ETV Bharat / sukhibhava

ಮಕ್ಕಳು-ಹದಿಹರೆಯದವರಲ್ಲಿ ಖಿನ್ನತೆ ಮೂಡಿಸುತ್ತಿದೆ ಸ್ಥೂಲಕಾಯ.. - ಮಕ್ಕಳು ಮತ್ತು ಹದಿ ಹರೆಯದವರಲ್ಲಿ ಖಿನ್ನತೆ

ಮಕ್ಕಳು ಮತ್ತು ಹದಿ ಹರೆಯದವರಲ್ಲಿ ವೇಗವಾಗಿ ಬೆಳೆಯುತ್ತಿರುವ ದೀರ್ಘವಾದ ಆರೋಗ್ಯ ಪರಿಸ್ಥಿತಿಯಲ್ಲಿ ಸ್ಥೂಲಕಾಯವೂ ಒಂದಾಗಿದೆ

Obesity causing depression in children and adolescents

author img

By

Published : May 20, 2023, 12:41 PM IST

ಬೆಂಗಳೂರು: ದೈಹಿಕ, ಮಾನಸಿಕ- ಸಾಮಾಜಿಕ ಆರೋಗ್ಯದ ಮೇಲೆ ಸ್ಥೂಲಕಾಯ ಹೆಚ್ಚಿನ ಪ್ರಭಾವ ಬೀರುತ್ತದೆ. ಇದು ವಿಶೇಷವಾಗಿ ಮಕ್ಕಳು ಮತ್ತು ಹದಿ ಹರೆಯದವರಲ್ಲಿ ಖಿನ್ನತೆಗೆ ಕಾರಣವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಮಕ್ಕಳು ಮತ್ತು ಹದಿ ಹರೆಯದವರಲ್ಲಿ ವೇಗವಾಗಿ ಬೆಳೆಯುತ್ತಿರುವ ದೀರ್ಘವಾದ ಆರೋಗ್ಯ ಪರಿಸ್ಥಿತಿಯಲ್ಲಿ ಸ್ಥೂಲಕಾಯವೂ ಒಂದಾಗಿದೆ.

2023ರ ದಿ ವರ್ಲ್ಡ್​​ ಒಬೆಸಿಟಿ ಫೆಡರೇಷನ್​ ವರದಿ, ಮುಂದಿನ 12 ವರ್ಷದಲ್ಲಿ ಜಾಗತಿಕ ಜನಸಂಖ್ಯೆಯಲ್ಲಿ ಶೇ 51ರಷ್ಟು ಮಂದಿ ಸ್ಥೂಲಕಾಯ ಮತ್ತು ಅಧಿಕ ಸ್ಥೂಲದ ಸಮಸ್ಯೆ ಹೊಂದಿರುತ್ತಾರೆ ಎಂದು ಅಂದಾಜು ಮಾಡಿದೆ.

ಸಾಮಾನ್ಯ ತೂಕದ ಮಕ್ಕಳಿಗೆ ಹೋಲಿಕೆ ಮಾಡಿದಾಗ ಸ್ಥೂಲಕಾಯದ ಮಕ್ಕಳಲ್ಲಿ ಖಿನ್ನತೆ ಅಭಿವೃದ್ಧಿಯು ಶೇ 32ರಷ್ಟು ಹೆಚ್ಚಿರಲಿದೆ. ಈ ಸಂಖ್ಯೆ ಹುಡುಗಿಯರಲ್ಲಿ ಹೆಚ್ಚಿರಲಿದೆ. ತಮ್ಮ ತೂಕದಿಂದ ಶೇ 44ರಷ್ಟು ಹೆಣ್ಣು ಮಕ್ಕಳಲ್ಲಿ ಖಿನ್ನತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮುಂಬೈನ ವೈದ್ಯ ಡಾ ಅಪರ್ಣಾ ಬೊವಿಲ್​ ಭಾಸ್ಕರ್​ ತಿಳಿಸಿದ್ದಾರೆ.

ಜಾಗತಿಕವಾಗಿ ಭಾರತಕ್ಕೆ 2ನೇ ಸ್ಥಾನ: ಭಾರತದಲ್ಲಿ ಬಾಲ್ಯದ ಸ್ಥೂಲಕಾಯತೆ ಎಂಬುದು ಸಾಂಕ್ರಾಮಿಕವಾಗಿದೆ. ರಾಷ್ಟ್ರೀಯ ಅಧ್ಯಯನ ಅನುಸಾರ, ಶೇ 14.4 ಮಿಲಿಯನ್​ ಮಕ್ಕಳು ಭಾರತದಲ್ಲಿ ಸ್ಥೂಲಕಾಯತೆಯಿಂದ ಬಳಲುತ್ತಿದ್ದು, ಜಾಗತಿಕವಾಗಿ ಬಾಲ್ಯ ಸ್ಥೂಲಕಾಯತೆ ಹೊಂದಿರುವ ದೇಶದಲ್ಲಿ ಭಾರತ ಎರಡನೇಯದಾಗಿದೆ. ಇದರ ನಂತರದ ಸ್ಥಾನ ಚೀನಾಕ್ಕೆ ಇದೆ.

ಸ್ಥೂಲಕಾಯ ಮತ್ತು ಖಿನ್ನತೆ ಹತ್ತಿರದ ಸಂಬಂಧ ಹೊಂದಿದ್ದು, ಇದು ಮಕ್ಕಳ ಜೀವನದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಸ್ನೇಹಿತರ ಜೊತೆ ಆಟದ ಸಮಯದ ಕೊರತೆ ಮತ್ತು ಗೆಳೆಯರ ಜೊತೆ ಆಟವಾಡಲು ತೊಡಗಿಸಿಕೊಳ್ಳದೇ ಇರುವುದು ಅವರಲ್ಲಿನ ಖಿನ್ನತೆ ಕಾರಣವಾಗುತ್ತದೆ. ಅನಾರೋಗ್ಯಕರ ತಿನ್ನುವ ಅಭ್ಯಾಸಸಗಳು ಮತ್ತಷ್ಟು ತೊಡಕುಗಳಿಗೆ ಕಾರಣವಾಗುತ್ತದೆ ಎಂದು ವೈದ್ಯ ಡಾ ಭಾರದ್ವಾಜ್​ ತಿಳಿಸಿದ್ದಾರೆ.

ಹಲವು ಆರೋಗ್ಯ ಸಮಸ್ಯೆಗೆ ಕಾರಣ: ಜೊತೆಗೆ ಸ್ಥೂಲಕಾಯ ಹೊಂದಿರುವ ಮಕ್ಕಳಲ್ಲಿ ಸ್ವಾಭಿಮಾನದ ಕೊರತೆ ಹೊಂದಿದ್ದು, ಅವರು ಶಾಲೆ ಮತ್ತು ಕುಟುಂಬದಲ್ಲಿ ತಾರತಮ್ಯಕ್ಕೆ ಒಳಗಾಗುತ್ತಿದ್ದಾರೆ. ಸ್ಥೂಲಕಾಯತೆ ಮಕ್ಕಳ ಪೋಷಕರಿಗೆ ಇರುವ ಅರಿವಿನ ಮತ್ತು ಜ್ಞಾನದ ಕೊರತೆಯಿಂದ ಅವರ ಮಕ್ಕಳಿಗೆ ಮಾರ್ಗದರ್ಶನ ಮಾಡಲು ಸಾಧ್ಯವಾಗದೇ, ಇಬ್ಬರಲ್ಲೂ ಇದು ಮಾನಸಿಕ ಆತಂಕ ಹೆಚ್ಚಿಸುತ್ತಿದೆ. ಸ್ಥೂಲಕಾಯದ ಮಕ್ಕಳು ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದು, ಅವರನ್ನು ಅಲಕ್ಷ್ಯ ಮಾಡಲಾಗುತ್ತಿದೆ. ಇದು ಮಕ್ಕಳಲ್ಲಿ ಒತ್ತಡ ಹೆಚ್ಚಿಸುವ ಜೊತೆಗೆ ಭಾವನಾತ್ಮಕ, ತಿನ್ನುವ ನಡವಳಿಕೆ, ಕಳಪೆ ನಿದ್ರೆ ಮತ್ತು ಆಯಾಸವನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. ಇದು ಇನ್ನಷ್ಟು ತೂಕವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

ಬಾಲ್ಯ ಸ್ಥೂಲಕಾಯವೂ ಮತ್ತಿತ್ತರ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಇದು ಅವರಲ್ಲಿ ಅಧಿಕ ರಕ್ತದೊತ್ತಡ, ಅರ್ಥರಿಟಿಸ್​, ಅಧಿಕ ಕೊಬ್ಬು ಮತ್ತು ಟೈಪ್​ 2 ಮಧುಮೇಹ, ಹೃದಯ ಸಮಸ್ಯೆ, ಸ್ಟ್ರೋಕ್​, ಉಸಿರಾಟ ಸಮಸ್ಯೆ, ಭಾವನಾತ್ಮಕ ಅಡಚಣೆಯಂತಹ ತೊಂದರೆಗಳಿಗೆ ಕಾರಣವಾಗುತ್ತದೆ.

ಬಾಲಕಿಯರಲ್ಲಿ ಬಾಲ್ಯ ಸ್ಥೂಲಕಾಯವೂ ಅನಿಯಮಿತ ಋತುಸ್ರಾವ, ಡೆಓಮೆಟ್ರಿಯಲ್​ ಪಾಲಿಪ್ಸ್​, ಪಿಸಿಒಎಸ್​​ ನಂತಹ ಸಮಸ್ಯೆಗೆ ಕಾರಣವಾಗುತ್ತದೆ. ತೂಕ ಹೆಚ್ಚಳವೂ ಮುಜುಗರಕ್ಕೆ ಒಳಗಾಗುವಂತೆ ಮಾಡುವ ಜೊತೆಗೆ ಒಂಟಿತನಕ್ಕೂ ಕಾರಣವಾಗುತ್ತದೆ.

ಸ್ಥೂಲಕಾಯತೆ ಹೊಂದಿರುವ ಮಕ್ಕಳು ಮತ್ತು ಹದಿಹರೆಯದವರನ್ನು ಬೆಂಬಲಿಸಲು ಪೋಷಕರು ಮತ್ತು ಶಿಕ್ಷಕರು ಇಬ್ಬರೂ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಪೋಷಕರು ಉತ್ತಮ ಆಹಾರ ಪದ್ದತಿಯನ್ನು ಮಕ್ಕಳಲ್ಲಿ ರೂಢಿಸುವ ಬಗ್ಗೆ ಜಾಗೃತಿ ಹೊಂದಿರಬೇಕು. ಜಂಗ್​ಫುಡ್​ ಮತ್ತು ಸಕ್ಕರೆ ಪಾನೀಯ ಬದಲಾಗಿ ಅವರಿಗೆ ತಾಜಾ ಹಣ್ಣು ಮತ್ತು ತರಕಾರಿ ಸೇವನೆಗೆ ಉತ್ತೇಜಿಸಬೇಕು. ಮಕ್ಕಳು ಮೊಬೈಲ್​ ನೋಡುವ ಸಮಸ್ಯೆ ಕಡಿತಗೊಳಿಸಬೇಕು. ಜೊತೆಗೆ ಹೊರಗೆ ಆಟವಾಡಲು ಅವರನ್ನು ಉತ್ತೇಜಿಸಬೇಕು. ಶಾಲೆಗಳಲ್ಲಿ ಕೂಡ ಜಂಗ್​ಫುಡ್​ ಮತ್ತು ಸಕ್ಕರೆ ಪಾನೀಯಗಳನ್ನು ಕ್ಯಾಂಟೀನ್​​ನಲ್ಲಿ ಇಡದಂತೆ ಕ್ರಮವಹಿಸುವ ಅವಶ್ಯಕತೆ ಇದೆ ಎಂದಿದ್ದಾರೆ.

ಇದನ್ನೂ ಓದಿ: ಪರಿಸರ ಕಾಳಜಿಗೆ ಶ್ರಮಿಸುತ್ತಿರುವ 7ರ ಪೋರ: ಮೂರ್ತಿ ಚಿಕ್ಕದಾದ್ರೂ ಈತನ ಸಾಧನೆ ದೊಡ್ಡದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.