ETV Bharat / sukhibhava

​ಟೈಪ್ 1 ಡಯಾಬಿಟಿಸ್ ಹೊಂದಿರುವವರಲ್ಲಿನ ರೋಗ ಬೇಗ ಪತ್ತೆ ಮಾಡುತ್ತೆ ವೈಯಕ್ತೀಕರಿಸಿದ ಕಿಡ್ನಿ ಸ್ಕ್ರೀನಿಂಗ್!

ಟೈಪ್ 1 ಡಯಾಬಿಟಿಸ್ (T1D) ಹೊಂದಿರುವ ಜನರಿಗೆ ಮೂತ್ರಪಿಂಡದ ಕಾಯಿಲೆಯ ಸ್ಕ್ರೀನಿಂಗ್‌ಗೆ ವೈಯಕ್ತೀಕರಿಸಿದ ವಿಧಾನವನ್ನು ತೆಗೆದುಕೊಳ್ಳುವುದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (CKD) ಪತ್ತೆ ಹಚ್ಚುವ ಸಮಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಮೂತ್ರಪಿಂಡ ಕಾಯಿಲೆ
ಮೂತ್ರಪಿಂಡ ಕಾಯಿಲೆ
author img

By

Published : Nov 4, 2022, 4:01 PM IST

ಹೈದರಾಬಾದ್: ಟೈಪ್ 1 ಡಯಾಬಿಟಿಸ್ (ಟಿ1ಡಿ) ಹೊಂದಿರುವ ವ್ಯಕ್ತಿಗಳಲ್ಲಿನ ಮೂತ್ರಪಿಂಡ ಕಾಯಿಲೆ ತಪಾಸಣೆಯನ್ನು ಸ್ಕ್ರೀನಿಂಗ್​ ವಿಧಾನದ ಮೂಲಕ ಮಾಡಬಹುದಾಗಿದೆ. ಇದು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ (ಸಿಕೆಡಿ) ಪತ್ತೆಹಚ್ಚುವ ಸಮಯ ಕಡಿಮೆ ಮಾಡುತ್ತದೆ ಎಂದು ಎಪಿಡೆಮಿಯಾಲಜಿ ಆಫ್ ಡಯಾಬಿಟಿಸ್ ಇಂಟರ್ವೆನ್ಶನ್ಸ್ ಮತ್ತು ಕಾಂಪ್ಲಿಕೇಶನ್​ ಅಧ್ಯಯನ ತಂಡ ತಿಳಿಸಿದೆ.

ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ ಭಾಗವಾಗಿರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡಯಾಬಿಟಿಸ್ ಅಂಡ್ ಡೈಜೆಸ್ಟಿವ್ ಅಂಡ್ ಕಿಡ್ನಿ ಡಿಸೀಸ್ (NIDDK) ನಿಂದ ಇದು ಧನಸಹಾಯ ಪಡೆದಿದೆ. ಡಯಾಬಿಟಿಸ್ ಕೇರ್‌ನಲ್ಲಿ ಪ್ರಕಟವಾದ ಸಂಶೋಧನೆಯು T1D ಯೊಂದಿಗಿನ ಜನರಿಗೆ ಮೊದಲ ಪುರಾವೆ ಆಧಾರಿತ ಮೂತ್ರಪಿಂಡ ಸ್ಕ್ರೀನಿಂಗ್ ಮಾದರಿಗೆ ಆಧಾರವನ್ನು ಒದಗಿಸುತ್ತದೆ.

ಪ್ರಸ್ತುತ ಕ್ರಾನಿಂಕ್​ ಕಿಡ್ನಿ ಡಿಸೀಜ್​ ಸ್ಕ್ರೀನಿಂಗ್ ಕನಿಷ್ಠ ಐದು ವರ್ಷಗಳ ಕಾಲ T1D ಹೊಂದಿರುವ ವ್ಯಕ್ತಿಗಳ ಯೂರಿನರಿ ಅಲ್ಬುಮಿನ್ ವಿಸರ್ಜನೆ ದರ (AER) ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಅಲ್ಬುಮಿನ್ ರಕ್ತದಲ್ಲಿ ಕಂಡುಬರುವ ಪ್ರೋಟೀನ್ ಮತ್ತು ಮೂತ್ರದಲ್ಲಿ ಹೆಚ್ಚು ಅಲ್ಬುಮಿನ್ ಇರುವುದು ಮೂತ್ರಪಿಂಡದ ಕಾಯಿಲೆಯ ಸಂಕೇತವಾಗಿದೆ.

ಹೊಸ ಸಂಶೋಧನೆಗಳು ಪರೀಕ್ಷಾ ಆವರ್ತನ ಮತ್ತು CKDಯ ಆರಂಭಿಕ ಪತ್ತೆಯನ್ನು ಅತ್ಯುತ್ತಮವಾಗಿಸಲು AER ಸ್ಕ್ರೀನಿಂಗ್ ಅನ್ನು ವೈಯಕ್ತೀಕರಿಸಬಹುದು ಎಂದು ಸೂಚಿಸುತ್ತದೆ.

ನಿರ್ದಿಷ್ಟವಾಗಿ ಹೇಳುವುದಾದರೆ ಕ್ರಾನಿಂಕ್​ ಕಿಡ್ನಿ ಡಿಸೀಜ್​​ನನ್ನು ಅಭಿವೃದ್ಧಿಪಡಿಸುವ ಕಡಿಮೆ ಅಪಾಯವನ್ನು ಹೊಂದಿರುವ T1D ಯೊಂದಿಗಿನ ಜನರು ಹೊರೆ ಮತ್ತು ವೆಚ್ಚವನ್ನು ಕಡಿಮೆ ಮಾಡಲು AER ಪರೀಕ್ಷೆ ಮಾಡಿಸಿಕೊಳ್ಳಬಹುದು. T1D ಹೊಂದಿರುವ ಜನರು ತಮ್ಮ ಜೀವಿತಾವಧಿಯಲ್ಲಿ CKD ಅನ್ನು ಅಭಿವೃದ್ಧಿಪಡಿಸುವ ಅಂದಾಜು ಶೇ 50ರಷ್ಟು ಅಪಾಯವನ್ನು ಹೊಂದಿರುತ್ತಾರೆ. ಸಿಕೆಡಿ ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು. ಆಗ ಡಯಾಲಿಸಿಸ್ ಅಥವಾ ಮೂತ್ರಪಿಂಡ ಕಸಿ ಅಗತ್ಯವಿರುತ್ತದೆ.

1983 ರಿಂದ 1993 ರವರೆಗೆ ನಡೆದ DCCT, T1D ಯೊಂದಿಗಿನ ಜನರಿಗೆ, ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಸಾಮಾನ್ಯಕ್ಕೆ ಹತ್ತಿರದಲ್ಲಿಟ್ಟುಕೊಳ್ಳುವುದು ಕಣ್ಣು, ಮೂತ್ರಪಿಂಡ ಮತ್ತು ನರಗಳ ಕಾಯಿಲೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ.

ಇದನ್ನು ಓದಿ: ಕುರುಕಲು ತಿಂಡಿ ಅಂದ್ರೆ ಮೂಗು ಮುರಿಯುವುದೇಕೆ?: ಮುಖ ಅರಳುವ ಸಂಗತಿ ಇಲ್ಲಿದೆ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.