ETV Bharat / sukhibhava

ಹೃದ್ರೋಗ ಹೊಂದಿರುವ ವೃದ್ಧರಿಗೆ ಸಹಾಯ ಮಾಡುತ್ತಿದೆ ಮೊಬೈಲ್ ಹೆಲ್ತ್ ಟೆಕ್ - ಹೃದ್ರೋಗ ಸಮಸ್ಯೆ

ಕಳೆದ 11 ವರ್ಷಗಳಲ್ಲಿ 26 ಅಧ್ಯಯನಗಳ ಸಂಶೋಧನೆ ನಡೆಸಿದ್ದು, 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ ಹೃದಯ ಕಾಯಿಲೆ ತಡೆಗಟ್ಟುವಿಕೆಗಾಗಿ ಮೊಬೈಲ್ ಆರೋಗ್ಯ ತಂತ್ರಜ್ಞಾನ ಸಹಾಯಕವಾಗಿದೆ ಎಂದು ಅಧ್ಯಯನ ತಿಳಿಸಿದೆ.

mobile-health-tech-can-aid-elderly-with-heart-disease

author img

By

Published : Apr 2, 2021, 10:32 PM IST

ಹೈದರಾಬಾದ್: ಮೊಬೈಲ್ ಆರೋಗ್ಯ ತಂತ್ರಜ್ಞಾನವು ಜೀವನಶೈಲಿಯ ನಡವಳಿಕೆಯ ಬದಲಾವಣೆಗಳನ್ನು ಪ್ರೇರೇಪಿಸಲು ಸಹಾಯ ಮಾಡುತ್ತದೆ ಮತ್ತು ಹೃದಯ ಕಾಯಿಲೆ ಹೊಂದಿರುವ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಔಷಧಿಗಳ ಅನುಸರಣೆಯನ್ನು ಸುಧಾರಿಸುತ್ತದೆ ಎಂದು ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ತನ್ನ ​​ಹೇಳಿಕೆಯೊಂದರಲ್ಲಿ ತಿಳಿಸಿದೆ.

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ​​ಜರ್ನಲ್ ಸರ್ಕ್ಯುಲೇಷನ್​ನಲ್ಲಿ ಪ್ರಕಟವಾದ ವೈಜ್ಞಾನಿಕ ಹೇಳಿಕೆಯು, ಕಳೆದ 11 ವರ್ಷಗಳಲ್ಲಿ 26 ಅಧ್ಯಯನಗಳ ಸಂಶೋಧನೆ ನಡೆಸಿದ್ದು, 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಲ್ಲಿ ಹೃದಯ ಕಾಯಿಲೆ ತಡೆಗಟ್ಟುವಿಕೆಗಾಗಿ ಮೊಬೈಲ್ ಆರೋಗ್ಯ ತಂತ್ರಜ್ಞಾನ ಸಹಾಯಕವಾಗಿದೆ ಎಂದು ಅಧ್ಯಯನ ತಿಳಿಸಿದೆ.

ಪಠ್ಯ ಸಂದೇಶ ಮತ್ತು ವೆಬ್‌ಸೈಟ್ ಸಂಪನ್ಮೂಲ ಮಾಹಿತಿಯನ್ನು ಬಳಸಿದ ಜನರು ಕೇವಲ ಮೂರು ತಿಂಗಳಲ್ಲಿ ದೈಹಿಕ ಚಟುವಟಿಕೆ ಮತ್ತು ಇತರ ಜೀವನಶೈಲಿಯ ವರ್ತನೆಯ ಬದಲಾವಣೆಗಳನ್ನು ವರದಿ ಮಾಡಿದ್ದಾರೆ. ಮೊಬೈಲ್ ಅಪ್ಲಿಕೇಶನ್ ಬಳಸುವವರು ಅಥವಾ ಟೆಕ್ಸ್ಟ್ ಮೆಸೇಜಿಂಗ್ ರಿಮೈಂಡರ್ ಸ್ವೀಕರಿಸುವವರು ಔಷಧಿಗಳ ಅನುಸರಣೆಯಲ್ಲಿ ಗಮನಾರ್ಹ ಸುಧಾರಣೆಗಳನ್ನು ತೋರಿಸಿದ್ದಾರೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ.

"ಧರಿಸಬಹುದಾದ ಸಾಧನಗಳು, ಮೊಬೈಲ್ ಸಾಧನಗಳು ಮತ್ತು ಅಪ್ಲಿಕೇಶನ್‌ಗಳು ಪ್ರಮುಖ ಪಾತ್ರವಹಿಸುತ್ತವೆ ಏಕೆಂದರೆ ಆರೋಗ್ಯ ವರ್ತನೆಗಳು ಮತ್ತು ಹೃದಯ ಕಾಯಿಲೆಗಳ ಅಪಾಯಕಾರಿ ಅಂಶಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಪತ್ತೆಹಚ್ಚಲು ವ್ಯಕ್ತಿಗಳಿಗೆ ಇದು ಸಹಾಯ ಮಾಡಬಹುದು" ಎಂದು ಮಿನ್ನೇಸೋಟ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ನರ್ಸಿಂಗ್‌ನ ಸಹಾಯಕ ಪ್ರಾಧ್ಯಾಪಕ ಎರಿಕಾ ಎನ್ ಶೋರ್ ಹೇಳಿದರು.

ಜಡ ಜೀವನಶೈಲಿಯನ್ನು ಕಡಿತಗೊಳಿಸುವುದು, ಸೂಕ್ತವಾದ ದೇಹದ ತೂಕವನ್ನು ಕಾಪಾಡಿಕೊಳ್ಳುವುದು ಮತ್ತು ಆರೋಗ್ಯಕರ ಆಹಾರವನ್ನು ಅಳವಡಿಸಿಕೊಳ್ಳುವುದು ಹೃದಯ ಕಾಯಿಲೆಗಳನ್ನು ನಿಗ್ರಹಿಸಲು ಬಹಳ ಮುಖ್ಯ. ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್​ನಂತಹ ಇತರ ಅಂಶಗಳನ್ನು ಸಮಯೋಚಿತ ಔಷಧಿಗಳ ಬಳಕೆಯ ಮೂಲಕ ನಿಯಂತ್ರಣದಲ್ಲಿಡಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.