ನ್ಯೂಯಾರ್ಕ್: ಕಳೆದ ನಾಲ್ಕು ವರ್ಷಗಳ ಹಿಂದೆ ಕಂಡು ಬಂದ ಕೋವಿಡ್ 19 ಸೋಂಕಿನ ಹೊಸ ರೂಪಾಂತರ ಅಲೆಗಳು ಇಂದಿಗೂ ಜಗತ್ತನ್ನು ಬಾದಿಸುತ್ತಿದೆ. ಕೋವಿಡ್ 19ನ ಸಾರ್ಸ್ ಕೋವ್-2 ತಳಿಯು ಈ ಹೊಸ ರೂಪಾಂತರ ಅಲೆಗಳಗೆ ಕಾರಣವಾಗಿದೆ. ಈ ಹೊಸ ಅಲೆಗಳನ್ನು ಅವಧಿಗೆ ಮುನ್ನವೇ ಅರಿಯುವ ಮೂಲಕ ಅದರ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಈ ನಿಟ್ಟಿನಲ್ಲಿ ಅಮೆರಿಕದ ಮೆಸಾಚ್ಯೂಸೆಟ್ನ ತಾಂತ್ರಿಕ ಸಂಸ್ಥೆ (ಎಂಐಟಿ) ವಿಜ್ಞಾನಿಗಳು ಹೊಸ ಐಎ ಮಾದರಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದು ಸಾರ್ಸ್ ಕೋವ್ನ ಹೊಸ ಅಲೆಯನ್ನು ಬೇಗವೇ ಊಹೆ ಮಾಡಲಿದೆ ಎಂದಿದ್ದಾರೆ.
ಪ್ರಸ್ತುತ ಬಳಕೆ ಮಾಡುತ್ತಿರುವ ಸೋಂಕಿನ ರೂಪಾಂತರವನ್ನು ಅಂದಾಜಿಸುವ ಮಾದರಿಯು ತಳಿಯ ನಿರ್ದಿಷ್ಟ ಹರಡುವಿಕೆಯನ್ನು ಪತ್ತೆ ಮಾಡುತ್ತಿಲ್ಲ.
ಎಂಐಟಿಯ ಸ್ಲೊಅನ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನ ರೆಟ್ಸೆಫ್ ಲೆವಿ ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದೆ. ಗ್ಲೋಬಲ್ ಇನ್ಸಿಯೆಟಿವ್ ಆನ್ ಶೇರಿಂಗ್ ಏವಿಯನ್ ಇನ್ಫುಯೆಂಜಾ ಡಾಟಾದಿಂದ 30 ದೇಶಗಳ ಸಾರ್ಸ್-ಕೋವ್-2ನ 9 ಮಿಲಿಯನ್ ಅನುವಂಶಿಕ ಅನುಕ್ರಮವನ್ನು ಸಂಗ್ರಹಿಸಿ ಇದರ ವಿಶ್ಲೇಷಣೆ ಮೇಲೆ ಸೋಂಕಿನ ಹರಡುವಿಕೆ ಅಂಶವನ್ನು ಪಡೆಯಲಾಗಿದೆ. ಇದರ ಜೊತೆಗೆ ಲಸಿಕೆಯ ದರ, ಸೋಂಕಿನ ದರ ಮತ್ತು ಇತರೆ ಅಂಶಗಳ ಮಾಹಿತಿಯನ್ನು ಪಡೆಯಲಾಗಿದೆ.
ಈ ಅಧ್ಯಯನದ ಫಲಿತಾಂಶವನ್ನು ಜರ್ನಲ್ ಪಿಎನ್ಎಎಸ್ ನೆಕ್ಸಸ್ನಲ್ಲಿ ಪ್ರಕಟಿಸಲಾಗಿದೆ. ಮಿಷಿನ್ ಲರ್ನಿಂಗ್ ಬಳಕೆ ಮಾಡಿ ವಿಶ್ಲೇಷಣೆ ಮಾಡಲಾಗಿದ್ದು, ಸಕ್ರಿಯಗೊಳಿಸಿದ ಅಪಾಯ ಮೌಲ್ಯಮಾಪನ ಮಾದರಿ ಸಜ್ಜುಗೊಳಿಸಲಾಗಿದೆ.
ಈ ಮಾದರಿಯು ಪ್ರತಿ ದೇಶದಲ್ಲಿನ ಶೇ 72.3 ರಷ್ಟು ತಳಿಗಳನ್ನು ಪತ್ತೆ ಮಾಡಲಿದೆ. ಎರಡು ವಾರಗಳ ವೀಕ್ಷಣೆಯ ನಂತರ ಈ ಮುನ್ಸೂಚಕ ಕಾರ್ಯಕ್ಷಮತೆಯು ಶೇಕಡಾ 80.1 ಕ್ಕೆ ಹೆಚ್ಚಾಗುತ್ತದೆ. ಬಲವಾದ ಅಂದಾಜು ತಳಿಯು ಸೋಂಕಿಗೆ ಕಾರಣವಾಗಲಿದೆ.
ಈ ತಳಿಯು ರೂಪಾಂತರ ಮತ್ತು ಹೊಸ ತಳಿಗಳಿಗಿಂತ ಹೇಗೆ ವಿಭಿನ್ನ ರೂಪಾಂತರ ಹೊಂದಿದೆ. ಸೋಂಕುಗಳ ಆರಂಭಿಕ ಅಂಶ, ಸ್ಪೈಕ್ ರೂಪಾಂತರಗಳು ಮತ್ತು ಹೊಸ ಅವಧಿಯಲ್ಲಿ ಹೆಚ್ಚು ಪ್ರಬಲವಾದ ರೂಪಾಂತರದಿಂದ ಹೇಗೆ ಭಿನ್ನವಾಗಿವೆ ಎಂದು ಅಂದಾಜಿಸಲಿದೆ.
ಬಹು ದತ್ತಾಂಶ ಮೂಲಗಳಿಂದ ಈ ವಿಶ್ಲೇಷಣೆ ಚೌಕಟ್ಟುನ್ನು ಈ ಕೆಲಸ ಒದಗಿಸಿದ್ದು, ಇದರಲ್ಲಿ ಅನುವಂಶಿಕ ಅನುಕ್ರಮ ದತ್ತಾಂಶ ಮತ್ತು ಮೆಷಿನ್ ಲರ್ನಿಂಗ್ ಮೂಲಕ ಸಾಂಕ್ರಾಮಿಕ ದತ್ತಾಂಶವೂ ಹೊಸ ಸಾರ್ಸ್ ಕೋವ್-2 ತಳಿಯು ಹರಡುವಿಕೆ ಅಪಾಯದ ಸೂಚನೆಯನ್ನು ನೀಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಈ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ಕೋವಿಡ್ ಉಪತಳಿಗಳಲ್ಲಿ ಓಮ್ರಿಕಾನ್ ಬಿಎ.5 ಹೆಚ್ಚು ಮಾರಣಾಂತಿಕ; ಅಧ್ಯಯನ