ಬೀಜಿಂಗ್: ಕಡಿಮೆ ಕಾರ್ಬೋಹೈಡ್ರೇಟ್ ಸೇವನೆಯಿಂದ ಅಕಾಲಿಕ ಸಾವಿನ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನ ವರದಿ ಎಚ್ಚರಿಸಿದೆ. ಇದರ ಜೊತೆಗೆ ಕಡಿಮೆ ಕೊಬ್ಬಿನ ಆಹಾರಗಳು ಜೀವನಾವಧಿ ಹೆಚ್ಚಿಸಲು ಪೂರಕ ಎಂದು ತಿಳಿಸಿದೆ. ಈ ಸಂಬಂಧ ಅಲ್ಪ-ಕಾಲದ ಕ್ಲಿನಿಕಲ್ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಕಡಿಮೆ ಕೊಬ್ಬಿನಾಹಾರ ಸೇವನೆ ತೂಕ ನಷ್ಟದೊಂದಿಗೆ ಹೃದಯಸಂಬಂಧಿ ಪ್ರಯೋಜನ ಹೊಂದಿದೆ ಎಂದು ತೋರಿಸಿದೆ.
ಕಡಿಮೆ ಕೊಬ್ಬಿನ ಆಹಾರಗಳೆಂದರೆ, ಧಾನ್ಯಗಳ ಆಹಾರ, ತೆಳು ಮಾಂಸ, ಕೊಬ್ಬಿನ ಡೈರಿ ಉತ್ಪನ್ನಗಳ ಕಡಿತ, ತರಕಾರಿ, ಲೆಂಟಿಸ್ ಮತ್ತು ಸೊಪ್ಪು ಒಳಗೊಂಡಿದೆ. ಕಡಿಮೆ ಕಾರ್ಬೋಹೈಡ್ರೇಟ್ ಆಹಾರ ಪದ್ಧತಿಯಲ್ಲಿ ಸಾಮಾನ್ಯ ಅಹಾರಕ್ಕೆ ಹೋಲಿಕೆ ಮಾಡಿದಾಗ ನಿಯಮಿತ ಕಾರ್ಬೋಹೈಡ್ರೇಟ್ ಸೇವನೆಗೆ ಮಿತಿಗೊಳಿಸಲಾಗಿದೆ. ಹೆಚ್ಚಿನ ಕಾರ್ಬೋಹೈಡ್ರೇಟ್ ಆಹಾರಗಳನ್ನು ಮಿತಿಗೊಳಿಸಲಾಗಿದೆ. ಇದನ್ನು ಹೆಚ್ಚಿನ ಕೊಬ್ಬು ಮತ್ತು ಪ್ರೊಟೀನ್ ಆಹಾರಗಳನ್ನು ಬದಲಾಯಿಸಿದ್ದು, ಕಾರ್ಬೋಹೈಡ್ರೇಟ್ ಆಹಾರವನ್ನು ಬದಲಾಯಿಸಲಾಗಿದೆ.
ಸುದೀರ್ಘ ಅಧ್ಯಯನ: ಚೀನಾದಲ್ಲಿನ ಪೀಕಿಂಗ್ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಂಶೋಧನಾ ತಂಡ ಹಾಗೂ ಅಮೆರಿಕದ ಹಾರ್ವರ್ಡ್ ಮತ್ತು ತುಲನೆ ವಿಶ್ವವಿದ್ಯಾಲಯ ಅಧ್ಯಯನ ನಡೆಸಿದೆ. ಅಧ್ಯಯನದಲ್ಲಿ 50ರಿಂದ 71 ವರ್ಷದ ವಯೋಮಾನದ 3,17,159 ಜನರು ಭಾಗಿಯಾಗಿದ್ದರು. ಈ ಭಾಗೀದಾರರನ್ನು 23.5 ವರ್ಷಗಳ ಕಾಲ ಅಧ್ಯಯನ ನಡೆಸಲಾಗಿದ್ದು, 1,65,698 ಮಂದಿ ಸಾವನ್ನಪ್ಪಿದ್ದಾರೆ. ಅಧ್ಯಯನವನ್ನು ಜರ್ನಲ್ ಆಫ್ ಇಂಟರ್ನಲ್ ಮೆಡಿಸಿನ್ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಕಡಿಮೆ ಕೊಬ್ಬಿನ ಆಹಾರಗಳು ವರ್ಷದಿಂದ ವರ್ಷಕ್ಕೆ ಸಾವಿನ ಅಪಾಯ ಹೆಚ್ಚಿಸಿದ್ದು, ಶೇ 34ರಷ್ಟಿದೆ.
ಅಕಾಲಿಕ ಸಾವಿನ ಅಪಾಯ: ಈ ಮಧ್ಯೆ, ಕಡಿಮೆ ಕಾರ್ಬೋಹೈಡ್ರೇಟ್ ಆಹಾರಗಳು ಸಾವಿನ ಅಪಾಯವನ್ನು ಶೇ 38ರಷ್ಟು ಹೆಚ್ಚಿಸಿದೆ. ಕೀಟೊ ತರಹದ ಆಹಾರ ಕ್ರಮ ರೂಢಿಸಿಕೊಂಡ ಜನರು ಕಾರ್ಬೋಹೈಡ್ರೇಟ್ ಸೇವಿಸುವವರಿಗೆ ಹೋಲಿಸಿದರೆ, ಸಾವಿನ ಪ್ರಮಾಣ 28 ಶೇಕಡಾ ಹೆಚ್ಚು. ಕಡಿಮೆ ಕಾರ್ಬೋಹೈಡ್ರೇಟ್ ಹಾರಾ ಮತ್ತು ಅನಾರೋಗ್ಯಕರ ಕಡಿಮೆ ಕಾರ್ಬೋಹೈಡ್ರೇಟ್ ಆಹಾರ ಹೆಚ್ಚಿನ ಸಾವಿನ ಅಪಾಯ ಹೊಂದಿದೆ. ಆದರೆ ರೋಗ್ಯಕರ ಕಡಿಮೆ ಕಾರ್ಬೋಹೈಡ್ರೇಟ್ ಆಹಾರ ಕಡಿಮೆ ಅಪಾಯ ಹೊಂದಿದೆ ಎಂದು ಅಧ್ಯಯನ ತಿಳಿಸಿದೆ.
ಮಧ್ಯವಯಸ್ಕರು ಮತ್ತು ಹಿರಿಯರಲ್ಲಿ ಸಾವಿನ ತಡೆಗಟ್ಟುವಲ್ಲಿ ಕಡಿಮೆ ಸ್ಯಾಚುರೇಟೆಡ್ ಕೊಬ್ಬಿನೊಂದಿಗೆ ಆರೋಗ್ಯಕರ ಕಡಿಮೆ ಕೊಬ್ಬಿನ ಆಹಾರವನ್ನು ನಿರ್ವಹಿಸುವ ಪ್ರಾಮುಖ್ಯತೆಯನ್ನು ಬೆಂಬಲಿಸುತ್ತವೆ ಎಮದು ಅಧ್ಯಯನ ತಿಳಿಸುತ್ತದೆ. ಆರೋಗ್ಯಕರ ಕಡಿಮೆ ಕೊಬ್ಬಿನ ಆಹಾರ ಪದ್ದತಿ ಅನುಸರಿಸುವುದರಿಂದ ಸಾವಿನ ಪ್ರಮಾಣ ಶೇ 18ರಷ್ಟು ಕಡಿಮೆಯಾಗಿದೆ.
ಇದನ್ನೂ ಓದಿ: ಇದೇ ಕಾರಣಕ್ಕೆ ವಿರುದ್ಧ ಸ್ವಭಾವದ ಆಹಾರ ತಿಂದ್ರೆ ಆರೋಗ್ಯಕ್ಕೆ ಹಾನಿ ಎನ್ನುವುದು!