ಕೊರೊನಾ ಸಾಂಕ್ರಾಮಿಕ ಎಲ್ಲರಿಗೂ ಕಷ್ಟಗಳನ್ನು ತಂದಿದೆ. ಸಾಮಾನ್ಯ ಜನರು ತಮ್ಮ ಜೀವನದಲ್ಲಿ ಹುರುಪು ಕಳೆದುಕೊಂಡಿದ್ದಾರೆ. ಸಾಕಷ್ಟು ಮಂದಿ ಕೊರೊನಾ ಭೀತಿಯಲ್ಲೇ ಇದ್ದು, ತಮ್ಮ ಮಾನಸಿಕ ಸ್ವಾಸ್ಥ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಕೊರೊನಾ ಬಗ್ಗೆ ಭಯ ಇಟ್ಟುಕೊಳ್ಳದೇ, ಮುಂಜಾಗ್ರತೆ ವಹಿಸಿದರೆ ಉತ್ತಮ ಜೀವನ ಸಾಧ್ಯವಿದೆ.
ಕೊರೊನಾ ಸೋಂಕು ತಗುಲಿದರೂ, ಆತಂಕ ಪಡುವ ಅಗತ್ಯವಿಲ್ಲ. ಒಂದು ವೇಳೆ, ಕೊರೊನಾ ಸೋಂಕಿಗೆ ಒಳಗಾಗಿ ಮನೆಯಲ್ಲೇ ಐಸೋಲೇಷನ್ಗೆ ಒಳಗಾಗಿದ್ದರೂ, ಆರೋಗ್ಯಕರ ಜೀವನ ನಡೆಸುವುದು ಸಾಧ್ಯವಿದೆ. ಮನಸ್ಸನ್ನು ನಾವು ದೃಢವಾಗಿಟ್ಟುಕೊಂಡರೆ, ಆರೋಗ್ಯವೂ ಚೆನ್ನಾಗಿರುತ್ತದೆ. ಆದ್ದರಂದ ಮನೆಯಲ್ಲಿ ಐಸೋಲೇಷನ್ನಲ್ಲಿದ್ದಾಗ ಮಾನಸಿಕ ಆರೋಗ್ಯಕ್ಕಾಗಿ ಕೆಲವು ಅಂಶಗಳನ್ನು ಪಾಲಿಸಬೇಕಾಗುತ್ತದೆ.
- ಸೋಂಕು ಲಕ್ಷಣಗಳು ಕಾಣಿಸಿಕೊಂಡರೆ,ವೈದ್ಯರ ಮಾರ್ಗದರ್ಶನದಲ್ಲಿ ಮಾತ್ರೆಗಳನ್ನು ತೆಗೆದುಕೊಳ್ಳಿ
- ಆರೋಗ್ಯಕರವಾದ ಮತ್ತು ಪೌಷ್ಟಿಕ ಆಹಾರ ಸೇವಿಸಿ.
- ನಿಮಗಿರುವ ಕೊರೊನಾ ಸೋಂಕು ಲಕ್ಷಣಗಳನ್ನು ಆಧರಿಸಿ ಕನಿಷ್ಠ 10 ದಿನಗಳವರೆಗೆ ವ್ಯಾಯಾಮ ನಿಲ್ಲಿಸಿ.
- ನಂತರ ಚೇತರಿಕೆಯಾಗುತ್ತಿದ್ದಂತೆ ಹಂತ-ಹಂತವಾಗಿ ವ್ಯಾಯಾಮ ಹೆಚ್ಚಿಸಿಕೊಳ್ಳಿ.
- ದೀರ್ಘವಾಗಿ ಉಸಿರಾಡಿ. ಇದು ನಿಮ್ಮ ಶ್ವಾಸಕೋಶಗಳ ಆರೋಗ್ಯಕ್ಕೆ ಒಳ್ಳೆಯದು.
- ಐಸೋಲೇಷನ್ನಲ್ಲಿದ್ದಾಗ ಶಾಂತವಾಗಿರಿ. ಇದಕ್ಕೆ ವೈದ್ಯರ ಸಲಹೆ ಬೇಕಾಗುತ್ತದೆ.
- ಮೆದುಳನ್ನು ಕ್ರಿಯಾಶೀಲವಾಗಿರಿಸುವ ಪುಸ್ತಕಗಳನ್ನು ಓದು, ಸಿನಿಮಾ ವೀಕ್ಷಣೆ ಅತ್ಯಗತ್ಯ
- ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಫೋನ್ ಅಥವಾ ಆನ್ಲೈನ್ ಮೂಲಕ ಸಂಪರ್ಕದಲ್ಲಿರಿ.
ಆಗಾಗ ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿಯನ್ನು ವೈದ್ಯರಿಗೆ ನೀಡುತ್ತಿರುವುದು ಉತ್ತಮ. ಈ ಮೂಲಕ ನಿಮ್ಮ ಆರೋಗ್ಯ ಗಂಭೀರವಾದರೆ, ಆಸ್ಪತ್ರೆಗೆ ತೆರಳಿ ತುರ್ತು ಚಿಕಿತ್ಸೆ ಪಡೆಯಲು ವೈದ್ಯರು ಸಲಹೆ ನೀಡುತ್ತಾರೆ. ಅಥವಾ ರಾಯಲ್ ಆಸ್ಟ್ರೇಲಿಯನ್ ಕಾಲೇಜ್ ಆಫ್ ಜನರಲ್ ಪ್ರಾಕ್ಟೀಷನರೀಸ್ ರೂಪಿಸಿರುವ ಹೆಲ್ತ್ ಡೈರೆಕ್ಟ್ (Healthdirect) ಬಳಸಿ, ಆರೋಗ್ಯವನ್ನು ನೀವೇ ಮೇಲ್ವಿಚಾರಣೆ ಮಾಡಿಕೊಳ್ಳಬಹುದು. ನಿಮ್ಮನ್ನು ಆಗಾಗ ಸಂಪರ್ಕಿಸುತ್ತಿರಲು ವ್ಯಕ್ತಿಯೊಬ್ಬರಿಗೆ ಸೂಚಿಸುವುದು ಒಳ್ಳೆಯದು.
ಕೋವಿಡ್ ಸೋಂಕಿಗೆ ಒಳಗಾಗಿ ಐಸೋಲೇಷನ್ನಲ್ಲಿರುವ ವ್ಯಕ್ತಿಗಳು ಮಾನಸಿಕ ಅಸ್ವಸ್ಥತೆಯ ಕಾರಣದಿಂದಾಗಿ ಡ್ರಗ್ಸ್, ಆಲ್ಕೋಹಾಲ್, ಅನಾರೋಗ್ಯಕರ ಆಹಾರ, ಜೂಜು ಮುಂತಾದ ಚಟಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಅವುಗಳಿಂದ ದೂರವಿರುವ ಪ್ರಯತ್ನ ಮಾಡಬೇಕಾಗುತ್ತದೆ.
ಈ ದುಶ್ಚಟಗಳಿಂದ ಮೊದಲಿಗೆ ಮಾನಸಿಕ ಆರೋಗ್ಯವನ್ನು ಸಮತೋಲನ ಮಾಡಬಹುದು ಅನ್ನಿಸಿದರೂ, ಮುಂದಿನ ದಿನಗಳಲ್ಲಿ ಅವುಗಳ ಪರಿಣಾಮ ಕೆಟ್ಟದಾಗಿರುತ್ತದೆ. ಅದಕ್ಕಿಂತ ಅತ್ಯಂತ ಮುಖ್ಯವಾದ ಅಂಶವೆಂದರೆ, ಮೊಬೈಲ್ ಅಥವಾ ಬೇರೊಂದು ಮಾಧ್ಯಮಗಳ ಮೂಲಕ ಕೆಟ್ಟ ಸುದ್ದಿಗಳನ್ನು, ಆತಂಕಕ್ಕೆ ಈಡುಮಾಡುವ ಸುದ್ದಿಗಳಿಂದ ದೂರವಿರಬೇಕಾಗುತ್ತದೆ.
ಕೋವಿಡ್ ಸೋಂಕು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು ಬದುಕುವುದನ್ನು ಕಠಿಣವಾಗಿಸಿದೆ. ಮಾನಸಿಕ ಕಾಯಿಲೆಗಳನ್ನು ನಿಭಾಯಿಸಲು ಜನರಿಗೆ ಆನ್ಲೈನ್ ಮೂಲಕ ಚಿಕಿತ್ಸೆ ನೀಡಲಾಗುತ್ತದೆ.
ಸುರಕ್ಷಿತ ಮತ್ತು ಕಾಳಜಿ ಕುಟುಂಬ ಸೋಂಕಿತ ವ್ಯಕ್ತಿಗೆ ಇರದಿದ್ದರೆ, ಅವರ ಐಸೋಲೇಷನ್ ಕಷ್ಟಕರವಾಗಿರುತ್ತದೆ. ಅಂಥವರು ಕೋವಿಡ್ ಸೋಂಕಿನ ಜೊತೆಗೆ ಮಾನಸಿಕ ಅನಾರೋಗ್ಯಕ್ಕೆ ಈಡಾಗಬೇಕಾಗುತ್ತದೆ. ಕೌಟುಂಬಿಕ ಕಲಹಗಳಿದ್ದರೆ, ಅವರ ಪ್ರಾಣಕ್ಕೆ ಅಪಾಯವಿರುತ್ತದೆ. ಆದ್ದರಿಂದ ಐಸೋಲೇಷನ್ ವಿಚಾರದಲ್ಲಿ ಕುಟುಂಬ, ಸ್ನೇಹಿತರು ಮತ್ತು ಸಹಾಯವಾಣಿಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ.
ಇದನ್ನೂ ಓದಿ: ದೀರ್ಘಾವಧಿಯ ರೋಗ ನಿರೋಧಕ ಶಕ್ತಿಗೆ ಟಿ ಜೀವಕೋಶಗಳು ಹಾಗೂ ಟಿ ಸೆಲ್ ಲಸಿಕೆಗಳ ಪಾತ್ರವೇನು?