ETV Bharat / sukhibhava

ಹತ್ತು - ಹಲವು ಬೆನಿಫಿಟ್ಸ್​: ನಿಮ್ಮ ದಿನಚರಿಯ ಒಂದು ಭಾಗವಾಗಲಿ ವ್ಯಾಯಾಮ

author img

By

Published : Aug 16, 2021, 8:29 PM IST

ಸಾಮಾನ್ಯವಾಗಿ, ಜನರು ವ್ಯಾಯಾಮವನ್ನು ಅಗತ್ಯವಾದ ದಿನನಿತ್ಯದ ಅಭ್ಯಾಸ ಎಂದು ಪರಿಗಣಿಸುವ ಬದಲು ಪ್ರವೃತ್ತಿಯ ಒಂದು ಭಾಗ ಎಂದು ಪರಿಗಣಿಸುತ್ತಾರೆ. ಅದು ತಪ್ಪು. ಒಂದು ಅಧ್ಯಯನದ ಪ್ರಕಾರ, ಸುಮಾರು 64 ಪ್ರತಿಶತ ಭಾರತೀಯರು ವ್ಯಾಯಾಮ ಮಾಡುವುದೇ ಇಲ್ಲ.

fitness
ವ್ಯಾಯಾಮ

ಆರೋಗ್ಯಕರ ದೇಹ ಮತ್ತು ಆರೋಗ್ಯಕರ ಮನಸ್ಸಿಗೆ, ಎಲ್ಲ ವಯಸ್ಸಿನ ಪುರುಷರು ಮತ್ತು ಮಹಿಳೆಯರಿಗೆ ನಿಯಮಿತವಾದ ವ್ಯಾಯಾಮ ಅಗತ್ಯ. ಆದರೆ, ಒಬ್ಬ ವ್ಯಕ್ತಿಯು 1-2 ಗಂಟೆಗಳ ಕಾಲ ವ್ಯಾಯಾಮ ಮಾಡುವ ಅಗತ್ಯವಿದೆ ಎಂದಲ್ಲ. ಸ್ನಾಯುವಿನ ಹಿಗ್ಗಿಸುವಿಕೆಯನ್ನು ಖಚಿತಪಡಿಸುವ ಪ್ರತಿದಿನದ ಲಘು ವ್ಯಾಯಾಮಗಳು ತುಂಬಾ ಪ್ರಯೋಜನಕಾರಿ.

ನಮ್ಮ ದಿನಚರಿಯಲ್ಲಿ ಯಾವ ವ್ಯಾಯಾಮಗಳನ್ನು ಸೇರಿಸಬಹುದು ಮತ್ತು ಇತರ ಕೆಲವು ಅಗತ್ಯ ಅಂಶಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ಈಟಿವಿ ಭಾರತ್ ಸುಖೀಭವ ತಂಡವು ಫಿಟ್ನೆಸ್ ತಜ್ಞೆ ಮೀನು ವರ್ಮಾ ಅವರೊಂದಿಗೆ ಚರ್ಚಿಸಿದೆ.

ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಆಗುವ ಲಾಭಗಳು:

  • ವ್ಯಾಯಾಮವು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.
  • ಸ್ನಾಯುಗಳು ಆರೋಗ್ಯವಾಗಿರುತ್ತವೆ ಹಾಗೂ ದೇಹದಲ್ಲಿ ರಕ್ತ ಪರಿಚಲನೆ ವೃದ್ಧಿಸುತ್ತದೆ
  • ನಿಯಮಿತ ವ್ಯಾಯಾಮವು ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸುತ್ತದೆ.
  • ನಿಯಮಿತವಾದ ವ್ಯಾಯಾಮವು ಚಯಾಪಚಯ ಕ್ರಿಯೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ, ಇದು ತೂಕವನ್ನು ನಿಯಂತ್ರಿಸಲು ಅಗತ್ಯವಾಗಿರುತ್ತದೆ. ಇದು ಕ್ಯಾಲೊರಿಗಳನ್ನು ವೇಗವಾಗಿ ಬರ್ನ್​ ಮಾಡುತ್ತದೆ ಮತ್ತು ತೂಕವನ್ನು ನಿಯಂತ್ರಣದಲ್ಲಿರಿಸುತ್ತದೆ.
  • ಒತ್ತಡ, ತಲೆನೋವು ಮತ್ತು ಖಿನ್ನತೆಯಂತಹ ಅನೇಕ ಸಮಸ್ಯೆಗಳನ್ನು ನಿಯಮಿತ ವ್ಯಾಯಾಮದಿಂದ ಕಡಿಮೆ ಮಾಡಬಹುದು ಅಥವಾ ಗುಣಪಡಿಸಬಹುದು.
  • ಬೆನ್ನು, ತೋಳು ಮತ್ತು ಕಾಲುಗಳಲ್ಲಿ ನೋವಿನ ಸಮಸ್ಯೆ ಇರುವವರಿಗೆ ಮತ್ತು ಯಾವಾಗಲೂ ವೀಕ್​ನೆಸ್​ನಂತ ಭಾವನೆ ಹೊಂದಿದವರಿಗೆ, ವ್ಯಾಯಾಮವು ಬಹಳ ಪ್ರಯೋಜನವನ್ನು ನೀಡುತ್ತದೆ.
  • ವ್ಯಾಯಾಮವು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಸಾಮಾನ್ಯಗೊಳಿಸುತ್ತದೆ. ನಿಯಮಿತ ವ್ಯಾಯಾಮ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಮಾಡುತ್ತದೆ ಮತ್ತು ಉತ್ತಮ ಕೊಲೆಸ್ಟ್ರಾಲ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಮೂಲಕ, ಹೃದಯದ ಆರೋಗ್ಯ ಕಾಪಾಡಿಕೊಳ್ಳಬಹುದು ಮತ್ತು ನಾವು ಹೆಚ್ಚು ಆಮ್ಲಜನಕವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ.

ಯಾವ ವ್ಯಾಯಾಮ ಉತ್ತಮ ಮತ್ತು ಯಾವಾಗ?

ಸಂಜೆಗಿಂತ ಬೆಳಗ್ಗೆ ವ್ಯಾಯಾಮ ಮಾಡುವುದು ಹೆಚ್ಚು ಪ್ರಯೋಜನಕಾರಿ ಎಂದು ಮೀನು ವರ್ಮಾ ಹೇಳುತ್ತಾರೆ. ಈ ಸಮಯದಲ್ಲಿ ವ್ಯಾಯಾಮ ಮಾಡುವುದು ದೇಹ ಮತ್ತು ಮನಸ್ಸು ಎರಡನ್ನೂ ಆರೋಗ್ಯವಾಗಿರಿಸುತ್ತದೆ ಮತ್ತು ಹೆಚ್ಚು ಆಕ್ಸಿಜನ್​​ ಅನ್ನು ತೆಗೆದುಕೊಳ್ಳಬಹುದು. ಸಾಧ್ಯವಾದರೆ, ವ್ಯಾಯಾಮಕ್ಕೆ ಬೆಳಗ್ಗೆ ಒಂದು ಸಮಯವನ್ನು ನಿಗದಿಪಡಿಸಬೇಕು. ಸೂರ್ಯೋದಯದ ಸಮಯದಲ್ಲಿ ಅಥವಾ ಅದಕ್ಕಿಂತ ಮುಂಚಿನ ಸಮಯವು ಉತ್ತಮವಾಗಿದೆ.

ಯಾವುದೇ ವ್ಯಾಯಾಮವನ್ನು ಪ್ರಾರಂಭಿಸುವ ಮೊದಲು, ಸರಿಯಾಗಿ ವ್ಯಾಯಾಮ ಮಾಡುವುದನ್ನು ಕಲಿಯಲು ಪರಿಣಿತ ಫಿಟ್ನೆಸ್ ತರಬೇತುದಾರರ ಸಹಾಯವನ್ನು ಪಡೆದುಕೊಳ್ಳಿ. ತಪ್ಪಾದ ರೀತಿಯಲ್ಲಿ ಮಾಡಿದ ವ್ಯಾಯಾಮಗಳು ನಿಮ್ಮ ದೇಹಕ್ಕೆ ಹಾನಿ ಮಾಡಬಹುದು. ವರ್ಕ್​ಔಟ್, ಯೋಗ, ಏರೋಬಿಕ್ಸ್, ಜುಂಬಾ, ಕ್ರೀಡೆ, ನೃತ್ಯ ಅಥವಾ ಜಿಮ್ ಇತ್ಯಾದಿಗಳು ವ್ಯಾಯಾಮದ ಹಲವು ರೂಪಗಳು. ಇವುಗಳಲ್ಲಿ ನೀವು ಮಾಡಲು ಇಷ್ಟಪಡುವುದನ್ನು ಆರಿಸಿಕೊಳ್ಳಿ.

ಕಚೇರಿಯಲ್ಲಿ ವರ್ಕ್​ಔಟ್​:

ಕೆಲಸಕ್ಕೆ ಹೋಗುವವರಿಗೆ ಸರಿಯಾದ ವ್ಯಾಯಾಮ ಅನುಸರಿಸುವುದು ಸುಲಭವಲ್ಲ. ಮತ್ತು ಕಚೇರಿಯಲ್ಲಿ ಹೆಚ್ಚು ಸಮಯ ಕುಳಿತುಕೊಂಡೇ ಇರುವುದರಿಂದ ಕಣ್ಣು, ಭುಜ, ಕುತ್ತಿಗೆ, ಬೆರಳುಗಳು, ಪಾದಗಳು ಮುಂತಾದ ದೇಹದ ವಿವಿಧ ಭಾಗಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ ಕೆಲವು ವಿಶೇಷ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು ಎಂದು ನಮ್ಮ ತಜ್ಞರಾದ ಮೀನು ವರ್ಮಾ ಹೇಳುತ್ತಾರೆ. ಇವು ವ್ಯಾಯಾಮದಷ್ಟೇ ಪರಿಣಾಮಕಾರಿ. ಅಂತಹ ಕೆಲವು ಅಭ್ಯಾಸಗಳು ಇಲ್ಲಿವೆ:

  • ಕಚೇರಿಗಳಲ್ಲಿ ಸಾಧ್ಯವಾದರೆ ಮೇಲಕ್ಕೆ ಮತ್ತು ಕೆಳಕ್ಕೆ ಹೋಗಲು ಲಿಫ್ಟ್‌ಗಳ ಬದಲು ಮೆಟ್ಟಿಲುಗಳನ್ನು ಬಳಸಿ.
  • ಕೆಲಸದ ಸಮಯದಲ್ಲಿ, ನೀವು ಕುರ್ಚಿಯ ಮೇಲೆ ಕುಳಿತಾಗ, ಹಿಮ್ಮಡಿಗಳನ್ನು ನೆಲದಿಂದ ಮೇಲೆತ್ತಲು ಕೆಲವು ಕ್ಷಣಗಳನ್ನು ಮೀಸಲಿಡಿ ಮತ್ತು ನಂತರ ನಿಧಾನವಾಗಿ ಅವುಗಳನ್ನು ನೆಲದ ಮೇಲೆ ಇರಿಸಿ. ಈ ಪ್ರಕ್ರಿಯೆಯನ್ನು 8-10 ಬಾರಿ ಪುನರಾವರ್ತಿಸಬಹುದು ಮತ್ತು ಈ ವ್ಯಾಯಾಮವನ್ನು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಮಾಡಬಹುದು.
  • ಕುರ್ಚಿಯಲ್ಲಿ ಕುಳಿತಾಗ, ನಿಮ್ಮ ಭುಜಗಳನ್ನು ಸಾಧ್ಯವಾದಷ್ಟು ಎತ್ತರಕ್ಕೆ ಏರಿಸಿ. ಇದರ ಹೊರತಾಗಿ, ಭುಜಗಳನ್ನು ಮೊದಲು ಮುಂದಕ್ಕೆ ಮತ್ತು ನಂತರ ಪ್ರದಕ್ಷಿಣಾಕಾರವಾಗಿ ಹಿಂದಕ್ಕೆ ತಿರುಗಿಸಿ.
  • ನಿಮಗೆ ಸಮಯ ಸಿಕ್ಕಾಗ ಮತ್ತು ನೀವು ಕುರ್ಚಿಯ ಮೇಲೆ ಕುಳಿತಾಗ, ಮೊದಲು ನೇರವಾಗಿ ನಿಂತು ನಂತರ ಸೊಂಟವನ್ನು ನೇರವಾಗಿ ಇಟ್ಟುಕೊಂಡು ಕುಳಿತುಕೊಳ್ಳಿ. ಈ ವ್ಯಾಯಾಮದಲ್ಲಿ ಸೊಂಟವು ನೇರವಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಈ ವ್ಯಾಯಾಮವನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ 10-15 ಬಾರಿ ಮತ್ತು ದಿನಕ್ಕೆ 1-3 ಬಾರಿ ಪುನರಾವರ್ತಿಸಬಹುದು.
  • ಕುರ್ಚಿಯ ಮೇಲೆ ಕುಳಿತಾಗ, ನಿಮ್ಮ ಕಾಲ್ಬೆರಳುಗಳನ್ನು ಬಿಗಿಗೊಳಿಸಿ ಮತ್ತು ಸಡಿಲಗೊಳಿಸಿ. ನಿಮ್ಮ ಕೈಗಳಿಗೆ ವಿಶ್ರಾಂತಿ ನೀಡಲು ನಿಮ್ಮ ಮುಷ್ಟಿಯಿಂದ ಅದೇ ರೀತಿ ಮಾಡಿ.
  • ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಲು, ಕಣ್ಣುಗಳನ್ನು 360 ಡಿಗ್ರಿ ತಿರುಗಿಸಿ, ನಿಮ್ಮ ಕುತ್ತಿಗೆಯನ್ನು ನೇರವಾಗಿ ಇರಿಸಿ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಇದನ್ನು ದಿನಕ್ಕೆ 2-3 ಬಾರಿ ಪುನರಾವರ್ತಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.