ETV Bharat / sukhibhava

ಮನೆಯಲ್ಲೇ ಸಿಗುವ ಈ ನೈಸರ್ಗಿಕ ವಸ್ತುಗಳಿಂದ ಕೂದಲಿಗೆ ಮಾಡಿ ನಿಮಿಷ್ಟದ ಕಲರ್​!

ಈ ನೈಸರ್ಗಿಕ ಬಣ್ಣಗಳು ಕೂದಲಿಗೆ ಪೋಷಣೆಯನ್ನು ಒದಗಿಸುವ ಜೊತೆಗೆ ನಿಮ್ಮಿಷ್ಟದಂತೆ ಕೂದಲನ್ನು ಸ್ಟೈಲಿಶ್​ ಆಗಿ ಕಾಣುವಂತೆ ಕೂಡ ಮಾಡುತ್ತದೆ.

make-hair-color-naturally-at-home
make-hair-color-naturally-at-home
author img

By ETV Bharat Karnataka Team

Published : Sep 5, 2023, 4:29 PM IST

ಮಾಲಿನ್ಯ ಅಥವಾ ಇನ್ನಿತರ ಕಾರಣಗಳಿಂದ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗೆ ಆಗುತ್ತದೆ. ಈ ಬಿಳಿ ಕೂದಲಿನ ಸಮಸ್ಯೆಗೆ ಮತ್ತೊಂದು ಕಾರಣ ಎಂದರೆ ಮೆಲನಿನ್​ ಉತ್ಪಾದನೆ ಕಡಿಮೆ ಆಗುವುದು. ಸಣ್ಣವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಈ ಬಿಳಿ ಕೂದಲು ಹಲವರಲ್ಲಿ ಮುಜುಗರ ಕೂಡ ಉಂಟು ಮಾಡುತ್ತದೆ. ಇದೇ ಕಾರಣಕ್ಕೆ ಹೇರ್​ ಡೈ ಮೊರೆ ಹೋಗುತ್ತಾರೆ. ಅಥವಾ ಕಲರಿಂಗ್​ ಆಯ್ಕೆ ಮಾಡುತ್ತಾರೆ. ಈ ರೀತಿಯ ಬಿಳಿ ಕೂದಲ ಸಮಸ್ಯೆಗೆ ಇದೀಗ ಮನೆಯಲ್ಲಿಯೇ ನೈಸರ್ಗಿಕ ಹೇರ್​ ಪ್ಯಾಕ್​ ಮೂಲಕ ಹೊಸ ರೂಪ ಪಡೆಯಬಹುದು.

ಕೂದಲಿಗೆ ವಿಧ ವಿಧವಾದ ಬಣ್ಣ ಹಚ್ಚುವುದು ಇಂದಿನ ಟ್ರೆಂಡ್​ ಆಗಿದೆ. ಈ ರೀತಿಯ ಬಣ್ಣ ನಿಮ್ಮ ಕೂದಲಿಗೆ ಹಚ್ಚುವ ಇರಾದೆ ಇದ್ದರೂ ರಾಸಾಯನಿಕಗಳಿಂದ ಕೂದಲು ಹಾಳಾಗುತ್ತದೆ ಎಂಬ ಕೊರಗು ಮೂಡುತ್ತದೆ. ಇದರಿಂದ ಮುಕ್ತಿ ಪಡೆಯಲು ಇರುವ ಮಾರ್ಗ ನೈಸರ್ಗಿಕ ಬಣ್ಣಗಳು. ಈ ನೈಸರ್ಗಿಕ ಬಣ್ಣಗಳು ಕೂದಲಿಗೆ ಪೋಷಣೆಯನ್ನು ಒದಗಿಸುವ ಜೊತೆಗೆ ನಿಮ್ಮಿಷ್ಟದಂತೆ ಕೂದಲನ್ನು ಸ್ಟೈಲಿಶ್​ ಆಗಿ ಕಾಣುವಂತೆ ಕೂಡ ಮಾಡುತ್ತದೆ. ಹಾಗಾದ್ರೆ ಮನೆಯಲ್ಲಿಯೇ ನಿಮಿಷ್ಟವಾದ ಬಣ್ಣ ತಯಾರಿಸಲು ಈ ರೀತಿ ಮಾಡಿ ಸಾಕು.

ಕಾಫಿ: ಇದರ ಘಮ ಕಾಫಿ ಪ್ರಿಯರನ್ನು ಮಾತ್ರವಲ್ಲದೇ, ಇದರ ಅಂಶಗಳು ಸೌಂದರ್ಯ ವರ್ಧಕರನ್ನು ಸೆಳೆಯುತ್ತದೆ. ಮುಖದ ಅಂದ ಹೆಚ್ಚಿಸುವ ಕಾಫಿಯನ್ನು ಕೂದಲಿನ ಬಣ್ಣಕ್ಕೂ ಬಳಕೆ ಮಾಡಬಹುದು. ಎರಡು ಸ್ಪೂನ್​ ಕಾಫಿ ಪುಡಿಯನ್ನು ಎರಡು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಈ ನೀರು ಅರ್ಧಕ್ಕೆ ಬರುವಂತೆ ನೋಡಿಕೊಳ್ಳಿ, ಬಳಿಕ ಅದನ್ನು ತಣ್ಣಗೆ ಆಗಿಸಿ. ನಂತರ ಅದನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚಿ. ಗಂಟೆ ಬಳಿಕ ಇದನ್ನು ಕಡಿಮೆ ರಾಸಾಯನಿಕ ಶಾಂಪೊವಿನಿಂದ ತೊಳೆಯಿರಿ. ಇದರಿಂದ ಕೂದಲು ಗಾಢಾ ಕೆಂಪು ಬಣ್ಣ ಪಡೆಯುತ್ತದೆ.

ಬೀಟ್​ರೂಟ್​: ಬೀಟ್​ರೋಟ್​ ಹೊಳುಗಳನ್ನು ನೀರಿನಲ್ಲಿ ಚೆನ್ನಾಗಿ ಬೇಯಿಸಿ. ಇದು ತಣ್ಣಗೆ ಆದ ಬಳಿಕ ಅದನ್ನು ಶೋಧಿಸಿ, ಕೂದಲಿಗೆ ಹಚ್ಚಿ. ಗಂಟೆ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಕೂದಲು ಕೆಂಪು ಮತ್ತು ನೇರಳೆ ಬಣ್ಣ ಪಡೆಯುತ್ತದೆ.

ಹೆನ್ನಾ: ಹೆನ್ನಾವನ್ನು ಮೃದು ಪೇಸ್ಟ್​​ನಂತೆ ಕಲಿಸಿ, ಕೂದಲ ಬುಡದಿಂದ ತುದಿಯವರೆಗೆ ಹಚ್ಚಿ. ಬಳಿಕ ಕಡಿಮೆ ರಾಸಾಯನಿಕ ಶಾಂಪೂವಿನಿಂದ ತೊಳೆಯುವುದರಿಂದ ಕೂದಲು ಕೆಂಪು ಮತ್ತು ಕಿತ್ತಳೆ ಬಣ್ಣ ಪಡೆಯಲು ಸಾಧ್ಯ.

ಕ್ಯಾರೆಟ್​​: ಕ್ಯಾರೆಟ್​ ಅನ್ನು ಸಣ್ಣ ಸಣ್ಣದಾಗಿ ಹೆಚ್ಚಿ, ಅದರ ಪೇಸ್ಟ್​ ಅನ್ನು ಕೂದಲಿಗೆ ಹಚ್ಚಿ. ಒಂದು ಗಂಟೆ ಬಿಡಿ, ಬಳಿಕ ತಲೆ ಸ್ನಾನ ಮಾಡಿ. ಇದರಿಂದ ಕೂದಲು ಕೆಂಪು ಮತ್ತು ಕಿತ್ತಳೆ ಬಣ್ಣ ಪಡೆಯುತ್ತದೆ.

(ಸೂಚನೆ: ಇವೆಲ್ಲ ಸಾಮಾನ್ಯ ತಿಳಿವಳಿಕೆಯಿಂದ ನೀಡಿರುವ ಸಲಹೆಗಳು.. ಹೆಚ್ಚಿನ ಮಾಹಿತಿಗೆ ನುರಿತ ತಜ್ಞರನ್ನು ಸಂಪರ್ಕಿಸಿ)

ಇದನ್ನೂ ಓದಿ: ಹವಾಮಾನ ಬದಲಾವಣೆ ವಿರುದ್ಧ ಕೂದಲು ರಕ್ಷಿಸಿಕೊಳ್ಳಲು ಇಲ್ಲಿದೆ ಸುಲಭ ಮಾರ್ಗ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.