ETV Bharat / sukhibhava

ಹೆಚ್ಚು ವಾಕಿಂಗ್​ ಮಾಡುವ ಮಹಿಳೆಯರಲ್ಲಿ ಸ್ಥೂಲಕಾಯ ಕಡಿಮೆ... - ಮಹಿಳೆಯರಲ್ಲಿ ಸ್ಥೂಲಕಾಯ ಸಂಬಂಧಿ ಕ್ಯಾನ್ಸರ್​

ನೆರೆ ಹೊರೆಯ ಪ್ರದೇಶದಲ್ಲಿ ನಡಿಗೆಗೆ ಅವಕಾಶ ಇರುವುದರಿಂದ ಅವರು ವಾಕಿಂಗ್​ಗೆ ಉತ್ಸಾಹ ತೋರುತ್ತಾರೆ. ಇದರಿಂದ ಅನೇಕ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅಧ್ಯಯನ ತಿಳಿಸಿದೆ.

Obesity rates are lower among women who live walking neighborhood

author img

By ETV Bharat Karnataka Team

Published : Oct 9, 2023, 1:33 PM IST

ನಡೆಯಲು ಹೆಚ್ಚು ಸ್ಥಳಾವಕಾಶ ಇರುವ ಸ್ಥಳದಲ್ಲಿ ಜೀವಿಸುವ ಮಹಿಳೆಯರಲ್ಲಿ ಸ್ಥೂಲಕಾಯ ಸಂಬಂಧಿ ಕ್ಯಾನ್ಸರ್​ ಅದರಲ್ಲೂ ಸ್ತನ ಕ್ಯಾನ್ಸರ್​, ಗರ್ಭಾಶಯ, ಎಂಡೋಮೆಟ್ರಿಯಲ್​ ಕ್ಯಾನ್ಸರ್​​ ಅಪಾಯ ಕಡಿಮೆ ಇರುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. ಈ ಅಧ್ಯಯನವನ್ನು ಜರ್ನಲ್​ ಎನ್ವರಮೆಂಟಲ್​ ಹೆಲ್ತ್​​​ ಪ್ರಾಸ್​​ಪೆಕ್ಟಿವ್ಸ್​ನಲ್ಲಿ ಪ್ರಕಟಿಸಲಾಗಿದೆ.

ಸ್ಥೂಲಕಾಯವು ಮಹಿಳೆಯರಲ್ಲಿ 13 ರೀತಿಯ ವಿವಿಧ ಬಗೆಯ ಕ್ಯಾನ್ಸರ್​ ಅಪಾಯದೊಂದಿಗೆ ಸಂಬಂಧ ಹೊಂದಿದೆ. ಯಾವುದೇ ದೇಹದ ಆಕೃತಿ ಹೊಂದಿದ್ದರೂ ಅವರ ದೈಹಿಕ ಚಟುವಟಿಕೆಗಳು ಕೆಲವು ಮಾರಣಾಂತಿಕ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ನೆರೆಹೊರೆಯ ನಡಿಗೆಯು ಪಾದಚಾರಿ ಚಟುವಟಿಕೆಯನ್ನು ಉತ್ತೇಜಿಸುವ, ಒಟ್ಟು ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವ ಮತ್ತು ಕಡಿಮೆ ಬಿಎಂಐಗೆ ಸಂಬಂಧಿಸಿದ ನಗರ ವಿನ್ಯಾಸದ ಅಂಶಗಳ ಅಧ್ಯಯನ ಸೂಚಿಸುತ್ತದೆ. ನೆರೆಹೊರೆಯ ನಡಿಗೆ ಮತ್ತು ಸ್ಥೂಲಕಾಯ-ಸಂಬಂಧಿತ ಕ್ಯಾನ್ಸರ್ ಸಂಭವವನ್ನು ಮೌಲ್ಯಮಾಪನ ಮಾಡುವ ದೀರ್ಘಾವಧಿಯ ತನಿಖೆಗಳು ಇಲ್ಲಿಯವರೆಗೆ ವಿರಳವಾಗಿದ್ದವು.

ನಡಿಗೆ ಮತ್ತು ಕ್ಯಾನ್ಸರ್​ ಅಪಾಯ: ಮಹಿಳೆ ಹೆಚ್ಚಿನ ನಡಿಗೆ ಮಟ್ಟವಿರುವವರು ಜೀವನವನ್ನು ಸರಾಸರಿ ಸ್ಥಳದ ಗುರಿ ಮತ್ತು ಜನಸಂಖ್ಯೆಯ ಸಾಂದ್ರತೆಯಿಂದ ಮಾಪನ ನಡೆಸಲಾಗಿದೆ. ಹೆಚ್ಚಿನ ನಡಿಗೆಯ ಮಟ್ಟವನ್ನು ಹೊಂದಿರುವ ನೆರೆಹೊರೆ ವಾಸಿಸುವ ಮಹಿಳೆಯರು ಬೊಜ್ಜು-ಸಂಬಂಧಿತ ಕ್ಯಾನ್ಸರ್​​ಗಳು ಅದರಲ್ಲೂ ವಿಶೇಷವಾಗಿ ಋತುಚಕ್ರ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಹೊಂದಿದ್ದರು ಎಂದು ಅಧ್ಯಯನ ತಿಳಿಸಿದೆ.

ಎಂಡೊಮೆಟ್ರಿಯಲ್ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಮತ್ತು ಮಲ್ಟಿಪಲ್ ಮೈಲೋಮಾಗೆ ಮಧ್ಯಮ ರಕ್ಷಣಾತ್ಮಕ ಸಂಬಂಧಗಳು ಕಂಡುಬಂದಿವೆ. ನೆರೆಹೊರೆಯಲ್ಲಿ ಅತಿ ಹೆಚ್ಚು ನಡಿಗೆಯ ಸಾಮರ್ಥ್ಯವಿರುವ ಪ್ರದೇಶಗಳಲ್ಲಿ ವಾಸಿಸುತ್ತಿರುವ ಮಹಿಳೆಯರು ಶೇ 25ರಷ್ಟು ನಡಿಗೆ ಸ್ಥೂಲಕಾಯತೆಗೆ ಸಂಬಂಧಿಸಿದ ಕ್ಯಾನ್ಸರ್​​ಗಳ ಅಪಾಯವನ್ನು ಶೇಕಡಾ 26 ರಷ್ಟು ಕಡಿಮೆ ಹೊಂದಿದ್ದಾರೆ.

ಈ ಅಧ್ಯಯನದ ಫಲಿತಾಂಶಗಳು ನಗರದಲ್ಲಿ ವಿನ್ಯಾಸಗಳು ಆರೋಗ್ಯ ಮತ್ತು ವಯಸ್ಸಾದವರ ಯೋಗಕ್ಷೇಮದ ಮೇಲೆ ಬೀರುತ್ತಿರುವ ಪರಿಣಾಮಕ್ಕೆ ಕೊಡುಗೆಯನ್ನು ನೀಡಿದೆ ಎಂದು ಕೊಲಂಬಿಯಾ ಮೈಲ್ಮ್ಯಾನ್​ ಸ್ಕೂಲ್​​ ಎಪಿಡೆಮಿಒಲಾಜಿ ಪ್ರೋ ಆ್ಯಂಡ್ರ್ಯೂ ರಂಡ್ಲೆ ತಿಳಿಸಿದ್ದಾರೆ.

ದೈಹಿಕ ಚಟುವಟಿಕೆ ಹೆಚ್ಚಳ ಮತ್ತು ಸ್ಥೂಲಕಾಯ ಕಡಿಮೆ ಮಧ್ಯಸ್ಥಿಕೆಯ ಮಟ್ಟ ವೆಚ್ಚದಾಯಕವಾಗಿದ್ದು, ಅವು ಅಲ್ಪ ಕಾಲದ ಪರಿಣಾಮವನ್ನು ಹೊಂದಿರುತ್ತದೆ ಎಂದು ರುಂಡ್ಲೆ ಮತ್ತು ಸಹೋದ್ಯೋಗಿಗಳು ತಿಳಿಸಿದ್ದಾರೆ.

ನಡಿಗೆಗೆ ಪ್ರೋತ್ಸಾಹ: ಆದಾಗ್ಯೂ, ನಗರ ವಿನ್ಯಾಸಗಳು ಹೊಸ ವಿಷಯವನ್ನು ಸೃಷ್ಟಿಸಿ, ನಡಿಗೆಗೆ ಪ್ರೋತ್ಸಾಹಿಸಿದೆ. ಒಟ್ಟಾರೆ ದೈಹಿಕ ಚಟುವಟಿಕೆ ಹೆಚ್ಚಳವೂ ಕಾರಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಅನಾರೋಗ್ಯಕರ ತೂಕವೂ ಸುಧಾರಣೆ ಕಂಡು ಬಂದಿದೆ ಎಂಬುದನ್ನು ರಂಡ್ಲೆ ಗಮನಿಸಿದ್ದಾರೆ.

ಹೆಚ್ಚಿನ ಮಟ್ಟದ ಬಡತನವಿರುವ ನೆರೆಹೊರೆಯಲ್ಲಿ ವಾಸಿಸುವ ಮಹಿಳೆಯರು ಒಟ್ಟಾರೆ ಬೊಜ್ಜು-ಸಂಬಂಧಿತ ಕ್ಯಾನ್ಸರ್​​ ಕಡಿಮೆ ಅಪಾಯದ ನಡುವಿನ ಸಂಬಂಧವು ಬಲವಾಗಿದೆ ಎಂದು ಅಧ್ಯಯನದ ಪ್ರಮುಖ ಲೇಖಕರಾಗಿರುವ ಸಂದ್ರ ಇಂಡಿಯಾ ಅಲ್ಡಾನಾ ತಿಳಿಸಿದ್ದಾರೆ.

ಈ ಅಧ್ಯಯನವೂ ನೆರೆಹೊರೆಯ ಸಾಮಾಜಿಕ ಮತ್ತು ಆರ್ಥಿಕ ಪರಿಸರವೂ ಸ್ಥೂಲಕಾಯ ಸಂಬಂಧಿ ಕ್ಯಾನ್ಸರ್​ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಫಲಿತಾಂಶವು ವಿವರಿಸಿದೆ.

ಅಧ್ಯಯನದಲ್ಲಿ 14,274 ಮಹಿಳೆಯರು ಭಾಗಿಯಾಗಿದ್ದು, ಇವರೆಲ್ಲಾ 34 ರಿಂದ 65 ವರ್ಷ ವಯೋಮಾನದವರಾಗಿದ್ದಾರೆ. ಇವರನ್ನು ಮ್ಯಾಮೊಗ್ರಾಫಿ ಸ್ಕ್ರೀನಿಂಗ್​ ಕೇಂದ್ರದ ಮೂಲಕ 1985-1991ರಲ್ಲಿ ನೇಮಕಾತಿ ನಡೆಸಲಾಗಿದ್ದು, ಮೂರು ದಶಕಗಳ ಕಾಲ ಗಮನಿಸಲಾಗಿದೆ. ನೆರೆಹೊರೆಯ ನಡಿಗೆಯ ಅವಕಾಶ ಹೊಂದಿರುವ ಕಡೆ ವಾಸಿಸುವ ಮಹಿಳೆಯರಲ್ಲಿ ಸ್ಥೂಲಕಾಯ ಸಂಬಂಧಿತ ಕ್ಯಾನ್ಸರ್​​ಗಳ ಅಪಾಯವು ಅವರ ನಡಿಗೆಯೊಂದಿಗೆ ಸಂಬಂಧವನ್ನು ಹೊಂದಿದೆ.

ನಮ್ಮ ಅಧ್ಯಯನವೂ ದೀರ್ಘ ಕಾಲದ ವೈಶಿಷ್ಟ್ಯವನ್ನು ಹೊಂದಿದೆ. ಇದು ನಡಿಕೆ ಜೊತೆಗೆ ಋತುಚಕ್ರದ ಕ್ಯಾನ್ಸರ್​​ ಸಾಮರ್ಥ್ಯವು ಪರಿಣಾಮಕಾರಿಯಾಗಿದೆ ಎಂದು ಸಹ ಲೇಖಕರಾದ ಯು ಚೆನ್​ ತಿಳಿಸಿದ್ದಾರೆ. (ಎಎನ್​ಐ)

ಇದನ್ನೂ ಓದಿ: ಖಿನ್ನತೆ ನಿವಾರಣೆಗೆ ಮಾತ್ರೆಗಿಂತ ರನ್ನಿಂಗ್ ಥೆರಪಿ ಉತ್ತಮ; ಸಂಶೋಧನಾ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.