ಚಳಿಗಾಲದಲ್ಲಿ ಚರ್ಮ ಒಣಗುವುದು ಮತ್ತು ಜೀವಾಂಶ ಕಳೆದುಕೊಳ್ಳುವುದು ಸಾಮಾನ್ಯ. ಈ ಸಮಸ್ಯೆ ಅನೇಕರನ್ನು ಕಾಡುತ್ತದೆ. ಕೆಲವರಲ್ಲಿ ಈ ಸಮಸ್ಯೆಯಿಂದಾಗಿ ಚರ್ಮ ಕಿತ್ತು, ಒಣಗಿದಂತೆ ಆಗುವುದು ಸಾಮಾನ್ಯ. ಅನೇಕರಲ್ಲಿ ಈ ರೀತಿ ಚರ್ಮದ ಸಿಪ್ಪೆ ಸುಲಿಯುವ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ರೀತಿ ಚರ್ಮ ಕಿತ್ತು ಬರುವುದು ನೋವುದಾಯಕವಾಗಿದ್ದು, ಯಾತನಾಮಯ ಎಂದರೂ ತಪ್ಪಲ್ಲ. ಚಳಿಗಾಲದಲ್ಲಿ ಕಾಡುವ ಇಂತಹ ಸಮಸ್ಯೆಗೆ ಅನೇಕ ನೈಸರ್ಗಿಕ ಮದ್ದುಗಳಿದ್ದು, ಅವುಗಳನ್ನು ಪಾಲಿಸುವುದು ಅವಶ್ಯವಾಗಿದೆ.
ಆಲೋವೆರಾ: ತ್ವಚೆಯನ್ನು ತಣ್ಣಗೆ ಮಾಡಿಸುವಲ್ಲಿ ಆಲೋವೆರಾ ಪ್ರಮುಖ ಪಾತ್ರವಹಿಸುತ್ತದೆ. ಇದು ಉರಿಯೂತದ ತುರಿಕೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ತಾಜಾತನದಿಂದ ಕೂಡಿದ ಲೋಳೆರಸವನ್ನು ಚರ್ಮದ ಸಮಸ್ಯೆ ಇದ್ದ ಕಡೆ ಹಚ್ಚುವುದರಿಂದ ನೋವು ಮತ್ತು ಉರಿ ಕಡಿಮೆ ಆಗುತ್ತದೆ. ಇದು ಫ್ರಿಡ್ಜ್ನ ರೀತಿ ತ್ವಚೆಯನ್ನು ತಣ್ಣಗೆ ಮಾಡುತ್ತದೆ.
ಐಸ್: ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಮಾಡುವುದು ಹಿತ ಅನುಭವ ನೀಡುತ್ತದೆ. ಆದರೆ ಇದರಿಂದ ಚರ್ಮವೂ ಸಿಪ್ಪೆ ಸುಲಿದ ರೀತಿ, ಬಿರಿದ ರೀತಿ ಕಾಡುತ್ತದೆ. ಈ ಹಿನ್ನೆಲೆ ಚಳಿಗಾಲದಲ್ಲಿ ಅತಿಯಾದ ಬಿಸಿ ನೀರಿನ ಬದಲಾಗಿ ಅಲ್ಪ ಬೆಚ್ಚಗಿನ ನೀರನ್ನು ಬಳಕೆ ಮಾಡುವುದು ಅಗತ್ಯ. ಅನುಭವಿಸುತ್ತಿರುವ ಚರ್ಮದ ಪ್ರದೇಶದಲ್ಲಿ ಐಸ್ಗಳನ್ನು ಇಡುವುದರಿಂದ ಅಲ್ಲಿ ಆಗುವ ಊರಿಯುತ ಕಡಿಮೆಯಾಗುತ್ತದೆ.
ಆಲಿವ್ ಆಯಿಲ್: ಬಿರಿತದ ತ್ವಚೆಗೆ ಪ್ರಮುಖ ಕಾರಣ, ಮಾಶ್ಚರೈಸರ್ ಲಭ್ಯತೆ ಇಲ್ಲದಿರುವುದು. ಚರ್ಮಕ್ಕೆ ಅಗತ್ಯ ಮಾಶ್ಚರೈಸರ್ ಲಭ್ಯವಾಗಬೇಕು ಎಂದರೆ ಆಲಿವ್ ಎಣ್ಣೆಯನ್ನು ತೆಳುವಾಗಿ ಹಚ್ಚಬಹುದು. ಇದರಿಂದ ಚರ್ಮದ ಅನೇಕ ಸಮಸ್ಯೆ ಕಡಿಮೆ ಆಗುತ್ತದೆ.
ಹಾಲು: ಹಾಲಿನಲ್ಲಿ ತೆಳುವಾದ ಬಟ್ಟೆಯನ್ನು ನೆನೆಸಿ ಸಮಸ್ಯೆ ಇರುವ ಜಾಗದಲ್ಲಿ ಹಚ್ಚಿ. ಒಂದು ಗಂಟೆ ಬಳಿಕ ಆ ಭಾಗವನ್ನು ತಣ್ಣೀರಿನಿಂದ ತೊಳೆಯುವುದರಿಂದ ಕೂಡ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹಾಲಿನಲ್ಲಿನ ಲ್ಯಾಕ್ಟಿಕ್ ಆಸಿಡ್ ತ್ವಚೆಯ ಕೋಶವನ್ನು ಒಳಗಿನಿಂದ ಶುದ್ಧ ಮಾಡಿ, ನೈಸರ್ಗಿಕವಾಗಿ ಮಾಶ್ಚರೈಸರ್ ಮಾಡುತ್ತದೆ.
ಟೀ ಟ್ರಿ ಆಯಿಲ್: ತೆಂಗಿನ ಎಣ್ಣೆ ಮತ್ತು ಜೊಜೊಬಾ ಎಣ್ಣೆಯನ್ನು ಟೀ ಟ್ರಿ ಎಣ್ಣೆಯೊಂದಿಗೆ ಬೆರೆಸಿ ಹಚ್ಚುವುದರಿಂದ ಕೂಡ ಪರಿಹಾರದ ಮಾರ್ಗವಾಗಿದೆ. ತೆಂಗಿನ ಎಣ್ಣೆ ಮತ್ತು ಜೊಜೊಬಾ ಎಣ್ಣೆ ತ್ವಚೆಯನ್ನು ಮಾಶ್ಚರೈಸರ್ ಮಾಡಿದರೆ, ಟೀ ಟ್ರಿ ಎಣ್ಣೆಯಲ್ಲಿನ ಆ್ಯಂಟಿ ಮೈಕ್ರೊಬಯಲ್ ಅಂಶಗಳು ಸೂಕ್ಷ್ಮಾಣುಗಳನ್ನು ಕೊಂದು ಹೊಸ ತ್ವಚೆ ನಿರ್ಮಾಣಕ್ಕೆ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಚಳಿಗಾಲದಲ್ಲಿ ಅಡುಗೆ ಮನೆಯೇ ಔಷಧಾಲಯ; ಕೆಮ್ಮು- ನೆಗಡಿಗೆ ಅಲ್ಲೇ ಇದೆ ಮದ್ದು