ನವದೆಹಲಿ: ಚೀನಾದಲ್ಲಿ ನ್ಯೂಮೋನಿಯಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಭಾರತದ ವೈದ್ಯರು ಕೂಡ ಈ ಬಗ್ಗೆ ಎಚ್ಚರದಿಂದ ಇರುವಂತೆ ಕರೆ ನೀಡಿದ್ದಾರೆ. ದೇಶದಲ್ಲಿ ಈ ರೀತಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಕುರಿತು ಮಾತನಾಡಿರುವ ಅವರು, ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡುವಂತೆ ತಿಳಿಸಿದ್ದಾರೆ.
ಇತ್ತೀಚಿಗೆ ಪ್ರೊಮೆಡ್ ಮೇಲ್ನಲ್ಲಿ ಪ್ರಕಟವಾದ ವರದಿಯಂತೆ ಚೀನಾದಲ್ಲಿ ಮಕ್ಕಳಲ್ಲಿ ನ್ಯೂಮೋನಿಯಾ ಪ್ರಕರಣಗಳು ಹೆಚ್ಚಾಗಿದ್ದು, ಇದರಿಂದ ಅವರು ಗಂಭೀರವಾಗಿ ಬಳಲುತ್ತಿದ್ದಾರೆ. ಇನ್ನು ಈ ಪ್ರಕರಣಕ್ಕೆ ಮೂಲ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಮಕ್ಕಳಲ್ಲಿ ಅಧಿಕ ಜ್ವರ ಮತ್ತು ಶ್ವಾಸಕೋಶ ಸಮಸ್ಯೆಯಿಂದಾಗಿ ಅವರು ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ.
ಉತ್ತರ ಚೀನಾದಲ್ಲಿ ಮಕ್ಕಳಲ್ಲಿ ಎಚ್9ಎನ್2 ಪ್ರಕರಣಗಳು ಉಲ್ಬಣಿಸಿದ್ದು, ಅವರಲ್ಲಿ ಉಸಿರಾಟ ಸಮಸ್ಯೆಗಳು ಕಂಡು ಬಂದಿದೆ. ಇದರ ಕುರಿತು ಗಂಭೀರ ಮೇಲ್ವಿಚಾರಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಚೀನಾದಲ್ಲಿ ವರದಿಯಾಗಿರುವ ಎವಿಯನ್ ಇನ್ಫುಯೆನ್ಸ್ ಮತ್ತು ಶ್ವಾಸ ಕೋಶದ ಸಮಸ್ಯೆಗಳು ಅಪಾಯ ಭಾರತದ ಮೇಲೆ ಕಡಿಮೆ ಇದೆ ಎಂದು ಸಚಿವಾಲಯ ವರದಿ ಮಾಡಿದೆ. ಇದೇ ವೇಳೆ ಚೀನಾದಲ್ಲಿರುವ ಸದ್ಯದ ಇನ್ಫುಯೆನ್ಸ್ ಪರಿಸ್ಥಿತಿಯಿಂದ ಎದುರಾಗುವ ಪರಿಸ್ಥಿತಿಯಿಂದ ಎದುರಾಗುವ ಯಾವುದೇ ತುರ್ತು ಸನ್ನಿವೇಶ ಎದುರಿಸಲು ದೇಶ ಸಿದ್ದವಾಗಿದೆ ಎಂದು ತಿಳಿಸಿದೆ.
ಮುಂಜಾಗ್ರತೆ ಅಗತ್ಯ: ಇದೇ ವೇಳೆ ಸರ್ಕಾರ ಸಾರ್ವಜನಿಕರಿಗೆ ಯಾವುದೇ ಸೋಂಕನ್ನು ತಡೆಗಟ್ಟುವಲ್ಲಿ ಅಗತ್ಯ ಕ್ರಮವಹಿಸುವಂತೆ ತಿಳಿಸಿದ್ದು, ಕೈ ಶುದ್ಧತೆ, ಇನ್ಫುಯೆನ್ಸ್ ಲಸಿಕೆ ಜೊತೆಗೆ ಸಂಯಮ ಕಾಪಾಡಿಕೊಳ್ಳುವಂತೆ ಕರೆ ನೀಡಿದೆ.
ವಯಸ್ಕರ ಮೇಲೆ ಹೆಚ್ಚಾಗಿ ಪರಿಣಾಮ ಬೀರುವ ಕೋವಿಡ್ಗಿಂತ ಭಿನ್ನವಾಗಿ ಹೊಸ ನ್ಯೂಮೋನಿಯಾ ಪ್ರಕರಣಗಳ ಮಕ್ಕಳನ್ನು ದುರ್ಬಲರನ್ನಾಗಿಸುತ್ತಿದೆ. ಲಭ್ಯವಿರುವ ಸೀಮಿತ ಮಾಹಿತಿ ಅನುಸಾರ, ಕೈ ಸ್ವಚ್ಛತೆ, ಇನ್ಫುಯೆನ್ಸ ಲಸಿಕೆಗಳು, ಸೋಂಕು ಹೊಂದಿರುವ ಮಕ್ಕಳನ್ನು ಪ್ರತ್ಯೇಕವಾಗಿರುಸುವ ಮೂಳಕ ಈ ಸೋಂಕನ್ನು ತಡೆಗಟ್ಟವುದು ಅಗತ್ಯವಾಗಿದೆ ಎಂದು ಸಕ್ರ ವರ್ಲ್ಡ್ ಹಾಸ್ಪಿಟಲ್ನ ಹಿರಿಯ ಕನ್ಸಲಟ್ಟರ್ ಸಚಿನ್ ಕುಮಾರ್ ತಿಳಿಸಿದ್ದಾರೆ.
ವೈರಲ್ ಮ್ಯೂಟೆಷನ್ ಅಥವಾ ಪರಿಸರ ವ್ಯವಸ್ಥೆಗಳು ಸೇರಿದಂತೆ ಅನೇಕ ಅಂಶಗಳು ಚೀನಾದ ನ್ಯೂಮೋನಿಯ ಪ್ರಕರಣದ ಉಲ್ಬಣಕ್ಕೆ ಕಾರಣವಾಗಿದೆ. ಭಾರತ ಕೂಡ ಮಕ್ಕಳ ಆರೋಗ್ಯ ವಿಚಾರದಲ್ಲಿ ರಕ್ಷಣಾತ್ಮಕ ಕ್ರಮ ನಡೆಸಬೇಕಿದೆ. ಲಸಿಕೆ ಪಡೆಯುವುದಕ್ಕೆ ಪ್ರೋತ್ಸಾನ ಮತ್ತು ಸಾರ್ವಜನಿಕರಲ್ಲಿ ಆರೋಗ್ಯದ ಜಾಗೃತಿ ಅಭಿಯಾನ ನಡೆಸುವ ಮೂಲಕ ಅರಿವು ಮೂಡಿಸಬೇಕಿದೆ ಎಂದು ಸ್ಪರ್ಸ್ ಆಸ್ಪತ್ರೆಯ ಕನ್ಸಲ್ಟಂಟ್ ಪಲ್ಮನೊಲಾಜಿಸ್ಟ್ ಅಂಜಲಿ ಆರ್ ನಾಥ್ ತಿಳಿಸಿದ್ದಾರೆ.
ಚೀನಾದಲ್ಲಿ ನ್ಯೂಮೋನಿಯಾ ಪ್ರಕರಣ ಉಲ್ಬಣದಿಂದ ಹೊಸ ವೈರಸ್ ಅಥವಾ ಅಸ್ತಿತ್ವದಲ್ಲಿರುವ ಶ್ವಾಸಕೋಶ ವೈರಸ್ ಮ್ಯೂಟೆಷನ್ ಆಗಿರಬಹುದಾ ಎಂಬ ಅನುಮಾನ ವ್ಯಕ್ತವಾಗಿದೆ. ಈ ಸಂಬಂಧ ಡಬ್ಲ್ಯೂಎಚ್ಗೆ ಭರವಸೆ ನೀಡಿರುವ ಚೀನಾ ಯಾವುದೇ ಹೊಸ ರೋಗಕಾರಕಗಳು ಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ದೇಶದಲ್ಲಿ ಮೇ ತಿಂಗಳಿನಿಂದ ಮೈಕೋಪ್ಲಾಸ್ಮಾ ನ್ಯುಮೋನಿಯಾ ನ್ಯುಮೋನಿಯಾ ಮತ್ತು ಅಕ್ಟೋಬರ್‌ನಿಂದ ಆರ್‌ಎಸ್‌ವಿ, ಅಡೆನೊವೈರಸ್ ಮತ್ತು ಇನ್‌ಫ್ಲುಯೆನ್ಸ ವೈರಸ್‌ನಿಂದಾಗಿ ಮಕ್ಕಳ ಹೊರರೋಗಿಗಳ ಸಮಾಲೋಚನೆಗಳು ಮತ್ತು ಆಸ್ಪತ್ರೆಯ ದಾಖಲಾತಿಗಳ ದತ್ತಾಂಶವನ್ನು ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ತಿಳಿಸಿದೆ. (ಐಎಎನ್ಎಸ್)
ಇದನ್ನೂ ಓದಿ: ಚೀನಾದಲ್ಲಿ ಮತ್ತೊಂದು ನಿಗೂಢ ವೈರಸ್: ನ್ಯುಮೋನಿಯಾ ರೋಗಲಕ್ಷಣಗಳಿಂದ ಬಳಲುತ್ತಿರುವ ಶಾಲಾ ಮಕ್ಕಳು