ETV Bharat / sukhibhava

ಕಡಿಮೆ ವಿಟಮಿನ್​ ಡಿ ಪ್ರಮಾಣದಿಂದ ದೀರ್ಘ ಕೋವಿಡ್​ ಅಪಾಯ: ಅಧ್ಯಯನ

ವಿಟಮಿನ್ ಡಿ ಪೂರಕಗಳು ಕೋವಿಡ್​​ ರೋಗ ಲಕ್ಷಣಗಳನ್ನು ಸುಧಾರಿಸಬಹುದೇ ಅಥವಾ ಈ ಅಪಾಯವನ್ನು ಸಂಪೂರ್ಣವಾಗಿ ಕಡಿಮೆ ಮಾಡಬಹುದೇ ಎಂಬುದರ ಕುರಿತು ಅಧ್ಯಯನ ನಡೆಸಲಾಗಿದೆ.

Long term Covid risk from low vitamin D levels

author img

By

Published : May 15, 2023, 11:45 AM IST

Updated : May 15, 2023, 12:36 PM IST

ದೇಹದಲ್ಲಿನ ಕಡಿಮೆ ಮಟ್ಟದ ವಿಟಮಿನ್​ ಡಿ ದೀರ್ಘ ಕೋವಿಡ್​ ಅಪಾಯ ಹೆಚ್ಚಿಸುವ ಸಾಧ್ಯತೆ ಇರುತ್ತದೆ ಎಂದು ಸಂಶೋಧನಾ ವರದಿ ತಿಳಿಸಿದೆ. ಕೋವಿಡ್​ ಸೋಂಕಿನ ಬಳಿಕ ವ್ಯಕ್ತಿಯ ವಿಟಮಿನ್​ ಡಿ ಮಟ್ಟ ಪರಿಶೀಲನೆ ನಡೆಸಿದ ಬಳಿಕ ಫಲಿತಾಂಶದ ಸಲಹೆ ನೀಡಲಾಗಿದೆ. ಕೋವಿಡ್​ ರೋಗಿಗಳಲ್ಲಿ ವಿಟಮಿನ್​ ಡಿ ಮಟ್ಟ ಕಡಿಮೆ ಇದ್ದರೆ ಅವರಲ್ಲಿ ದೀರ್ಘಾವಧಿ ಕೋವಿಡ್​ ಅಪಾಯ ಅಭಿವೃದ್ಧಿಯಾಗುವ ಸಾಧ್ಯತೆ ಇರುತ್ತದೆ. ಆದರೆ, ವಿಟಮಿನ್ ಡಿ ಪೂರಕಗಳು ರೋಗ ಲಕ್ಷಣಗಳನ್ನು ಸುಧಾರಿಸಬಹುದೇ/ ಈ ಅಪಾಯವನ್ನು ಸಂಪೂರ್ಣವಾಗಿ ಕಡಿಮೆ ಮಾಡಬಹುದೇ ಎಂಬುದಿನ್ನೂ ತಿಳಿದಿಲ್ಲ ಎಂದು ಅಧ್ಯಯನದ ತನಿಖಾಧಿಕಾರಿ ಪ್ರೊಫೆಸರ್ ಆಂಡ್ರಿಯಾ ಗಿಯುಸ್ಟಿನಾ ತಿಳಿಸಿದ್ದಾರೆ.

100 ರೋಗಿಗಳ ಅಧ್ಯಯನ: ಕೋವಿಡ್​ ಸೋಂಕಿಗೆ ತುತ್ತಾದ ಬಳಿಕ ಚೇತರಿಕೆ ಕಾಣದೇ 12 ವಾರಗಳ ಕಾಲ ಉಳಿಯುವ ಸೋಂಕನ್ನು ದೀರ್ಘಾವಧಿಯ ಸೋಂಕು ಎಂದು ಗುರುತಿಸಲಾಗುವುದು. ಕೋವಿಡ್‌ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಶೇ 50-70ರಷ್ಟು ಮಂದಿಯಲ್ಲಿ ಇದು ಕಂಡುಬಂದಿದ್ದು, ಪರಿಸ್ಥಿತಿ ಸ್ಪಷ್ಟವಾಗಿ ತಿಳಿದಿಲ್ಲ ಎಂದಿದ್ದಾರೆ. ಅಧ್ಯಯನವನ್ನು ದಿ ಜರ್ನಲ್​ ಆಫ್​ ಕ್ಲಿನಿಕಲ್​ ಎಂಡೋಕ್ರಿನೊಲಾಜಿ ಮತ್ತು ಮೆಟಾಬೊಲಿಸಂನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನಕ್ಕಾಗಿ 51-70 ವರ್ಷದ ವಯಸ್ಸಿನ ದೀರ್ಘ ಕೋವಿಡ್​ 100 ರೋಗಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಇದನ್ನು ಓದಿ: ಬೆನ್ನು, ಭುಜ ನೋವಿಗೆ ಕಾರಣ ಕೆಟ್ಟ ಭಂಗಿ

ಆಸ್ಪತ್ರೆಗೆ ದಾಖಲಾದಾಗ ಮತ್ತು ಡಿಸ್ಚಾರ್ಜ್​ ಆಗಿ ಆರು ತಿಂಗಳ ಬಳಿಕ ವಿಟಮಿನ್​ ಡಿ ಮಟ್ಟವನ್ನು ಪರಿಶೀಲನೆ ನಡೆಸಲಾಯಿತು. ಈ ವೇಳೆ, ಇತರರಿಗಿಂತ ದೀರ್ಘ ಕೋವಿಡ್​ ಹೊಂದಿರುವವರಲ್ಲಿ ವಿಟಮಿನ್​ ಡಿ ಮಟ್ಟ ಕಡಿಮೆ ಇರುವುದು ಕಂಡುಬಂದಿದೆ. ಈ ಫಲಿತಾಂಶ ಆರು ತಿಂಗಳ ಫಾಲೋ - ಅಪ್‌ನಲ್ಲಿ ಗೊಂದಲ, ಮರೆವು ಮತ್ತು ಕಳಪೆ ಏಕಾಗ್ರತೆಯಂತಹ ಬ್ರೈನ್​ ಫಾಗ್​​ನಂತ ರೋಗಲಕ್ಷಣ ಹೊಂದಿರುವವರಲ್ಲಿ ಕಂಡುಬಂದಿದೆ.

ವಿಟಮಿನ್​ ಡಿ ಪರಿಣಾಮ: ಅಧ್ಯಯನಕ್ಕೆ ಯಾವುದೇ ಮೂಳೆ ಸಮಸ್ಯೆ ಹೊಂದಿರದ ಕೇವಲ ಕೋವಿಡ್​ ಸೋಂಕಿತರನ್ನು ಮಾತ್ರ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಕೋವಿಡ್​ ಹೆಚ್ಚು ನಿಯಂತ್ರಿತ ಸ್ವಭಾವವು ದೀರ್ಘ ಕೋವಿಡ್‌ನಲ್ಲಿ ವಿಟಮಿನ್ ಡಿ ಕೊರತೆ ಪಾತ್ರವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ ಮತ್ತು ವಿಟಮಿನ್ ಡಿ ಕೊರತೆ ಮತ್ತು ದೀರ್ಘ ಕೋವಿಡ್ ನಡುವೆ ಸಂಪರ್ಕವಿದೆ ಎಂದು ಗಿಯುಸ್ಟಿನಾ ತಿಳಿಸಿದ್ದಾರೆ.

ವಿಟಮಿನ್​ ಡಿ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಕಾಪಾಡುವುದು ಸೇರಿದಂತೆ ದೇಹದ ಮೇಲೆ ಇನ್ನಿತರ ಪರಿಣಾಮವನ್ನು ಬೀರುತ್ತದೆ. ವಿಟಮಿನ್​ ಡಿ ಇಮ್ಯೂನೊ ಚೆಕ್​ಪಾಯ್ಡ್​​ ಇನ್ಹಬಿಟರ್​ ಮೇಲೆ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಲು ತಂಡವು ಸುಧಾರುತ ಮೆಲನೊಮ ಜೊತೆ 200 ರೋಗಿಗಳ ರಕ್ತಗಳ ಪರೀಕ್ಷೆಯನ್ನು 12 ವಾರಗಳ ಕಾಲ ಇಮ್ಯೂನೊಥೆರಪಿ ಚಿಕಿತ್ಸೆಗಿಂತ ಮುಂಚೆ ಮತ್ತು ನಂತರ ನಡೆಸಲಾಗಿತ್ತು

ಇದನ್ನೂ ಓದಿ: ಅಲ್ಝೈಮರ್​ ಪ್ರೋಟಿನ್​ ಮಟ್ಟ ಕುಗ್ಗಿಸುತ್ತದೆ ನಿದ್ರೆ ಮಾತ್ರೆ; ಅಧ್ಯಯನದಲ್ಲಿ ಪತ್ತೆ

Last Updated : May 15, 2023, 12:36 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.