ETV Bharat / sukhibhava

ಆನ್​ಲೈನ್​ ಎಐ ಪರೀಕ್ಷೆ ಮೂಲಕ ಪತ್ತೆ ಮಾಡಬಹುದು ಪಾರ್ಕಿನ್ಸನ್​ ತೀವ್ರತೆ

author img

By ETV Bharat Karnataka Team

Published : Sep 9, 2023, 4:31 PM IST

ಇದು ಅಟಾಕ್ಸಿಯಾ ಮತ್ತು ಹಂಟಿಗ್ಟನ್ಸ್​ನಂತಹ ಸಮಸ್ಯೆ ಚಲನೆಯ ಅಸ್ವಸ್ಥತೆ ಮೌಲ್ಯಮಾಪನಕ್ಕೆ ದಾರಿ ಮಾಡುತ್ತದೆ

online-ai-based-test-for-parkinsons-disease-severity-shows-good-results

ನ್ಯೂಯಾರ್ಕ್​​: ಸಂಶೋಧಕರು ಹೊಸ ಆನ್​ಲೈನ್​ ಕೃತಕ ಬುದ್ಧಿಮತೆ- ಎಐ ಸಾಧನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದರಿಂದಾಗಿ ಪಾರ್ಕಿನ್ಸನ್​​ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಅವರ ಲಕ್ಷಣವನ್ನು ಮತ್ತು ತೀವ್ರತೆಯನ್ನು ನಿಮಿಷದಲ್ಲಿ ದೂರದಿಂದಲೇ ತಿಳಿಯಲು ಸಹಾಯ ಮಾಡಲಿದೆ. ಈ ಅಧ್ಯಯವನ್ನು ಎನ್​ಪಿಜೆ ಡಿಜಿಟಲ್​ ಮೆಡಿಸಿನ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ವೆಬ್​ ಕ್ಯಾಮ್ ​ಮುಂದೆ ಬಳಕೆದಾರರ ಬೆರಳಿನ 10 ಟ್ಯಾಪ್​ಗಳನ್ನು ಅವಲಂಬಿಸಿ ರೋಗ ಕಂಡು ಹಿಡಿಯುವ ಕಾರ್ಯಕ್ಷಮತೆಯನ್ನು ಇದು ಹೊಂದಿದೆ.

ಈ ಸಾಧನ ಅಧ್ಯಯನ ನಡೆಸಲು ಪಾರ್ಕಿನ್ಸನ್​ ಕಾಯಿಲೆ ಹೊಂದಿರುವ 250 ಮಂದಿ ಬೆರಳನ್ನು ಟ್ಯಾಪ್​ ಮಾಡಿ ಪರೀಕ್ಷೆ ಮಾಡಿದರು. ಎಐ ಮೂಲಕ ನರ ವಿಜ್ಞಾನಿಗಳು ಮೂವರು ಪ್ರಾಥಮಿಕ ವೈದ್ಯರನ್ನು ಹೋಲಿಕೆ ಮಾಡಿದರು. ಈ ವೇಳೆ ನರವಿಜ್ಞಾನಿಗಳು ಎಐ ಮಾದರಿಗಳಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಯುಪಿಡಿಆರ್​ಎಸ್​ ಪ್ರಮಾಣಿಕರಣದೊಂದಿಗೆ ಎಐ ಮಾದರಿಯು ಪ್ರಾಥಮಿಕ ಆರೈಕೆ ವೈದ್ಯರಿಗಿಂತ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ ಎಂದು ರೋಚೆಸ್ಟರ್​ ವಿಶ್ವವಿದ್ಯಾಲಯ ತಿಳಿಸಿದೆ.

ಯುಪಿಡಿಆರ್​ಎಸ್​ ಎಂಬುದು ಪಾರ್ಕಿನ್ಸ್​​ ರೋಗಿಗಳ ಕಾಯಿಲೆಯ ತೀವ್ರತೆ ಮತ್ತು ಪ್ರಗತಿಯನ್ನು ಅಳೆಯುವ ಸಾಧನವಾಗಿದೆ. ಎಡಿಎಸ್​ ಯುಪಿಡಿಆರ್​ಎಸ್​ ಮೂಲಕ ಸರಳ ಮೋಟರ್​ ಪರೀಕ್ಷೆ ಮೂಲಕ ರೋಗಿಗಳ ಚಲನೆ ಅಸ್ವಸ್ಥೆ ಮತ್ತು ತೀವ್ರತೆ ಮೌಲ್ಯಮಾಪನ ಮಾಡಲಾಗಿದೆ. ಎಐ ಮಾದರಿ ಎಂಡಿಎಸ್​ ಯಪಿಡಿಆರ್​ಎಸ್​ ಮಾರ್ಗದರ್ಶನವನ್ನು ಶೀಘ್ರದಲ್ಲೇ ಮೌಲ್ಯಮಾಪನ ಮಾಡಿತು. ವೇಗ, ಆವರ್ತನ ಸೇರಿದಂತೆ ಇತರ ಸ್ವಯಂಚಾಲಿತ ಕಂಪ್ಯೂಟೇಶನಲ್​ ಅನ್ನು ಅದು ಉತ್ಪಾದಿಸಿದೆ.

ಈ ಅಂಶಗಳು ರೋಗಿಗಳ ಪ್ರಮುಖ ಸಮಸ್ಯೆಗಳಾದ ನರತಜ್ಞರು ಅಲಭ್ಯತೆ, ಕಾಯ್ದಿರಿಸಲು ಸಾಧ್ಯವಾಗದಿರುವುದು ಅಥವಾ ಆಸ್ಪತ್ರೆಗೆ ಪ್ರಯಾಣಿಸಲು ತೊಂದರೆ ಹೊಂದಿರುವವರಿಗೆ ಪರಿಣಾಮಕಾರಿಯಾಗಿದೆ ಎಂದು ರೊಚೆಸ್ಟರ್​ ಯುನಿವರ್ಸಿಟಿಯ ಅಸೋಸಿಯೇಟ್​ ಪ್ರೋಫೆಸರ್​ ಎಹಸಾನ್​ ಹಕ್​ ತಿಳಿಸಿದ್ದಾರೆ. ಎಐ ನಿಧಾನವಾಗಿ ಆರೋಗ್ಯ ಸೇವೆಯಲ್ಲಿ ಸೇರಿಸಬಹುದು ಎಂಬುದಕ್ಕೆ ಉದಾಹರಣೆ ಆಗಿದೆ ಎಂದಿದ್ದಾರೆ.

ಸಂಶೋಧಕರು ತಿಳಿಸುವಂತೆ ಅವರ ಮಾದರಿಗಳನ್ನು ಇತರೆ ಮೋಟರ್​​ ಟಾಸ್ಕ್​ಗಳಿಗೆ ಅಳವಡಿಸಲಾಗಿದೆ. ಇದು ಅಟಾಕ್ಸಿಯಾ ಮತ್ತು ಹಂಟಿಗ್ಟನ್ಸ್​ನಂತಹ ಸಮಸ್ಯೆ ಚಲನೆಯ ಅಸ್ವಸ್ಥತೆ ಮೌಲ್ಯಮಾಪನಕ್ಕೆ ದಾರಿ ಮಾಡುತ್ತದೆ. ಈ ಅಧ್ಯಯನವೂ ಆನ್​ಲೈನ್​ನಲ್ಲಿ ಪಾರ್ಕಿನ್ಸನ್​ ಡಿಸೀಸ್​ ಅಸೆಸ್ಮೆಂಟ್​ನಲ್ಲಿ ಲಭ್ಯವಿದೆ.

ಏನಿದು ಪಾರ್ಕಿನ್ಸನ್​ ಕಾಯಿಲೆ?: ಪಾರ್ಕಿನ್ಸನ್ ಕಾಯಿಲೆಯು ನ್ಯೂರೋ ಡಿಜೆನರೇಟಿವ್ ಡಿಸಾರ್ಡರ್ ಆಗಿದೆ. ಪಾರ್ಕಿನ್ಸನ್ ಡಾಟ್ ಆರ್ಗ್ ಪ್ರಕಾರ, ಮೆದುಳಿನ ನಿರ್ದಿಷ್ಟ ಭಾಗದಲ್ಲಿ ಸಬ್ಸ್ಟಾಂಟಿಯಾ ನಿಗ್ರಾದಲ್ಲಿ ಡೋಪಮೈನ್-ಉತ್ಪಾದಿಸುವ ನ್ಯೂರಾನ್‌ಗಳ ಮೇಲೆ ಪರಿಣಾಮ ಬೀರುತ್ತದೆ. ಈ ರೋಗದ ಲಕ್ಷಣಗಳು ನಿಧಾನವಾಗಿ ಬೆಳವಣಿಗೆ ಕಂಡು ಗೋಚರವಾಗುತ್ತವೆ. (ಐಎಎನ್​ಎಸ್​)

ಇದನ್ನೂ ಓದಿ: Liver cancer: ಫ್ಯಾಟಿ ಲಿವರ್​ ರೋಗಿಗಳ ನಿಕಟ ಸಂಬಂಧಿಗಳಲ್ಲಿ ಲಿವರ್​ ಕ್ಯಾನ್ಸರ್​; ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.