ಈ ಹಿಂದೆ ವಯಸ್ಸಾದವರನ್ನು ಕಾಡುತ್ತಿದ್ದ ಕೀಲು ಅಥವಾ ಮೊಣಕಾಲು ನೋವು ಎಂಬುದು ಇಂದು ಸಣ್ಣ ವಯಸ್ಸಿನವರನ್ನು ಭಾದಿಸುವ ಸಮಸ್ಯೆ ಆಗಿದೆ. ಇದಕ್ಕೆ ಕಾರಣ ಹಲವು ಇದೆ. ಅದರಲ್ಲಿ ಒಂದು ಜೀವನಶೈಲಿ ಆಗಿದೆ. ಕೆಟ್ಟ ಅಭ್ಯಾಸಗಳು, ಸರಿಯಾದ ಆಹಾರ ಸೇವನೆಯ ಕೊರತೆ, ಗಾಯಗಳು ಮತ್ತು ಅಪಘಾತಗಳು ಇದಕ್ಕೆ ಕಾರಣವಾಗುತ್ತದೆ. ಈ ಕೀಲು ನೋವಿನ ಸಮಸ್ಯೆ ಚಳಿಗಾಲದಲ್ಲಿ ಅಧಿಕವಾಗುತ್ತದೆ. ಇದಕ್ಕೆ ಕಾರಣ ಏನು, ಪರಿಹಾರ ಏನು ಎಂಬ ಮಾಹಿತಿ ಇಲ್ಲಿದೆ.
ಚಳಿಗಾಲದಲ್ಲಿ ಉಲ್ಬಣಗೊಳ್ಳುವ ನೋವು: ಕೀಲು ನೋವಿಗೆ ಪ್ರಮುಖ ಕಾರಣ ದೇಹದಲ್ಲಿ ಕ್ಯಾಲ್ಸಿಯಂ ಅಥವಾ ಪ್ರೋಟಿನ್ ಕೊರತೆ ಆಗಿದೆ. ಈ ಕೊರತೆಯು ಕೆಲವೊಮ್ಮೆ ಕೀಲಿನಲ್ಲಿ ಊತಕ್ಕೆ ಕಾರಣವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆಹಾರದ ಕ್ರಮದಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುವ ಮೂಲಕ ಇದರ ಪರಿಹಾರಕ್ಕೆ ಮುಂದಾಗಬಹುದಾಗಿದೆ.
ಅರಿಶಿಣ: ಅರಿಶಿಣದಲ್ಲಿ ಆ್ಯಂಟಿ ಆಕ್ಸಿಡೆಂಟ್ , ಊರಿಯುತ ವಿರೋಧಿ ಗುಣ ಇದ್ದು, ನೈಸರ್ಗಿಕ ಅಸ್ಥಿಸಂಧೀವಾತ ವಿರೋಧಿ ಚಿಕಿತ್ಸೆಯಲ್ಲಿ ಬಳಕೆ ಮಾಡಲಾಗುತ್ತದೆ. ಇದು ಕೀಲು ನೋವನ್ನು ಗಮನಾರ್ಹ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ. ಬೆಚ್ಚಗಿನ ಹಾಲಿಗೆ ಇದನ್ನು ಬೆರಸಿ ಸೇವಿಸಬಹುದು. ಅಲ್ಲದೇ ಅರಿಶಿಣದ ಪೇಸ್ಟ್ ಅನ್ನು ನೋವಿನ ಪ್ರದೇಶಕ್ಕೆ ಹಚ್ಚುವ ಮೂಲಕ ಪರಿಹಾರ ಕಂಡು ಕೊಳ್ಳಬಹುದು.
ಶುಂಠಿ: ಇದರಲ್ಲಿ ಕೂಡ ಉರಿಯೂತ ವಿರೋಧಿ ಗುಣ ಇದ್ದು, ಇದು ಕೂಡ ಕೀಲು ನೋವಿಗೆ ಸೂಪರ್ಫುಡ್ ಆಗಿದೆ. ಇದನ್ನು ನಿತ್ಯ ಆಹಾರದಲ್ಲಿ ಸೇವನೆ ಮಾಡುವುದರಿಂದ ಕೂಡ ನೋವಿಗೆ ಪರಿಹಾರ ಕಂಡು ಕೊಳ್ಳಬಹುದು.
ಬೆಳ್ಳುಳ್ಳಿ: ಭಾರತೀಯ ಅಡುಗೆ ಮನೆಯಲ್ಲಿ ಬೆಳ್ಳುಳಿಗೆ ವಿಶೇಷ ಸ್ಥಾನ ಇದೆ. ಇದನ್ನು ಕೂಡ ನಿಯಮಿತವಾಗಿ ಸೇವನೆ ಮಾಡುವುದರಿಂದ ನೋವು ಮತ್ತು ಊತವನ್ನು ಕಡಿಮೆ ಮಾಡಬಹುದಾಗಿದೆ. ಇದರಲ್ಲಿ ಕೂಡ ಊರಿಯುತ ವಿರೋಧಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣ ಇದೆ.
ನಟ್ಸ್ (ಒಣಹಣ್ಣು): ಇವುಗಳಲ್ಲಿ ಸಮೃದ್ಧ ಆರೋಗ್ಯಯುತ ಕೊಬ್ಬು, ಒಮೆಗಾ 3 ಫ್ಯಾಟಿ ಆಸಿಡ್ ಇರುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕೂಡ ನೋವು ನಿವಾರಣೆಗೆ ಸಹಾಯ ಮಾಡುತ್ತದೆ
ಹಸಿರು ತರಕಾರಿ- ಸೊಪ್ಪು: ಹಸಿರಿನಲ್ಲಿ ಸಮೃದ್ಧವಾಗಿ ವಿಟಮಿನ್, ಮಿನರಲ್ಸ್ ಮತ್ತು ಆ್ಯಂಟಿ - ಆಕ್ಸಿಡೆಂಟ್ ಇರುತ್ತದೆ. ಇದು ಕೂಡ ಊರಿಯುತವನ್ನು ಕಡಿಮೆ ಮಾಡುತ್ತದೆ.
ಹಣ್ಣುಗಳು: ಸೇವು, ಬರ್ರಿ, ಏಪ್ರಿಕಾಟ್ಗಳಲ್ಲಿ ಸಮೃದ್ಧವಾಗಿ ಆ್ಯಂಟಿ - ಆಕ್ಸಿಡೆಂಟ್ ಇದ್ದು. ಇದು ಕೂಡ ಹಾನಿಕಾರರ ರ್ಯಾಡಿಕಲ್ನಿಂದ ದೇಹವನ್ನು ಮುಕ್ತಗೊಳಿಸಿ, ನೋವು ಕಡಿಮೆ ಮಾಡುತ್ತದೆ.
ಮೆಂತ್ಯ: ಇದರಲ್ಲಿ ಕೂಡ ಊರಿಯುತ ವಿರೋಧಿ ಅಂಶ ಇದ್ದು, ಇದು ಚಳಿಗಾಲದಲ್ಲಿ ಕಾಡುವ ಕೀಲು ನೋವಿನ ಉಪಶಮನಕ್ಕೆ ಸಹಾಯ ಮಾಡುತ್ತದೆ
(ಸೂಚನೆ: ಈ ಎಲ್ಲ ಮಾಹಿತಿಗಳನ್ನು ಆರೋಗ್ಯ ತಜ್ಞರು ಮತ್ತು ಅಧ್ಯಯನಗಳಿಂದ ಪಡೆಯಲಾಗಿದೆ. ಈ ಲೇಖನ ಕೇವಲ ಮಾಹಿತಿ ನೀಡುತ್ತದೆ. ಯಾವುದೇ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ವೈದ್ಯರ ಸಲಹೆ ಪಡೆಯುವುದು ಅಗತ್ಯವಾಗಿದೆ.)
ಇದನ್ನೂ ಓದಿ: ನಿದ್ರೆ ಬಗ್ಗೆ ತಪ್ಪು ಕಲ್ಪನೆ ಬೇಡ; ಅಸಲಿ ವಿಷಯ ತಿಳಿಯಿರಿ