ಬೆಂಗಳೂರು: ಪ್ರತಿ ವರ್ಷ ಸೆಪ್ಟೆಂಬರ್ 8 ಅನ್ನು ಜಾಗತಿಕ ಸಮುದಾಯ ವಿಶ್ವ ಭೌತಿಕ ಚಿಕಿತ್ಸಾ ದಿನವೆಂದು (World Physical Therapy Day) ಆಚರಿಸುತ್ತದೆ. ಜಗತ್ತಿನಾದ್ಯಂತ ಪ್ರತಿಯೊಬ್ಬರ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಭೌತಿಕ ಚಿಕಿತ್ಸೆ ಎಂಬುದು ಪ್ರಮುಖ ಪಾತ್ರ ವಹಿಸಿದೆ. ಈ ದಿನದಂದು ಅನೇಕ ವೇದಿಕೆಗಳು ಜನಜೀವನದಲ್ಲಿ ದೈಹಿಕ ಚಿಕಿತ್ಸೆಯ ಪ್ರಯೋಜನ ಮತ್ತು ಅದರ ಸಕಾರಾತ್ಮಕ ಪ್ರಭಾವಗಳ ಕುರಿತು ಜಾಗೃತಿ ಮೂಡಿಸುತ್ತವೆ.
ಇತಿಹಾಸ: ವಿಶ್ವ ಭೌತಿಕ ಚಿಕಿತ್ಸಾ ದಿನವನ್ನು ವಿಶ್ವ ಪಿಟಿ ದಿನ ಎಂದು ಕರೆಯಲಾಗುತ್ತದೆ. 1951ರ ಸೆಪ್ಟೆಂಬರ್ 8ರಂದು ಈ ದಿನವನ್ನು ಸ್ಥಾಪಿಸಲಾಯಿತು. ಆದಾಗ್ಯೂ, ಈ ದಿನ ಅಧಿಕೃತವಾಗಿ ಜಾರಿಗೆ ಬಂದಿದ್ದು ಸೆಪ್ಟೆಂಬರ್ 8, 1996.
ಭೌತಿಕ ಚಿಕಿತ್ಸೆ ಮಹತ್ವ: ಭೌತಿಕ ಚಿಕಿತ್ಸೆಗಳು ಜೀವನದ ಗುಣಮಟ್ಟವನ್ನು ಸುಧಾರಿಸುವ ಜೊತೆಗೆ ಅವರ ಸ್ವಾತಂತ್ರವನ್ನು ಮರಳಿ ಪಡೆಯಲು ಅಧಿಕಾರ ನೀಡುತ್ತದೆ. ಗಾಯದಿಂದ ಗುಣಮುಖವಾಗಲು ಅಥವಾ ದೀರ್ಘ ಆರೋಗ್ಯ ಪರಿಸ್ಥಿತಿ ನಿರ್ವಹಣೆ ಅಥವಾ ಚಲನಶೀಲತೆ ಹೆಚ್ಚಿಸಲು ದೈಹಿಕ ಸವಾಲುಗಳಿಂದ ಹೊರಬರಲು ಈ ಚಿಕಿತ್ಸೆಗಳು ಸಾಕಷ್ಟು ಸಹಾಯ ಮಾಡುತ್ತದೆ.
ಅಪಘಾತ, ಸರ್ಜರಿ ಅಥವಾ ಅನಾರೋಗ್ಯದಲ್ಲಿ ಈ ದೈಹಿಕ ಚಿಕಿತ್ಸೆಗಳು ಪುನರ್ಜೀವನದ ಸಾಧನವಾಗಿದೆ. ರೋಗಿಗಳಿಗೆ ಶಕ್ತಿ, ಚಲನಶೀಲತೆ ಮತ್ತು ಕಾರ್ಯವನ್ನು ಮರಳಿ ಪಡೆಯಲು ನೆರವಾಗುತ್ತದೆ. ಜಾಗತಿಕವಾಗಿ ದೀರ್ಘಕಾಲಿಕ ನೋವುಗಳಿಂದ ಸಾಕಷ್ಟು ಜನರು ತೊಂದರೆ ಅನುಭವಿಸುತ್ತಿದ್ದಾರೆ. ದೈಹಿಕ ಚಿಕಿತ್ಸಕರು ತಮ್ಮ ತಂತ್ರ, ಸ್ವಯಂಚಿಕಿತ್ಸೆ ಮತ್ತು ವ್ಯಾಯಾಮದ ಮೂಲಕ ಈ ನೋವುಗಳನ್ನು ಪರಿಹರಿಸಿ, ರೋಗಿಗಳ ಯೋಗಕ್ಷೆಮಕ್ಕೆ ಸಹಾಯ ಮಾಡುತ್ತಾರೆ. ಇದು ನೋವಿನ ಔಷಧಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
ಭೌತಿಕ ಚಿಕಿತ್ಸಕರು ಅನೇಕ ಆರೋಗ್ಯ ಸಮಸ್ಯೆ ತಡೆಯಲು ಸಲಹೆ ನೀಡುತ್ತಾರೆ. ಅವರು ಪ್ರತಿಯೊಬ್ಬರಿಗೂ ಕುಳಿತುಕೊಳ್ಳುವ ಸರಿಯಾದ ಭಂಗಿ, ಜೀವನ ಶೈಲಿಯ ಬದಲಾವಣೆಯಿಂದ ಗಾಯಗಳ ತಡೆಗಟ್ಟುವಿಕೆ ಮತ್ತು ದೈಹಿಕ ಆರೋಗ್ಯ ನಿರ್ವಹಣೆ ಕುರಿತು ಶಿಕ್ಷಣ ನೀಡುತ್ತಾರೆ. ಭೌತಿಕ ಚಿಕಿತ್ಸಕರು ಅನೇಕ ವಿಷಯದಲ್ಲಿ ತಜ್ಞತೆ ಹೊಂದಿರುತ್ತದೆ. ಮಕ್ಕಳ ಚಿಕಿತ್ಸೆಯಿಂದ ದೊಡ್ಡವರ ಆರೈಕೆಯವರೆಗೆ ಅವರು ವಿಶಾಲ ಚಿಕಿತ್ಸಾ ವಿಧಾನ ಹೊಂದಿದ್ದಾರೆ. ಈ ವೈವಿಧ್ಯತೆಯಿಂದ ಎಲ್ಲಾ ವಯೋಮಾನದ ಜನರು ಕೂಡ ಪರಿಸ್ಥಿತಿ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆ ಪಡೆಯಬಹುದು.
ಕೋವಿಡ್ 19 ಸಾಂಕ್ರಾಮಿಕತೆ ಟೆಲಿಹೆಲ್ತ್ ಸೇವೆ ಅಳವಡಿಸಿಕೊಳ್ಳಲು ಹೆಚ್ಚು ಒತ್ತು ನೀಡಿದೆ. ಇದರಲ್ಲಿ ದೈಹಿಕ ಚಿಕಿತ್ಸೆ ಕ್ಷೇತ್ರ ಕೂಡ ಇದೆ. ಅನೇಕ ಚಿಕಿತ್ಸಕರು ವರ್ಚುಯಲ್ ಸಮಾಲೋಚನೆಯನ್ನು ಇದೀಗ ನೀಡುತ್ತಿದ್ದಾರೆ. ಈ ಸೇವೆ ವಿಸ್ತರಣೆ ಮೂಲಕ ರೋಗಿಗಳ ಅನುಕೂಲತೆಯನ್ನು ನೀಡಲಿದೆ.
ಭೌತಿಕ ಚಿಕಿತ್ಸೆ ಎಂಬುದು ಕ್ರಿಯಾತ್ಮಕ ಕ್ಷೇತ್ರವಾಗಿದ್ದು, ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಪ್ರಗತಿಯೊಂದಿಗೆ ನಿರಂತರವಾಗಿ ವಿಕಸನಗೊಳ್ಳುತ್ತದೆ. ಚಿಕಿತ್ಸಕರು ಹೊಸ ತಂತ್ರಗಳು ಮತ್ತು ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಲು ಸಂಶೋಧನೆಯಲ್ಲಿ ತೊಡಗುತ್ತಿದ್ದಾರೆ.
ಫಿಜಿಯೋಥೆರಪಿ ಚಿಕಿತ್ಸೆ ಹೇಗೆ?: ಫಿಸಿಯೋಥೆರಪಿಯನ್ನು ರೋಗಿಗಳ ವಯಸ್ಸು ಮತ್ತು ಅವರು ಹೊಂದಿರುವ ನೋವಿನ ಆಧಾರದ ಮೇಲೆ ನಡೆಸಲಾಗುವುದು. ಬಯೋಮೆಕಾನಿಕ್ಸ್ ಬಳಸಿ ಅವರಿಗೆ ಸ್ವಯಂ ಚಿಕಿತ್ಸೆ, ವ್ಯಾಯಾಮ ಚಿಕಿತ್ಸೆ ಮತ್ತು ಎಲೆಕ್ಟ್ರೊಥೆರಪಿಯನ್ನು ನೀಡಲಾಗುವುದು. ಇದು ರೋಗಿಗಳಲ್ಲಿ ನೋವು ನಿವಾರಣೆಗೆ ಸಹಾಯ ಮಾಡುತ್ತದೆ. ದೈಹಿಕ ಚಲನಶೀಲತೆ, ಶಕ್ತಿ ಮತ್ತು ಕಾರ್ಯಾಚರಣೆಯನ್ನು ನಿರ್ವಹಣೆ ಮಾಡಿ ಹೆಚ್ಚಿಸುತ್ತದೆ.
ವರ್ಲ್ಡ್ ಪಿಜಿಕಲ್ ಥೆರಪಿ ದಿನವನ್ನು ಜಗತ್ತಿನಾದ್ಯಂತ ಕಠಿಣ ಕೆಲಸ ನಿರ್ವಹಣೆಯಲ್ಲಿ ತೊಡಗಿರುವ ಚಿಕಿತ್ಸಕರಿಗೆ ಸಮರ್ಪಣೆ ಮಾಡಿ ಆಚರಿಸಲಾಗುವುದು. ಅವರ ಕೊಡಗೆ ಅಗಾಧವಾಗಿದ್ದು, ಅನೇಕ ಜನರ ಜೀವನ ಮತ್ತು ಸಮುದಾಯದ ಮೇಲೆ ಪ್ರಭಾವ ಬೀರಿದೆ.
ಇದನ್ನೂ ಓದಿ: ಭಾರತದಲ್ಲಿ ಪ್ರತಿ ನಾಲ್ಕು ನಿಮಿಷಕ್ಕೆ ಒಬ್ಬ ಮಹಿಳೆಯಲ್ಲಿ ಸ್ತನ ಕ್ಯಾನ್ಸರ್ ಮಾರಿ; ಅಧ್ಯಯನ