ನವದೆಹಲಿ: ಈಗಾಗಲೇ ಕೋವಿಡ್ 19ನಂತಹ ಮಾರಣಾಂತಿಕ ಸಾಂಕ್ರಾಮಿಕ ಕಂಡ ಜಗತ್ತು ಭವಿಷ್ಯದಲ್ಲಿ ಅದಕ್ಕಿಂತಲೂ ಹೆಚ್ಚಿನ ಗೊತ್ತಿಲ್ಲದೇ ಇರುವ ವೈರಸ್‌ಗಳ ಅಪಾಯ ಎದುರಿಸಲಿದೆ. ಇವು ಸ್ಪಾನಿಷ್ ಜ್ವರದಂತೆ 50 ಮಿಲಿಯನ್ ಜನರನ್ನು ಕೊಲ್ಲಲಿದೆ ಎಂದು ಯುಕೆ ವಾಕ್ಸಿನ್ ಟಾಸ್ಕ್ಫೋರ್ಸ್ನ ಮಾಜಿ ಅಧ್ಯಕ್ಷ ಕೇಟ್ ಬಿಂಗ್ ಹ್ಯಾಮ್ ತಮ್ಮ ಹೊಸ ಪುಸ್ತಕದಲ್ಲಿ ತಿಳಿಸಿದ್ದಾರೆ.
ಈ ಪುಸ್ತಕದ ಸಹಲೇಖಕರು ಮತ್ತೊಬ್ಬ ಲಸಿಕೆ ತಜ್ಞ ಟಿಮ್ ಹ್ಯಾಮೆಸ್. ಇದರಲ್ಲಿನ ಪ್ರಮುಖ ಅಂಶಗಳನ್ನು ಡೈಲಿ ಮೇಲ್ನಲ್ಲಿ ಪ್ರಕಟಿಸಲಾಗಿದ್ದು, ಭವಿಷ್ಯದ ಸಾಂಕ್ರಾಮಿಕತೆಗೆ ಸಿದ್ದತೆ ನಡೆಸುವಂತೆ ಕರೆ ನೀಡಲಾಗಿದೆ.
1918-19 ರಲ್ಲಿ ಕಂಡುಬಂದ ಜ್ವರದ ಸಾಂಕ್ರಾಮಿಕತೆಯಿಂದ ಪ್ರಪಂಚದಾದ್ಯಂತ 50 ಮಿಲಿಯನ್ ಜನರು ಸಾವನ್ನಪ್ಪಿದ್ದರು. ಇದರ ಸಾವಿನ ಪ್ರಮಾಣ ಮೊದಲ ವಿಶ್ವ ಯುದ್ಧಕ್ಕಿಂತ ಎರಡು ಪಟ್ಟು ಹೆಚ್ಚಿದೆ ಎಂದರು.
ಇಂದೂ ಕೂಡ ಪ್ರಸ್ತುತ ಅಸ್ತಿತ್ವದಲ್ಲಿರುವ ಅನೇಕ ವೈರಸ್ಗಳಿಂದ ಇದೇ ರೀತಿಯ ಸಾವಿನ ಪ್ರಮಾಣವನ್ನು ಕಾಣಬಹುದು. ಪ್ರಸ್ತುತ ಅಸ್ತಿತ್ವದಲ್ಲಿರುವ ಈ ವೈರಸ್ಗಳು ಸಾಕಷ್ಟು ಪುನರಾವರ್ತಿತವಾಗುತ್ತಿದ್ದು, ಹೆಚ್ಚು ರೂಪಾಂತರಗೊಳ್ಳುತ್ತಿವೆ. ಇವೆಲ್ಲವೂ ಮನುಷ್ಯರಿಗೆ ಅಪಾಯವನ್ನುಡು ಮಾಡುವುದಿಲ್ಲ. ಆದರೆ, ಕೆಲವು ಇದಕ್ಕೆ ಹೊರತಾಗಿಲ್ಲ.
ತಜ್ಞರು ಹೇಳುವಂತೆ, ಸಾಂಕ್ರಾಮಿಕತೆ ಹುಟ್ಟು ಹಾಕಲು ಅನೇಕ ವಿಭಿನ್ನ ವೈರಸ್ಗಳು ಹುಟ್ಟಿಕೊಳ್ಳಬಹುದು. ಈ ವೈರಸ್ಗಳು ಒಂದರಿಂದ ಒಂದಕ್ಕೆ ಹರಡುವ ಹೆಚ್ಚು ರೂಪಾಂತರಗೊಳ್ಳುವ ಅಪಾಯವೂ ಇದೆ. ಇಲ್ಲಿಯವರೆಗೆ ವಿಜ್ಞಾನಿಗಳು 25 ವೈರಸ್ ಕುಟುಂಬಗಳ ಬಗ್ಗೆ ಅರಿವು ಹೊಂದಿದ್ದಾರೆ. ಅಲ್ಲದೇ ಮುಂದಿನ ಸಾಂಕ್ರಾಮಿಕತೆಯ ಬೆದರಿಕೆಯನ್ನು ಹೊಂದಿದೆ ಎಂದು ಎಚ್ಚರಿಸಿದ್ದಾರೆ. ಸದ್ಯ ಜಾಗತಿಕವಾಗಿ ಎಕ್ಸ್ ರೋಗವೂ ಹೆಚ್ಚು ಕಾಳಜಿ ಹೊಂದಿದೆ.
2018ರಲ್ಲಿ ಮೊದಲ ಬಾರಿಗೆ ಎಕ್ಸ್ ರೋಗವನ್ನು ವಿಶ್ವ ಆರೋಗ್ಯ ಸಂಸ್ಥೆ ಪತ್ತೆ ಮಾಡಿತು. ಕೋವಿಡ್ 19 ಸಾಂಕ್ರಾಮಿಕತೆ ಉಲ್ಬಣಕ್ಕೆ ವರ್ಷಕ್ಕೆ ಮುನ್ನ ಇದು ಪತ್ತೆಯಾಯಿತು. ಇದು ವಿಶ್ವ ಆರೋಗ್ಯ ಸಂಸ್ಥೆಯ ಬ್ಲೂ ಪ್ರಿಂಟ್ ಪ್ರಾಮುಖ್ಯತೆ ರೋಗದಲ್ಲಿ ಸ್ಥಾನ ಪಡೆದಿದ್ದು, ಇದು ಎಬೋಲಾ, ಸಾರ್ಸ್ ಮತ್ತು ಝಿಕಾದಷ್ಟೇ ಮುಂದಿನ ಮಾರಾಣಾಂತಿಕ ರೋಗ.
ಎಕ್ಸ್ ರೋಗ ಪ್ರಸ್ತುತ ಮಾನವನ ಕಾಯಿಲೆಗೆ ಕಾರಣವಾಗಲು ತಿಳಿದಿಲ್ಲದ ರೋಗಕಾರಕದಿಂದ ಗಂಭೀರವಾದ ಅಂತರರಾಷ್ಟ್ರೀಯ ಸಾಂಕ್ರಾಮಿಕ ಉಂಟಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಬ್ಲೂಪ್ರಿಂಟ್ ಪಟ್ಟಿಯು ಈ ಸಾಂಕ್ರಾಮಿಕ ರೋಗಗಳನ್ನು ಎತ್ತಿ ತೋರಿಸುತ್ತದೆ,
ಕೆಲವು ಸಾರ್ವಜನಿಕ ಆರೋಗ್ಯ ತಜ್ಞರು ನಂಬುವಂತೆ ಮುಂದಿನ ರೋಗವಾದ ಎಕ್ಸ್ ಝೋನಾಟಿಕ್ ಆಗಿದೆ. ಅಂದರೆ ವನ್ಯ ಅಥವಾ ದೇಶಿಯ ಪ್ರಾಣಿಗಳಿಂದ ಉಗಮವಾಗುವ ವೈರಸ್ ಆಗಿದ್ದು, ಇದು ಮಾನವರಲ್ಲಿ ಎಚ್ಐವಿ, ಎಬೋಲ ಮತ್ತು ಕೋವಿಡ್ನಂತಹ ಹಾನಿಗೆ ಕಾರಣವಾಗುತ್ತದೆ.
ಕೋವಿಡ್ 19ನಿಂದಾಗಿ ಜಾಗತಿಕವಾಗಿ 20 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ. ಈ ಸೋಂಕಿಗೆ ಒಳಗಾದ ಬಹುತೇಕ ಜನರು ಚೇತರಿಕೆ ಕಂಡರು. ಈ ಮಟ್ಟಿಗೆ ನಾವು ಅದೃಷ್ಟವಂತರು ಎಂದು ತಜ್ಞರು ತಿಳಿಸಿದ್ದಾರೆ.
ಮತ್ತೊಂದೆಡೆ, ಎಬೋಲಾ ಸಾವಿನ ದರ ಶೇ 67ರಷ್ಟಿದೆ. ಹಕ್ಕಿ ಜ್ವರ ಶೇ 60ರಷ್ಟ ಸಾವಿನ ದರ ಹೊಂದಿದ್ದರೆ, ಎಂಇಆರ್ಎಸ್ 34 ಮಂದಿಗೆ ತುತ್ತಾಗಿದ್ದಾರೆ. ಭವಿಷ್ಯದ ಸಾಂಕ್ರಾಂಮಿಕ ರೋಗದ ಬಗ್ಗೆ ಊಹೆ ಮಾಡಲು ಖಂಡಿತ ಸಾಧ್ಯವಿಲ್ಲ ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಕಾಂಬೋಡಿಯಾದಲ್ಲಿ 7 ವರ್ಷಗಳ ಬಳಿಕ ಝಿಕಾ ವೈರಸ್ ಪತ್ತೆ: ಲಕ್ಷಣ, ಮುನ್ನೆಚ್ಚರಿಕೆ ವಿಧಾನಗಳು ಹೀಗಿವೆ..