ಲಂಡನ್: ಯುನೈಟೆಡ್ ಕಿಂಗ್ಡಮ್ನಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಏರಿಕೆ ಕಂಡಿದ್ದು, ಸಾರ್ಸ್ ಕೋವ್ 2 ವೈರಸ್ ಕಾರಣದಿಂದ ಚಳಿಗಾಲದಲ್ಲಿ ರಾಷ್ಟ್ರ ಮತ್ತೊಂದು ಕೋವಿಡ್ ಹೊಸ ಅಲೆಯನ್ನು ಎದುರಿಸಲಿದೆ. ಹೀಗಾಗಿ ಜನರು ಸಿದ್ಧರಾಗಿರುವಂತೆ ಯುಕೆ ಆರೋಗ್ಯ ಏಜೆನ್ಸಿ ತಿಳಿಸಿದೆ.
ಇನ್ನು ಕೋವಿಡ್ನ ಹೊಸ ತಳಿಗಳನ್ನು BA.2.86 ಎಂದು ಗುರುತಿಸಲಾಗಿದ್ದು, ಇದನ್ನು ಪಿರೋಲಾ ಎಂದು ಕೂಡ ಕರೆಯಲಾಗಿದೆ. ಈ ತಳಿಯು ಕಳೆದ ಐದು ತಿಂಗಳಿನಿಂದ ಇಂಗ್ಲೆಂಡ್ನಲ್ಲಿ ಉಲ್ಬಣಿಸುತ್ತಿದೆ. ಕಳೆದ ಏಪ್ರಿಲ್ ಮಧ್ಯಭಾಗದಿಂದ ಇಲ್ಲಿಯವರೆಗೆ ಅಂದರೆ ಅಕ್ಟೋಬರ್ 6ರ ವರೆಗೆ 3,336 ರೋಗಿಗಳು ಇದರಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಯುಕೆ ಆರೋಗ್ಯ ಭದ್ರತಾ ಏಜೆನ್ಸಿ (ಯುಕೆಎಚ್ಎಸ್ಎ) ಪ್ರಕಾರ, ಈ ತಿಂಗಳಲ್ಲಿ ಮತ್ತಷ್ಟು ಪ್ರಕರಣಗಳು ಹೆಚ್ಚಲಿವೆ. ಜೊತೆಗೆ ಚಳಿಗಾಲದಲ್ಲಿ ಇದರ ಜೊತೆಗೆ ಜ್ವರದಂತಹ ಶ್ವಾಸಕೋಶ ವೈರಸ್ಗಳು ಕಾಡಲಿವೆ ಎಂದಿದ್ದಾರೆ.
ಚಳಿಗಾಲದಲ್ಲಿ ಪ್ರಕರಣ ಏರಿಕೆ: ಈ ವಾರ ಕೋವಿಡ್ ಸೋಂಕಿನ ದರ ಕೊಂಚ ಏರಿಕೆ ಕಂಡಿದೆ. ಚಳಿಗಾಲದ ಮಾಸಕ್ಕೆ ನಾವು ಪ್ರವೇಶಿಸುತ್ತಿದ್ದಂತೆ, ಈ ಸಮಯದಲ್ಲಿ ಮತ್ತಷ್ಟು ಕೋವಿಡ್ ಪ್ರಕರಣ ಏರಿಕೆ ಕಾಣುವ ನಿರೀಕ್ಷೆ ಇದೆ ಎಂದು ಯುಕೆಎಚ್ಎಸ್ಎ ಸಾರ್ವಜನಿಕ ಆರೋಗ್ಯ ಕಾರ್ಯಕ್ರಮದ ನಿರ್ದೇಶಕ ಮೇರಿ ರಾಮ್ಸೆ ತಿಳಿಸಿದ್ದಾರೆ.
ಸದ್ಯ ನಾವು ಸೋಂಕಿನ ದರವನ್ನು ಹತ್ತಿರದಿಂದ ನಿರ್ವಹಣೆ ಮಾಡುತ್ತಿದ್ದೇವೆ. ಜನರು ಉಸಿರಾಟದ ಲಕ್ಷಣಗಳು ಕಂಡು ಬಂದರೆ ಜಾಗ್ರತೆ ವಹಿಸಬೇಕು. ಅದರಲ್ಲೂ ದುರ್ಬಲ ಆರೋಗ್ಯದ ಜನರು ಹೆಚ್ಚಿನ ಗಮನ ವಹಿಸಬೇಕು. ಈ ನಡುವೆ ಕೋವಿಡ್ ಪ್ರಕರಣದಿಂದ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಆದರೂ ಕೋವಿಡ್ ಸಮಯಕ್ಕೆ ಹೋಲಿಕೆ ಮಾಡಿದರೆ, ಇದು ಕಡಿಮೆ ಇದೆ ಎಂದಿದ್ದಾರೆ.
ಯುಕೆಎಚ್ಎಸ್ಎ ವರದಿ ಪ್ರಕಾರ, 2,257 ಕೋವಿಡ್ ಪ್ರಕರಣಗಳು ಪ್ರತಿನಿತ್ಯ ಇಂಗ್ಲೆಂಡ್ನಲ್ಲಿ ವರದಿಯಾಗುತ್ತಿದೆ. ಈ ನಡುವೆ ದೇಶದಲ್ಲಿ ಬೂಸ್ಟರ್ ಲಸಿಕೆಯನ್ನು ವೃದ್ಧರಿಗೆ ಮತ್ತು ದುರ್ಬಲ ಆರೋಗ್ಯದ ಜನರಿಗೆ ನೀಡಲಾಗುತ್ತಿದೆ. ಇಲ್ಲಿಯವರೆಗೆ 3.9 ಮಿಲಿಯನ್ ಜನರಿಗೆ ಲಸಿಕೆ ನೀಡಲಾಗಿದೆ. ಋತುಮಾನದ ಜ್ವರದ ಲಸಿಕೆಗಳು ಚಳಿಗಾಲದ ಅವಧಿಯಲ್ಲಿ ಎರಡೂ ರೋಗಕಾರಕಗಳಿಂದ ದುರ್ಬಲ ಜನರ ರಕ್ಷಣೆ ಒದಗಿಸುತ್ತವೆ. ಈ ಹಿನ್ನೆಲೆ ಜನರು ಬೂಸ್ಟರ್ ಲಸಿಕೆ ತೆಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
ಪೋಷಕರು ಮತ್ತು ಕೋವಿಡ್ ಮತ್ತು ಜ್ವರದ ಲಸಿಕೆಗಳೆರಡಕ್ಕೂ ಅರ್ಹರಾಗಿರುವವರು ಎನ್ಎಚ್ಎಸ್ ಅಥವಾ ಜಿಪಿ ಶಸ್ತ್ರಚಿಕಿತ್ಸೆಯ ಮೂಲಕ ಸಾಧ್ಯವಾದಷ್ಟು ಬೇಗ ಲಸಿಕೆಗೆ ಬುಕ್ ಮಾಡುವಂತೆ ಅವರು ಒತ್ತಾಯಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: Covid 19: ಕಳೆದ 24 ಗಂಟೆಯಲ್ಲಿ ದೇಶದಲ್ಲಿ 72 ಹೊಸ ಕೋವಿಡ್ ಪ್ರಕರಣ ದಾಖಲು