ನ್ಯೂಯಾರ್ಕ್: ಗರ್ಭಾವಸ್ಥೆಯ ಸಮಯದಲ್ಲಿ ತಾಯಿ ಅನುಭವಿಸುವ ಉರಿಯೂತ ಸಮಸ್ಯೆ ಮಗುವಿನಲ್ಲಿ ಕೋಪ, ಆತಂಕ ಮತ್ತು ಖಿನ್ನತೆಯೊಂದಿಗೆ ಸಂಬಂಧ ಹೊಂದುವ ಸಾಧ್ಯತೆ ಇದೆ ಎಂದು ಅಧ್ಯಯನ ಹೇಳಿದೆ. ಗಾಯ ಅಥವಾ ಸೋಂಕು ಉಂಟಾದಾಗ ದೇಹ ಸಾಮಾನ್ಯವಾಗಿ ಉರಿಯೂತದೊಂದಿಗೆ ಪ್ರತಿಕ್ರಿಯಿಸುತ್ತದೆ. ಗರ್ಭಾವಸ್ಥೆಯಲ್ಲಿನ ಈ ಉರಿಯೂತ ಮಕ್ಕಳಲ್ಲಿನ ಡಿಸ್ರೆಗ್ಯೂಲೇಷನ್ (ಅನಿಯಂತ್ರಿತ) ಜೊತೆ ಸಂಬಂಧ ಹೊಂದಿರಬಹುದೆಂದು ಸಂಶೋಧಕರ ತಂಡ ಅಧ್ಯಯನ ನಡೆಸಿದೆ.
ಪ್ರಸವಪೂರ್ವ ಸೋಂಕು ಹೊಂದಿರುವ ತಾಯಂದಿರಿಗೆ ಜನಿಸಿದ ಮಕ್ಕಳಲ್ಲಿ ಡಿಸ್ರೆಗ್ಯೂಲೇಷನ್ ಸಮಸ್ಯೆ ಶೇ.28ರಷ್ಟು ಹೆಚ್ಚಿರುತ್ತದೆ. ಇದರ ಹೊರತಾಗಿ ಇನ್ನಿತರೆ ತಾಯ್ತನದ ಅಂಶಗಳನ್ನು ಕೂಡ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಗರ್ಭಾವಸ್ಥೆಗಿಂತ ಮುಂಚೆ ಹೊಂದಿರುವ ಅಧಿಕ ತೂಕ, ಕಡಿಮೆ ಶಿಕ್ಷಣ ಮತ್ತು ಧೂಮಪಾನ ಮಕ್ಕಳಲ್ಲಿ ಅಧಿಕ ಮಟ್ಟದ ಡಿಸ್ರೆಗ್ಯೂಲೇಷನ್ ಸಮಸ್ಯೆಯೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಿದೆ.
ಮಾನಸಿಕ ಆರೋಗ್ಯ ಸಮಸ್ಯೆ ಹೊಂದಿರುವ ಪೋಷಕರು ಅಥವಾ ಒಡಹುಟ್ಟಿದವರು ಈ ರೀತಿಯ ಡಿಸ್ರೆಗ್ಯೂಲೇಷನ್ ಅನುಭವವನ್ನು ಹೆಚ್ಚು ಹೊಂದಿರುತ್ತಾರೆ. ಈ ವರ್ತನೆಯ ಸವಾಲುಗಳಿಗೆ ಸಂಬಂಧಿಸಿದ ಅಂಶಗಳನ್ನು ಪರಿಹರಿಸುವುದು, ಹಾಗೆಯೇ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡುವುದು ಇಂಥ ಮಕ್ಕಳ ಫಲಿತಾಂಶಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ಯುನಿವರ್ಸಿಟಿ ಆಫ್ ಮೆಸಚ್ಯೂಸೆಟ್ ಚಾನ್ ಮೆಡಿಕಲ್ ಸ್ಕೂಲ್ನ ಜೇನ್ ಫ್ರಾಜಿಯರ್ ತಿಳಿಸಿದ್ದಾರೆ. ಬಾಲಕಿಯರಿಗಿಂತ ಬಾಲಕರು ಇಂಥ ಸಮಸ್ಯೆಗಿಂತ ಹೆಚ್ಚು ಬಾಧಿತರಾಗುತ್ತಾರೆ ಎಂದು ಅಧ್ಯಯನ ತಿಳಿಸಿದೆ.
ಚೈಲ್ಡ್ ಬಿಹೇವಿಯರ್ ಚೆಕ್ಲಿಸ್ಟ್ (ಸಿಬಿಸಿಎಲ್) ಅನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಮಗುವಿನ ನಡವಳಿಕೆ, ಆತಂಕ/ಖಿನ್ನತೆ ಮತ್ತು ಏಕಾಗ್ರತೆ ಕೊರತೆಯನ್ನು ಮಾಪನ ಮಾಡುಲಾಗುತ್ತದೆ. ಈ ಅಧ್ಯಯನಕ್ಕಾಗಿ ಅಮೆರಿಕದಲ್ಲಿ 6ರಿಂದ 18 ವರ್ಷದ 4,595 ಮಂದಿಯನ್ನು ಒಳಪಡಿಸಲಾಗಿದೆ.
ಗರ್ಭಾವಸ್ಥೆಯ ಉರಿಯೂತ ಎಂದರೇನು?: ಗರ್ಭಿಣಿಯಲ್ಲಿನ ಸೋಂಕು ಅಥವಾ ಇತರೆ ಉರಿಯೂತ ಮಗುವಿನಲ್ಲಿ ನರ ಅಭಿವೃದ್ಧಿ ಮತ್ತು ಮನೋವೈಜ್ಞಾನಿಕ ಸಮಸ್ಯೆಗೆ ಕಾರಣವಾಗುತ್ತದೆ. ಈ ಉರಿಯೂತಕ್ಕೆ ಸ್ಥೂಲಕಾಯ, ಗ್ಯಾಸ್ಟಸ್ಟೇಷನಲ್ ಡಯಾಬಿಟೀಸ್, ಧೂಮಪಾನ, ಮಾಲಿನ್ಯ, ಖಿನ್ನತೆ ಕಾರಣವಾಗುತ್ತದೆ.
ಇದನ್ನೂ ಓದಿ: ಗರ್ಭಿಣಿಯಾಗಿದ್ದಾಗ, ಹೆರಿಗೆಯ ನಂತರ ಮರೆವಿನ ಸಮಸ್ಯೆ ಕಾಡುತ್ತಿದೆಯೇ?: ಹಾಗಾದರೆ ಈ ಸಲಹೆಗಳನ್ನು ಪಾಲಿಸಿ!