ನೈರೋಬಿ: ಕೀನ್ಯಾದಲ್ಲಿ 95 ಶಾಲಾ ಬಾಲಕಿಯರು ನಿಗೂಢ ರೀತಿಯ ಪಾರ್ಶ್ವವಾಯು ಖಾಯಿಲೆಗೆ ತುತ್ತಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಅಧಿಕಾರಿಗಳು ಈ ಸುದ್ದಿಯನ್ನು ದೃಢೀಕರಿಸಿದ್ದಾರೆ. ನೈರೋಬಿಯಾ ವಾಯುವ್ಯದಿಂದ 374 ಕಿಲೋ ಮೀಟರ್ ದೂರದಲ್ಲಿರುವ ಸೈಂಟ್ ತೆರೇಸಾ ಎರೆಗಿ ಗರ್ಲ್ಸ್ ಹೈಸ್ಕೂಲ್ನ ವಿದ್ಯಾರ್ಥಿಗಳು ಕಾಲು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಆರೋಗ್ಯಾಧಿಕಾರಿಯೊಬ್ಬರು ಈ ಕುರಿತು ಮಾತನಾಡಿದ್ದು, ವಿದ್ಯಾರ್ಥಿಗಳ ರಕ್ತ, ಮೂತ್ರದ ಮಾದರಿಯನ್ನು ಪಡೆಯಲಾಗಿದೆ. ಪಾರ್ಶ್ವವಾಯುಗೆ ಕಾರಣದ ಕುರಿತು ತನಿಖೆ ನಡೆಸಲಾಗುವುದು ಎಂದಿದ್ದಾರೆ. ಕೆಲವು ವಿದ್ಯಾರ್ಥಿಗಳು ಚಿಕಿತ್ಸೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುತ್ತಿದ್ದರೆ, ಮತ್ತೆ ಕೆಲವರು ವೈದ್ಯಕೀಯ ತಪಾಸಣೆಯಲ್ಲಿದ್ದಾರೆ ಎಂದು ಅವರು ತಿಳಿಸಿದರು.
ಪಾರ್ಶ್ವವಾಯುಗೆ ತುತ್ತಾದ ವಿದ್ಯಾರ್ಥಿಗಳಲ್ಲಿ ಪದೇ ಪದೇ ಮೊಣಕಾಲು ನೋವು ಕಾಣಿಸಿಕೊಳ್ಳುತ್ತಿದ್ದು, ನಡೆಯಲು ಕಷ್ಟವಾಗುತ್ತಿದೆ. ಸ್ಥಳೀಯ ಮಾಧ್ಯಮಗಳು ಕುರಿತು ವರದಿ ಮಾಡಿದ್ದು ವಿದ್ಯಾರ್ಥಿಗಳ ಕಾಲುಗಳು ಚಲನರಹಿತವಾಗಿದೆ. ಮತ್ತೆ ಕೆಲವು ಮಂದಿ ತಲೆ ನೋವು, ವಾಂತಿ ಮತ್ತು ಜ್ವರದಿಂದ ಬಳಲುತ್ತಿದ್ದಾರೆ.
ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಣ ಸಚಿವರು, ಅಧಿಕಾರಿಗಳು ಪ್ರಕರಣದ ಬಗ್ಗೆ ಹೆಚ್ಚಿನ ಗಮನವಹಿಸಿದ್ದಾರೆ. ಈ ಕುರಿತು ಮಾತನಾಡಿರುವ ಆರೋಗ್ಯ ಅಧಿಕಾರಿ ಸುಸನ್ ನಖುಮಿಚಾ, ಅಗತ್ಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಇಲ್ಲಿಯವರೆಗೆ ಐದು ವರದಿಗಳು ಬಂದಿದೆ. ಯಾವುದೇ ರೋಗಕಾರಕಗಳು ಪತ್ತೆಯಾಗಿಲ್ಲ. ಹೆಚ್ಚಿನ ಮಾದರಿಗಳನ್ನು ನೈರೋಬಿಯಲ್ಲಿರುವ ಕೀನ್ಯಾ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಹೆಚ್ಚಿನ ವಿಶ್ಲೇಷಣೆಗೆ ಕಳುಹಿಸಲಾಗುವುದು ಎಂದಿದ್ದಾರೆ. (ಐಎಎನ್ಎಸ್)
ಇದನ್ನೂ ಓದಿ: ವಿಶ್ವ ಸೆರೆಬ್ರಲ್ ಪಾಲ್ಸಿ ದಿನ: ಈ ದಿವಸದ ಹಿಂದಿನ ಉದ್ದೇಶ, ಧ್ಯೇಯಗಳ ಬಗ್ಗೆ ಇರಲಿ ಮಾಹಿತಿ