ಮಗುವಿಗೆ ಜನ್ಮ ನೀಡುವುದು ತಾಯಿಗೆ ಮರು ಹುಟ್ಟು ಇದ್ದಂತೆ. ಮಗುವಿನ ಜನನ ತಾಯಿಗೆ ಸಂತಸ ನೀಡಿದರೂ, ಆರಂಭದ ದಿನದಲ್ಲಿ ಮಗುವನ್ನು ಬೆಳೆಸುವುದು ಸವಾಲಿನ ಕೆಲಸ ಕೂಡ. ಈ ಸಂದರ್ಭದಲ್ಲಿ ತಾಯಿ ಅನೇಕ ಅಂಶಗಳ ಬಗ್ಗೆ ಎಚ್ಚರಿಕೆವಹಿಸಬೇಕು. ಮೊದಲ ಬಾರಿ ತಾಯಿಯಾದವರು ಮಗುವಿಗೆ ಹಾಲುಣಿಸುವಲ್ಲಿ ಅನೇಕ ಸವಾಲಗಳನ್ನು ಎದುರಿಸುತ್ತಾರೆ. ಆದ್ರೆ ಸರಿಯಾದ ಮಾರ್ಗದರ್ಶನದಿಂದ ಇದನ್ನು ನಿರ್ವಹಣೆ ಮಾಡಬಹುದು.
ಎರಡು ಮಗುವಿನ ತಾಯಿಯಾಗಿರುವ ರೇಣುಕಾ ಭಾರ್ತಿ, ತಮ್ಮ ಮೊದಲ ಮಗುವಿಗೆ ಹಾಲುಣಿಸುವಾಗ ಸಾಕಷ್ಟು ಸಮಸ್ಯೆ ಎದುರಿಸಿದರು. ಅವರಿಗೆ ಮೊಲೆಯಲ್ಲಿ ಮಾತ್ರ ನೋವು ಕಾಣಿಸದೇ, ಇಡೀ ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಅನೇಕ ವೇಳೆ ಎದೆ ಹಾಲು ಕಟ್ಟಿದ ಅನುಭವಗಳು ಸೋಂಕಿಗೆ ಕೂಡ ಕಾರಣವಾಗುತ್ತದೆ. ಇದು ಕೇವಲ ನನಗೆ ಮಾತ್ರವಲ್ಲದೇ, ನನ್ನ ಮಗುವಿನ ಆರೋಗ್ಯದ ಮೇಲೂ ಪ್ರಭಾವ ಬೀರಿತು. ಇದರಿಂದ ಕಲಿತ ಪಾಠದಿಂದ ಎರಡನೇ ಮಗುವಿನ ವೇಳೆ ಮುನ್ನೆಚ್ಚರಿಕೆ ವಹಿಸಿದ್ದಾಗಿ ಅವರು ತಿಳಿಸಿದರು.
ಮತ್ತೊಂದು ಪ್ರಕರಣದಲ್ಲಿ ಎರಡು ವರ್ಗದ ಉತ್ಕರ್ಷ್ ತಾಯಿ ಶ್ರದ್ಧಾ ಪಾರಿಕ್ ಮಾತನಾಡುತ್ತ, ತಾವು ಹಾಲುಣಿಸುವಾಗ ಎದುರಾದ ಸವಾಲನ್ನು ತಿಳಿಸಿದ್ದಾರೆ. ಮಗುವಿಗೆ ಹಾಲುಣಿಸಿದಾಗ ಮೊಲೆಯಲ್ಲಿ ನೋವು ಕಾಣಿಸಿಕೊಳ್ಳುತ್ತಿತ್ತು. ಅಷ್ಟೇ ಅಲ್ಲದೇ, ಬಿರುಕು ಕೂಡ ಕಂಡು ಬಂದಿತು. ಸಾಮಾನ್ಯವಾಗಿ ಹಾಲುಣಿಸುವ ತಾಯಂದಿರಲ್ಲಿ ಆಯಾಸ ಅಥವಾ ಅಧಿಕ ನಿದ್ದೆ ಇರುತ್ತದೆ. ಇದೇ ಕಾರಣದಲ್ಲಿ ಶ್ರದ್ಧಾ ಕೂಡ ತಮ್ಮ ಹಾಲುಣಿಸುವ ಭಂಗಿ ಬಗ್ಗೆ ಗಮನಹರಿಸಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಮಸ್ಯೆ ಹೆಚ್ಚಾದಾಗ ಆಕೆ ತಾಯಿಯ ಬಳಿ ತಿಳಿಸಿದ್ದಾರೆ. ಈ ವೇಳೆ ಶ್ರದ್ಧಾ ತಾಯಿ ಹಾಲುಣಿಸುವ ಭಂಗಿ ಜೊತೆಗೆ ಎದೆಯಲ್ಲಿ ಹಾಲನ್ನು ಸಂಗ್ರಹಿಸದಂತೆ ತಿಳಿಸಿದ್ದಾರೆ. ಮಗುವು ಸಂಪೂರ್ಣ ಎದೆ ಹಾಲನ್ನು ಕುಡಿಯಲಿಲ್ಲ ಎಂದರೆ, ಆ ಹಾಲನ್ನು ಹಾಗೆಯೇ ಎದೆಯಲ್ಲಿ ಹಿಡಿದಿಟ್ಟುಕೊಳ್ಳಬಾರದು. ಅದನ್ನು ಹೊರಗೆ ತೆಗೆಯಬೇಕು ಎಂಬ ತಾಯಿಯ ಸಲಹೆ ಆಕೆಯ ನೋವನ್ನು ಕಡಿಮೆ ಮಾಡಿತು.
ಹಾಲುಣಿಸುವ ಇತರೆ ಸಮಸ್ಯೆ: ರೇಣುಕಾ ಅಥವಾ ಶ್ರದ್ಧಾ, ಹಲವು ನೂತನ ತಾಯಿಯಂದಿರುವ ಈ ರೀತಿಯ ಸಮಸ್ಯೆಗಳನ್ನು ಅನುಭವಿಸಿರುತ್ತಾರೆ. ಇದಕ್ಕೆ ಕಾರಣ ಹಾಲೂಣಿಸುವ ಜ್ಞಾನದ ಕೊರತೆ, ಈ ಕುರಿತು ಮಾತನಾಡಿರುವ ಸ್ತ್ರೀರೋಗ ತಜ್ಞೆ ಡಾ ಸಂಗೀತಾ ವರ್ಮಾ ಹೆಳುವಂತೆ, ತಾಯಂದರಿಗೆ ಹಾಲುಣಿಸುವ ಸರಿಯಾದ ಪದ್ಧತಿಯ ಕುರಿತು ತರಬೇತಿ ನೀಡುವುದು ಅವಶ್ಯ. ಸಾಮಾನ್ಯವಾಗಿ, ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರು ಈ ಕುರಿತು ಮಾಹಿತಿ ನೀಡಿದರೂ, ಅವರಿಗೆ ಈ ಸಂಬಂಧ ಹೆಚ್ಚಿನ ವಿವರವಾದ ಮಾಹಿತಿ ಅಗತ್ಯ ಇದೆ.
ಹಾಲುಣಿಸುವ ತಾಯಂದಿರಲ್ಲಿ ಮೊಲೆ ನೋವು, ಬಿರುಕು, ಊತಮ ಎದೆ ನೋವು, ಎದೆ ಭಾರ, ಹಾಲು ಕಟ್ಟುವಿಕೆ, ಹಾಲಿನ ಉತ್ಪಾದನೆ ಹೆಚ್ಚು ಅಥವಾ ಕಡಿಮೆ, ಹಾಲು ಸೋರುವಿಕೆಯಂತಹ ಕೆಲವು ಸಮಸ್ಯೆಗಳು ಸಾಮಾನ್ಯ. ಇದೇ ಸಮಯದಲ್ಲಿ ಇತರೆ ಕಾರಣದಿಂದ ಎದೆಯಲ್ಲಿ ಸೋಂಕು ಆಗುತ್ತದೆ. ಇದು ಕೂಡ ಊತ ಮತ್ತು ನೋವಿಗೆ ಕಾರಣವಾಗಿ, ಜ್ವರದಂತಹ ಲಕ್ಷಣ ಅಭಿವೃದ್ಧಿಗೊಳಿಸುತ್ತದೆ.
ಈ ಕುರಿತು ಮಾತನಾಡಿರುವ ಬೆಂಗಳೂರಿನ ರಾಯ್ ಆಫ್ ಕೇರ್ ಕ್ಲಿನಿಕ್ ಮಕ್ಕಳ ತಜ್ಞೆ, ಡಾ ಸುಧಾ ಎಂ, ಮಗುವಿಗೆ ಸರಿಯಾದ ಪ್ರಮಾಣದ ಹಾಲು ಇಲ್ಲದೇ ಹೋದಲ್ಲೂ ಇದು ಸಮಸ್ಯೆಗೆ ಕಾರಣವಾಗುತ್ತದೆ. ಮಗುವಿಗೆ ಆರು ತಿಂಗಳಿಗಿಂತ ಮುಂಚೆ ತಾಯಿಯ ಹಾಲುಣಿಸುವಲ್ಲಿ ಸಮಸ್ಯೆ ಎದುರಿಸಿದರೆ ಇದರಿಂದ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದೇ ಸಮಯದಲ್ಲಿ ಎದೆಯಲ್ಲಿ ಯಾವುದಾದರೂ ಸೋಂಕು ಕಾಣಿಸಿಕೊಂಡರೂ ಇದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ.
ಸಮಸ್ಯೆ ತಪ್ಪಿಸುವುದು ಹೇಗೆ:
- ಮಗು ಜನಿಸುವ ಮೊದಲು, ಮಗು ಜನಿಸಿದ ತಕ್ಷಣ ಮಹಿಳೆ ಹಾಲೂಣಿಸುವ ಭಂಗಿ ಮತ್ತು ಇತರೆ ಮುನ್ನೆಚ್ಚರಿಕೆವಹಿಸುವುದು ಅಗತ್ಯ.
- ಮಗುವಿಗೆ ಯಾವಾಗಲೂ ಆರಾಮದಾಯಕ ಕುಳಿತ ಸ್ಥಿತಿಯಲ್ಲಿ ಹಾಲೂಣಿಸಬೇಕು. ಇದನ್ನು ಗಮನದಲ್ಲಿರಿಸಿಕೊಳ್ಳಬೇಕು. ಮಗುವಿಗೆ ಹಾಲುಣಿಸುವಾಗ ಮಗುವಿನ ಮೂಗು ಮುಚ್ಚದಂತೆ ನೋಡಿಕೊಳ್ಳಿ. ಇದಕ್ಕೆ ಸಹಾಯವಾಗಲೂ ಮೊಲೆಯನ್ನು ಎರಡು ಬೆರಳ ಮಧ್ಯ ಹಿಡಿದು ಕುಡಿಸಬೇಕು.
- ಸಾಮಾನ್ಯವಾಗಿ, ಮಹಿಳೆ ಮಗುವಿಗೆ ಜನ್ಮ ನೀಡಿದ ಬಳಿಕ ಕುಳಿತು ಹಾಲೂಣಿಸಲು ಕಷ್ಟ ಪಡುತ್ತಾಳೆ. ಇಂತಹ ಪರಿಸ್ಥಿತಿಯಲ್ಲಿ ದಿಂಬು ಅಥವಾ ಹಾಲುಣಿಸುವ ದಿಂಬುಗಳು ಸಹಾಯ ಮಾಡುತ್ತದೆ.
- ಮಗುವಿಗೆ ಹಾಲುಣಿಸಿದ ಬಳಿಕ ಮತ್ತು ಮುಂಚೆ ಮೊಲೆಯನ್ನು ಶುಚಿಗೊಳಿಸಿ.
- ಮೊಲೆಯನ್ನು ಸದಾ ಸ್ವಚ್ಛವಾಗಿರಿಸಿ ಮತ್ತು ನೀರಿನಾಂಶ ಇಲ್ಲದಂತೆ ನೋಡಿಕೊಳ್ಳಿ.
- ಮೊಲೆಗಳಿಗೆ ಬಿರುಸಾದ ಸೋಪ್ ಅಥವಾ ಕ್ರೀಂ ಬಳಸಬೇಡಿ.
- ಮೊಲೆಯಲ್ಲಿ ಬಿರುಕು ಕಂಡರೆ ಅದಕ್ಕೆ ಲನೊಲಿನ್ ಹೊಂದಿರುವ ಕ್ರೀಂ ಅಥವಾ ಆಲಿವ್ ಎಣ್ಣೆ ಬಳಸಿ. ಇದರಲ್ಲಿ ವಿಟಮಿನ್ ಇ ಹೊಂದಿರುವ ಊರಿಯೂತ ವಿರೋಧಿ ಅಂಶ ಇರುವಂತೆ ನೋಡಿಕೊಳ್ಳಿ.
- ಸಾಮಾನ್ಯ ಎದೆ ನೋವನ್ನು ತಣ್ಣ ಅಥವಾ ಬಿಸಿ ಮಾಸಾಜ್ನಿಂದ ಪರಿಹಾರ ಮಾಡಬಹುದು. ಆದರೆ, ನೋವು ಹೆಚ್ಚಾಗಿ ಜ್ವರ ಬಂದರೆ, ವೈದ್ಯರ ಭೇಟಿ ಮಾಡಿ
- ತಾಯಂದಿರು ತಮ್ಮ ಆಹಾರದಲ್ಲಿ ಪೋಷಕಾಂಶಯುಕ್ತ ಆಹಾರ ಸೇವಿಸಿ.
ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಕಡಿಮೆ ಫೈಬರ್ ಆಹಾರ ಸೇವನೆ, ಮಗುವಿನ ಮೆದುಳಿನ ಬೆಳವಣಿಗೆಗೆ ಅಡ್ಡಿ: ವರದಿ