ETV Bharat / sukhibhava

ಭಾರತೀಯರ ಆರೋಗ್ಯ ಗುರಿಗಳ ಮೇಲೆ ಕುಟುಂಬ, ಸ್ನೇಹಿತರ ಪ್ರಭಾವ ಹೆಚ್ಚು, ಸಾಮಾಜಿಕ ಮಾಧ್ಯಮವಲ್ಲ: ಸಮೀಕ್ಷೆ - ಸಾಮಾಜಿಕ ಜಾಲತಾಣ ಅಥವಾ ಸೆಲೆಬ್ರಿಟಿ

ಶೇ 76ರಷ್ಟು ಭಾರತೀಯರು ತಮ್ಮ ಆರೋಗ್ಯದ ಆಯ್ಕೆಗಳನ್ನು ಕುಟುಂಬಸ್ಥರು, ಸ್ನೇಹಿತರು ಮತ್ತು ಸಹೋದ್ಯೋಗಿಗಳ ಪ್ರಭಾವಗಳು ಆರೋಗ್ಯದ ಗುರಿ ಮೇಲೆ ಅವಲಂಬಿತವಾಗಿವೆ.

Indians health goals created by family not social media

author img

By ETV Bharat Karnataka Team

Published : Oct 17, 2023, 5:10 PM IST

ಬೆಂಗಳೂರು: ಶೇ 76ರಷ್ಟು ಭಾರತೀಯರು ಆರೋಗ್ಯ ಆಯ್ಕೆಯ ವಿಚಾರದಲ್ಲಿ ಅದರಲ್ಲೂ ವಿಶೇಷವಾಗಿ ತೂಕ ನಷ್ಟದ ಗುರಿಯಲ್ಲಿ ಸಾಮಾಜಿಕ ಜಾಲತಾಣ ಅಥವಾ ಸೆಲೆಬ್ರಿಟಿಗಳಿಗಿಂತ ಹೆಚ್ಚಾಗಿ ಕುಟುಂಬಸ್ಥರು ಮತ್ತು ಸ್ನೇಹಿತರು, ಸಹೋದ್ಯೋಗಿಗಳಿಂದ ಪ್ರಭಾವಿತರಾಗುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.

ವಿಶ್ವ ಆಹಾರ ದಿನದ ಹಿನ್ನೆಲೆಯಲ್ಲಿ ಸ್ಟೇಟ್​ ಆಫ್​ ಯುವರ್​ ಪ್ಲೇಟ್​​ (ನಿಮ್ಮ ತಟ್ಟೆಯ ಮನಸ್ಥಿತಿ) ಎಂಬ ಹೆಸರಿನಲ್ಲಿ ಫಿಟ್ನೆಸ್​​ ತಂತ್ರಜ್ಞಾನ ಆ್ಯಪ್​ ಆದ ಪಿಟೆಲೊ 5000 ಜನರ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ ಶೇ 58ರಷ್ಟು ಭಾರತೀಯರು ತಮ್ಮ ಬಟ್ಟೆಯ ಗಾತ್ರ ಹೆಚ್ಚಾದ ಸಮಯದಲ್ಲಿ ಮಾತ್ರ ತಮ್ಮ ತೂಕದ ಬಗ್ಗೆ ಚಿಂತಿಸುತ್ತಾರೆ. ಶೇ 46ರಷ್ಟು ಮಂದಿ ತಮ್ಮ ಕುಟುಂಬಸ್ಥರು, ಸ್ನೇಹಿತರು ದೇಹದ ತೂಕದ ಬಗ್ಗೆ ಟೀಕಿಸಿದಾಗ ಮಾತ್ರ ತಮ್ಮ ತಿನ್ನುವ ಅಭ್ಯಾಸದ ಬಗ್ಗೆ ಕಾಳಜಿವಹಿಸುತ್ತಾರೆ ಎಂದು ತಿಳಿದುಬಂದಿದೆ.

18ರಿಂದ 63 ವರ್ಷದ ಎಲ್ಲಾ ವಯೋಮಾನದವರ ಮೇಲೆ ಈ ಅಧ್ಯಯನ ನಡೆಸಲಾಗಿದೆ. ಇದರಲ್ಲಿ ಬಹುತೇಕರು ಅಂದರೆ ಶೇ 90ರಷ್ಟು ಮಂದಿ ಮಿಲೆನ್ನಿಯಲ್​ ಮತ್ತು ಜೆನ್​ ಜೆಡ್​ ವರ್ಗದವರಿದ್ದಾರೆ. ಇನ್ನು ಶೇ 77ರಷ್ಟು ಮಹಿಳೆಯರು ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಮೀಕ್ಷೆಯ ಫಲಿತಾಂಶವೂ ಭಾರತದಲ್ಲಿ ಹಬ್ಬದ ಋತುಮಾನದ ಆರಂಭಗಳ ಮುನ್ನ ಹೊರಬಂದಿದೆ. ಈ ವೇಳೆ ಕುಟುಂಬಗಳ ಒಟ್ಟು ಸೇರುವಿಕೆ (ಗೆಟ್​ ಟು ಗೆದರು) ಶೇ 57ರಷ್ಟು, ಕೌಟುಂಬಿಕ ಕಾರ್ಯಕ್ರಮಗಳು ಶೇ 44ರಷ್ಟು ಮತ್ತು ಒತ್ತಡದ ಸಮಯ ಶೇ 35ರಷ್ಟಿದ್ದು, ಇದು ಮೂರು ಪ್ರಮುಖ ಕಷ್ಟದ ಸಮಯವಾಗಿದ್ದು, ಭಾವನಾತ್ಮಕ ಆಹಾರಕ್ಕೆ ಕಾರಣವಾಗುತ್ತದೆ. ಈ ಸಂದರ್ಭದಲ್ಲಿ ತಮ್ಮ ಆರೋಗ್ಯದ ಗುರಿಗಳನ್ನು ಬಿಟ್ಟುಕೊಡಲು ಒಪ್ಪಿಕೊಂಡಿರುವುದಾಗಿ ಭಾಗಿದಾರರು ಹೇಳಿದ್ದಾರೆ.

ಆರೋಗ್ಯ ಗುರಿಗಳ ತ್ಯಾಗ: ಶೇ 33ರಷ್ಟು ಮಹಿಳೆಯರು ವಿಶೇಷವಾಗಿ ಮಕ್ಕಳ ಜವಾಬ್ದಾರಿಯಂತಹ ಕುಟುಂಬದ ಜವಾಬ್ದಾರಿಯಿಂದಾಗಿ ತಿನ್ನುವಿಕೆ ಒತ್ತಡಕ್ಕೆ ಒಳಗಾಗಿ ಆರೋಗ್ಯದ ಗುರಿಗಳನ್ನು ಬಿಡುತ್ತಾರೆ. ಮತ್ತೊಂದೆಡೆ, ಶೇ 35ರಷ್ಟು ಪುರುಷರು ಕಚೇರಿಯ ಪಾರ್ಟಿಗಳಿಂದಾಗಿ ಆರೋಗ್ಯದ ಗುರಿಗಳನ್ನು ಬಿಡುವುದಾಗಿ ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.

ಶೇ 57ರಷ್ಟು ಭಾರತೀಯರು ತಮ್ಮ ಸಾಧನೆಯನ್ನು ಅಧಿಕ ಸಕ್ಕರೆ, ಅಧಿಕ ಉಪ್ಪು ಮತ್ತು ಅಧಿಕ ಕೊಬ್ಬಿನ ಆಹಾರದೊಂದಿಗೆ ಪ್ರೀತಿಪಾತ್ರರೊಂದಿಗೆ ಹಂಚಿಕೊಂಡು ಸಂಭ್ರಮಿಸುತ್ತಾರೆ. ಪಾಶ್ಚಿಮಾತ್ಯರ ಫಾಸ್ಟ್​​ ಫುಡ್​​ ಟ್ರೆಂಡ್​​ ಅನ್ನು ತಮ್ಮ ಫಿಟ್ನೆಸ್​ ಗುರಿಗಳ ವೇಳೆ ಆಚರಿಸುವುದಿಲ್ಲ ಎಂಬುದು ಸಂಶೋಧನೆಯಲ್ಲಿ ಗೊತ್ತಾದ ಅಂಶ.

ಸಮೀಕ್ಷೆಯನುಸಾರ, ಪಾಶ್ಚಿಮಾತ್ಯರಂತೆ ಭಾರತೀಯರು ಅಧಿಕ ಹೃದಯದ ವ್ಯಾಯಾಮ ಅಥವಾ ಕ್ರೀಡೆಗಳಲ್ಲಿ ತೊಡಗುವುದಿಲ್ಲ. ಅವರು ಮನೆಯಲ್ಲಿಯೇ ಹಗುರ ವ್ಯಾಯಾಮದಲ್ಲಿ (ಶೇ 46ರಷ್ಟು) ಮತ್ತು ವಾಕಿಂಗ್‌ನಲ್ಲಿ (ಶೇ 55ರಷ್ಟು) ತೊಡಗುತ್ತಾರೆ. ಕೇವಲ ಶೇ 3ರಷ್ಟು ಮಂದಿ ಫಿಟ್ನೆಸ್​​ ಗುರಿಗಾಗಿ ಈಜಿನ ಅಭ್ಯಾಸ ನಡೆಸುವುದಾಗಿ ತಿಳಿಸಿದ್ದಾರೆ. ಶೇ 6ರಷ್ಟು ಮಂದು ಪ್ರತಿನಿತ್ಯದ ಚಟುವಟಿಕೆಯಲ್ಲಿ ಕ್ರೀಡೆಯನ್ನು ಸೇರಿಸುವುದಾಗಿ ತಿಳಿಸಿದ್ದಾರೆ. (ಪಿಟಿಐ)

ಇದನ್ನೂ ಓದಿ: ಬಿಪಿಯ ಏರಿಳಿತ ಡೆಮನ್ಶಿಯಾ, ಹೃದಯ ಸಮಸ್ಯೆ ಲಕ್ಷಣ: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.