ನವದೆಹಲಿ: ಇಂದಿನ ಕಾಲದಲ್ಲಿ ಆರೋಗ್ಯಯುತ ಆಹಾರ ಸೇವನೆ ನಿಜಕ್ಕೂ ಸವಾಲಾಗಿದೆ. ಇಂದು ಬಹುತೇಕ ನಾವು ಪ್ಯಾಕೇಜ್ಡ್ ಮತ್ತು ಸಂಸ್ಕರಿತ ಆಹಾರಗಳ ಸೇವನೆ ಮಾಡುತ್ತಿದ್ದು, ಇದರಿಂದ ಒತ್ತಡ ಹೆಚ್ಚುವ ಜೊತೆಗೆ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ಜನರ ಆರೋಗ್ಯ ದುರ್ಬಲತೊಳ್ಳುತ್ತಿದೆ. ಈ ಹಿನ್ನೆಲೆ ಶುದ್ಧ ಮತ್ತು ತಾಜಾ ಆಹಾರ ಸೇವನೆ ಪ್ರಮುಖವಾಗುತ್ತಿದೆ.
ನಾವು ಪರಿಸರ ಮಾಲಿನ್ಯಕ್ಕೆ ಎಷ್ಟು ಒಗ್ಗಿಕೊಂಡಿದ್ದೇವೆ ಎಂಬುದನ್ನು ನಿಯಂತ್ರಣ ಮಾಡಲಾಗುವುದಿಲ್ಲ. ಆದರೆ, ನಾವು ಆರೋಗ್ಯಯುತ ಡಯಟ್ ಅಳವಡಿಸಿಕೊಳ್ಳಬಹುದು. ಈ ಬಗ್ಗೆ ಈಗಾಗಲೇ ಜನರು ಅರಿವು ಹೊಂದಿದ್ದಾರೆ. ನ್ಯೂಟ್ರಿಷಿಯನ್ ಬ್ರಾಂಡ್ನ ವೈದ್ಯಕೀಯ ಮತ್ತು ವಿಜ್ಞಾನ ವಿಚಾರಗಳ ಮುಖ್ಯಸ್ಥ ಡಾ ಇರ್ಫಾನ್ ಶೇಖ್, ಆರೋಗ್ಯಯುತ ಆಹಾರಗಳ ಕುರಿತು ಒತ್ತು ನೀಡುವ ಬಗ್ಗೆ ತಿಳಿಸಿದ್ದಾರೆ. ಸಮತೋಲಿತ ಆಹಾರಗಳ ಜೊತೆಗೆ ಚಟುವಟಿಕೆಗಳನ್ನು ವಯಸ್ಸಿಗೆ ಅನುಗುಣವಾಗಿ ನಡೆಸಬೇಕು ಎಂದಿದ್ದಾರೆ.
ಹದಿ ವಯಸ್ಸಿನಲ್ಲೇ ಆರಂಭ: ಹದಿ ಹರೆಯದವರು ಬೆಳವಣಿಗೆಯಲ್ಲಿ ದೇಹದ ಮೂರು ಮುಖ್ಯ ವ್ಯವಸ್ಥೆಗಳು ಬದಲಾಗುತ್ತವೆ. ಸ್ನಾಯುಗಳು ಜೊತೆಗೆ ದೊಡ್ಡ ಮೂಳೆಗಳ ಬೆಳವಣಿಗೆ, ಹಾರ್ಮೋನ್ ಪಕ್ವತೆ ಮತ್ತು ರಕ್ತ ಹಾಗೂ ಇಮ್ಯೂನಿಟಿಯಲ್ಲಿ ಬದಲಾವಣೆ ಕಾಣಬಹುದು. ಈ ಅಂಶಗಳು ಸರಿಯಾಗಿ ಬೆಳವಣಿಗೆ ಆಗುತ್ತಿದ್ಯಾ ಎಂಬುದನ್ನು ಗಮನಿಸುವುದು ಅಗತ್ಯವಾಗಿದೆ.
ಮೂಳೆಗಳ ಆರೋಗ್ಯ: ಬಹುತೇಕ ಜನರು ಮೂಳೆಗಳ ಬಗ್ಗೆ ಯೋಚಿಸುವಾಗ ಪ್ರೋಟಿನ್ ಮತ್ತು ಕ್ಯಾಲ್ಸಿಯಂ ಬಗ್ಗೆ ಯೋಚನೆ ಮಾಡುತ್ತಾರೆ. ಆದರೆ, ವಿಟಮಿನ್ ಡಿ, ಮೆಗ್ನಿಶಿಯಂ, ಫಾಸ್ಫರಸ್, ವಿಟಮಿನ್ಕೆ, ಕೊಲೆಜನ್ ಮತ್ತು ಅಗತ್ಯ ಫ್ಯಾಟಿ ಆಸಿಡ್ಗಳು ಮೂಳೆಗಳ ಆರೋಗ್ಯಕ್ಕೆ ಅವಶ್ಯವಾಗಿದೆ. ಈ ಪೋಷಕಾಂಶಗಳ ಸೇವನೆ ಮೂಳೆಗಳ ಮುರಿತದಿಂದ ಕಾಪಾಡುತ್ತದೆ. ಮೀನು, ಮೊಟ್ಟೆ, ಕಡಲೆಕಾಳು ಪಲ್ಯ, ತರಕಾರಿ ಮಿಶ್ರಿತ ಪಲ್ಯ, ದಾಲ್ ತಡ್ಕಾ ಮತ್ತು ಇತರೆ ಅಗಸೆ ಬೀಜದ ಚಟ್ನಿಗಳಂತಹ ಆಹಾರಗಳು ನಿಮಗೆ ಸಮೃದ್ಧ ಪೋಷಕಾಂಶ ನೀಡುತ್ತದೆ.
ರಕ್ತ: ಆರೋಗ್ಯಯುತ ಕೆಂಪು ರಕ್ತ ಕೋಶಗಳಿಗೆ ಕಬ್ಬಿಣ, ವಿಟಮಿನ್ ಬಿ 12 ಮತ್ತು ಫೊಲಟ್ ಅಗತ್ಯವಾಗಿದೆ. ಸಾಕಷ್ಟು ಪ್ರಮಾಣದ ಕಬ್ಬಿಣ ಅಂಶ ಇಲ್ಲದಿರುವುದರಿಂದ ಕೆಂಪು ರಕ್ತ ಕೋಶಗಳು ದೇಹಕ್ಕೆ ಆಮ್ಲಜನಕ ಪೂರೈಕೆ ಮಾಡುವುದಿಲ್ಲ. ಇದಕ್ಕಾಗಿ ಅಹಾರದಲ್ಲಿ ಪಾಲಕ್ ಬಳಕೆಗೆ ಒತ್ತು ನೀಡಬೇಕು. ಮೆಂತ್ಯೆ, ಬೀಟ್ರೂಟ್ನಂತಹ ಸಮೃದ್ಧ ಆಹಾರ ಸೇವಿಸಬೇಕು.
ಹಾರ್ಮೋನ್ ಪಕ್ವತೆ: ಸಮತೋಲಿತ ಡಯಟ್, ಸಾಕಷ್ಟು ಪ್ರೋಟಿನ್, ಹೆಚ್ಚಿನ ಫೈಬರ್, ಒತ್ತಡ ರಹಿತ ಜೀವನ, ನಿಯಮಿತ ವ್ಯಾಯಾಮ, ತೂಕ ನಿರ್ವಹಣೆ ಮತ್ತು ಉತ್ತಮ ನಿದ್ದೆ ಈ ಸಮಯದಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಈ ಹಾರ್ಮೋನ್ಗಳ ಪಕ್ವತೆ ಬದಲಾವಣೆ ಆರಂಭಿಕ ಜೀವನಶೈಲಿಯ ಅಡಿಪಾಯವನ್ನು ಹೊಂದಿದೆ.
30- 40ರಲ್ಲಿ ಕಾಳಜಿ: ಜನರು 30-40ಕ್ಕೆ ಕಾಲಿಡುತ್ತಿದ್ದಂತೆ ರೋಗಗಳನ್ನು ತಡೆಗಟ್ಟುವ ಕುರಿತು ಕಾಳಜಿ ವಹಿಸುತ್ತಾರೆ. ಅದರಲ್ಲೂ ಹೃದಯದ ಬಗ್ಗೆ ಜೋಪಾನ ಹೆಚ್ಚಿರುತ್ತದೆ.
ಕೊಲೆಸ್ಟ್ರಾಲ್: ಕಡಿಮೆ ಕೊಲೆಸ್ಟ್ರಾಲ್, ಸಾಕಷ್ಟು ತರಕಾರಿ, ಹಣ್ಣು ಸೇವನೆ, ಧಾನ್ಯಗಳು, ಪೋಷಕಾಂಶಯುಕ್ತ ಆಹಾರಗಳು, ಒಣ ಹಣ್ಣು ಮತ್ತು ಬೀಜಗಳು ನಿಮಗೆ ಸಹಾಯ ಮಾಡುತ್ತವೆ.
ಒತ್ತಡ: ವೃತ್ತಿ, ಆದಾಯ ಮತ್ತು ಕುಟುಂಬ ಹೊಣೆ ಅನೇಕ ಒತ್ತಡ ಮೂಡಿಸುತ್ತದೆ. ದೈನಂದಿನ ವ್ಯಾಯಾಮ ಮತ್ತು ಒತ್ತಡ ರಹಿತ ವಾತಾವರಣದ ಸೃಷ್ಟಿಯಿಂದ ಆರೋಗ್ಯ ಮತ್ತು ಮನಸ್ಸನ್ನು ಆರಾಮವಾಗಿಟ್ಟುಕೊಳ್ಳಬಹುದು. ಇದಕ್ಕಾಗಿ ಯೋಗ, ಧ್ಯಾನ, ಓದುವಿಕೆ ಅಭ್ಯಾಸ ಸಹಾಯ ಮಾಡುತ್ತದೆ.
ಅನೇಕ ಮಂದಿಗೆ ತಮಗಿರುವ ರಕ್ತದೊತ್ತಡದ ಬಗ್ಗೆ ಅರಿವಿರುವುದಿಲ್ಲ. ಕಾರಣ ಇದಕ್ಕೆ ಯಾವುದೇ ಲಕ್ಷಣವಿಲ್ಲ, ಪರೀಕ್ಷೆ ಮೂಲಕವೇ ಇದರ ಪತ್ತೆ ಸಾಧ್ಯ. ಸೋಡಿಯಂ, ಚಾಯ್ ಅಥವಾ ಕೆಫಿನ್ ಸೇವನೆ ನಿಯಂತ್ರಣ ಮಾಡುವ ಮೂಲಕ ರಕ್ತದೊತ್ತಡ ನಿಯಂತ್ರಣ ಮಾಡಬಹುದು. ಜೊತೆಗೆ ಜೀವನಶೈಲಿಯು ಸದಾ ಚಟುವಟಿಕೆಯಿಂದ ಇರುವಂತೆ ನೋಡಿಕೊಳ್ಳಬೇಕು.
ಪ್ರಾಶಸ್ತ್ಯದ ಮಹತ್ವ: ವಯಸ್ಸಾದಂತೆ ನಾವು ತಿನ್ನುವ ಆಹಾರ ಆರೋಗ್ಯ ಮೇಲೆ ಪ್ರಯೋಜ ಬೀರುತ್ತದೆ. ಈ ಹಿನ್ನೆಲೆ ನಾವು ತಿನ್ನುವ ಆಹಾರದ ಬಗ್ಗೆ ಕಾಳಹಿ ವಹಿಸಬೇಕು.
ಪ್ರೋಟಿನ್: ಎಲ್ಲಾ ವಯೋಮಾನದವರಿಗೆ ಇದು ಅಗತ್ಯವಾಗಿದೆ. ಸ್ನಾಯುಗಳ ಬೆಳವಣಿಗೆ, ಶಕ್ತಿ ಹೆಚ್ಚಳಕ್ಕೆ ಇದು ಅವಶ್ಯ. ಮಾಂಸ, ಬೀನ್ಸ್, ಡೈರಿ ಉತ್ಪನ್ನ, ಮೀನು, ಒಣಹಣ್ಣು, ಬೀಜಗಳು ಸೇರಿದಂತೆ ಅನೇಕ ಮೂಲಗಳಿಂದ ಇವುಗಳನ್ನು ಪಡೆಯಬಹುದಾಗಿದೆ.
ಫೈಬರ್ ಅಂಶ: ಹಣ್ಣು, ತರಕಾರಿ, ಬೀನ್ಸ್, ಧಾನ್ಯಗಳು ಕಡಿಮೆ ಕೊಲೆಸ್ಟ್ರಾಲ್ ಜೊತೆಗೆ ದೇಹ ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಚನ್ನಾ, ಮಸಾಲಾ, ಓಟ್ಸ್ನಲ್ಲಿ ಹೆಚ್ಚಿನ ಫೈಬರ್ ಅಂಶವಿದೆ.
ಕ್ಯಾಲ್ಸಿಯಂ: ವಯಸ್ಸಾದಂತೆ ಕೆಲವು ಮೂಳೆಗಳು ಕ್ಯಾಲ್ಸಿಯಂ ಅಂಶ ಕಳೆದುಕೊಳ್ಳುತ್ತವೆ. ಮೂಳೆಗಳ ಅಭಿವೃದ್ಧಿಗೆ ಹಾಲು, ದಹಿ ಮತ್ತು ಚೀಸ್ ಉತ್ತಮವಾಗಿದೆ. ರಾಗಿ ದೋಸ ಮತ್ತು ಚಟ್ನಿ ಪನ್ನೀರ್ ಬಳಕೆಗೆ ಮುಂದಾಗಬಹುದು. ಭಾರತೀಯ ಆಹಾರಗಳು ಹೆಚ್ಚಿನ ಪ್ರೋಟಿನ್ ಅಂಶ ಹೊಂದಿವೆ.
ವಿಟಮಿನ್ ಡಿ: ಆರೋಗ್ಯಯುತ ಮೂಳೆ ಬೆಳವಣಿಗೆಗೆ ಇದು ಅಗತ್ಯವಾಗಿದೆ. ನೈಸರ್ಗಿಕವಾಗಿ ಸೂರ್ಯನಿಂದ ಇದನ್ನು ಪಡೆಯಬಹುದು. ಫ್ಯಾಟಿ ಫಿಶ್, ಮೊಟ್ಟೆ ಮತ್ತು ವಿಟಮಿನ್ ಡಿಯುಕ್ತ ಡೈರಿ ಉತ್ಪನ್ನ ಮಾಡಬಹುದು.
ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಅನೇಕ ಮೈಲಿಗಲ್ಲುಗಳು ಸಾಗುತ್ತವೆ. ಆರೋಗ್ಯವು ಪ್ರತಿ ಹಂತದಲ್ಲೂ ಸ್ಥಳೀಯವಾಗಿ ಮತ್ತು ಸಾವಯವ ಮೂಲದ ಆಹಾರಗಳ ಮೂಲಕ ತಯಾರಿಸಲಾದ ನಿಮ್ಮ ಸಾಂಸ್ಕೃತಿಕ ಆಹಾರಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ವಯಸ್ಸಾದರೂ ಆರೋಗ್ಯವಾಗಿರಬಹುದು.
ಇದನ್ನೂ ಓದಿ: ಬೇಸಿಗೆಗಂತಲೇ ಹೇಳಿ ಮಾಡಿಸಿದ ಕೋಲ್ಡ್ ಸೂಪ್ ರೆಸಿಪಿ ನಿಮಗಾಗಿ..