ETV Bharat / sukhibhava

ಅಕಾಲಿಕ ಜನನದ ಮಕ್ಕಳನ್ನು ಉಳಿಸುವಲ್ಲಿ ಕಾಂಗರೂ ಮದರ್​ ಕೇರ್​​ ಸಹಾಯಕ; ಅಧ್ಯಯನ - ಆರೋಗ್ಯ ಸುಧಾರಣೆ

ಮಗು ಹುಟ್ಟಿದ 24 ಗಂಟೆಯೊಳಗೆ ತಾಯಿಯ ಸಂಪರ್ಕಕ್ಕೆ ಮಗುವನ್ನು ನೀಡುವುದರಿಂದ ಅಕಾಲಿಕ ಜನನದ ಮಕ್ಕಳ ಸಾವಿನ ಪ್ರಮಾಣ ಕಡಿಮೆ ಮಾಡಬಹುದು.

Kangaroo Mother Care helps save premature babies; study

author img

By

Published : Jun 6, 2023, 1:25 PM IST

ನವದೆಹಲಿ: ಅವಧಿ ಪೂರ್ವವಾಗಿ ಹುಟ್ಟಿದ ಮಕ್ಕಳನ್ನು ತಾಯಿಯ ಜೊತೆ ಚರ್ಮದಿಂದ ಚರ್ಮಕ್ಕೆ ಅಥವಾ ದೇಹ ಸ್ಪರ್ಶ (skin-to-skin) ಸಂಬಂಧ ಹೊಂದುವ ಮೂಲಕ ಅವರ ಆರೋಗ್ಯ ಸುಧಾರಣೆ, ಜೀವ ಉಳಿಸುಕೊಳ್ಳಬಹುದು ಎಂದು ಅಧ್ಯಯನ ತಿಳಿಸಿದೆ. ಭಾರತದಲ್ಲಿ ಈ ರಿವ್ಯೂ ಸ್ಟಡಿ ನಡೆಸಲಾಗಿದ್ದು, ಬಿಎಂಜೆ ಗ್ಲೋಬಲ್​ ಹೆಲ್ತ್​​ ಜರ್ನಲ್​ನಲ್ಲಿ ಇದನ್ನು ಪ್ರಕಟಿಸಲಾಗಿದೆ. ಅಕಾಲಿಕವಾಗಿ ಹುಟ್ಟಿದ ಮಗುವನ್ನು 24 ಗಂಟೆಯೊಳಗೆ ದಿನದಲ್ಲಿ ಕನಿಷ್ಠ 28 ಗಂಟೆಗಳ ಕಾಲ ಈ ರೀತಿ ಸಂಪರ್ಕಕ್ಕೆ ಒಳಪಡಿಸುವ ಮೂಲಕ ಮಗುವನ್ನು ಸೋಂಕು ಅಥವಾ ಸಾವಿನ ಅಪಾಯದಿಂದ ಕಾಪಾಡಬಹುದು ಎಂದಿದ್ದಾರೆ.

ಕಾಂಗರೂ ಮದರ್​​ ಕೇರ್​ ಎಂದೇ ಜನಪ್ರಿಯವಾಗಿರುವ ಈ ವಿಧಾನದಲ್ಲಿ ತಾಯಿಯ ದೇಹದ ಶಾಖಕ್ಕೆ ಮಗುವನ್ನು ಬಿಗಿದಪ್ಪಿಸಿ ಚಿಕಿತ್ಸೆ ನೀಡಲಾಗುವುದು. ತಾಯಿ ಮತ್ತು ಮಗುವಿನ ನಡುವಿನ ಚರ್ಮದಿಂದ ಚರ್ಮ (skin-to-skin) ಸಂಬಂಧಗಳ ಚಿಕಿತ್ಸೆ ಕುರಿತು ಈಗಾಗಲೇ ಅನೇಕ ಅಧ್ಯಯನ ನಡೆದಿದ್ದು, ಇದು ಅಕಾಲಿಕ ಜನನದ ಮಕ್ಕಳ ಸಾವು ಮತ್ತು ಸೋಂಕು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ತೋರಿಸಿದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಕೂಡ ಕಡಿಮೆ ತೂಕದ ಮಕ್ಕಳನ್ನು ವೈದ್ಯಕೀಯ ಸ್ಥಿರಿಕರಣದ ಬಳಿಕ ಈ ರೀತಿ ಕಾಂಗರೊ ಮದರ್​ ಕೇರ್​​ಗೆ ಒಳಪಡಿಸುವಂತೆ ಶಿಫಾರಸು ಮಾಡಿದೆ. ಆದಾಗ್ಯೂ, ಇದನ್ನು ಆರಂಭ ಮಾಡುವ ಸರಿಯಾದ ಸಮಯದ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಪುದುಚೇರಿಯ ಜವಹಾರ್​ಲಾಲ್​ ಇನ್ಸುಟಿಟ್ಯೂಟ್​ ಆಫ್​ ಪೋಸ್ಟ್​ಗ್ರಾಜ್ಯುಯೇಟ್​ ಮೆಡಿಕಲ್​ ಎಜುಕೇಷನ್​ ಅಂಡ್​ ರಿಸರ್ಜ್​ (ಜೆಐಪಿಎಂಇಆರ್​) ಮತ್ತು ನವದೆಹಲಿಯ ಏಮ್ಸ್​ ಜಂಟಿಯಾಗಿ ಈ ವಿಷಯದ ಮೇಲೆ ಹಲವಾರು ದೊಡ್ಡ ಬಹು-ದೇಶ ಮತ್ತು ಸಮುದಾಯ-ಆಧಾರಿತ ಯಾದೃಚ್ಛಿಕ ಪ್ರಯೋಗಗಳನ್ನು ನಡೆಸಿದೆ.

ಕಾಂಗರೂ ಮದರ್​​ ಕೇರ್​ ಜೊತೆಗೆ ಸಾಂಪ್ರದಾಯಿಕ ಕಾಳಜಿಯನ್ನು ಮಗು ಜನಿಸಿದ 24 ಗಂಟೆಯೊಳಗೆ ಮತ್ತು 24 ಗಂಟೆಗಳ ಬಳಿಕ ಕಾಂಗರೂ ಮದರ್​​​ ಕೇರ್​ ಅನ್ನು ಹೋಲಿಕೆ ಮಾಡಲಾಗಿದೆ. ಈ ವೇಳೆ ನವಜಾತ ಮಕ್ಕಳ ಸಾವಿನ ಪ್ರಮಾಣ ಮತ್ತು ಕಡಿಮೆ ತೂಕ, ಸೋಂಕಿನ ಮೇಲಿನ ಪರಿಣಾಮವನ್ನು ಗಮನಿಸಲಾಗಿದೆ. ಇದಕ್ಕಾಗಿ 15,559 ಮಕ್ಕಳನ್ನು 31 ಬಾರಿ ಪರೀಕ್ಷೆ ನಡೆಸಲಾಗಿದೆ. ಕಾಂಗರೂ ಮದರ್​​​ ಕೇರ್​ ಜೊತೆಗೆ ಸಂಪ್ರದಾಯಿ ಕೇರ್​ಗಳ ಕುರಿತು 27 ಅಧ್ಯಯನಗಳನ್ನು ಹೋಲಿಕೆ ಮಾಡಲಾಗಿದೆ. ಇದರಲ್ಲಿ ನಾಲ್ಕನ್ನು ಮುಂಚೆ ನಡೆಸಲಾಗಿದೆ. ಕಾಂಗರೂ ಮದರ್​​ ಕೇರ್​ ಅನ್ನು ಬಳಿಕ ಆರಂಭಿಸಲಾಗಿದೆ.

ಸಾಂಪ್ರದಾಯಿಕ ಕಾಳಜಿಗೆ ಹೋಲಿಕೆ ಮಾಡಿದಾಗ ಕಾಂಗರೂ ಮದರ್​​​ ಕೇರ್​ ಮಗುವಿನ ಸಾವಿನ ಸಂಖ್ಯೆಯನ್ನು ಶೇ 32ರಷ್ಟು ಕಡಿಮೆ ಮಾಡಿದೆ. ಅಲ್ಲದೇ ಇದು ಸೋಂಕಿನ ಪ್ರಮಾಣವನ್ನು ಕಡಿಮೆ ಮಾಡಿದೆ ಎಂದು ವಿಶ್ಲೇಷಣೆ ಫಲಿತಾಂಶ ತಿಳಿಸಿದೆ.

ಮಗುವಿನ ಸಾವಿನ ಪ್ರಮಾಣ ಕಡಿಮೆ ಮಾಡುವಲ್ಲಿ ಮಗುವಿನ ವಯಸ್ಸು ಅಥವಾ ತೂಕದ ಬದಲಾಗಿ ಕಾಂಗರೂ ಮದರ್​​​ ಕೇರ್​ ಅನ್ನು ಯಾವ ಸಮಯದಲ್ಲಿ, ಎಲ್ಲಿ ಆರಂಭಿಸಿದರು ಎಂಬುದು ಮುಖ್ಯವಾಗುತ್ತದೆ. ಈ ಅಧ್ಯಯನದಲ್ಲಿ ಈ ಕಾಂಗರೂ ಮದರ್​​​ ಕೇರ್​ ಅನ್ನು ಕಡಿಮೆ ಅವಧಿ ಬದಲಾಗಿ, ದಿನದಲ್ಲಿ ಕನಿಷ್ಠ 8 ಗಂಟೆ ನಡೆಸಿದಾಗ ಹೆಚ್ಚಿನ ಲಾಭ ಕಂಡು ಬಂದಿದೆ. ಈ ಹಿಂದಿನ ಅಧ್ಯಯನದಲ್ಲಿ ಕಾಂಗರೂ ಮದರ್​​​ ಕೇರ್​ ನವಾಜಾತ ಶಿಶುಗಳ ಸಾವಿನ ಸಂಖ್ಯೆಯನ್ನು ಶೇ 33ರಷ್ಟು ಕಡಿಮೆ ಮಾಡುತ್ತದೆ. ಸೋಂಕಿನ ಪ್ರಮಾಣವನ್ನು ಶೇ 15ರಷ್ಟು ಕಡಿಮೆ ಮಾಡುತ್ತದೆ ಎಂದು ತೋರಿಸಿತು.

ಇನ್ನು ಅಧ್ಯಯನದಲ್ಲಿ ಕೆಲವು ಮಿತಿಗಳ ಕುರಿತು ಸಂಶೋಧಕರು ತಿಳಿಸಿದ್ದಾರೆ. ಇದರಿಂದಾಗಿ ಅಧ್ಯಯನದಲ್ಲಿ ಕಡಿಮೆ ಜನನ ತೂಕ, ಅತ್ಯಂತ ಅಕಾಲಿಕ ನವಜಾತ ಶಿಶುಗಳು ಮತ್ತು ತೀವ್ರವಾಗಿ ಅಸ್ಥಿರವಾದ ನವಜಾತ ಶಿಶುಗಳನ್ನು ಅಧ್ಯಯನದಿಂದ ಹೊರಗಿಡಲಾಗಿದೆ.

ಇದನ್ನೂ ಓದಿ: ಮಕ್ಕಳಲ್ಲಿ ಹೃದಯಾಘಾತ ಹೆಚ್ಚಳಕ್ಕೆ ಕಾರಣವಾಗುತ್ತಿದೆ ಜಂಕ್​ ಫುಡ್​: ವೈದ್ಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.