ETV Bharat / sukhibhava

ಮಧುಮೇಹ ನಿಯಂತ್ರಿಸುವಲ್ಲಿ ಮಧ್ಯಂತರ ಉಪವಾಸ ಸುರಕ್ಷಿತ; ಅಧ್ಯಯನ - ಮಂಧ್ಯತರ ಉಪವಾಸ ಎಂದು ಗುರುತಿಸಲಾಗಿದೆ

ಟೈಪ್​ 2 ಮಧುಮೇಹಿಗಳಿಗೆ ಸಮಯ ನಿರ್ಬಂಧಿತ ಆಹಾರ ಸುರಕ್ಷಿತವಾಗಿದೆ ಎಂದು ಅಧ್ಯಯನ ತಿಳಿಸಿದೆ.

Intermittent fasting is safe in controlling diabetes; study

author img

By ETV Bharat Karnataka Team

Published : Oct 28, 2023, 3:43 PM IST

ನ್ಯೂಯಾರ್ಕ್​: ಕಟ್ಟುನಿಟ್ಟಾಗಿ ಸಮಯಕ್ಕೆ ಸರಿಯಾಗಿ ಊಟದ ಅಭ್ಯಾಸ ರೂಢಿಸಿಕೊಳ್ಳುವ ಪದ್ಧತಿಯನ್ನು ಇಂಟರ್​ಮಿಟ್ಟೆಂಟ್​ ಅಂದರೆ ಮಧ್ಯಂತರ ಉಪವಾಸ ಎಂದು ಗುರುತಿಸಲಾಗಿದೆ. ಈ ಅಹಾರ ಪದ್ಧತಿಯೂ ತೂಕ ನಷ್ಟ ಮತ್ತು ಟೈಪ್​ 2 ಮಧುಮೇಹ ಮತ್ತು ರಕ್ತದ ಸಕ್ಕರೆ ಮಟ್ಟ ನಿರ್ವಹಣೆಗೆ ಸಹಾಯ ಮಾಡುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ.

ಅಮೆರಿಕದ ಚಿಕಾಗೊದ ಇಲ್ಲಿನೊಯ್ಸ್​​ ಯುನಿವರ್ಸಿಟಿ ಈ ಸಂಬಂಧ ಅಧ್ಯಯನ ಮಾಡಿದೆ. ಈ ಅಧ್ಯಯನಕ್ಕಾಗಿ ಒಂದು ಗುಂಪು ಪ್ರತಿನಿತ್ಯ ಬೆಳಗ್ಗೆ 8 ರಿಂದ ರಾತ್ರಿ 8ಗಂಟೆಯೊಳಗೆ ಆಹಾರದ ಅಭ್ಯಾಸ ರೂಢಿ ಮಾಡಿಕೊಂಡರೆ, ಮತ್ತೊಂದು ಗುಂಪಿಗೆ ಕ್ಯಾಲೋರಿ ಸೇವನೆ ಪ್ರಮಾಣವನ್ನು ಶೇ 25ರಷ್ಟು ಕಡಿತಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಕ್ಯಾಲೋರಿ ಕಡಿತಕ್ಕಿಂತ ಮಧ್ಯಂತರ ಉಪವಾಸ ಮಾಡಿದವರಲ್ಲಿ ತೂಕ ನಷ್ಟ ಕಂಡು ಬಂದಿದೆ.

ಎರಡು ಗುಂಪಿನಲ್ಲಿ ದೀರ್ಘಕಾಲದ ರಕ್ತದ ಸಕ್ಕರೆ ಮಟ್ಟದಲ್ಲಿ ಇಳಿಕೆ ಕಂಡು ಬಂದಿದೆ. ಇದಕ್ಕಾಗಿ ಹಿಮೋಗ್ಲೋಬಿನ್​ ಎ1ಸಿ ಪರೀಕ್ಷೆ ಮಾಡಲಾಗಿದೆ. ಈ ಅಧ್ಯಯನವನ್ನು ಜಮಾ ನೆಟ್​ವರ್ಕ್​ ಓಪನ್​ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನಲ್ಲಿ 75 ಮಂದಿ ಮೂರು ಗುಂಪುಗಳಲ್ಲಿ ಭಾಗಿಯಾಗಿದ್ದಾರೆ. ಅದರಲ್ಲಿ ಒಂದು ಗುಂಪು ಸಮಯ ನಿರ್ಬಂಧಿತ ಆಹಾರ ಪಾಲನೆ ಮಾಡಿದರೆ ಮತ್ತೊಂದು ಗುಂಪು ಕ್ಯಾಲೋರಿ ಸೇವನೆ ಕಡಿಮೆ ಮಾಡಿದೆ. ಮೂರನೇ ಗುಂಪು ನಿಯಂತ್ರಿತ ಗುಂಪಾಗಿದೆ. ಭಾಗಿದಾರರನ್ನು ಆರು ತಿಂಗಳ ಅಧ್ಯಯನದ ಬಳಿಕ ಅವರ ತೂಕ, ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಆರೋಗ್ಯದ ಸೂಚಕಗಳನ್ನು ಮಾಪನ ಮಾಡಲಾಗಿದೆ.

ವಿಶ್ವವಿದ್ಯಾನಿಲಯದ ಕಿನಿಸಿಯಾಲಜಿ ಮತ್ತು ಪೌಷ್ಟಿಕಾಂಶದ ಪ್ರಾಧ್ಯಾಪಕರಾದ ಕ್ರಿಸ್ಟಾ ವರಡಿ ಈ ಕುರಿತು ಮಾತನಾಡಿ, ನಿರ್ಬಂಧಿತ ಸಮಯಕ್ಕೆ ಒಳಪಟ್ಟ ಗುಂಪಿನವರು ಕಡಿಮೆ ಕ್ಯಾಲೋರಿ ಗುಂಪಿಗಿಂತ ಹೆಚ್ಚಿನ ಸುಲಭ ಸಮಯವನ್ನು ಹೊಂದಿದ್ದರು.

ಮಧುಮೇಹಿಗಳಿಗೆ ವೈದ್ಯರಿಂದ ಮೊದಲ ಹಂತದ ರಕ್ಷಣೆಯಾಗಿ ಕ್ಯಾಲೊರಿಗಳನ್ನು ಕಡಿತಗೊಳಿಸಲು ಹೇಳಲಾಗುತ್ತದೆ. ಈ ಹಿನ್ನೆಲೆ ಅನೇಕ ಮಂದಿ ಈ ಆಹಾರ ಕ್ರಮವನ್ನು ಅನುಸರಿಸಿದರು.

ಈ ನಡುವೆ ಸಮಯ ನಿರ್ಬಂಧಿತ ತಿನ್ನುವ ಗುಂಪಿಗೆ ಕ್ಯಾಲೋರಿ ಸೇವನೆಯಲ್ಲಿ ಯಾವುದೇ ಕಡಿತ ಮಾಡುವಂತೆ ತಿಳಿಸಿರಲಿಲ್ಲ. ಅವರು ತಮ್ಮ ಸಮಯದಲ್ಲಿ ತಿನ್ನುವ ಅಭ್ಯಾಸ ಹೊಂದಿದ್ದರು.

ಸಮಯ ನಿರ್ಬಂಧಿತ ಆಹಾರ ಸೇವನೆಯು ಸಾಂಪ್ರದಾಯಿಕ ಡಯಟ್​​ಗೆ ಪರ್ಯಾಯ ಪರಿಣಾಮಕಾರಿ ಆಯ್ಕೆಯಾಗಿದೆ. ಅನೇಕ ಮಂದಿ ತೂಕ ನಷ್ಟ ಹೊಂದಲು ಬಯಸುವವರು ಕ್ಯಾಲೋರಿ ಎಣಿಕೆ ಬದಲಾಗಿ ಸಮಯ ಎಣಿಕೆ ನಡೆಸಿ ತಿನ್ನುವುದರಿಂದ ಪ್ರಯೋಜನ ಹೊಂದಿದ್ದಾರೆ ಎಂದು ನಮ್ಮ ಅಧ್ಯಯನ ತೋರಿಸಿದೆ.

ಈ ಅಧ್ಯಯನದಿಂದ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕೂಡ ಈ ಆರು ತಿಂಗಳ ಅವಧಿಯಲ್ಲಿ ಕಂಡು ಬಂದಿಲ್ಲ. ಡಯಟ್​ ಮತ್ತು ನಿಯಂತ್ರಿಕ ಗುಂಪಿನಲ್ಲಿ ರಕ್ತದಲ್ಲಿನ ಕಡಿಮೆ ಸಕ್ಕರೆ ಅಂಶ ಮತ್ತು ರಕ್ತದಲ್ಲಿ ಅಧಿಕ ಸಕ್ಕರೆ ಅಂಶದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಈ ಅಧ್ಯಯನವನ್ನು ಸಣ್ಣ ಪ್ರಮಾಣದಲ್ಲಿ ನಡೆಸಲಾಗಿದ್ದು, ದೊಡ್ಡ ಪ್ರಮಾಣದಲ್ಲಿ ನಡೆಸಬೇಕಿದೆ ಎಂದು ವರದಿ ತಿಳಿಸಿದೆ. ಟೈಪ್​ 2 ಮಧುಮೇಹಿಗಳಿಗೆ ಸಮಯ ನಿರ್ಬಂಧಿತ ಆಹಾರ ಸುರಕ್ಷಿತವಾಗಿದೆ ಎಂದು ಅಧ್ಯಯನದ ಪುರಾವೆ ತಿಳಿಸಿದೆ. ಆದರೆ, ಮಧುಮೇಹಿಗಳು ಈ ರೀತಿ ಆಹಾರವನ್ನು ಅನುಸರಿಸುವ ಮುನ್ನ ವೈದ್ಯರ ಸಲಹೆ ಅವಶ್ಯಕವಾಗಿದೆ. (ಐಎಎನ್​ಎಸ್​)

ಇದನ್ನೂ ಓದಿ: Drumsticks: ನುಗ್ಗೇಕಾಯಿ ಎಂದು ಹೀಗಳಿಯುವ ಮುನ್ನ ಅದರ ಆರೋಗ್ಯ ಪ್ರಯೋಜನವನ್ನೊಮ್ಮೆ ತಿಳಿದು ಬಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.