ETV Bharat / sukhibhava

2020ರಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಜನರ ಸಂಖ್ಯೆ ದ್ವಿಗುಣ! - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲ

ಪ್ರತಿವರ್ಷ ಜನರಲ್ಲಿ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ಆದರೆ ಈ ವರ್ಷ ಮಾನಸಿಕ ಆರೋಗ್ಯವನ್ನು ಹಾನಿಗೊಳಿಸಿದ ನಿರ್ದಿಷ್ಟ ಮತ್ತು ಸ್ಪಷ್ಟ ಕಾರಣವೆಂದರೆ ಕೋವಿಡ್-19 ಸಾಂಕ್ರಾಮಿಕ ರೋಗ. ಈ ವರ್ಷ ಜನರನ್ನು ಹೆಚ್ಚಾಗಿ ಬಾಧಿಸಿದ ಕೆಲವು ಮಾನಸಿಕ ಸಮಸ್ಯೆಗಳು ಇಲ್ಲಿವೆ.

People Suffering From Mental Illnesses Doubled In 2020

author img

By

Published : Dec 25, 2020, 3:37 PM IST

ಹೈದರಾಬಾದ್: ಹಲವಾರು ಕಾರಣಗಳಿಂದಾಗಿ ಪ್ರತಿವರ್ಷ ಮಾನಸಿಕ ಸಮಸ್ಯೆಗಳು ಹೆಚ್ಚುತ್ತಿವೆ. ಆದರೆ ಮಾನಸಿಕ ಆರೋಗ್ಯವನ್ನು ಹಾನಿಗೊಳಿಸಿದ ಒಂದು ನಿರ್ದಿಷ್ಟ ಮತ್ತು ಸ್ಪಷ್ಟ ಕಾರಣವೆಂದರೆ ಕೋವಿಡ್-19 ಸಾಂಕ್ರಾಮಿಕ. ಸಾಂಕ್ರಾಮಿಕ ರೋಗದಿಂದಾಗಿ ಅನಾರೋಗ್ಯ, ಆರ್ಥಿಕ ಬಿಕ್ಕಟ್ಟು, ಭವಿಷ್ಯದ ಅನಿಶ್ಚಿತತೆ ಇತ್ಯಾದಿಗಳಿಗೆ ತುತ್ತಾಗುವ ಭಯವು, ಪ್ರಪಂಚದಾದ್ಯಂತದ ಎಲ್ಲರಲ್ಲೂ ಖಿನ್ನತೆ, ಆತಂಕ ಮತ್ತು ಒತ್ತಡಕ್ಕೆ ಕಾರಣವಾಗಿದೆ.

ಜೊತೆಗೆ ಪಾರ್ಕಿನ್ಸನ್, ಆಲ್​ಝೈಮರ್, ಬುದ್ಧಿಮಾಂದ್ಯತೆಯಂತಹ ಕೆಲವು ನರವೈಜ್ಞಾನಿಕ ಕಾಯಿಲೆಗಳನ್ನು ಹೊಂದಿರುವ ಜನರು ಲಾಕ್‌ಡೌನ್ ಸಮಯದಲ್ಲಿ ಅಸಮರ್ಪಕ ಔಷಧ ಪೂರೈಕೆಯಿಂದಾಗಿ ಸಾಕಷ್ಟು ತೊಂದರೆ ಅನುಭವಿಸಿದರು. ಇದಲ್ಲದೇ ವೈವಾಹಿಕ ಭಿನ್ನಾಭಿಪ್ರಾಯ ಮತ್ತು ಕೌಟುಂಬಿಕ ಹಿಂಸಾಚಾರದ ಪ್ರಕರಣಗಳೂ ವರದಿಯಾಗಿವೆ ಮತ್ತು ಜನರು ಸಹಾಯಕ್ಕಾಗಿ ಮನೋವೈದ್ಯರನ್ನು ಸಂಪರ್ಕಿಸಿದರು. ಈ ವರ್ಷ ಜನರನ್ನು ಹೆಚ್ಚು ಬಾಧಿಸಿದ ಕೆಲವು ಮಾನಸಿಕ ಸಮಸ್ಯೆಗಳು ಇಲ್ಲಿವೆ.

ಉಲ್ಬಣಗೊಂಡ ಒತ್ತಡ ಮತ್ತು ಖಿನ್ನತೆಯ ಪ್ರಕರಣಗಳು:

ಈ ವರ್ಷದ ಆರಂಭದಿಂದಲೇ ಕೋವಿಡ್-19 ಪ್ರಾರಂಭವಾದ ತಕ್ಷಣ, ಪ್ರಕರಣಗಳು ಭುಗಿಲೆದ್ದವು ಮತ್ತು ದೇಶಗಳು ಲಾಕ್​ಡೌನ್​ಗೆ ಒಳಗಾದವು. ಆರೋಗ್ಯ ಮತ್ತು ಆರ್ಥಿಕ ಪರಿಸ್ಥಿತಿಗಳ ಕುರಿತು ಜನರಲ್ಲಿ ಚಿಂತೆಯಿತ್ತು. ಲಾಕ್​ಡೌನ್ ಸಮಯದಲ್ಲಿ ಯಾರನ್ನೂ ಹೊರಗೆ ಹೋಗಲು ಅನುಮತಿಸದಿದ್ದಾಗ, ಜನರಿಗೆ ಜೈಲಿನಲ್ಲಿ ಸಿಕ್ಕಿಹಾಕಿಕೊಂಡಂತೆ ಭಾಸವಾಗತೊಡಗಿತು. ಇವೆಲ್ಲವೂ ಖಿನ್ನತೆಯ ಪ್ರಕರಣಗಳಲ್ಲಿ ತ್ವರಿತ ಏರಿಕೆಗೆ ಕಾರಣವಾಯಿತು.

ವೈರಸ್ ಸೋಂಕಿತರಲ್ಲಿ ಹೆಚ್ಚಿನವರಲ್ಲಿ ಖಿನ್ನತೆಯ ಪ್ರಕರಣಗಳು ಕೂಡಾ ಕಂಡುಬಂದವು. ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಸುಮಾರು 30% ಕೋವಿಡ್-19 ರೋಗಿಗಳು ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿದ್ದರು. ಇದಲ್ಲದೆ ಜನರು ಮನೆಯಲ್ಲಿ ದೀರ್ಘಕಾಲದವರೆಗೆ ಇದ್ದುದರಿಂದ, ಅವರಲ್ಲಿ ಪರಸ್ಪರ ಅಸಮಾಧಾನವು ಕೌಟುಂಬಿಕ ಹಿಂಸೆ ಮತ್ತು ಕೌಟುಂಬಿಕ ಘರ್ಷಣೆಗೆ ಕಾರಣವಾಯಿತು. ಇದು ಜನರಲ್ಲಿ ಒತ್ತಡ ಮತ್ತು ಖಿನ್ನತೆಯ ಭಾವನೆಯನ್ನು ಹೆಚ್ಚಿಸಿತು.

ಆಶ್ಚರ್ಯಕರ ಸಂಗತಿಯೆಂದರೆ ವಯಸ್ಕರು ಮಾತ್ರವಲ್ಲದೇ, ಮಕ್ಕಳು ಕೂಡ ಆತಂಕ ಮತ್ತು ಖಿನ್ನತೆಗೆ ತುತ್ತಾದರು. ಶಾಲೆಗಳು ಮತ್ತು ಕಾಲೇಜುಗಳ ಮುಚ್ಚುವಿಕೆ, ಆನ್‌ಲೈನ್ ತರಗತಿಗಳು ಮತ್ತು ಮನೆಯಲ್ಲೇ ಇರಲು ಒತ್ತಾಯಿಸುವುದು, ಆತಂಕ, ಚಡಪಡಿಕೆ, ಹೆಚ್ಚಿದ ಒತ್ತಡ ಹಾಗೂ ಖಿನ್ನತೆಗೆ ಕಾರಣವಾಯಿತು. ಇದರಿಂದಾಗಿ ಅನೇಕ ರಾಜ್ಯ ಸರ್ಕಾರಗಳು ಮಕ್ಕಳಿಗೆ ಆನ್‌ಲೈನ್ ಕೌನ್ಸಿಲಿಂಗ್ ಅವಧಿಗಳನ್ನು ಪ್ರಾರಂಭಿಸಿದವು.

ಆತ್ಮಹತ್ಯೆ ಪ್ರಕರಣಗಳಲ್ಲಿ ಹೆಚ್ಚಳ:

ಅಂಕಿ-ಅಂಶಗಳ ಪ್ರಕಾರ, ಪ್ರತಿ ವರ್ಷ ವಿಶ್ವದ ಸುಮಾರು 8 ಲಕ್ಷ ಜನರು ಮತ್ತು ನಮ್ಮ ದೇಶದಲ್ಲಿ ಸುಮಾರು 2-3 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಈ ವರ್ಷ ಅಂದರೆ 2020ರಲ್ಲಿ ಆತ್ಮಹತ್ಯೆ ಪ್ರಕರಣಗಳು ದ್ವಿಗುಣಗೊಂಡವು. ಖಿನ್ನತೆ, ಹತಾಶೆ ಮತ್ತು ಅನಿಶ್ಚಿತತೆ ಕೆಲವು ಜನಪ್ರಿಯ ಚಲನಚಿತ್ರ ಮತ್ತು ಟಿವಿ ತಾರೆಯರು ಸೇರಿದಂತೆ ಎಲ್ಲಾ ವಯಸ್ಸಿನ ಜನರಲ್ಲಿ ಆತ್ಮಹತ್ಯಾ ಪ್ರವೃತ್ತಿಯನ್ನು ಪ್ರಚೋದಿಸಿತು. ಆತ್ಮಹತ್ಯೆ ಪ್ರಕರಣಗಳ ಉಲ್ಬಣವನ್ನು ನೋಡಿದ ರಾಜ್ಯ ಮತ್ತು ರಾಷ್ಟ್ರಮಟ್ಟದ ಅನೇಕ ಮನೋವೈದ್ಯರು ಒಗ್ಗೂಡಿ, ಆನ್‌ಲೈನ್ ಕೌನ್ಸೆಲಿಂಗ್ ಮತ್ತು ಮನೋವೈದ್ಯಕೀಯ ಸಲಹೆಗಳನ್ನು ನೀಡಿದರು.

ಮಾನಸಿಕ ಅಸ್ವಸ್ಥರಿಗೆ ಔಷಧಿ ಹಾಗೂ ಚಿಕಿತ್ಸೆಯ ಕೊರತೆ:

ಅನೇಕ ದೇಶಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಆದ ಕಾರಣ ಅಲ್​ಝೈಮರ್, ಸ್ಕಿಜೋಫ್ರೇನಿಯಾ, ಬುದ್ಧಿಮಾಂದ್ಯತೆ ಮತ್ತು ಪರ್ಕಿನ್ಸನ್‌ರಂತಹ ಪರಿಸ್ಥಿತಿಗಳಿಂದ ಬಳಲುತ್ತಿರುವ ಜನರು ಔಷಧಿಗಳ ಲಭ್ಯತೆ ಮತ್ತು ಇತರ ವೈದ್ಯಕೀಯ ಸೌಲಭ್ಯಗಳಿಲ್ಲದ ಕಾರಣ ಕಷ್ಟ ಎದುರಿಸಿದರು.

ಇದರ ಜೊತೆಗೆ ಮನೋವೈದ್ಯಕೀಯ ಸಂಸ್ಥೆಗಳನ್ನು ಸ್ಥಗಿತಗೊಳಿಸುವುದು ಮತ್ತು ಔಷಧಿಗಳ ಅಸಮರ್ಪಕ ಪೂರೈಕೆಯು ಮಾನಸಿಕ ಅಸ್ವಸ್ಥರ ಚಿಕಿತ್ಸೆಯಲ್ಲಿ ಸಮಸ್ಯೆಗಳಿಗೆ ಕಾರಣವಾಯಿತು.

ನಿದ್ರಾಹೀನತೆಯ ಪ್ರಕರಣಗಳಲ್ಲಿ ಹೆಚ್ಚಳ:

ಮನೆಯಲ್ಲಿ, ಕೆಲಸದ ಸ್ಥಳದಲ್ಲಿ ಮತ್ತು ವೈಯಕ್ತಿಕ ಜೀವನದಲ್ಲಿ ಹೆಚ್ಚಿದ ಒತ್ತಡವು ಎಲ್ಲಾ ವಯಸ್ಸಿನ ಜನರಲ್ಲಿ ನಿದ್ರಾಹೀನತೆಗೆ ಕಾರಣವಾಗಿದೆ. ಈ ವರ್ಷದ ಅಂಕಿ-ಅಂಶಗಳ ಪ್ರಕಾರ, ನಿದ್ರಾಹೀನತೆಯ ರೋಗಿಗಳ ಸಂಖ್ಯೆ 10% ದಿಂದ 33%ಕ್ಕೆ ಏರಿದ್ದು, ಮೂರು ಪಟ್ಟು ಹೆಚ್ಚಾಗಿದೆ.

ಹೆಚ್ಚಿದ ಫೋಬಿಯಾಸ್:

ಈ ವರ್ಷ ಪ್ರತಿಕೂಲ ಸನ್ನಿವೇಶಗಳಿಂದಾಗಿ ಜನರು ಹೆಚ್ಚು ಭಯಭೀತರಾಗಿದ್ದರು ಮತ್ತು ವಿವಿಧ ರೀತಿಯ ಫೋಬಿಯಾಗಳಿಗೆ ತುತ್ತಾದರು. ಬಳಸುವ ಮೊದಲು ಎಲ್ಲಾ ವಸ್ತುಗಳನ್ನು ಸ್ವಚ್ಛಗೊಳಿಸುವ ಭೀತಿ ಅಥವಾ ತಮ್ಮ ಮನೆಗಳಿಂದ ಹೊರಬರಲು ಭಯಪಡುವಂತಹ ಸ್ಥಿತಿ ನಿರ್ಮಾಣವಾದವು. ರೋಗವು ಮಾರಕವಾಗಿದ್ದರಿಂದ ಜನರು ಎಂದಿಗಿಂತಲೂ ಹೆಚ್ಚು ಭಯಭೀತರಾಗಿದ್ದರು.

ಆದ್ದರಿಂದ ಈ ವರ್ಷ ಅನೆಕರು ಮಾನಸಿಕ ಸಮಸ್ಯೆಗಳಿಗೆ ತುತ್ತಾದರು. ಕೆಲವರಲ್ಲಿ ಇದು ಸೌಮ್ಯವಾಗಿದ್ದು, ಇನ್ನೂ ಕೆಲವರಲ್ಲಿ ತೀವ್ರವಾಗಿತ್ತು. ಆದರೆ 2021 ಆಶಾದಾಯಕ ವರ್ಷವಾಗಿ, ಹರ್ಷದಿಂದ ಕೂಡಿರಲಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.