ನವದೆಹಲಿ: ಸದ್ಯ ಈ ರಕ್ತದೊತ್ತಡ ಸಮಸ್ಯೆ ಭಾರತದ ಯುವ ಮತ್ತು ವಯಸ್ಕರಲ್ಲಿ ಹೆಚ್ಚುತ್ತಿದೆ. ಈ ಅಧಿಕ ರಕ್ತದೊತ್ತಡವನ್ನು ಯಾವುದೇ ಗಮನಾರ್ಹ ಲಕ್ಷಣವಿಲ್ಲದೇ ಪತ್ತೆ ಮಾಡುವುದು ಕಷ್ಟಸಾಧ್ಯ. ಇದೇ ಕಾರಣಕ್ಕೆ ಇದನ್ನು ಸೈಲೆಂಟ್ ಕಿಲ್ಲರ್ ಎನ್ನಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಅಂದಾಜಿಸಿದಂತೆ ನಾಲ್ಕರಲ್ಲಿ ಒಬ್ಬ ವಯಸ್ಕರು ಈ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಆದರೆ, ಕೇವಲ ಶೇ 12ರಷ್ಟು ಮಂದಿ ಮಾತ್ರ ಈ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ದಾರೆ.
ಜೂನ್ನಲ್ಲಿ ಐಸಿಎಂಆರ್- ಭಾರತೀಯ ಮಧುಮೇಹ ಅಧ್ಯಯನದಲ್ಲಿ, ಭಾರದಲ್ಲಿ 315 ಮಿಲಿಯನ್ ಮಂದಿಯಲ್ಲಿ ಈ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಅಧ್ಯಯನದಲ್ಲಿ 1,13,043 ಮಂದಿಯನ್ನು ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಭಾರತದಾದ್ಯಂತ ನಗರ ಪ್ರದೇಶದಲ್ಲಿ ಈ ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚುತ್ತಿದೆ ಎಂದು ತಿಳಿಸಲಾಗಿದೆ.
ಬಿಪಿ ಎಂಬುದನ್ನು ಸೈಲೆಂಟ್ ಕಿಲ್ಲರ್ ಎಂಬುದಕ್ಕೆ ಪ್ರಮುಖ ಕಾರಣ ಎಂದರೆ, ಬಹುತೇಕ ಮಂದಿಗೆ ತಮ್ಮಲ್ಲಿ ಬಿಪಿ ಇದ್ದರೂ ಈ ಬಗ್ಗೆ ಅವರಿಗೆ ಅರಿವು ಇರುವುದಿಲ್ಲ. ಯಾವುದಾದರೂ ಸಮಸ್ಯೆ ಎದುರಿಸಿ, ಇದು ಬೆಳಕಿಗೆ ಬಂದಾಗ ಇದು ತಿಳಿದು ಬರುತ್ತದೆ ಎಂದು ನೋಯ್ಡಾದ ಫೋರ್ಟಿಸ್ ಆಸ್ಪತ್ರೆಯ ಹೃದಯತಜ್ಞರಾದ ಡಾ ಸಂಜೀವ್ ಗೆರಾ ತಿಳಿಸಿದ್ದಾರೆ. ಬಿಪಿ ಸಮಸ್ಯೆ ಕುರಿತಾಗಿ ಜನರು ಯಾವುದೆ ರೀತಿಯ ಲಕ್ಷಣವನ್ನು ಎದುರಿಸುವುದಿಲ್ಲ. ಅಥವಾ ಕೆಲವು ಬಾರಿ ಇದು ಸಾಧಾರಣವಾಗಿರಬಹುದು. ಇದರ ಫಲಿತಾಂಶವಾಗಿ ಜನರು ಅಧಿಕ ರಕ್ತದೊತ್ತ ಸಮಸ್ಯೆ ಸವಾಲುಗಳನ್ನು ತಡೆಯುವ ಸಂಬಂಧ ಯಾವುದೇ ಅಗತ್ಯ ಹೆಜ್ಜೆಗಳನ್ನು ಇಡುವುದಿಲ್ಲ.
ಹೃದಯಾಘಾತಕ್ಕೂ ಕಾರಣ: ಅನಿಯಂತ್ರಿತ ರಕ್ತದೊತ್ತಡವನ್ನು ನಿರ್ವಹಿಸುವುದು ದೊಡ್ಡ ಅಪಾಯವಾಗಿದೆ. ಇದು ಹೃದಯಾಘಾತ ಅಥವಾ ಪಾರ್ಶ್ವವಾಯುವಿನಂತಹ ಅಪಾಯವನ್ನು ತರುತ್ತದೆ. ಅಲ್ಲದೇ ಭಾರತದಲ್ಲಿ ಮೂರನೇ ಒಂದು ಸಾವಿಗೆ ಕಾರಣವಾಗಿದೆ. ಅಧಿಕ ಬಿಪಿ ಯಾವುದೇ ಲಕ್ಷಣ ತೋರದ ಹಿನ್ನೆಲೆ ಇದನ್ನು ಪತ್ತೆ ಮಾಡುವುದು, ಇದರ ಸಂಕೀರ್ಣತೆ ಕುರಿತು ತಿಳಿಯುವುದು ಕಷ್ಟವಾಗುತ್ತದೆ. ಬಿಪಿ ನಿಧಾನವಾಗಿ ಬೆಳವಣಿಗೆ ಆಗುವುದರ ಜೊತೆಗೆ ಇದು ನಮ್ಮ ಹೃದಯ ಮತ್ತು ಅಂಗಾಂಗಗಳಿಗೆ ಹಾನಿ ಮಾಡುತ್ತದೆ ಎಂದು ಗುರುಗ್ರಾಮದ ಹೃದಯ ತಜ್ಞರಾಗಿರುವ ಡಾ ದೀಕ್ಷಿತ್ ಗಾರ್ಗ್ ತಿಳಿಸಿದ್ದಾರೆ.
ರಕ್ತದೊತ್ತಡ ಅಭಿವೃದ್ಧಿಯು ಹೃದಯದ ಸ್ನಾಯುಗಳು ಮತ್ತು ಅದರ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಬಹುದು. ಇದರ ಕಾರ್ಯಾಚರಣೆ ತಗ್ಗುವ ಹಿನ್ನೆಲೆ ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದು ಡಾ ಗಾರ್ಗ್ ತಿಳಿಸಿದ್ದಾರೆ.
ಬಿಪಿಗೆ ಕಾರಣವಾಗುವ ಅಂಶಗಳು: ಅಧಿಕ ಪ್ರಮಾಣದ ಉಪ್ಪು ಸೇವನೆ ಅಧಿಕ ರಕ್ತದೊತ್ತಡಕ್ಕೆ ಬೆಳವಣಿಗೆಗೆ ಪ್ರಮುಖ ಅಂಶವಾಗಿದೆ. ಆದರೆ, ಇದೊಂದೇ ಪ್ರಮುಖ ಕಾರಣವಲ್ಲ. ಉಪ್ಪಿನಲ್ಲಿರುವ ಸೋಡಿಯಂ ಅನ್ನು ಹೆಚ್ಚು ಸೇವನೆ ಮಾಡುವುದರೊಂದ ರಕ್ತದ ಮೌಲ್ಯವನ್ನು ಹೆಚ್ಚಿಸಿ, ಇದು ರಕ್ತನಾಳದ ಗೋಡೆಗಳ ಮೇಲೆ ಅಧಿಕ ಒತ್ತಡ ಬೀರುವಂತೆ ಮಾಡುತ್ತದೆ. ಇದರಿಂದ ರಕ್ತದೊತ್ತಡ ಹೆಚ್ಚುತ್ತದೆ. ಮತ್ತಿತ್ತರ ಕಾರಣ ಎಂದರೆ, ಅನುವಂಶಿಕತೆ, ಸ್ಥೂಲಕಾಯ, ಕಡಿಮೆ ದೈಹಿಕ ಚಟುವಟಿಕೆ, ಆಲ್ಕೋಹಾಲ್ ಸೇವನೆ ಮತ್ತು ಒತ್ತಡಗಳು ಇದರ ಬೆಳವಣಿಗೆ ಕಾರಣವಾಗಿದೆ.
ಸ್ಥೂಲಕಾಯದ ದರಗಳು ಹೆಚ್ಚಾಗುತ್ತಿದ್ದು, ಇದು ಕೂಡ ಅಧಿಕ ರಕ್ತದೊತ್ತಡದ ಅಪಾಯಕ್ಕೆ ಕಾರಣವಾಗಿದೆ. ಇದರ ಬಗ್ಗೆ ಹೆಚ್ಚಿನ ಅರಿವು ಇಲ್ಲದಿರುವುದರಿಂದ ಇದಕ್ಕೆ ವೈದ್ಯಕೀಯ ಕಾಳಜಿ ಸೀಮಿತ ಅಥವಾ ಕೊರತೆಯಾಗಬಹುದು. ಭಾರತದಲ್ಲಿ ಈ ಬಗ್ಗೆ ಹೆಚ್ಚಿನ ಅರಿವು ಅಗತ್ಯವಾಗಿದೆ, ಜೀವನಶೈಲಿಯ ನಿರ್ವಹಣೆ, ಉತ್ತಮ ಆರೋಗ್ಯ ಸೇವೆ ಲಭ್ಯತೆ ಮತ್ತು ಜಾಗೃತಿ ಆಂದೋಲನಗಳ ಮೂಲಕ ಈ ಬಗ್ಗೆ ಜನರಿಗೆ ತಿಳಿಸಬೇಕಿದೆ.
ಈ ಮಧ್ಯೆ ಭಾರತವೂ 2025ರ ಹೊತ್ತಿಗೆ ಶೇ 25ರಷ್ಟು ಅಧಿಕ ರಕ್ತದೊತ್ತಡ ತಡೆಯುವ ಗುರಿಯನ್ನು ಹೊಂದಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ, ಇಂಡಿಯಾ ಹೈಪರ್ಟೆನ್ಷನ್ ಕಂಟ್ರೊನ್ ಇನ್ಷಿಯೆಟಿವ್ (ಐಎಚ್ಸಿಐ) ಅನ್ನು ನವೆಂಬರ್ 2017ರಲ್ಲಿ ಜಾರಿಗೆ ತಂದಿದೆ. ಇದನ್ನು 23 ರಾಜ್ಯದ 138 ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ. ಸರ್ಕಾರದ ಆರೋಗ್ಯ ಸೌಲಭ್ಯದ ಮೂಲಕ 34 ಲಕ್ಷಕ್ಕೂ ಅಧಿಕ ಮಂದು ರಕ್ತದೊತ್ತಡದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಧಿಕ ರಕ್ತದೊತ್ತಡದ ಸರಿಯಾದ ನಿರ್ವಹಣೆಯು ಅನೇಕ ಅಂಶಗಳನ್ನು ಹೊಂದಿದೆ. ಇದರಲ್ಲಿ ಅಧಿಕ ಉಪ್ಪು ಸೇವನೆ, ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಒತ್ತಡ ನಿರ್ವಹಣೆ, ನಿಯಮಿತ ವೈದ್ಯಕೀಯ ತಪಾಸಣೆಮ ಆರೋಗ್ಯಯುತ ಜೀವನಶೈಲಿ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Pregnancy Hypertension: ಗರ್ಭಿಣಿಯರಲ್ಲಿ ಕಾಡುವ ಅಧಿಕ ರಕ್ತದೊತ್ತಡದ ಬಗ್ಗೆ ತಿಳಿಯಲೇಬೇಕಾದ ವಿಚಾರಗಳಿವು