ತಾಯ್ತನ ಅನ್ನೋದು ಜೀವನದ ಅದ್ಭುತ ಅನುಭವಗಳಲ್ಲಿ ಒಂದು. ಜೀವನವನ್ನೇ ಬದಲಾಯಿಸುವ ಘಟನೆಯಿದು. ಮಗು ಜನಿಸಿದ ಬಳಿಕ ಜಗತ್ತು ಕಾಣುವ ರೀತಿಯೇ ಬದಲಾಗುತ್ತದೆ. ಪೋಷಕರಾಗುವುದು ಆಶೀರ್ವಾದದ ಜೊತೆಗೆ ಬಹುದೊಡ್ಡ ಜವಾಬ್ದಾರಿ, ಭಾವನೆಗಳ ಪಲ್ಲಟ.
ಮಗುವಿನ ಆರೋಗ್ಯದೊಂದಿಗೆ ತಾಯಿ ಭಾವನಾತ್ಮಕ ಸಂಬಂಧ ಹೊಂದಿರುತ್ತಾಳೆ. ಈ ಸಂಪರ್ಕ ಕಂದನ ಸುರಕ್ಷತೆ, ಪ್ರೀತಿ ಮತ್ತ ನಂಬಿಕೆಯನ್ನು ಬೆಳೆಸುತ್ತದೆ. ಇದು ಹೊರಗಿನ ಜಗತ್ತಿನ ಕಲಿಕೆಗೆ ಬೆಂಬಲ ನೀಡುತ್ತದೆ. ಮಗುವಿನ ಬಾಂಧವ್ಯ ಅಭಿವೃದ್ಧಿಯಲ್ಲಿ ತಾಯಿಯ ಆರೈಕೆ ಹೇಗೆ ಕಾರಣವಾಗುತ್ತದೆ ಎಂಬುದನ್ನು ತಜ್ಞರು ತಿಳಿಸಿದ್ದಾರೆ.
ಸ್ಕಿನ್ ಟು- ಸ್ಕಿನ್ ಟೈಮ್: ಮಗುವಿನ ಸ್ಪರ್ಶ ಭಾವನೆ ಅವರಲ್ಲಿ ಉತ್ತಮ ಬಾಂಧವ್ಯ ವೃದ್ಧಿಸುತ್ತದೆ. ಮಗುವಿಗೆ ಡೈಪರ್ ಬದಲಾವಣೆ, ಬಟ್ಟೆಗಳನ್ನು ಹಾಕುವುದು, ಎಣ್ಣೆ ಮಸಾಜ್ಗಳ ರೀತಿಯ ದೈಹಿಕ ಸಂಪರ್ಕಗಳು ಸುರಕ್ಷಾ ಮತ್ತು ಆರಾಮದಾಯಕ ಭಾವನೆ ಬೆಳೆಸುತ್ತವೆ. ಇದು ತಾಯಿ ಮತ್ತು ಮಗುವಿನ ಬಂಧನವನ್ನು ಆಳವಾಗಿಸುತ್ತದೆ. ಸ್ಪರ್ಶದ ಸಮಯವೂ ಮಗುವಿನ ತಾಪಮಾನ, ಉಸಿರಾಟ ಮತ್ತು ಒತ್ತಡ ನಿರ್ವಹಣೆಯೊಂದಿಗೆ ವಿಶ್ರಾಂತಿ ನೀಡುತ್ತದೆ.
ದೇಹದ ಮಸಾಜ್: ಮಗುವಿನ ಅಗತ್ಯತೆ ತಿಳಿಯಲು ದೇಹದ ಮಸಾಜ್ ಅಗತ್ಯ. ಮಗುವಿಗೆ ಇದು ಆರಾಮದಾಯಕ ಮತ್ತು ನೆಮ್ಮದಿಯ ಅನುಭವ ನೀಡುತ್ತದೆ. ದೇಹಕ್ಕೆ ಮಸಾಜ್ ಮಾಡುವುದರಿಂದ ಮಗುವಿನ ರಕ್ತದ ಪರಿಚಲನೆ ಹೆಚ್ಚುತ್ತದೆ. ಆಹಾರ ಜೀರ್ಣಗೊಳ್ಳುವಿಕೆಗೆ ಸಹಾಯ ಮಾಡುತ್ತದೆ. ಚರ್ಮ ಹೈಡ್ರೇಟ್ ಆಗಿರುವಂತೆಯೂ ಕಾಪಾಡಬಹುದು. ನವಜಾತ ಶಿಶುಗಳಿಗೆ ಮೃದುವಾದ ಮಸಾಜ್ ತಾಯಂದಿರ ಸಂಪರ್ಕ ಹೆಚ್ಚಿಸುತ್ತದೆ. ದೇಹಕ್ಕೆ ಮಸಾಜ್ ಮಾಡುವುದರಿಂದ ಮಗು ಅಳು ಕಡಿಮೆ ಮಾಡಿ, ಉತ್ತಮ ನಿದ್ದೆಗೆ ಜಾರುತ್ತದೆ.
ಹಾಡು ಮತ್ತು ಮಾತು: ಮಗುವಿನ ಸಂಬಂಧ ವೃದ್ಧಿಯಲ್ಲಿ ಮಾತನಾಡುವುದು, ಹಾಡುವುದು ಗಮನಾರ್ಹ ಪರಿಣಾಮ ಬೀರುತ್ತದೆ. ಇದು ಬಾಂಧ್ಯವ ವೃದ್ಧಿ ಜೊತೆಗೆ ಪೋಷಕರ ಸಂತಸಕ್ಕೆ ಕೂಡ ಕಾರಣವಾಗುತ್ತದೆ. ಇದರಿಂದ ಮಗು ಧ್ವನಿ ಗುರುತಿಸುವ ಮೂಲಕ ಪೋಷಕರು ಪತ್ತೆ ಮಾಡುತ್ತದೆ. ಮಗುವಿನ ಭಾಷಾ ಕೌಶಲ್ಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಇದು ಸಹಾಯಕ.
ಆಟದ ಸಮಯ: ಮಗುವಿನೊಂದಿಗೆ ಆಟವಾಡುವುದರಿಂದ ಬಂಧನ ಹೆಚ್ಚುವುದು. ಮಗು ಗೊಂಬೆ ಆಟ, ಡ್ಯಾನ್ಸ್ ಅಥವಾ ಮುದ್ದು ಮಾಡುವುದು, ಫನ್ನಿ ಫೇಸ್ ಮಾಡುವುದರಿಂದ ಮಗುವಿನ ಬೆಳವಣಿಗೆ ಸಹಾಯಕವಾಗುತ್ತದೆ.
ಸ್ನಾನದ ಸಮಯ: ಮಗುವಿನ ಶುಚಿತ್ವ ಮತ್ತು ಆರೋಗ್ಯದ ಜೊತೆಗೆ ಇದು ಕೂಡ ಬಾಂಧವ್ಯ ವೃದ್ಧಿಗೆ ಸಹಾಯಕ. ಬೆಚ್ಚಗಿನ ನೀರಿನ ಜೊತೆಗೆ ತಾಯಿಯ ಮೃದು ಸ್ವರ್ಶ ಮಗುವಿಗೆ ಉತ್ತಮ ಅನುಭವ ನೀಡುತ್ತದೆ. ಇದರಿಂದ ಮಗು ತನ್ನ ಸುತ್ತಲಿನ ಪರಿಸರದಲ್ಲಿ ವಿರಾಮದಾಯ ಮತ್ತು ಆಟದ ವಾತಾವರಣ ಸೃಷ್ಟಿಸುತ್ತದೆ. ಸ್ನಾನದ ಬಳಿಕ ಮಗುವಿನ ಮಾಶ್ಚರೈಸರ್ ಕೂಡ ಅವಶ್ಯಕ. ಇದು ಚರ್ಮದ ಆರೈಕೆಗೆ ಬೇಕು.
ಮಗುವಿಗಾಗಿ ಓದಿ: ಮಗುವಿಗೆ ಚಿತ್ರಗಳನ್ನು ತೋರಿಸುತ್ತಾ ವಿಭಿನ್ನ ಧ್ವನಿಗಳಲ್ಲಿ ಕಥೆ ಹೇಳುವುದರಿಂದ ಮಗುವಿನ ಅರಿವು ಮತ್ತು ಸಾಮಾಜಿಕ ಅಭಿವೃದ್ಧಿ ಆಗುತ್ತದೆ. ತಾಯಿ ಮೊದಲ ಆದ್ಯತೆ ಭಾವನಾತ್ಮಕ ಬಾಂಧವ್ಯ ಅಭಿವೃದ್ಧಿಯೊಂದಿಗೆ ಆರೈಕೆ, ಸ್ಪಂದಿಸುವಿಕೆ, ಮತ್ತು ಪ್ರೀತಿಯ ಪರಸ್ಪರ ಕ್ರಿಯೆಗಳು ಅಡಗಿರುತ್ತದೆ.
ಇದನ್ನೂ ಓದಿ: ರಾಷ್ಟ್ರೀಯ ಸುರಕ್ಷಾ ತಾಯ್ತನ ದಿನ 2023: ತಾಯಂದಿರ ಆರೋಗ್ಯ ಆರೈಕೆ ಸೇವೆಗೆ ನೀಡಬೇಕಿದೆ ಒತ್ತು