ETV Bharat / sukhibhava

ಬ್ರಿಟನ್​ ರಾಷ್ಟ್ರೀಯ ಆರೋಗ್ಯ ಸೇವೆ ಮೇಲೆ Ransomware ದಾಳಿ; ಅತಿ ದೊಡ್ಡ ದತ್ತಾಂಶ ಉಲ್ಲಂಘನೆ ಪ್ರಕರಣ! - ಆರೋಗ್ಯ ವ್ಯವಸ್ಥೆ ಮೇಲೆ ಭಾರೀ ಪರಿಣಾಮ ಬೀರಿದೆ

ಹಣ ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಬ್ಲಾಕ್​ಕ್ಯಾಟ್​ ಪ್ರಮುಖ ದತ್ತಾಂಶಗಳ ಮೇಲೆ ಈ ರೀತಿ ransomware ದಾಳಿ ನಡೆಸಿ, ಮಾಹಿತಿ ಉಲ್ಲಂಘನೆ ಮಾಡುತ್ತದೆ.

Ransomware attack on Britain's National Health Service

author img

By

Published : Jul 11, 2023, 2:13 PM IST

ಬ್ರಿಟನ್​ನ ಅತಿದೊಡ್ಡ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಹೆಚ್‌ಎಸ್) ಟ್ರಸ್ಟ್​​ ಇದೀಗ ರಾನ್ಸಮ್‌ವೇರ್ (ransomware) ದಾಳಿಗೆ ತುತ್ತಾಗಿದೆ. 2.5 ಮಿಲಿಯನ್​ ರೋಗಿಗಳ ವೈದ್ಯಕೀಯ ದಾಖಲೆ ಇದರಲ್ಲಿತ್ತು. ಹೀಗಾಗಿ ಆರೋಗ್ಯ ವ್ಯವಸ್ಥೆ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ ಎನ್ನಲಾಗಿದೆ.

ಬ್ರಿಟನ್​ ಆರೋಗ್ಯ ವ್ಯವಸ್ಥೆಯ ದತ್ತಾಂಶಗಳ ಮೇಲೆ ನಡೆದ ಅತಿದೊಡ್ಡ ಉಲ್ಲಂಘನೆ ಪ್ರಕರಣವಿದು. ರಾನ್ಸಮ್‌ವೇರ್​​ ಗ್ಯಾಂಗ್​ ಬ್ಲಾಕ್​ಕ್ಯಾಟ್,​ ಬರ್ಟ್ಸ್​​​​ ರಾಷ್ಟ್ರೀಯ ಆರೋಗ್ಯ ಸೇವೆ ಟ್ರಸ್ಟ್​​ನ 70 ಟೆರಾಬೈಟ್ಸ್​​ ಪ್ರಮುಖ ದತ್ತಾಂಶವನ್ನು ಕದ್ದಿರುವುದಾಗಿ ಹೇಳಿದೆ. ಈ ಟ್ರಸ್ಟ್​​ ಲಂಡನ್​ ಮೂಲದ ಐದು ಆಸ್ಪತ್ರೆಗಳನ್ನು ನಡೆಸುತ್ತಿದೆ ಎಂದು ಟೆಕ್​ಕ್ರಂಚ್​​ ವರದಿ ಮಾಡಿದೆ.

ಉದ್ಯೋಗಿಗಳ ಡ್ರೈವಿಂಗ್​ ಲೈಸನ್ಸ್​​, ಗೌಪ್ಯತೆಯ ಆಂತರಿಕ ಇಮೇಲ್​ ಸೇರಿದಂತೆ ಉದ್ಯೋಗಿಗಳ ಗುರುತು ಪತ್ತೆಯ ಪ್ರಮುಖ ದಾಖಲಾತಿಗಳ ಮೇಲೆ ಈ ದಾಳಿ ನಡೆಸಲಾಗಿದೆ. ಎಎಲ್​ಪಿಎಚ್​ವಿ ಎಂದು ಹೆಸರಾಗಿರುವ ಬ್ಲಾಕ್​ ಕಾಟ್​​, ತನ್ನ ಬೇಡಿಕೆ ಈಡೇರಿಕೆ ಸೋಮವಾರದವರೆಗೆ ಗಡುವು​ ನೀಡಿದೆ. ಒಂದು ವೇಳೆ ಅದರೊಳಗೆ ಬೇಡಿಕೆ ಈಡೇರದಿದ್ದರೆ ಕದ್ದಿರುವ ಗೌಪತ್ಯೆಯ ದತ್ತಾಂಶವನ್ನು ಡಾರ್ಕ್​ವೆಬ್‌ನಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆಯೊಡ್ಡಿದೆ. ಈ ಬೇಡಿಕೆ ಹಣದ್ದೋ ಅಥವಾ ಮತ್ತಿನ್ಯಾವ ಮೂಲದ್ದು ಎಂಬುದರ ಕುರಿತು ಸಂಸ್ಥೆ ಬಹಿರಂಗಪಡಿಸಿಲ್ಲ. ಈ ಕುರಿತು ಮಾತನಾಡಿರುವ ಬ್ರಟ್ಸ್​​ ಹೆಲ್ತ್​​ ವಕ್ತಾರ, ರಾನ್ಸಮ್‌ವೇರ್ ತಮ್ಮ ದತ್ತಾಂಶಕ್ಕೆ ಕನ್ನ ಹಾಕಿದ್ದು, ಈ ಬಗ್ಗೆ ತುರ್ತು ತನಿಖೆ ನಡೆಸಬೇಕಿದೆ ಎಂದಿದ್ದಾರೆ.

ದತ್ತಾಂಶ ಉಲ್ಲಂಘನೆಗಿಲ್ಲ ಕಡಿವಾಣ : ಇತ್ತೀಚಿನ ವಾರದಲ್ಲಿ ನಡೆದ ಎರಡನೇ ದತ್ತಾಂಶ ಉಲ್ಲಂಘನಾ ಪ್ರಕರಣ ಇದಾಗಿದೆ. ಜೂನ್​ನಲ್ಲಿ ರಾನ್ಸಮ್‌ವೇರ್​​, ಮ್ಯಾಂಚೆಸ್ಟರ್​​ ಯುನಿವರ್ಸಿಟಿ ಮೇಲೆ ದಾಳಿ ನಡೆಸಿ, 200 ಆಸ್ಪತ್ರೆಗಳ ದೊಡ್ಡ ಸಂಖ್ಯೆಯ ರೋಗಿಗಳ ಮಾಹಿತಿ ದಾಖಲಾತಿಗಳನ್ನು ಅಕ್ರಮವಾಗಿ ಪಡೆದಿತ್ತು.

ಜೂನ್​ 23ರಂದು ನಮ್ಮ ಸಿಸ್ಟಂಗಳಿಂದ ಹಳೆಯ ವಿದ್ಯಾರ್ಥಿಗಳ ದತ್ತಾಂಶಗಳನ್ನು ಕದಿಯಲಾಗಿತ್ತು. ಈ ಸಂಬಂಧ ದೂರು ನೀಡಲಾಗಿದೆ. ದತ್ತಾಂಶವನ್ನು ರಕ್ಷಿಸಲು ಸಲಹೆ ನೀಡಲಾಗಿದೆ. ನಮ್ಮ ಆಂತರಿಕ ಡೇಟಾ ತಜ್ಞರು ಪ್ರಕರಣ ಪರಿಹರಿಸಲು ಹಗಲು- ರಾತ್ರಿ ಎನ್ನದೆ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ವಿವರಣೆ ನೀಡಲು ಸಾಧ್ಯವಿಲ್ಲ ವಿವಿ ಮೂಲಗಳು ತಿಳಿಸಿವೆ.

ಜೂನ್​ನಲ್ಲಿ ಬ್ರಿಟನ್​ ಸಂವಹನ ನಿಯಂತ್ರಕ ಆಫ್​ಕಾಮ್​, ಪ್ರೊಗ್ರೆಸ್​ ಸಾಫ್ಟ್​ವೇರ್​ನ ಮೂವ್​ಇಟ್​ ಕೂ ರಾನ್ಸಮ್‌ವೇರ್ ದಾಳಿಗೆ ತುತ್ತಾಗಿ ದತ್ತಾಂಶದ ಉಲ್ಲಂಘನೆ ನಡೆದಿತ್ತು. ಇಷ್ಟೇ ಅಲ್ಲದೇ ಬ್ರಿಟನ್​ ಸರ್ಕಾರಕ್ಕೆ ಪ್ರಮುಖ ಸೇವೆ ಒದಗಿಸುತ್ತಿರುವ ಹೊರಗುತ್ತಿಗೆ ಸಂಸ್ಥೆ ಕ್ಯಾಪಿಟಾ ಕೂಡ ರಾನ್ಸಮ್‌ವೇರ್ ದಾಳಿಗೆ ತುತ್ತಾಗಿದ್ದಾಗಿ ಮೇನಲ್ಲಿ ತಿಳಿಸಿದೆ. ಇದು 90 ಸಂಘಟನೆಗಳ ವೈಯಕ್ತಿಕ ಮಾಹಿತಿಯನ್ನು ದಾಳಿ ಮೂಲಕ ಪಡೆದಿತು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಬಳಕೆದಾರರ ಮಾಹಿತಿ ಕದ್ದು ಚೀನಾಗೆ ರವಾನೆ; Google Playನಲ್ಲಿವೆ ಈ ಅಪಾಯಕಾರಿ ಆ್ಯಪ್​ಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.