ಗರ್ಭಾವಸ್ಥೆಯಲ್ಲಿ ಮಹಿಳೆಯರು ಒಬ್ಬರಿಗಲ್ಲ ಇಬ್ಬರಿಗಾಗಿ ತಿನ್ನಬೇಕು ಎಂದು ಹೇಳುತ್ತಾರೆ. ಆದರೆ, ಗರ್ಭಾವಸ್ಥೆಯಲ್ಲಿ ಅತಿಯಾಗಿ ತೂಕ ಹೆಚ್ಚಾಗುವುದು ತಾಯಂದಿರಿಗೆ ಪ್ರತಿಕೂಲ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು ಹಾಗೂ ಸಾವಿನ ಅಪಾಯವನ್ನೂ ಹೆಚ್ಚಿಸುತ್ತದೆ ಎಂದು ಅಧ್ಯಯನವೊಂದು ಕಂಡುಹಿಡಿದಿದೆ.
ಗರ್ಭಾವಸ್ಥೆಯಲ್ಲಿ ಅಧಿಕ ತೂಕ ಹೆಚ್ಚಾಗುವುದು, ಸಾಮಾನ್ಯವಾಗಿ ಪ್ರಸವಾನಂತರ ತೂಕ ಹೆಚ್ಚಾಗುವುದು, ಗರ್ಭಾವಸ್ಥೆಯ ಮಧುಮೇಹ, ಗರ್ಭಾವಸ್ಥೆ ಪ್ರೇರಿತ ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ ಮೇಲೆ ಪರಿಣಾಮ ಬೀರಬಹುದು. ಮಾತ್ರವಲ್ಲದೇ ಅತಿಯಾಗಿ ತೂಕ ಹೆಚ್ಚಾಗುವುದರಿಂದ ಸಿಸೇರಿಯನ್ ಮೂಲಕ ಹೆರಿಗೆಯಾಗುವ ಅವಕಾಶ ಹೆಚ್ಚಿರುತ್ತದೆ. ಆದರೂ ಅದರ ದೀರ್ಘಕಾಲಿನ ಪರಿಣಾಮಗಳ ಬಗ್ಗೆ ಇಲ್ಲಿಯವರೆಗೆ ತಿಳಿದು ಬಂದಿಲ್ಲ.
ನ್ಯಾಷನಲ್ ಯೂನಿವರ್ಸಿಟಿ ಆಫ್ ಸಿಂಗಾಪುರದ (NUS ಮೆಡಿಸಿನ್) ಸಂಶೋಧಕರು ಸಾಮಾನ್ಯ ಮತ್ತು ಅಧಿಕ ತೂಕದ ವ್ಯಾಪ್ತಿಯಲ್ಲಿ ಬಾಡಿ ಮಾಸ್ ಇಂಡೆಕ್ಸ್ (BMI) ಹೊಂದಿರುವ ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಅತಿಯಾದ ತೂಕ ಹೆಚ್ಚಾಗುವುದು ಎಲ್ಲ ಕಾರಣಗಳ ಮರಣದ ಪ್ರಮಾಣ 9 ರಿಂದ 12 ಶೇಕಡಾದಷ್ಟು ಹೆಚ್ಚಳಕ್ಕೆ ಸಂಬಂಧಿಸಿದೆ ಎನ್ನುವುದನ್ನು ಕಂಡು ಹಿಡಿದಿದೆ. ಈ ಸಂಶೋದನೆಗಳನ್ನು ದಿ ಲ್ಯಾನ್ಸೆಟ್ನಲ್ಲಿ ಪ್ರಕಟಿಸಲಾಗಿದೆ. 46,000ಕ್ಕೂ ಹೆಚ್ಚು ಮಹಿಳೆಯರ ಡೇಟಾವನ್ನು ಆಧರಿಸಿ, ಸಂಶೋಧಕರು ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು, ಹಾಗೂ ನಷ್ಟ ಮತ್ತು ಮರಣದ ನಡುವಿನ ಸಂಬಂಧಗಳನ್ನು ಅಂದಾಜು ಮಾಡಿದ್ದಾರೆ.
ಕಡಿಮೆ ತೂಕ ಹಾಗೂ ಸಾಮಾನ್ಯವಾಗಿ ಗರ್ಭಧಾರಣೆಗಿಂತ ಮೊದಲು BMI ಹೊಂದಿರುವ ಮಹಿಳೆಯರಿಗೆ ಅತಿಯಾದ ತೂಕ ಹೆಚ್ಚಾಗುವುದರಿಂದ ಹೃದಯ ರಕ್ತನಾಳದ ಕಾಯಿಲೆಯಿಂದ ಸಾವನ್ನಪ್ಪುವ ಅಪಾಯ ಅನುಕ್ರಮವಾಗಿ 84 ಪ್ರತಿಶತದಷ್ಟು ಹಾಗೂ 20 ಪ್ರತಿಶತದಷ್ಟು ಹೆಚ್ಚಿದೆ. ಜೊತೆಗೆ ಅಧಿಕ ತೂಕದ ವ್ಯಾಪ್ತಿಯಲ್ಲಿ BMI ಹೊಂದಿರುವ ಮಹಿಳೆಯರು ಮಧುಮೇಹದಿಂದ ಸಾವನ್ನಪ್ಪುವ ಅಪಾಯ ಶೇಕಡಾ 77ರಷ್ಟು ಹೆಚ್ಚಿದೆ ಎಂದು ಅಧ್ಯಯನ ಹೇಳಿದೆ.
ಪ್ರಸ್ತುತ ಇರುವ ಜ್ಞಾನ ಹಾಗೂ ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವ ವಿದ್ಯಮಾನವನ್ನು ಪರಿಗಣಿಸಿ, ಅಧ್ಯಯನಗಳು ಮತ್ತು ಮಾಹಿತಿ ಕೊರತೆಯು ಸಂಶೋಧನೆಗಳನ್ನು ವಿಮರ್ಶಾತ್ಮಕವಾಗಿ ನಿರೂಪಿಸುತ್ತದೆ. 50 ವರ್ಷಗಳಿಗೂ ಹೆಚ್ಚಿನ ಅನುಸರಣಾ ದತ್ತಾಂಶದೊಂದಿಗೆ ಈ ದೊಡ್ಡ ಉತ್ತಮ ಗುಣಮಟ್ಟದ ಅಧ್ಯಯನ, ಸಂಶೋಧನೆಗಳು, ಗರ್ಭಧಾರಣೆಗೆ ಮಹಿಳೆಯರ ಆರೋಗ್ಯ ಎಷ್ಟು ಮುಖ್ಯ ಹಾಗೂ ಅವರ ಒಟ್ಟಾರೆ ದೀರ್ಘಕಾಲೀನ ಆರೋಗ್ಯ, ಯೋಗಕ್ಷೇಮ ಮತ್ತು ದೀರ್ಘಾಯುಷ್ಯದ ಬಗ್ಗೆ ಪುರಾವೆಗಳನ್ನು ನೀಡುತ್ತವೆ.
NSU ಮೆಡಿಸಿನ್ನಲ್ಲಿರುವ ಯೋಂಗ್ ಲೂ ಲಿನ್ ಸ್ಕೂಲ್ ಆಫ್ ಮೆಡಿಸಿನ್ ಸ್ತ್ರೀರೋಗ ಶಾಸ್ತ್ರ ಹಾಗೂ ಪ್ರಸೂತಿ ವಿಭಾಗದ ಪ್ರೊಫೆಸರ್ ಕುಯಿಲಿನ್ ಜಾಂಗ್, "ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವ ಕೆಲಸವನ್ನು ಮಹಿಳೆಯರು ತಮ್ಮ ಜೀವನದ ಆರಂಭದಲ್ಲಿಯೇ ಪ್ರಾರಂಭಿಸಿಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ ಅವರ ಸಂತಾನೋತ್ಪತ್ತಿ ವಯಸ್ಸಿನಲ್ಲಿ ಮತ್ತು ಗರ್ಭಾವಸ್ಥೆಯಲ್ಲಿ ಇರುವ ಆರೋಗ್ಯ, ಅವರ ಜೀವಿತಾವಧಿಯ ಮೇಲೆ ದೀರ್ಘಾವಧಿಯ ಆರೋಗ್ಯದ ಪರಿಣಾಮಗಳನ್ನು ನಿರ್ಣಯಿಸುವಂತಹ ಘಟ್ಟವಾಗಿದೆ. ಮಾತ್ರವಲ್ಲದೇ ಸಂತತಿ ಹಾಗೂ ಕುಟುಂಬದ ಮೇಲೆ ಇಂಟರ್ ಜನರೇಶನ್ ಪ್ರಭಾವವನ್ನು ಬೀರಬಹುದು" ಎಂದು ಹೇಳಿದ್ದಾರೆ.
ಇದನ್ನೂ ಓದಿ : ಹೃದಯರಕ್ತನಾಳ ಸಂಬಂಧಿತ ಸಾವಿನ ಸಂಖ್ಯೆ ಹೆಚ್ಚಳಕ್ಕೆ ಕಾರಣ ಏನು?.. ಸಂಶೋಧನೆಗಳು ಹೇಳುವುದೇನು?