ETV Bharat / sukhibhava

33 ಮಿಲಿಯನ್‌ ಡೋಸ್ ಕೋವಿಡ್ ಲಸಿಕೆ ರಫ್ತು; ವ್ಯಾಕ್ಸಿನ್ ಹಬ್ ಆಗಿ ಹೊರಹೊಮ್ಮಿದ ಭಾರತ

author img

By

Published : Mar 8, 2021, 9:09 PM IST

ಇದುವರೆಗೆ ವಿವಿಧ ದೇಶಗಳಿಗೆ 33 ಮಿಲಿಯನ್ ಡೋಸ್ ಕೋವಿಡ್ ಲಸಿಕೆ ರಫ್ತು ಮಾಡುವ ಮೂಲಕ ಕೋವಿಡ್ ಲಸಿಕೆ ರಫ್ತು ಮಾಡಿದ ಜಾಗತಿಕ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಮುಂಚೂಣಿಯಲ್ಲಿದೆ.

India exported 33 million shots under Covax system
ಭಾರತದಿಂದ 33 ಮಿಲಿಯನ್ ಕೋವಿಡ್ ಲಸಿಕೆ ರಫ್ತು

ನವದೆಹಲಿ : ಗವಿ-ಕೋವ್ಯಾಕ್ಸ್ ವ್ಯವಸ್ಥೆ ಮೂಲಕ ದೇಶದಲ್ಲಿ ವಿತರಣೆ ಮಾಡಿದ್ದಕ್ಕಿಂತ 3 ಪಟ್ಟು ಹೆಚ್ಚು, ಅಂದರೆ 33 ಮಿಲಿಯನ್ ಡೋಸ್​ ಕೋವಿಡ್ ಲಸಿಕೆ ವಿದೇಶಗಳಿಗೆ ರಫ್ತು ಮಾಡುವ ಮೂಲಕ ಭಾರತ ಕೋವಿಡ್​ ಲಸಿಕೆಯ ಹಬ್​ ಆಗಿ ಹೊರ ಹೊಮ್ಮಿದೆ ಎಂದು ಭಾರತದ ಆರೋಗ್ಯ ತಜ್ಞರು ಹೇಳಿದ್ದಾರೆ.

ಗವಿ-ಕೋವ್ಯಾಕ್ಸ್ ಒಂದು ಲಸಿಕೆ ಮೈತ್ರಿಯಾಗಿದ್ದು, ಇದು ಬಡ ದೇಶಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಸರ್ಕಾರ ಮತ್ತು ಖಾಸಗಿ ಜಾಗತಿಕ ಆರೋಗ್ಯ ಸಹಭಾಗಿತ್ವವಾಗಿದೆ. ಭಾರತವು ಈಗಾಗಲೇ 33 ಮಿಲಿಯನ್ ಡೋಸ್​ ಕೋವಿಡ್​ ಲಸಿಕೆ ರಫ್ತು ಮಾಡಿದೆ. ಇದು ದೇಶದೊಳಗೆ ವಿತರಣೆ ಮಾಡಿದ ಲಸಿಕೆಯ ಪ್ರಮಾಣಕ್ಕಿಂತ 3 ಪಟ್ಟು ಹೆಚ್ಚಾಗಿದೆ. ಇದು ಕೋವಿಡ್ ವಿರುದ್ಧ ಹೋರಾಡುವ ಭಾರತದ ಬದ್ದತೆಯನ್ನು ತೋರಿಸುತ್ತದೆ ಎಂದು ಹಿರಿಯ ಆರೋಗ್ಯ ತಜ್ಞ ಮತ್ತು ಏಷ್ಯನ್ ಸೊಸೈಟಿ ಫಾರ್ ಎಮರ್ಜೆನ್ಸಿ ಮೆಡಿಸಿನ್ ಅಧ್ಯಕ್ಷ ಡಾ. ತಮೋರಿಶ್ ಕೋಲ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಮೊದಲ ಬಾರಿಗೆ ಫೆಬ್ರವರಿ 2 ರಂದು ಕೋವ್ಯಾಕ್ಸ್ ಕಾರ್ಯಕ್ರಮದಡಿ ಸೆರಂ ಇನ್ಸ್​ಟ್ಯೂಟ್​ ಆಫ್ ಇಂಡಿಯಾ (ಎಸ್‌ಐಐ) ಯಿಂದ ಘಾನಾ ದೇಶವು 6 ಲಕ್ಷ ಡೋಸ್ ಕೋವಿಡ್​ ಲಸಿಕೆ ಪಡೆಯಿತು. 2021 ರಲ್ಲಿ ಒಟ್ಟು 2 ಬಿಲಿಯನ್ ಡೋಸ್ ಲಸಿಕೆ ರಫ್ತು ಮಾಡುವ ಗುರಿಯನ್ನು ಭಾರತ ಹೊಂದಿದೆ.

ಭಾರತವು ಕೋವಿಡ್​ ವಿರುದ್ಧ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಜಾಗತಿಕ ನಾಯಕರು ಲಸಿಕೆಯ ಈಕ್ವಿಟಿಯನ್ನು ನೋಡಬೇಕು, ಇದು ಕೋವಿಡ್​ ವಿರುದ್ಧದ ಹೋರಾಟದಲ್ಲಿ ಅತ್ಯಂತ ಪ್ರಮುಖವಾಗಿದೆ ಎಂದು ಡಾ. ಕೋಲ್ ಹೇಳಿದ್ದಾರೆ.

ಇದನ್ನೂ ಓದಿ: ಸಂಸತ್, ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿಗೆ ರಾಜ್ಯಸಭೆಯಲ್ಲಿ ಒತ್ತಾಯ

ಭಾರತದಿಂದ 5 ಲಕ್ಷದ 4 ಸಾವಿರ ಡೋಸ್​ ಲಸಿಕೆಯು ಮತ್ತೊಂದು ರಾಷ್ಟ್ರ ಐವರಿ ಕೋಸ್ಟ್​ಗೆ ಈಗಾಗಲೇ ತಲುಪಿದೆ. ಕೋಟ್ಯಂತರ ಜೀವಗಳನ್ನು ಉಳಿಸುವ ಸಾಮರ್ಥ್ಯವನ್ನು ಹೊಂದಿರುವ ಲಸಿಕೆಗಳು ಪ್ರಪಂಚದಾದ್ಯಂತ ಜನರನ್ನು ಸಮನಾಗಿ ತಲುಪುವಂತೆ ನೋಡಿಕೊಳ್ಳಲು ಅನೇಕ ಪಾಲುದಾರರು ಮೊದಲ ಬಾರಿಗೆ ಒಂದಾಗಿದ್ದಾರೆ. ಕೋವಿಡ್​ ರೋಗವನ್ನು ಸೋಲಿಸುವ ಜಾಗತಿಕ ಪ್ರಯತ್ನದಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ. ಜೀವ ಉಳಿಸುವ ಲಸಿಕೆಗಳು ಜಾಗತಿಕವಾಗಿ ಸಮಾನವಾಗಿ ಹಂಚಿಕೆಯಾಗುವುತ್ತಿರುವುದು ಒಂದು ಉತ್ತಮ ಬೆಳವಣಿಗೆ ಎಂದು ಭಾರತದ ಯುನಿಸೆಫ್ ಪ್ರತಿನಿಧಿ ಡಾ. ಯಾಸ್ಮಿನ್ ಅಲಿ ಹಕ್ ಈಟಿವಿ ಭಾರತ್​ಗೆ ತಿಳಿಸಿದ್ದಾರೆ.

ಸಾಂಕ್ರಾಮಿಕ ಸನ್ನದ್ಧತೆ ನಾವೀನ್ಯತೆಗಳ ಒಕ್ಕೂಟ (ಸಿಇಪಿಐ) ಮತ್ತು ಡಬ್ಲ್ಯುಹೆಚ್‌ಒ, ಯುನಿಸೆಫ್ ಜೊತೆಯಾಗಿ ಗವಿ-ಕೋವ್ಯಾಕ್ಸ್ ವ್ಯವಸ್ಥೆ ಮೂಲಕ ಮಾರ್ಚ್ ವೇಳೆಗೆ 80 ಮಿಲಿಯನ್ ಮತ್ತು ವರ್ಷಾಂತ್ಯದ ವೇಳೆಗೆ ಕನಿಷ್ಠ 2 ಬಿಲಿಯನ್ ಡೋಸ್ ಅನುಮೋದಿತ ಕೋವಿಡ್​ -19 ಲಸಿಕೆ ಒದಗಿಸುವ ಗುರಿ ಹೊಂದಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.