ETV Bharat / sukhibhava

ಮುಟ್ಟಿನ ಸಮಯದಲ್ಲಿ ಆಹಾರ ಕ್ರಮ ಹೇಗಿರಬೇಕು? ಪೌಷ್ಟಿಕಾಂಶ ತಜ್ಞರಿಂದ ಉಪಯುಕ್ತ ಮಾಹಿತಿ.. - Nutrition during periods

ಮುಟ್ಟಿನ ಸಮಯವನ್ನು ಮಹಿಳೆಯ ಜೀವನದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ 8ರಿಂದ 13 ವರ್ಷ ವಯಸ್ಸಿನಲ್ಲಿ ಹೆಣ್ಣು ಮಗು ಮೊದಲ ಬಾರಿಗೆ ಋತುಮತಿಯಾಗುತ್ತಾಳೆ. ಪ್ರೌಢಾವಸ್ಥೆ ಮತ್ತು ಮುಟ್ಟಿನ ಪ್ರಾರಂಭದೊಂದಿಗೆ ಹುಡುಗಿಯ ದೇಹದಲ್ಲಿ ಸಾಕಷ್ಟು ದೈಹಿಕ ಮತ್ತು ಹಾರ್ಮೋನುಗಳ ಬದಲಾವಣೆಯಾಗುತ್ತದೆ. ಈ ಸಮಯದಲ್ಲಿ ಪೋಷಕರು ಆಕೆಯ ಆಹಾರ ಕ್ರಮವನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಮುಖ್ಯ.

Period Talk
Period Talk
author img

By

Published : Jul 30, 2021, 7:40 PM IST

ಮೊದಲ ಬಾರಿಗೆ ಋತುಮತಿಯಾಗುವುದರಿಂದ ಹಿಡಿದು ತಮ್ಮ ದೇಹದಲ್ಲಿನ ಈ ದೈಹಿಕ ಬದಲಾವಣೆಗೆ ಒಗ್ಗಿಕೊಳ್ಳುವವರೆಗೂ ಹುಡುಗಿಯರು ಸಾಕಷ್ಟು ಸಮಸ್ಯೆಗಳು ಮತ್ತು ಕಿರಿಕಿರಿಗಳನ್ನು ಎದುರಿಸುತ್ತಾರೆ. ಕೆಲವು ಹುಡುಗಿಯರು ಅತಿಯಾದ ರಕ್ತಸ್ರಾವ (7 ದಿನಗಳವರೆಗೆ), ವಾಕರಿಕೆ, ತಲೆ ನೋವು ಮತ್ತು ಹೊಟ್ಟೆ ನೋವು ಅನುಭವಿಸುತ್ತಾರೆ. ಇದು ಮುಟ್ಟಿನ ಬಗ್ಗೆ ಬಹಳಷ್ಟು ತಪ್ಪುಗ್ರಹಿಕೆಗಳು ಮತ್ತು ಭಯಕ್ಕೆ ಕಾರಣವಾಗುತ್ತದೆ.

ಹುಡುಗಿಯ ಜೀವನದ ಈ ನಿರ್ಣಾಯಕ ಸಮಯದಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ. ಈ ಸಮಯದಲ್ಲಿ ಆಕೆಯ ದೇಹದಲ್ಲಿನ ಬದಲಾವಣೆಗಳ ಬಗ್ಗೆ ಮಾತ್ರವಲ್ಲದೆ ಪೋಷಣೆ, ನೈರ್ಮಲ್ಯ ಮತ್ತು ವ್ಯಾಯಾಮದ ಕುರಿತು ಪೋಷಕರು ಮಹತ್ವದ ಸಲಹೆ ನೀಡಬೇಕು. ಮುಟ್ಟಿನ ಸಂದರ್ಭದಲ್ಲಿ ಪೌಷ್ಠಿಕಾಂಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈಟಿವಿ ಭಾರತ ಸುಖೀಭವ ತಂಡವು ಪೌಷ್ಟಿಕಾಂಶ ತಜ್ಞೆ ದಿವ್ಯಾ ಕಲ್ಸೇಕರ್ ಅವರೊಂದಿಗೆ ಮಾತನಾಡಿದ್ದು, ಅವರು ಕೆಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಪೌಷ್ಟಿಕಾಂಶ ಹೊಂದಿರುವ, ಜೀರ್ಣವಾಗಬಲ್ಲ ಆಹಾರ:

ಇಂದು ಅನೇಕ ಹುಡುಗಿಯರು ಜೀವನಶೈಲಿ ಸಮಸ್ಯೆಗಳು ಮತ್ತು ಜಂಕ್ ಫುಡ್​ನಿಂದಾಗಿ ಪಿಸಿಓಎಸ್ ಸಮಸ್ಯೆಗಳನ್ನು ಹೊಂದಿರುವುದರಿಂದ, ಹುಡುಗಿಯರಿಗೆ ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ನೀಡುವಂತೆ ದಿವ್ಯಾ ಸಲಹೆ ನೀಡುತ್ತಾರೆ. ಆಹಾರದಲ್ಲಿ ಪ್ರೋಟೀನ್, ಕಬ್ಬಿಣ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರಬೇಕು. ಆದರೆ ಕೊಬ್ಬು ಮತ್ತು ಜಂಕ್ ಫುಡ್ ಹೆಚ್ಚಾಗಬಾರದು.

ಹುಡುಗಿ ಋತುಮತಿಯಾದ ಬಳಿಕ ಹಲವು ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಸಹ ಅನುಭವಿಸುತ್ತಾಳೆ. ಈ ಬದಲಾವಣೆಗಳನ್ನು ಸರಿಯಾದ ಪೋಷಣೆಯೊಂದಿಗೆ ಸಮತೋಲನಗೊಳಿಸುವುದು ಮುಖ್ಯವಾಗಿದೆ. ಸರಿಯಾದ ಆಹಾರವು ದೈಹಿಕ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸಕಾರಾತ್ಮಕ ದೃಷ್ಟಿಕೋನವನ್ನು ನೀಡುತ್ತದೆ.

ಆಹಾರ ಹೇಗಿರಬೇಕು?

ಜಂಕ್ ಫುಡ್ ಮತ್ತು ಕಾರ್ಬೊನೇಟೆಡ್ ಪಾನೀಯಗಳಿಂದ ದೂರವಿರುವುದು ಉತ್ತಮ. ಈ ಆಹಾರಗಳನ್ನು ಸೇವಿಸುವುದರಿಂದ ತೂಕ ಹೆಚ್ಚಾಗುವುದು ಮಾತ್ರವಲ್ಲ, ಸ್ಥೂಲಕಾಯತೆಯೂ ಉಂಟಾಗುತ್ತದೆ ಎಂದು ದಿವ್ಯಾ ಸಲಹೆ ನೀಡಿದರು.

ಆದ್ದರಿಂದ ಆಹಾರದಲ್ಲಿ ಸಾಕಷ್ಟು ವರ್ಣರಂಜಿತ ತರಕಾರಿಗಳು, ಪಾಲಕ್, ಮೆಂತೆ ಸೊಪ್ಪು, ದ್ವಿದಳ ಧಾನ್ಯಗಳು, ಸಿರಿಧಾನ್ಯಗಳು ಹಾಗೂ ಹಸಿರು ಎಲೆಗಳ ತರಕಾರಿಗಳನ್ನು ತಿನ್ನಲು ಪ್ರೋತ್ಸಾಹಿಸಬೇಕು. ಜೀವಸತ್ವಗಳು ಮತ್ತು ಖನಿಜಗಳ ಜೊತೆಯಲ್ಲಿ ಈ ಆಹಾರಗಳು ಫೋಲಿಕ್ ಆಮ್ಲವನ್ನು ಒದಗಿಸುತ್ತವೆ ಮತ್ತು ಇದು ಮುಟ್ಟಾಗುವ ಹುಡುಗಿಗೆ ಮುಖ್ಯವೆಂದು ಪರಿಗಣಿಸಲಾಗಿದೆ.

ಸಾಮಾನ್ಯವಾಗಿ, ಮಹಿಳೆಯರು ಮತ್ತು ಹುಡುಗಿಯರು ಕಬ್ಬಿಣಸತ್ವದ ಕೊರತೆಯನ್ನು ಎದುರಿಸುತ್ತಾರೆ. ಆದ್ದರಿಂದ ಅವರಿಗೆ ಕಬ್ಬಿಣಸತ್ವ ಭರಿತ ಆಹಾರವನ್ನು ಸೇವಿಸಲು ಸೂಚಿಸಲಾಗುತ್ತದೆ. ದೇಹದಲ್ಲಿ ಕಬ್ಬಿಣದ ಕೊರತೆಯನ್ನು ಸರಿದೂಗಿಸಲು ದಾಳಿಂಬೆ, ಕ್ಯಾರೆಟ್ ಮತ್ತು ಬೀಟ್ರೂಟ್ ಸೇವಿಸಬಹುದು. ದ್ರಾಕ್ಷಿ ರಸ, ಕ್ಯಾರೆಟ್ ಮತ್ತು ಬೀಟ್ರೂಟ್ ರಸವನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು.

ಹೆಣ್ಣು ಮಗು ಆರೋಗ್ಯವಾಗಿದ್ದರೆ ಮುಟ್ಟಿನ ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸುವುದಿಲ್ಲ ಎಂದು ದಿವ್ಯಾ ಹೇಳುತ್ತಾರೆ.

ಯಾವ ಆಹಾರ ಸೇವಿಸಬಾರದು?

ಕೆಲವು ಸಮಯಗಳಲ್ಲಿ ನಿಯಮಿತ ಆಹಾರ ಪದಾರ್ಥಗಳಾದ ದ್ವಿದಳ ಧಾನ್ಯಗಳು ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಆರೋಗ್ಯಕ್ಕೆ ಸಮಸ್ಯೆಯಾಗಬಹುದು. ಮುಟ್ಟಿನ ಸಮಯದಲ್ಲಿ ಹುಡುಗಿಯರ ಜೀರ್ಣಾಂಗ ವ್ಯವಸ್ಥೆಯು ದುರ್ಬಲವಾಗಿರುತ್ತದೆ ಎಂದು ದಿವ್ಯಾ ಹೇಳಿದರು.

ಆದುದರಿಂದ ಹುಡುಗಿ ಮೊದಲ ಬಾರಿ ಋತುಮತಿಯಾದಾಗ ಆಕೆಗೆ ಪೌಷ್ಟಿಕವಾದ ಆದರೆ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ನೀಡಬೇಕು ಮತ್ತು ಸಾಮಾನ್ಯವಾಗಿ ಪ್ರತೀ ತಿಂಗಳು ಅದನ್ನೇ ಮುಂದುವರಿಸಬೇಕು. ದ್ವಿದಳ ಧಾನ್ಯಗಳು ಮತ್ತು ಧಾನ್ಯಗಳಂತಹ ಆಹಾರ ಪದಾರ್ಥಗಳು ಮುಟ್ಟಿನ ಸಮಯದಲ್ಲಿ ಜೀರ್ಣಕ್ರಿಯೆ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಒರಟಾದ ಧಾನ್ಯಗಳನ್ನು ತಪ್ಪಿಸಬೇಕು.

ಮಸಾಲೆಯುಕ್ತ ಆಹಾರ, ಪ್ಯಾಕೇಜ್ ಮಾಡಿದ ಆಹಾರ, ಸಂಸ್ಕರಿಸಿದ ಆಹಾರ, ಚಿಪ್ಸ್, ಫಾಸ್ಟ್ ಫುಡ್ ಮತ್ತು ಚಹಾ ಹಾಗೂ ಕಾಫಿಯನ್ನು ತಪ್ಪಿಸಬೇಕು. ಈ ಆಹಾರ ಪದಾರ್ಥಗಳು ಜೀರ್ಣಕ್ರಿಯೆಗೆ ಉತ್ತಮವಾಗಿಲ್ಲ ಮತ್ತು ಇದು ನೋವಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಹುಡುಗಿಯರಲ್ಲಿ ನಿದ್ರಾಹೀನತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.