ಹೈದರಾಬಾದ್: ಬೆಲ್ಲ ಸಾಂದ್ರೀಕೃತ ಕಬ್ಬಿನ ರಸದಿಂದ ತಯಾರಿಸಿದ ಜನಪ್ರಿಯ ಸಿಹಿ ಆಹಾರವಾಗಿದೆ. ಇದು ಸಂಸ್ಕರಿಸಿದ ಸಕ್ಕರೆಗೆ ಪರ್ಯಾಯವಾಗಿ ಆರೋಗ್ಯದ ದೃಷ್ಟಿಯಿಂದ ವ್ಯಾಪಕವಾಗಿ ಬಳಸಲ್ಪಡುತ್ತದೆ. ಬೆಲ್ಲ ಉಷ್ಣತೆ ಹೊಂದಿರುವುದರಿಂದ ಚಳಿಗಾಲದಲ್ಲಿ ಇದನ್ನು ಸೇವಿಸುವುದರಿಂದ ದೇಹದಲ್ಲಿ ಉಷ್ಣ ಅಂಶವನ್ನು ಹೆಚ್ಚಿಸುತ್ತದೆ. ಬೆಲ್ಲವನ್ನು ಹಾಗೆಯೇ ತಿನ್ನಬಹುದು. ಆದರೆ, ಇದನ್ನು ಬಳಸಿ ಇತರ ಆಹಾರವನ್ನು ತಯಾರಿಸುವುದರಿಂದ ಆ ಭಕ್ಷ್ಯಗಳ ಪರಿಮಳ ಮತ್ತಷ್ಟು ಹೆಚ್ಚುತ್ತದೆ. ಹಾಗಾದರೆ ನಾವೀಗ ಬೆಲ್ಲದಿಂದ ತಯಾರಿಸುವ 5 ಭಕ್ಷ್ಯಗಳನ್ನು ನೋಡೋಣ.
ಗುರ್ ತಿಲ್ ಕಿ ರೋಟಿ: ಅದರ ಹೆಸರೇ ಸೂಚಿಸುವಂತೆ, ಇದು ಬೆಲ್ಲ ಮತ್ತು ಎಳ್ಳು ಬೀಜಗಳಿಂದ ಮಾಡಿದ ಚಪ್ಪಟೆ ರೊಟ್ಟಿಯಾಗಿದೆ. ಇದನ್ನು ಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ರುಚಿಯು ಸಿಹಿಯಾಗಿರುವುದರಿಂದ ಜೊತೆ ಆರೋಗ್ಯಕ್ಕೂ ಉತ್ತಮ. ಇದನ್ನು ಸಾಮಾನ್ಯವಾಗಿ ಉಪಹಾರ ಅಥವಾ ಮಧ್ಯಾಹ್ನದ ಊಟವಾಗಿ ಸೇವಿಸಬಹುದು.
ಉಣ್ಣಿಯಪ್ಪಂ: ಇದೊಂದು ಜನಪ್ರಿಯ ಕೇರಳದ ಸಿಹಿ ಪದಾರ್ಥವಾಗಿದ್ದು, ಉಣ್ಣಿಯಪ್ಪಮ್ನ್ನು ಸಾಮಾನ್ಯವಾಗಿ ತೆಂಗಿನಕಾಯಿ, ಬಾಳೆಹಣ್ಣು, ಅಕ್ಕಿ ಮತ್ತು ಬೆಲ್ಲದ ಜೊತೆ ಕಲಸಿಟ್ಟು ಮಾಡುವಂಥ ಸಿಹಿ ಭಕ್ಷ್ಯವಾಗಿದೆ. ಇದನ್ನು ಹೆಚ್ಚಾಗಿ ಓಣಂ ಆಚರಣೆಯ ಸಂದರ್ಭದಲ್ಲಿ ಕೇರಳ ರಾಜ್ಯದಲ್ಲಿ ತಿನ್ನಲಾಗುತ್ತದೆ.
ರಾಗಿ ಲಡ್ಡು: ಸಿಹಿಯಾಗಿರುವ ಈ ಸಣ್ಣ ಚೆಂಡುಗಳಂತಿರುವ ರಾಗಿ ಲಡ್ಡುನ್ನು ಬೆಲ್ಲ ಮತ್ತು ತುಪ್ಪದಿಂದ ತಯಾರಿಸಲಾಗುತ್ತದೆ. ಇವುಗಳನ್ನು ಚಹದ ಜೊತೆಯಾಗಿ ಸೇವಿಸಲು ಕೊಡಬಹುದು. ಆದರೆ, ರಾಗಿಯು ಕ್ಯಾಲ್ಸಿಯಂನ ಸಮೃದ್ಧ ಮೂಲವಾಗಿರುವುದರಿಂದ ಈ ಲಡ್ಡುಗಳನ್ನು ಯಾವುದೇ ಸಮಯದಲ್ಲಿ ತಿನ್ನಬಹುದು.
ಅಮ್ಚೂರ್ ಲಾಂಜಿ: ಸಿಹಿ ಮತ್ತು ಖಾರವಾದ ಈ ಭಕ್ಷ್ಯವನ್ನು ನೀವು ತೆಳು ಅಥವಾ ದಪ್ಪವಾಗಿ ಮಾಡಬಹುದು. ಒಣ ಮಾವಿನ ಪುಡಿ, ಬೆಲ್ಲ ಮತ್ತು ಇತರ ಹಲವಾರು ಸಾಂಬಾರ ಪದಾರ್ಥಗಳ ಮಿಶ್ರಣದಿಂದ ತಯಾರಿಸಲಾಗುವ ಈ ಲೌಂಜಿಯು ಸಿಹಿ ಮತ್ತು ಹುಳಿಗಳಿಂದ ನಿಮ್ಮ ನಾಲಿಗೆ ಚಪ್ಪರಿಸುವಂತೆ ಮಾಡುತ್ತದೆ. ಅಲ್ಲದೇ ಇದರ ಮಸಾಲೆಯ ಕಿಕ್ ಚಳಿಗಾಲದಲ್ಲಿ ಹಿತ ನೀಡುತ್ತದೆ.
ಕ್ಯಾರೆಟ್ ಪಾಯಸ: ಕ್ಯಾರೆಟ್, ತೆಂಗಿನ ಹಾಲು ಮತ್ತು ಬೆಲ್ಲದಿಂದ ತಯಾರಿಸಲ್ಪಡುವ ಈ ಪಾಯಸ ದಕ್ಷಿಣ ಭಾರತದ ರುಚಿಕರವಾದ ಸಿಹಿ ಪದಾರ್ಥ. ಚಳಿಗಾಲದ ಈ ಸಮಯದಲ್ಲಿ ಸಂಜೆ ಹೊತ್ತಿಗೆ ಇದನ್ನು ತಯಾರಿಸಿ ಸೇವಿಸುವುದರಿಂದ ದೇಹಕ್ಕೂ ಮನಸ್ಸಿಗೂ ಆರಾಮ ಎನಿಸುತ್ತದೆ.
ಇದನ್ನೂ ಓದಿ:ಕರುಳಿನ ಕ್ಯಾನ್ಸರ್ನ ಅಪಾಯ ಹೇಗೆ ಮತ್ತು ಯಾಕೆ ಕಾಡುತ್ತದೆ?.. ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ!