ನವದೆಹಲಿ: ಭಾರತದಲ್ಲಿ ಈ ವರ್ಷ ಹೊರಾಂಗಣ ವಾಯು ಮಾಲಿನ್ಯದಿಂದ 2.18 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ. ಪಳೆಯುಳಿಕೆ ಇಂಧನದ ಬದಲಾಗಿ ಶುದ್ಧತೆ ಮತ್ತು ನವೀಕರಿಸಬಹುದಾದ ಶಕ್ತಿ ಬಳಕೆ ಮಾಡುವ ಮೂಲಕ ಇದನ್ನು ತಡೆಯಬಹುದಾಗಿತ್ತು ಎಂದು ನ್ಯೂ ಮಾಡೆಲಿಂಗ್ ಅಧ್ಯಯನ ತಿಳಿಸಿದೆ.
ಬಿಎಂಜೆಯಲ್ಲಿ ಪ್ರಕಟವಾಗಿರುವ ಈ ಅಧ್ಯಯನದಲ್ಲಿ ಎಲ್ಲ ರೀತಿಯ ವಾಯು ಮಾಲಿನ್ಯದ ಸಾವನ್ನು ಇದು ಹೊಂದಿದೆ. ಅನಾರೋಗ್ಯ ಮತ್ತು ಸಾವಿಗೆ ಪರಿಸರದ ಆರೋಗ್ಯ ಅಪಾಯಕಾರಿ ಅಂಶವೂ ಕಾರಣವಾಗುತ್ತಿದೆ. ಇದರಿಂದ ದಕ್ಷಿಣ ಮತ್ತು ಪೂರ್ವ ಏಷ್ಯಾ ಅದರಲ್ಲೂ ಚೀನಾದಲ್ಲಿ ವರ್ಷಕ್ಕೆ 2.44 ಮಿಲಿಯನ್ ಜನರು ಕಳೆದ ವರ್ಷ ಸಾವನ್ನಪ್ಪಿದ್ದಾರೆ.
ಅಮೆರಿಕದ ಇಂಟರ್ನ್ಯಾಷನಲ್ ಟೀಮ್ ನಡೆಸಿದ ಅಧ್ಯಯನದಲ್ಲಿ ಜರ್ಮನಿ, ಸ್ಪೇನ್ನಲ್ಲಿ ಕೈಗಾರಿಕೆಗಳು ಪಳೆಯುಳಿಕೆ ಇಂಧನ, ಪವರ್ ಜನರೇಷನ್, ಸಾರಿಗೆಯಿಂದಾಗಿ ಮಾಲಿನ್ಯ ಹೆಚ್ಚುತ್ತಿದ್ದು, ಜಾಗತಿಕವಾಗಿ ಪ್ರತಿ ವರ್ಷ 5.1 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ.
ಜಾಗತಿಕವಾಗಿ ಸಂಭವಿಸುತ್ತಿರುವ 8.3 ಮಿಲಿಯನ್ ಸಾವಿನಲ್ಲಿ ಸೂಕ್ಷ್ಮ ಕಣಗಳು (ಪಿಎಂ 2.5) ಮತ್ತು ಓಜೋನ್ ಪದರದ ಗಾಳಿಯು ಶೇ 82ರಷ್ಟು ವಾಯು ಮಾಲಿನ್ಯದ ಸಾವಿಗೆ ಕಾರಣವಾಗಿದ್ದು, ಇವುಗಳನ್ನು ಮಾನವ ನಿರ್ಮಿತ ಮಾಲಿನ್ಯದ ಹೊರ ಸೂಸುವಿಕೆಯಿಂದ ತಡೆಯಬಹುದಾಗಿದೆ.
ವಾಯು ಮಾಲಿನ್ಯದಿಂದ ಉಂಟಾಗುತ್ತಿರುವ ಸಾವಿನಲ್ಲಿ ಶೇ 52ರಷ್ಟು ಹೃದಯ ಸಮಸ್ಯೆ ಕಂಡು ಬಂದರೆ, ಶೇ 30ರಷ್ಟು ಪಾರ್ಶ್ವವಾಯು, ಶೇ 16ರಷ್ಟು ದೀರ್ಘಾವಧಿ ಶ್ವಾಸಕೋಶ ಸಮಸ್ಯೆ ಮತ್ತು ಶೇ 6ರಷ್ಟು ಮಧುಮೇಹ ಆಗಿದೆ. ಶೇ 20ರಷ್ಟು ಸಾವಿನಲ್ಲಿ ಅಧಿಕ ರಕ್ತದೊತ್ತಡ ಮತ್ತು ಅಲ್ಝೈಮರ್ ಮತ್ತು ಪಾರ್ಕಿನ್ಸನ್ನಂತಂಹ ನರ ಸಮಸ್ಯೆಗಳೊಂದಿಗೆ ಗೊತ್ತೇ ಆಗುವುದಿಲ್ಲ ಎಂದು ಅಧ್ಯಯನ ತಿಳಿಸಿದೆ.
ಗ್ಲೋಬಲ್ ಬರ್ಡೆನ್ ಆಫ್ ಡೀಸಿಸ್ 2019 ಅಧ್ಯಯನ ಆಧರಿಸಿ ಈ ದತ್ತಾಂಶ ತಯಾರಿಸಲಾಗಿದೆ. ನಾಸಾ ಉಪಗ್ರಹ ಆಧಾರಿತ ಸೂಕ್ಷ್ಮ ಕಣಗಳು ಮತ್ತು ಜನಸಂಖ್ಯೆ ದತ್ತಾಂಶ ಹಾಗೂ ಪರಿಸರದಲ್ಲಿನ ರಾಸಾಯನಿಕ ಶಾಸ್ತ್ರ, ಏರೋಸೊಲ್ ಮತ್ತು 2019ಕ್ಕೆ ಸಂಬಂಧಿತ ಅಪಾಯದ ಮಾದರಿಯನ್ನು ಅಧ್ಯಯನ ಒಳಗೊಂಡಿದೆ.
ಅಧ್ಯಯನದ ಫಲಿತಾಂಶದಲ್ಲಿ ಪಳೆಯುಳಿಕೆ ಇಂಧನಗಳ ದಕ್ಷಿಣ, ನೈರುತ್ಯ, ಪೂರ್ವ ಏಷ್ಯಾದಲ್ಲಿ ಸಾವಿಗೆ ಕಾರಣವಾಗಿದ್ದು, ಪ್ರತಿ ವರ್ಷ 3.85 ಮಿಲಿಯನ್ ಮಂದಿ ಸಾವನ್ನಪ್ಪುತ್ತಿದ್ದಾರೆ. ಅಧಿಕ ಆದಾಯದ ದೇಶದಲ್ಲಿ ಪಳೆಯುಳಿಕೆ ಇಂಧನದ ಮೇಲಿನ ಅವಲಂಬನೆಯಿಂದ 4,60,000 ಮಂದಿ ಪ್ರತಿ ವರ್ಷ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಶೇ 90ರಷ್ಟು ಪ್ರಕರಣಗಳನ್ನು ಮಾನವ ನಿರ್ಮಿತ ವಾಯು ಮಾಲಿನ್ಯ ನಿಯಂತ್ರಣದ ಮೂಲಕ ತಡೆಯಬಹುದಾಗಿದೆ.
ಪ್ಯಾರಿಸ್ ಕ್ಲೈಮೆಂಟ್ ಆಗ್ರೀಮೆಂಟ್ ಗುರಿ 2050ಕ್ಕೆ ಕ್ಲೈಮೆಂಟ್ ನ್ಯೂಟ್ರಲಿಟಿಯ ಅನುಸಾರ, ಪಳೆಯುಳಿಕೆ ಇಂಧನಗಳ ಬದಲಾಗಿ ಶುದ್ಧ, ನವೀಕರಿಸಬಹುದಾದ ಇಂಧನ ಮೂಲಗಳಿಂದ ಬಳಕೆಯು ಸಾರ್ವಜನಿಕ ಆರೋಗ್ಯ ಮತ್ತು ಹವಾಮಾನ ಪ್ರಯೋಜನ ಪಡೆಯಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಚಳಿಗಾಲದಲ್ಲಿ ಹೆಚ್ಚಾಗಿ ಕಾಡುವ ಮಾಲಿನ್ಯದ ಸಮಸ್ಯೆ!: ಈ ಪ್ರಾಬ್ಲಂನಿಂದ ತಪ್ಪಿಸಿಕೊಳ್ಳುವುದು ಹೇಗೆ?