ಭಾರತ ಮಾತ್ರವಲ್ಲದೆ, ದೇಶದೆಲ್ಲೆಡೆ ಉದ್ಯೋಗ ಸ್ಥಳದಲ್ಲಿ ಲಿಂಗಾಧಾರಿತ ವೇತನ ತಾರತಮ್ಯವನ್ನು ಮಹಿಳೆಯರು ಎದುರಿಸುತ್ತಿದ್ದಾರೆ. ಕೂಲಿ ಕಾರ್ಮಿಕರಿಂದ ಉನ್ನತ ಹುದ್ದೆಗಳವರೆಗೆ ಮಹಿಳೆಗೆ ಈ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ. ಇದನ್ನು ಮನಗಂಡ ನ್ಯೂಜಿಲೆಂಡ್ ಸರ್ಕಾರ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ. ನೌಕರಿಯ ಸ್ಥಳಗಳಲ್ಲಿ ಲಿಂಗಾಧಾರಿತ ಅಂತರ ಹೋಗಲಾಡಿಸಿ ವೇತನ ಸಮಾನತೆ ಹೆಚ್ಚಿಸಿ ಪಾರದರ್ಶಕತೆ ಕಾಯ್ದುಕೊಳ್ಳುವ ಉದ್ದೇಶದಿಂದ ಎಲ್ಲ ದೊಡ್ಡ ಮಟ್ಟದ ಖಾಸಗಿ ಉದ್ಯಮಗಳಿಗೆ ವೇತನದ ವರದಿ ಕೇಳಿದೆ.
ದೇಶದಲ್ಲಿ 250ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಸುಮಾರು 900 ಉದ್ಯಮಗಳ ಲಿಂಗಾಧಾರಿತ ವೇತನ ಅಂತರವನ್ನು ಸಾರ್ವಜನಿಕವಾಗಿ ವರದಿ ಮಾಡಬೇಕು ಎಂದು ಮಹಿಳಾ ಸಚಿವೆ ಜಾನ್ ಟಿನೆಟ್ಟಿ ಘೋಷಿಸಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಆಡಳಿತ ಪಕ್ಷ ಲೇಬರ್ ಪಾರ್ಟಿ ಕ್ರಮ ಕೈಗೊಂಡಿದೆ.
ಕೆಲಸದ ಸ್ಥಳದಲ್ಲಿ ಮಹಿಳೆಯರು ಪುರುಷರಿಗಿಂತ ವಿಭಿನ್ನ ಅನುಭವ ಹೊಂದಿದ್ದು, ಬದಲಾವಣೆ ಅಗತ್ಯ. ಪ್ರಮುಖ ಕಂಪನಿಗಳು ತಮ್ಮ ಲಿಂಗಾಧಾರಿತ ವೇತನದ ಅಂತರವನ್ನು ಪ್ರಕಟಿಸಿ, ಕೆಲಸದ ಸ್ಥಳದಲ್ಲಿ ಪಾರದರ್ಶಕತೆ ಹೆಚ್ಚಿಸುವ ಮೂಲಕ ಅಂತರ ನಿವಾರಣೆಗೆ ಮುಂದಾಗಬೇಕಿದೆ ಎಂದು ಅವರು ತಿಳಿಸಿದರು.
ಮಹಿಳೆ ಪುರುಷರಿಗೆ ಸಮನಾದ ಅಥವಾ ಅವರಿಗಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದಾಳೆ. ಆದರೂ ಕೂಡ ಆಕೆ ಪೂರ್ಣ ಪ್ರಮಾಣದ ಕೆಲಸದಲ್ಲೂ ಶೇ 12ರಷ್ಟು ಅಸಮಾನತೆ ಅನುಭವಿಸುತ್ತಿದ್ದು, ಕಡಿಮೆ ವೇತನವನ್ನು ಪಡೆಯುತ್ತಿದ್ದಾಳೆ. ಸಾರ್ವಜನಿಕ ವಲಯದಲ್ಲಿ ನ್ಯೂಜಿಲೆಂಡ್ ಪ್ರಗತಿ ಹೊಂದಿದೆ. ಇದರಲ್ಲಿ ಮಹಿಳೆ ಕೂಡ ಸೀನಿಯರ್ ಮ್ಯಾನೇಜ್ಮೆಂಟ್ ಪಾತ್ರ ಸೇರಿದಂತೆ ಪ್ರಮುಖ ಪಾತ್ರ ಹೊಂದಿದ್ದಾಳೆ. ಈ ಲಿಂಗಾಧಾರಿತ ವೇತನ ಅಂತರ ಶೇ 7.7ರಷ್ಟು ಕಡಿಮೆಯಾಗಿದೆ.
ಖಾಸಗಿ ವಲಯದಲ್ಲಿ ಏರ್ ನ್ಯೂಜಿಲೆಂಡ್ ಮತ್ತು ಸ್ಪಾರ್ಕ್ ವಾಲೆಂಟರಿ ಸೇರಿದಂತೆ 200 ಕಂಪನಿಗಳು ಲಿಂಗಾಧಾರಿತ ವೇತನ ಅಂತರ ಕುರಿತು ವರದಿ ಮಾಡಲು ಸಜ್ಜಾಗಿದೆ. ಆದಾಗ್ಯೂ, ಇಡೀ ಆರ್ಥಿಕತೆ ಒಂದೆಡೆ ನಿಂತಿದ್ದು, 2022ರಿಂದ 9.2ರಷ್ಟಕ್ಕೆ ನಿಂತಿದೆ ಎಂದು ಒಇಸಿಡಿ ವರದಿ ಮಾಡಿದೆ.
ಆಸ್ಟ್ರೇಲಿಯಾ, ಕೆನಡಾ, ಬ್ರಿಟನ್ ಸೇರಿದಂತೆ ಹಲವು ಇತರೆ ದೇಶಗಳು ಉದ್ಯೋಗ ಸ್ಥಳದಲ್ಲಿನ ಲಿಂಗಾಧಾರಿತ ವೇತನ ಅಂತರದ ಬಗ್ಗೆ ಈಗಾಗಲೇ ವರದಿ ಮಾಡಿದೆ. ನ್ಯೂಜಿಲೆಂಡ್ ಅಂತಾರಾಷ್ಟ್ರೀಯ ಗುಣಮಟ್ಟದೊಂದಿಗೆ ಇದೀಗ ಈ ಸಾಲಿನಲ್ಲಿ ನಿಲ್ಲಬೇಕಿದೆ. ಈ ಮೂಲಕ ಹೆಚ್ಚಿನ ಕೌಶಲ್ಯ ಹೊಂದಿರುವ ಮಹಿಳೆಯರನ್ನು ಉದ್ಯೋಗಸ್ಥಳದಲ್ಲಿ ಸೆಳೆಯಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.
ನ್ಯೂಜಿಲೆಂಡ್ನಲ್ಲಿ ವ್ಯಕ್ತಿಯೊಬ್ಬ ಒಂದು ಡಾಲರ್ ಸಂಪಾದಿಸಿದರೆ, ಮಹಿಳೆಯು 89 ಸೆಂಟ್ ಸಂಪಾದಿಸುತ್ತಾಳೆ (1 ಡಾಲರ್ 100 ಸೆಂಟ್ಸ್ಗೆ ಸಮ) ಎಂದು ಸರ್ಕಾರ 2021ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಯಲಾಗಿದೆ. ಈ ಅಸಮಾನತೆ ವಿವಿಧ ಜನಾಂಗೀಯತೆಯಲ್ಲಿ ವಿಭಿನ್ನವಾಗಿದೆ. ಮಾವೊರಿಯಲ್ಲಿ ಮಹಿಳೆ 81 ಸೆಂಟ್ ಗಳಿಸಿದರೆ, ಪಸಿಫಿಕಾ ಮಹಿಳೆ ಕೇವಲ 75 ಸೆಂಟ್ ಗಳಿಸುತ್ತಾರೆ.
ಇದನ್ನೂ ಓದಿ: ಜಗತ್ತಿನ ಯಾವುದೇ ದೇಶವೂ ಸಂಪೂರ್ಣ ಲಿಂಗ ಸಮಾನತೆ ಸಾಧಿಸಿಲ್ಲ: ವಿಶ್ವಸಂಸ್ಥೆ