ETV Bharat / sukhibhava

ಮಕ್ಕಳ ಸ್ಥೂಲಕಾಯತೆ ತಡೆಗೆ ಸಸ್ಯಾಧಾರಿತ ಆಹಾರಗಳು ಸಹಾಯಕ; ಸಂಶೋಧನೆ - ಆಹಾರವೇ ಔಷಧಿಯಾಗಿದೆ

ಮಕ್ಕಳಿಗೆ ಸಸ್ಯಾಧಾರಿತ ಆಹಾರಗಳನ್ನು ನೀಡುವುದರಿಂದ ಬಾಲ್ಯದ ಸ್ಥೂಲಕಾಯತೆ ತಡೆಯುವ ಜೊತೆಗೆ ಆರೋಗ್ಯಯುತ ತಿನ್ನುವ ಅಭ್ಯಾಸಕ್ಕೆ ಪ್ರೋತ್ಸಾಹ ನೀಡಬಹುದು ಎಂದು ಸಂಶೋಧನೆ ತಿಳಿಸಿದೆ.

Plant-based diets helpful in childhood obesity; Research

author img

By

Published : Jun 24, 2023, 5:06 PM IST

ವಾಷಿಂಗ್ಟನ್​: ಕುಟುಂಬದ ಪೋಷಕಾಂಶ ಭದ್ರತೆ ಸುಧಾರಣೆ ಜೊತೆಗೆ ಮಕ್ಕಳಲ್ಲಿ ಬಿಎಂಐ ಕಡಿಮೆ ಮಾಡಲು ಆಹಾರವೇ ಔಷಧಿಯಾಗಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಮಾಸ್​ ಜನರಲ್​ ಬ್ರಿಗ್ಯಾಮ್​ ಹಾಸ್ಪಿಟಲ್​ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಸಾಂಕ್ರಾಮಿಕತೆ ಬಳಿಕ ಆಹಾರದ ಸಹಾಯವನ್ನು ವಿನಂತಿಸುವ ಕುಟುಂಬಗಳಿಗೆ ಸಾಪ್ತಾಹಿಕ ಸಸ್ಯ-ಆಧಾರಿತ ಆಹಾರವನ್ನು ನೀಡುವುದು ಮಕ್ಕಳಲ್ಲಿ ತೂಕ ಬದಲಾವಣೆಗಳನ್ನು ಉಂಟುಮಾಡುತ್ತದೆ ಎಂಬುದುದನ್ನು ಮೆಸಚ್ಯೂಸೆಟ್​​ ಜನರಲ್​ ಹಾಸ್ಪಿಟಲ್​ ಮತ್ತು ಬೊಸ್ಟೊನ್​ ಚಿಲ್ಡ್ರನ್​ ಆಸ್ಪತ್ರೆ ತನಿಖೆ ನಡೆಸಿದೆ.

ಆಹಾರ ಪ್ಯಾಕೇಜ್‌ಗಳ ಹೆಚ್ಚುತ್ತಿರುವ ಸ್ವೀಕೃತಿ ಮತ್ತು ಕಡಿಮೆಯಾದ ಬಿಎಂಐ ನಡುವಿನ ಸಂಬಂಧವನ್ನು ತಂಡವು ಕಂಡುಹಿಡಿದಿದೆ. ದೀರ್ಘಕಾಲದ ರೋಗ ತಡೆಯುವಲ್ಲಿ, ಬಾಲ್ಯದ ಸ್ಥೂಲಕಾಯತೆ ತಡೆಗಟ್ಟುವಲ್ಲಿ ಸಸ್ಯಾಧಾರಿತ ಆಹಾರಗಳು ಸಾಕಷ್ಟು ಸಹಾಯ ಮಾಡುತ್ತದೆ ಎಂಬುದು ಫಲಿತಾಂಶದಲ್ಲಿ ತಿಳಿದು ಬಂದಿದೆ ಎಂದು ಅಧ್ಯಯನ ತಿಳಿಸಿದೆ.

ಬಾಲ್ಯದಲ್ಲಿ ಮಕ್ಕಳಿಗೆ ಆರೋಗ್ಯಯುತ ತಿನ್ನುವ ಅಭ್ಯಾಸವನ್ನು ರೂಢಿಸುವುದು ಅವಶ್ಯಕವಾಗಿದೆ. ಇದರಿಂದ ಅವರಲ್ಲಿ ಮುಂದಿನ ಜೀವನದಲ್ಲಿ ಉಂಟಾಗುವ ಸ್ಥೂಲಕಾಯತೆಯನ್ನು ತಡೆಯಬಹುದು. ಆದರೆ, ಅನೇಕ ಕುಟುಂಬಗಳು ಅಂತಹ ಆರೋಗ್ಯ ಆಹಾರಗಳ ಲಭ್ಯತೆಯನ್ನು ಹೊಂದಿರುವುದಿಲ್ಲ ಎಂದು ಹಿರಿಯ ಲೇಖಕ ಲ್ಯೂರೆನ್​ ಫಿಚ್ಟ್ನರ್ರ್​ ತಿಳಿಸಿದ್ದಾರೆ. ಆರೋಗ್ಯಯುತ ಆಹಾರಗಳು ಮಕ್ಕಳ ದೀರ್ಘ ಜೀವನಕ್ಕೆ ಸಹಾಯ ಮಾಡುತ್ತದೆ. ಆರೋಗ್ಯಯುತ ಭವಿಷ್ಯದ ಜೊತೆಗೆ ಉತ್ತಮ ಹೃದಯನಾಳ ಮತ್ತು ಚಯಾಪಚಯನ ಆರೋಗ್ಯ ಸಾಧ್ಯತೆಯನ್ನು ಸಣ್ಣ ವಯಸ್ಸಿನಲ್ಲೇ ಹೊಂದುವಂತೆ ಮಾಡುತ್ತದೆ ಎಂದಿದ್ದಾರೆ.

2020ರಲ್ಲಿ ಆಹಾರ ಅಸುರಕ್ಷತೆಯೂ ಶೇ 55ರಷ್ಟು ಅಮೆರಿಕದಲ್ಲಿ ಹೆಚ್ಚಾಗಿದೆ. ಇದು ಶೇ 42ರಷ್ಟು ಮನೆಗಳ ಜೊತೆ ಮಕ್ಕಳ ಮೇಲೆ ಪರಿಣಾಮ ಬೀರಿದೆ. ಸಾಂಕ್ರಾಮಿಕತೆಯ ಆರ್ಥಿಕ ಅಂಶ, ಶಾಲೆಗಳು ಮುಚ್ಚಿದ ಪರಿಣಾಮ ಮತ್ತು ಆಹಾರ ಪೂರೈಕೆ ಸರಪಳಿಗೆ ತಡೆಯಂತಹ ಅನೇಕ ಅಂಶಗಳಿಂದ ಹೆಚ್ಚಾಗಿದೆ. ಆಹಾರ ಅಭದ್ರತೆ ಹೆಚ್ಚಾದ ಪರಿಣಾಮ ಮಕ್ಕಳಲ್ಲಿ ಸ್ಥೂಲಕಾಯತೆ ಹೆಚ್ಚಿದೆ. 2019ರಲ್ಲಿ 19.3ರಷ್ಟಿದ್ದ ಈ ಸಮಸ್ಯೆ 2020ರಲ್ಲಿ 22.4ರಷ್ಟಾಗಿದೆ. ಗುಣಮಟ್ಟ ಮತ್ತು ಸಾಕಷ್ಟು ಪ್ರಮಾಣದ ಆಹಾರದಂತಹ ಆಹಾರ ಅಭದ್ರತೆ ಸವಾಲಿಗೆ ಅನೇಕ ಕುಟುಂಬಗಳು ಹೋರಾಡುತ್ತವೆ.

ಆಹಾರ ಭದ್ರತೆಯನ್ನು ಅನುಭವಿಸುತ್ತಿರುವ ಮನೆಗಳಲ್ಲಿ ಮಕ್ಕಳು ಊಟವನ್ನು ತಪ್ಪಿಸುತ್ತಿದ್ದಾರೆ. ಕಾರಣ ದಿನವಿಡಿ ಮೂರು ಹೊತ್ತು ಊಟ ಮಾಡಲು ಹಣವಿಲ್ಲ ಎಂದು ಎಂದು ಫಿಚ್ಟ್ನರ್ ತಿಳಿಸಿದ್ದಾರೆ. ಪೋಷಕರು ಆಹಾರದ ಆಯವ್ಯಯದಲ್ಲಿ ಬಹಳ ಕಷ್ಟಪಡುತ್ತಿದ್ದು, ತಮ್ಮ ಮಕ್ಕಳು ಕನಿಷ್ಠ ಆಹಾರ ಸಿಗಲಿ ಎಂಬ ಕಾರಣಕ್ಕೆ ಕಳಪೆ ಲಭ್ಯವಿರುವ ಆಹಾರವನ್ನು ಕೊಳ್ಳುತ್ತಿದ್ದಾರೆ. ಇದು ಪೋಷಕಾಂಶ ಕೊರತೆ ಮತ್ತು ಸ್ಥೂಲಕಾಯತೆಯಂತಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ.

ಬಾಲ್ಯದ ಸ್ಥೂಲಕಾಯತೆಯ ಮೇಲೆ ಸಾಂಕ್ರಾಮಿಕ-ಸಂಬಂಧಿತ ಆಹಾರ ಅಭದ್ರತೆಯ ಪರಿಣಾಮಗಳನ್ನು ತಗ್ಗಿಸಲು ಸಹಾಯ ಮಾಡಲು ಎಂಜಿಎಚ್​ ರೆವೆರೆ ಫುಡ್​​ ಪ್ಯಾಂಟ್ರಿ ಕುಟುಂಬಗಳು ವಿನಂತಿಸಿದ ಸಾಪ್ತಾಹಿಕ ಸಸ್ಯಾಧಾರಿತದ ಆಹಾರಗಳು ಸಾಕಷ್ಟು ಸಹಾಯ ಮಾಡುತ್ತದೆ. ಪ್ಯಾಕೇಜ್​ಗಳು ತಾಜಾ ಹಣ್ಣು ಮತ್ತು ತರಕಾರಿ, ಒಣಹಣ್ಣು ಮತ್ತು ಧಾನ್ಯನ್ನು ಪ್ಯಾಕೇಜ್​ ಹೊಂದಿದ್ದು, ಇದು ಕುಟುಂಬವೊಂದಕ್ಕೆ ಮೂರು ಹೊತ್ತಿನ ಆಹಾರಕ್ಕೆ ಸಹರಿ ಹೊಂದುತ್ತದೆ. 2021 ಜನವರಿ ಮತ್ತು 2022 ಫೆಬ್ರವರಿ ಮಧ್ಯೆ 93 ಕುಟುಂಬದ 107 ಮಕ್ಕಳು ಈ ಸಾಪ್ತಾಹಿಕ ಆಹಾರದ ಪ್ಯಾಕೇಜ್​ ಹೊಂದಿದ್ದು, ಸರಾಸರಿ ಪ್ರತಿ ಕುಟುಂಬಕ್ಕೆ 27 ಪ್ಯಾಕೇಜ್​ಗಳನ್ನು ನೀಡಲಾಗಿದೆ.

ಈ ವೇಳೆ ನಡೆಸಿದ ಅಧ್ಯಯನದಲ್ಲಿ, ಸಂಶೋಧಕರು ಆಹಾರ ಪ್ಯಾಕೇಜ್‌ಗಳನ್ನು ಸ್ವೀಕರಿಸುವ ಮೊದಲು ಬೇಸ್‌ಲೈನ್ ಅವಧಿಯಲ್ಲಿ ಬಿಎಂಐ ಅನ್ನು ಪರೀಕ್ಷಿಸಿದರು. ನಂತರ ಮಾಸ್ ಜನರಲ್ ಬ್ರಿಗಮ್ ಎಲೆಕ್ಟ್ರಾನಿಕ್ ಹೆಲ್ತ್ ರೆಕಾರ್ಡ್ ಅನ್ನು ಬಳಸಿಕೊಳ್ಳಲಾಗಿದೆ. ಸಾಂಕ್ರಾಮಿಕ ಸಮಯದಲ್ಲಿ ಕುಟುಂಬಗಳನ್ನು ಬೆಂಬಲಿಸಲು ಈ ಆಹಾರ ಪ್ಯಾಕೇಜ್‌ಗಳನ್ನು ಒದಗಿಸಲು ತಕ್ಷಣದ ಮೌಲ್ಯವಿದೆ. ಆದರೆ ನಾವು ಕುಟುಂಬಗಳು ಮತ್ತು ಮಕ್ಕಳನ್ನು ಆರೋಗ್ಯಕರ ಆಹಾರದ ಆಯ್ಕೆಗಳನ್ನು ಮಾಡಲು ಸಕ್ರಿಯಗೊಳಿಸಿದ್ದೇವೆ, ಮಕ್ಕಳು ಚಿಕ್ಕವರಾಗಿದ್ದಾಗ ಸಸ್ಯಾಧಾರಿತ ಆಹಾರವನ್ನು ಪರಿಚಯಿಸುವುದು ಮುಖ್ಯ ಎಂದಿದ್ದಾರೆ.

ಇದನ್ನೂ ಓದಿ: ಇನ್ಮೇಲೆ ಚಿಕನ್​ ಅನ್ನು ಪೌಲ್ಟ್ರಿಯಲ್ಲಿ ಅಲ್ಲ, ಪ್ರಯೋಗಾಲಯದಲ್ಲಿ ಬೆಳೆಯಬಹುದು; ಇದು ಕೋಶ ಕೃಷಿ ಕೋಳಿ ಉತ್ಪಾದನೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.