ನ್ಯೂಯಾರ್ಕ್: ಸಾಮಾಜಿಕ ಮಾಧ್ಯಮದಲ್ಲಿ ಮಾನಸಿಕ ಆರೋಗ್ಯ ಸವಾಲುಗಳ ಕುರಿತು ಆರೋಗ್ಯಯುತ ಚರ್ಚಿಸುವುದು ಉತ್ತಮ ಆದರೂ, ಇದು ಉದ್ಯೋಗಿಯ ಕೆಲಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ತಿಳಿಸಿದೆ.
ನಾರ್ಥ್ ಕರೊಲೀನಾ ಸ್ಟೇಟ್ ಯುನಿವರ್ಸಿಟಿ ಸಂಶೋಧಕರು ಈ ಸಂಬಂಧ ಅಧ್ಯಯನ ನಡೆಸಿದ್ದಾರೆ. ಲಿಂಕ್ಡಿನ್ ವೇದಿಯಲ್ಲಿ ಮಾನಸಿಕ ಆರೋಗ್ಯ ಕುರಿತ ಪೋಸ್ಟ್ಗಳು ವ್ಯಕ್ತಿಯ ವ್ಯಕ್ತಿತ್ವ ಮತ್ತು ಕೆಲಸದ ಸ್ಥಳದಲ್ಲಿ ಅಭ್ಯರ್ಥಿಯ ಕಾರ್ಯಕ್ಷಮತೆಯ ಗ್ರಹಿಕೆ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಈ ಅಧ್ಯಯನದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅನುಭವ ಹೊಂದಿರುವ 409 ವೃತ್ತಿಪರರು ಈ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಇವರು ಅಭ್ಯರ್ಥಿಗಳು ವರ್ಕ್ಫ್ಲೆಸ್ನಲ್ಲಿ ಹೊಂದಿರುವ ವ್ಯಕ್ತಿತ್ವ ಮತ್ತು ಭವಿಷ್ಯದ ಪ್ರದರ್ಶದನ ಕುರಿತು ಆಡಿಯೋ ಸಂದರ್ಶನವನ್ನು ಕೇಳಿದ್ದಾರೆ.
ಈ ಅಧ್ಯಯನದ ಫಲಿತಾಂಶವನ್ನು ಜರ್ನಲ್ ಆಫ್ ಬುಸಿನೆಸ್ ಅಂಡ್ ಸೈಕಾಲಾಜಿಯಲ್ಲಿ ಪ್ರಕಟಿಸಲಾಗಿದೆ. ಜನರು ಲಿಂಕ್ಡಿನ್ ನೋಡುವಾಗ ಮಾನಸಿಕ ಆರೋಗ್ಯ ಸವಾಲು ಮತ್ತು ಉದ್ಯೋಗಿ ಅಭ್ಯರ್ಥಿಯು ಕಡಿಮೆ ಭಾವನಾತ್ಮಕತೆ, ಸ್ಥಿರ ಮತ್ತು ಕಡಿಮೆ ಆತ್ಮಸಾಕ್ಷಿ ವ್ಯಕ್ತಿ ಎಂದು ತೋರಿಸುತ್ತದೆ. ಈ ಸಂದರ್ಶನದಲ್ಲಿ ಭಾಗಿಯಾದ ಉದ್ಯೋಗಾಕಾಂಕ್ಷಿ ಅಭ್ಯರ್ಥಿಗಳ ಆತ್ಮಸಾಕ್ಷಿಯ ಮೇಲೆ ಪರಿಣಾಮ ಬೀರಿಲ್ಲ. ಅಭ್ಯರ್ಥಿಗಳ ಲಿಂಕ್ಡಿನ್ ಪ್ರೋಫೈಲ್ಗಳು ಅಭ್ಯರ್ಥಿಗಳ ಹೆಚ್ಚಿನ ಗ್ರಹಿಕೆಯನ್ನು ಹೊಂದಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಜನರಿಗೆ ತಮ್ಮ ಮಾನಸಿಕ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುವಂತೆ ಕೂಡ ಪ್ರೋತ್ಸಾಹಿಸಲಾಯಿತು. ಈ ಮೂಲಕ ಅವರ ಮಾನಸಿಕ ಆರೋಗ್ಯದ ಸವಾಲಿನೊಂದಿಗೆ ಸಂಬಂಧ ಹೊಂದಿರುವ ಸ್ಟಿಗ್ಮಾವನ್ನು ಕಡಿಮೆ ಮಾಡುವ ಗುರಿ ಹೊಂದಲಾಗಿದೆ ಎಂದು ನಾರ್ಥ್ ಕರೋಲಿನ್ ಸ್ಟೇಟ್ ಯುನಿವರ್ಸಿಟಿಯ ಸೈಕಾಲಾಜಿ ಪ್ರೊಫೆಸರ್ ಮತ್ತು ಅಧ್ಯಯನದ ಸಹ ಲೇಖಕರಾದ ಲೊರಿ ಫೊಸ್ಟರ್ ತಿಳಿಸಿದ್ದಾರೆ.
ಮಾನಸಿಕ ಆರೋಗ್ಯದ ಸುತ್ತ ಸ್ಟಿಗ್ಮವನ್ನು ಕಡಿಮೆ ಮಾಡುವುದು ಅತ್ಯಗತ್ಯ ಎಂದು ನಾವು ಚಿಂತಿಸಿದ್ದೆವು. ಆದರೆ, ಅಧ್ಯಯನವೂ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಮಾನಸಿಕ ಆರೋಗ್ಯದ ಪೋಸ್ಟ್ಗಳನ್ನು ಮಾಡುವುದರಿಂದ ಅನಿರೀಕ್ಷಿತ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಅಧ್ಯಯನ ತೋರಿಸಿಕೊಟ್ಟಿದೆ. ಮಾನಸಿಕ ಆರೋಗ್ಯದ ಅನುಭವ ಕುರಿತು ಆನ್ಲೈನ್ನಲ್ಲಿ ಜನರು ತಿಳಿಸುವ ಬಗ್ಗೆ ಆಲೋಚನೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಮೆರೆಡಿತ್ ಕಾಲೇಜ್ನ ಸೈಕಾಲಾಜಿ ಪ್ರೊ ಜೆನ್ನಾ ಮ್ಕ್ಚೆಸ್ನೆ ತಿಳಿಸಿದ್ದಾರೆ.
ಆದಾಗ್ಯೂ, ನಮ್ಮ ಅಧ್ಯಯನ ಲಿಂಕ್ಡ್‌ಇನ್‌ನಂತಹ ವೇದಿಕೆಯಲ್ಲಿ ಆತಂಕ ಮತ್ತು ಖಿನ್ನತೆಯ ಬಗ್ಗೆ ಪೋಸ್ಟ್ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳುವುದಿಲ್ಲ ಎಂದು ಮೆಕ್ಚೆಸ್ನಿ ತಿಳಿಸಿದ್ದಾರೆ. (IANS)
ಇದನ್ನೂ ಓದಿ: ಮಕ್ಕಳ ಕುರಿತು ಪೋಷಕರ ಮಂಡೆಬಿಸಿ ಹೆಚ್ಚಿಸಿದ 2 ವಿಷಯಗಳಿವು!