತ್ರ ಸೇರಿದಂತೆ ಭೌತಿಕ ಅವಕಾಶಗಳ ಮಿತಿಗಳನ್ನು ಬಳಕೆದಾರರು ಸಾಮಾನ್ಯವಾಗಿ ಗುರುತಿಸಬೇಕಾಗುತ್ತಿದೆ. ಈ ಬಗೆಗಿನ ಅನಾನುಕೂಲತೆಗಳ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ.
ಇದನ್ನು ಓದಿ: ಮಾನಸಿಕ ಖಿನ್ನತೆಗೆ ಬಿಸಿಯೋಗ ಪರಿಹಾರವಂತೆ: ಸಂಶೋಧನೆ ಹೇಳುವುದೇನು?