ETV Bharat / sukhibhava

ರನ್ನಿಂಗ್​ ಮಾಡುವಾಗ ಆಗುವ ಗಾಯಗಳನ್ನು ತಪ್ಪಿಸಲು ಹೀಗೆ ಮಾಡಿ.. - ರನ್ನಿಂಗ್​ ಟಿಪ್ಸ್​​ಗಳನ್ನು ಅನುಸರಿಸಿ

ಜಾಗಿಂಗ್, ಓಟ ಅಥವಾ ಯಾವುದೇ ಇತರ ವ್ಯಾಯಾಮವಿರಲಿ ಗಾಯದ ಅಪಾಯವನ್ನು ತಪ್ಪಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ, ಕೆಲವೊಮ್ಮೆ, ಸಣ್ಣದೊಂದು ಅಜಾಗರೂಕತೆಯು ಸಹ ದೊಡ್ಡ ತೊಡಕುಗಳಿಗೆ ಕಾರಣವಾಗಬಹುದು..

Remember these tips to avoid running injury
ರನ್ನಿಂಗ್​ ಮಾಡುವಾಗ ಆಗುವ ಗಾಯಗಳನ್ನು ತಪ್ಪಿಸಲು ಹೀಗೆ ಮಾಡಿ
author img

By

Published : Feb 6, 2022, 4:43 PM IST

ಫಿಟ್‌ನೆಸ್‌ಗಾಗಿ ಓಟವನ್ನು ಯಾವಾಗಲೂ ಉತ್ತಮ ವ್ಯಾಯಾಮವೆಂದು ಪರಿಗಣಿಸಲಾಗಿದೆ. ಇದು ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ಸ್ನಾಯುಗಳನ್ನು ಬಲಪಡಿಸಲು ಮತ್ತು ದೇಹವನ್ನು ಸಕ್ರಿಯವಾಗಿರಿಸಲು ಸಹಾಯ ಮಾಡುತ್ತದೆ.

ಓಟವು ನಿಮ್ಮ ಜೀವನಕ್ಕೆ ಇನ್ನಷ್ಟು ವರ್ಷಗಳನ್ನು ಸೇರಿಸಬಹುದು ಅಂದರೆ ರನ್ನಿಂಗ್​ ಮಾಡುವುದರಿಂದ ನೀವು ಹೆಚ್ಚು ವರ್ಷಗಳ ಕಾಲ ಬದುಕಬಹುದು ಎಂದು ಕೆಲವು ಸಂಶೋಧನೆಗಳು ತೋರಿಸಿವೆ.

ಬ್ರಿಟಿಷ್ ಜರ್ನಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನಿಯಮಿತವಾಗಿ ಓಡುವ ಜನರು ಓಡದ ಜನರಿಗಿಂತ ಶೇ.27ರಷ್ಟು ಕಡಿಮೆ ಸಾವಿನ ಅಪಾಯವನ್ನು ಹೊಂದಿರುತ್ತಾರೆ.

ಆದರೆ, ಜಾಗಿಂಗ್, ಓಟ ಅಥವಾ ಯಾವುದೇ ಇತರ ವ್ಯಾಯಾಮವಿರಲಿ ಗಾಯದ ಅಪಾಯವನ್ನು ತಪ್ಪಿಸಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ, ಕೆಲವೊಮ್ಮೆ, ಸಣ್ಣದೊಂದು ಅಜಾಗರೂಕತೆಯು ಸಹ ದೊಡ್ಡ ತೊಡಕುಗಳಿಗೆ ಕಾರಣವಾಗಬಹುದು. ಓಡುವಾಗ ಕಾಲಿಗೆ ಉಳುಕು, ಪಾದದ ಗಾಯ, ಸ್ನಾಯು ಸೆಳೆತದಂತಹ ಸಮಸ್ಯೆಗಳು ಸಾಮಾನ್ಯ. ಆದರೆ, ಕೆಲವೊಮ್ಮೆ ಇಂತಹ ಸಂದರ್ಭಗಳು ತೀವ್ರವಾಗಿರಬಹುದು ಎನ್ನುತ್ತಾರೆ ಪುಣೆಯ ಕ್ರೀಡಾ ಫಿಸಿಯೋಥೆರಪಿಸ್ಟ್ ಡಾ.ರತಿ ಶ್ರೇಷ್ಠಾ.

ಇದನ್ನೂ ಓದಿ: Cause of Migraine: ಮೈಗ್ರೇನ್‌ ತಲೆನೋವಿಗೆ ಮುಖ್ಯ ಕಾರಣ ಇವೇ ನೋಡಿ...

ಕೆಲವು ಇತರ ಸಾಮಾನ್ಯ ಸಮಸ್ಯೆಗಳೆಂದರೆ ಮೊಣಕಾಲು ಗಾಯ, ಪ್ಯಾಟೆಲೊಫೆಮೊರಲ್ ಸಿಂಡ್ರೋಮ್, ಅಕಿಲ್ಸ್ ಟೆಂಡೈನಿಟಿಸ್ ಅಥವಾ ಹಿಮ್ಮಡಿಯ ಹಿಂಭಾಗದಲ್ಲಿ ಊತ, ಶಿನ್ ಸ್ಪ್ಲಿಂಟ್ಸ್, ಕಾಲುಗಳಲ್ಲಿ ನೋವು ಮತ್ತು ಊತ, ಸ್ನಾಯುಗಳು ಮತ್ತು ಮಂಡಿರಜ್ಜು ಗಾಯ. ಆದ್ದರಿಂದ, ಅಂತಹ ಎಲ್ಲಾ ಗಾಯಗಳನ್ನು ನೀವು ಹೇಗೆ ತಪ್ಪಿಸಬಹುದು? ನಮ್ಮ ತಜ್ಞರು ಶಿಫಾರಸು ಮಾಡಿದ ಕೆಲವು ಸಲಹೆಗಳನ್ನು ನೋಡಿ..

  • ಓಡುವ ಅಥವಾ ಜಾಗಿಂಗ್ ಮಾಡುವ ಮೊದಲು ವಾರ್ಮ್​-ಅಪ್ ಮಾಡಿ ಸ್ನಾಯುಗಳನ್ನು, ವಿಶೇಷವಾಗಿ ತೊಡೆಯ ಸ್ನಾಯುಗಳನ್ನು ಸ್ಟ್ರೆಚ್​ ಮಾಡಿಕೊಳ್ಳಿ
  • ತಕ್ಷಣವೇ ವೇಗವಾಗಿ ಓಡಲು ಪ್ರಾರಂಭಿಸಬೇಡಿ. ಯಾವಾಗಲೂ ನಿಧಾನಗತಿಯಲ್ಲಿ ಪ್ರಾರಂಭಿಸಿ ಮತ್ತು ಕ್ರಮೇಣ ವೇಗವನ್ನು ಹೆಚ್ಚಿಸಿ.
  • ಒಮ್ಮೆ ನೀವು ಓಟವನ್ನು ಪೂರ್ಣಗೊಳಿಸಿದ ನಂತರ, ಕೆಲವು ಕೂಲ್-ಡೌನ್ ವ್ಯಾಯಾಮಗಳನ್ನು ಮಾಡಿರಿ
  • ಓಡುವಾಗ ಕಂಫರ್ಟೇಬಲ್​ ಬಟ್ಟೆಗಳನ್ನು ಮತ್ತು ದೇಹಕ್ಕೆ ಚೆನ್ನಾಗಿ ಹೊಂದಿಕೊಳ್ಳುವ ಬಟ್ಟೆಗಳನ್ನು ಧರಿಸಿ, ಏಕೆಂದರೆ ಸಡಿಲವಾದ ಬಟ್ಟೆಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಮತ್ತು ಮುಗ್ಗರಿಸುವ ಸಾಧ್ಯತೆಗಳು ಹೆಚ್ಚಾಗುತ್ತದೆ.
  • ಜನಸಂದಣಿ ಇರುವ ರಸ್ತೆಗಳಲ್ಲಿ ಹಾಗೂ ಉಬ್ಬು ರಸ್ತೆಗಳಲ್ಲಿ ಓಡುವುದನ್ನು ತಪ್ಪಿಸಿ.

ಇದನ್ನೂ ಓದಿ: ಮಾರುಕಟ್ಟೆಗೆ ಬಂತು ಮೂಗನ್ನು ಮಾತ್ರ ಮುಚ್ಚುವ ವಿಶಿಷ್ಟ ಮಾಸ್ಕ್: ಈ ‘ಕೋಸ್ಕ್’ ಬಗ್ಗೆ ಎಲ್ಲೆಡೆ ಚರ್ಚೆ..

  • ರನ್ನಿಂಗ್​ ಮಾಡುವಾಗ ಯಾವಾಗಲೂ ರನ್ನಿಂಗ್​ ಶೂಗಳನ್ನು ಧರಿಸಿ.
  • ಓಡುವಾಗ ಹೆಡ್‌ಫೋನ್‌ಗಳು ಅಥವಾ ಇಯರ್‌ಫೋನ್‌ಗಳನ್ನು ಬಳಸುವುದನ್ನು ತಪ್ಪಿಸಿ. ಆದರೂ ನಿಮಗೆ ಬಳಸಲೇಬೇಕೆನಿಸಿದರೆ ವಾಲ್ಯೂಮ್ ಅನ್ನು ಕಡಿಮೆ ಮಾಡಲು ಮರೆಯದಿರಿ, ಇದರಿಂದ ನಿಮ್ಮ ಸುತ್ತಮುತ್ತಲಿನ ಶಬ್ದಗಳನ್ನು ನೀವು ಕೇಳಬಹುದು.
  • ಹೈಡ್ರೇಟೆಡ್ ಆಗಿರಲು ನೀರು ಅಥವಾ ಜ್ಯೂಸ್ ಸೇವಿಸಿ. ಕುಡಿಯುವ ಮತ್ತು ಓಡುವ ನಡುವೆ ಸರಿಯಾದ ಅಂತರವನ್ನು ಇರಿಸಿಕೊಳ್ಳಲು ಮರೆಯದಿರಿ. ಆಹಾರ ಅಥವಾ ದ್ರವ ಪದಾರ್ಥಗಳನ್ನು ಸೇವಿಸಿದ ತಕ್ಷಣ ಓಡಲು ಪ್ರಾರಂಭಿಸಬೇಡಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.