ETV Bharat / sukhibhava

ಪೋಷಕತ್ವ ನಿಭಾಯಿಸಲು ಸಾಮಾಜಿಕ ಮಾಧ್ಯಮದ ಸಲಹೆ ಪಡೆಯುತ್ತಾರಂತೆ ಹೊಸ ಅಪ್ಪ-ಅಮ್ಮಂದಿರು!

ಪ್ರತಿ ಕುಟುಂಬದ ಅನುಭವ ವಿಭಿನ್ನವಾಗಿರುತ್ತದೆ. ಆನ್​ಲೈನ್​​ ಮೂಲಕ ಕೇಳಲಾದ ಎಲ್ಲವೂ ನಿಖರವಾಗಿರುವುದಿಲ್ಲ. ಅಥವಾ ಮಕ್ಕಳಿಗೆ ಎಲ್ಲವೂ ಸರಿಯಾಗುವುದು ಇಲ್ಲ ಎಂಬ ಸಲಹೆ ಕೂಡ ಕೇಳಿ ಬಂದಿದೆ.

New moms and dads turning to social media for help  for parenting tips

author img

By ETV Bharat Karnataka Team

Published : Nov 20, 2023, 3:34 PM IST

ನ್ಯೂಯಾರ್ಕ್​: ಹೊಸದಾಗಿ ತಂದೆ-ತಾಯಿಯ ಜವಾಬ್ದಾರಿಯನ್ನು ಹೊರುವ ಅನೇಕ ಪೋಷಕರಿಗೆ ತಮ್ಮ ನವಜಾತ ಶಿಶುಗಳ ಆರೈಕೆ ಅಥವಾ ಮಗುವಿನ ನಿದ್ರೆ, ಆಹಾರ ತಿನ್ನಿಸುವಿಕೆ, ಶೌಚ ಅಭ್ಯಾಸಗಳನ್ನು ರೂಢಿಸಲು ಅವರು ಹೆಚ್ಚಾಗಿ ಸಾಮಾಜಿಕ ಜಾಲತಾಣದ ಮೊರೆ ಹೋಗುತ್ತಾರೆ ಎಂಬುದು ಹೊಸ ಅಧ್ಯಯನದಲ್ಲಿ ಬಯಲಾಗಿದೆ.

ಯುಎಸ್​ ರಾಷ್ಟ್ರೀಯ ಮತಚಲಾವಣೆಯಲ್ಲಿ 0-4 ವರ್ಷದ ಮಕ್ಕಳನ್ನು ಹೊಂದಿರುವ 614 ಮಂದಿ ಭಾಗಿದಾರರ ಸಮೀಕ್ಷೆ ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. ಈ ವೇಳೆ ಐದರಲ್ಲಿ ನಾಲ್ವರು ಪೋಷಕರು ಪೋಷಕತ್ವ ವಿಚಾರ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.

ಅರ್ಧದಷ್ಟು ಪೋಷಕರು ಸಾಮಾಜಿಕ ಮಾಧ್ಯಮಗಳ ಬಳಕೆ ಹೊಸ ಆಲೋಚನೆಗಳನ್ನು ಪ್ರಯತ್ನಿಸಲು ಪ್ರಯೋಜಕಾರಿಯಾಗಿದೆ ಎಂದಿದ್ದಾರೆ. ಅನೇಕ ಪೋಷಕರು ಆರೋಗ್ಯ ವೃತ್ತಿಪರರರನ್ನು ಕೇಳುವುದಕ್ಕಿಂತ ಸುಲಭವಾಗಿ ಬೇಗ ಆನ್​ಲೈನ್​ ಸಂವಹನ ಮೂಲಕ ಪೋಷಕತ್ವದ ಸವಾಲುಗಳ ಕುರಿತಾದ ಸಲಹೆ ಅಥವಾ ಚರ್ಚೆಗಳನ್ನು ನಡೆಸಬಹುದು ಎಂದಿದ್ದಾರೆ ಎಂದು ಮೋಟ್​ ಫೋನ್​ ಸಹ ನಿರ್ದೇಶಕ ಸರಹ್​ ಕ್ಲಾರ್ಕ್​ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳು ಪೋಷಕತ್ವಕ್ಕೆ ಪ್ರಯೋಜನ ನೀಡಬಹುದು. ಆದರೆ ಪ್ರತಿ ಕುಟುಂಬದ ಅನುಭವ ವಿಭಿನ್ನವಾಗಿರುತ್ತದೆ. ಆನ್​ಲೈನ್​​ ಮೂಲಕ ಕೇಳಲಾದ ಎಲ್ಲವೂ ನಿಖರವಾಗಿರುವುದಿಲ್ಲ. ಅಥವಾ ಮಕ್ಕಳಿಗೆ ಎಲ್ಲವೂ ಸರಿಯಾಗುವುದು ಇಲ್ಲ ಎಂದಿದ್ದಾರೆ.

ಬಹುತೇಕ ತಾಯಂದಿರು ಮತ್ತು ಮೂರನೇ ಎರಡರಷ್ಟು ತಂದೆಯಂದಿರುವ ಪೋಷಕತ್ವದ ಸಲಹೆ ಅಥವಾ ಅನುಭವ ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮವನ್ನು ನೋಡುತ್ತಾರೆ.

ಈ ವಿಷಯ ಹೆಚ್ಚು ಚರ್ಚಿತ: ಇನ್ನು, ಸಾಮಾಜಿಕ ಜಾಲತಾಣದಲ್ಲಿ ಬಹುತೇಕ ಚರ್ಚೆಯಾಗುವ ವಿಚಾರಗಳು ಎಂದರೆ ಶೌಚದ ತರಬೇತಿ (ಶೇ 44ರಷ್ಟು), ಮಲಗಿಸುವಿಕೆ (42ರಷ್ಟು) ಪೋಷಕಾಂಶ/ ಎದೆಹಾಲುಣಿಸುವಿಕೆ (37ರಷ್ಟು), ಶಿಸ್ತು (37ರಷ್ಟು), ನಡವಳಿಕೆ ಸಮಸ್ಯೆ (33ರಷ್ಟು), ಲಸಿಕೆ (26ರಷ್ಟು), ಡೇಕೇರ್​ / ಪ್ರಿಸ್ಕೂಲ್​ (24ರಷ್ಟು).

ಐದರಲ್ಲಿ ಮೂರು ಪೋಷಕರು ತಮ್ಮ ವಿಚಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ಮಾಡುವ ಪ್ರಮುಖ ಕಾರಣ ಎಂದರೆ ಅವರು ಈ ಕುರಿತು ವಿಭಿನ್ನ ಐಡಿಯಾವನ್ನು ಕೇಳಲು ಇಚ್ಛಿಸುತ್ತಾರೆ. ಈ ನಡುವೆ ನಾಲ್ಕರಲ್ಲಿ ಒಂದು ಮಗುವಿಗೆ ಇದು ಆರಾಮದಾಯಕವಾಗಿದೆ.

ತಮ್ಮ ಪೋಷಕರು ಅಥವಾ ಸ್ನೇಹಿತರು ಸಮೀಪದಲ್ಲಿ ಇಲ್ಲದ ಕಾರಣ ಅವರು ಸಾಮಾಜಿಕ ಜಾಲತಾಣದ ಮೂಲಕ ಸಲಹೆ ಕೇಳುವುದಾಗಿ ತಿಳಿಸಿದ್ದಾರೆ. ಮೂವರಲ್ಲಿ ಒಬ್ಬ ಪೋಷಕರ ಸಾಮಾಜಿಕ ಜಾಲತಾಣ ಬಳಕೆಯು ತಮ್ಮನ್ನು ಒಂಟಿ ಎನ್ನಿಸುವಂತೆ ಮಾಡುವುದಿಲ್ಲ. ಅವರು ಏನು ಮಾಡಬಾರದು ಎಂದು ಕಲಿಯಲು ಇದು ಪ್ರಯೋಜನಕಾರಿಯಾಗಿದೆ. ಜೊತೆಗೆ ಕೆಲವು ನಿರ್ದಿಷ್ಟ ಉತ್ಪನ್ನಗಳನ್ನು ಕೊಳ್ಳುವುದನ್ನು ನಿರ್ಧರಿಸಲು ಈ ಸಲಹೆ ಚರ್ಚೆಗಳು ಸಹಾಯಕಾರಿಯಾಗಿವೆ ಎಂದಿದ್ದಾರೆ.

10ರಲ್ಲಿ ಒಬ್ಬರು ಸಣ್ಣ ಮಗುವಿನ ಪೋಷಕರು ತಮ್ಮ ಮಗುವನ್ನು ಯಾವಾಗ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಉತ್ತಮ ಎಂಬುದನ್ನು ತಿಳಿಯಲು ಸಾಮಾಜಿಕ ಮಾಧ್ಯಮಗಳು ಸಹಕಾರಿಯಾಗಿವೆ ಎಂದಿದ್ದಾರೆ.

ಬಹುತೇಕ ಪೋಷಕರು ಕನಿಷ್ಠ ಒಬ್ಬರಾದರೂ ಸಾಮಾಜಿಕ ಮಾಧ್ಯಮದಲ್ಲಿ ಬೇರೆ ಪೋಷಕರು ಅನಾರೋಗ್ಯಕರ ಅಥವಾ ಅಪಾಯಕಾರಿ ಅಭ್ಯಾಸವನ್ನು ಅನುಸರಿಸುವುದನ್ನು ಗುರುತಿಸಿದ್ದಾರೆ. ಮಗುವಿನ ಅನುಮತಿ ಇಲ್ಲದೇ ಫೋಟೋ ಹಂಚಿಕೊಳ್ಳುವುದು ಅಥವಾ ಕುಟುಂಬದ ಖಾಸಗಿ ಮಾಹಿತಿ ಹಂಚಿಕೊಳ್ಳುತ್ತಾರೆ ಎಂದಿದ್ದಾರೆ.

ಶೇ 80ರಷ್ಟು ಪೋಷಕರು ಸಾಮಾಜಿಕ ಮಾಧ್ಯಮದಲ್ಲಿ ಮಗುವಿನ ಕುರಿತಾದ ಅಥವಾ ಇತರೆ ಅಂಶಗಳ ಕುರಿತು ಹೆಚ್ಚೆನ್ನಿಸುವ ಮಾಹಿತಿ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಕೃತಕ ಬೆಳಕಿಗೆ ಹೆಚ್ಚು ಒಗ್ಗಿಕೊಳ್ಳಬೇಡಿ... ಖಿನ್ನತೆಗೆ ಇದೇ ಪ್ರಮುಖ ಕಾರಣವಂತೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.