ವಾಷಿಂಗ್ಟನ್: ನೆನಪುಗಳನ್ನು ಕ್ರೋಢೀಕರಿಸಲು ನಿದ್ರೆಯ ವಿವಿಧ ಹಂತಗಳು ಹೇಗೆ ಸಹಾಯ ಮಾಡುತ್ತವೆ ಎಂಬುದರ ಕುರಿತು ಅಮೆರಿಕದ ವಿಜ್ಞಾನಿಗಳು ಅಧ್ಯಯನದ ಮೂಲಕ ಕಂಡು ಹಿಡಿದಿದ್ದಾರೆ.
ನಿದ್ರಾ ಹಂತದಲ್ಲಿ ಆಗುವ ಕ್ಷಿಪ್ರ ಕಣ್ಣಿನ ಚಲನೆ (REM) ಮತ್ತು ನಿದ್ರೆಯ ನಿಧಾನ ತರಂಗ ಹಾಗೂ ನಿದ್ರೆಯ ಹಂತಗಳ ನಡುವೆ ಸಂಭವಿಸುತ್ತದೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ. ಮೆದುಳಿನಲ್ಲಿರುವ ಹಿಪೊಕ್ಯಾಂಪಸ್ ಹೊಸ ನೆನಪುಗಳ ಕೇಂದ್ರವಾಗಿದೆಯಂತೆ.
ನಿತ್ಯ ಹೊಸ ವಿಷಯಗಳನ್ನು ಕಲಿಯಲು ನಿದ್ರೆ ಮೂಲ ಕಾರಣವಾಗಿದೆ. ಮತ್ತೊಂದು ಭಾಗ ಎಂದರೆ ನಿಯೋಕಾರ್ಟೆಕ್ಸ್. ಇದು ಭಾಷೆ, ಉನ್ನತ ಮಟ್ಟದ ವಿಷಯ ಜ್ಞಾನ, ಮತ್ತು ನೆನಪುಗಳ ಹೆಚ್ಚು ಶಾಶ್ವತ ಸಂಗ್ರಹಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ನಿಧಾನ ತರಂಗ ಮತ್ತು REM ಹಂತಗಳ ನಡುವೆ ನಿದ್ರೆಯ ಸಮಯದಲ್ಲಿ ಕಲಿತ ವಿಷಯಗಳ ಬಗ್ಗೆ ಹಿಪೊಕ್ಯಾಂಪಸ್ ನಿಯೋಕಾರ್ಟೆಕ್ಸ್‌ಗೆ 'ಬೋಧಿಸುತ್ತದೆ' ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಇದನ್ನು ಓದಿ:ವಿಡಿಯೋ ಗೇಮ್ನಿಂದ ಮಕ್ಕಳ ಬ್ರೈನ್ ಆಗುತ್ತೆ ಸೂಪರ್ ಆ್ಯಕ್ಟಿವ್ !