ETV Bharat / sukhibhava

ಮಕ್ಕಳಲ್ಲಿ ಕೋವಿಡ್-19ನ ಆರಂಭಿಕ ರೋಗಲಕ್ಷಣಗಳನ್ನು ಪತ್ತೆ ಹಚ್ಚುವುದು ಹೇಗೆ?

author img

By

Published : Jun 8, 2021, 9:28 PM IST

ಕೋವಿಡ್-19ನ ಎರಡನೇ ಅಲೆಯಲ್ಲಿ ಮಕ್ಕಳು ಕೂಡಾ ಸೋಂಕಿಗೆ ಒಳಗಾಗುತ್ತಾರೆ. ಆದರೂ ಅವರು ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಹೆಚ್ಚಿನ ಚೇತರಿಕೆ ಪ್ರಮಾಣ ಹೊಂದಿದ್ದಾರೆ. ಮಕ್ಕಳಲ್ಲಿ ಕೋವಿಡ್​​-19ನ ಆರಂಭಿಕ ಚಿಹ್ನೆಗಳನ್ನು ಹೇಗೆ ಹಿಡಿಯುವುದು, ಮಕ್ಕಳ ಆರೈಕೆ ಹೇಗೆ ಮಾಡಬೇಕು ಎಂಬ ಕುರಿತು ತಜ್ಞರು ವಿವರಿಸಿದ್ದಾರೆ.

how-to-catch-early-covid-symptoms-in-kids

ಹೈದರಾಬಾದ್: ಕೊರೊನಾ ವೈರಸ್ ಸಾಂಕ್ರಾಮಿಕದ ಎರಡನೇ ಅಲೆಯಲ್ಲಿ, ಮಕ್ಕಳು ಮಾರಕ ವೈರಸ್ ಸೋಂಕಿಗೆ ಒಳಗಾಗುವ ಅನೇಕ ಪ್ರಕರಣಗಳು ವರದಿಯಾಗಿವೆ. ಇದು ಮಕ್ಕಳಲ್ಲಿ ಸೌಮ್ಯ ರೋಗಲಕ್ಷಣಗಳೊಂದಿಗೆ ಪ್ರಾರಂಭವಾಗುತ್ತದೆ. ಆದರೆ, ಅದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಅದು ತೀವ್ರಗೊಳ್ಳುತ್ತದೆ. ಆದ್ದರಿಂದ, ಪೋಷಕರು ರೋಗಲಕ್ಷಣಗಳ ಬಗ್ಗೆ ಜಾಗೃತರಾಗಿರಬೇಕು ಮತ್ತು ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯುವುದು ಅತ್ಯಗತ್ಯ.

ನೋಯ್ಡಾದ ಮಾತೃತ್ವ ಆಸ್ಪತ್ರೆಯ ಕನ್ಸಲ್ಟೆಂಟ್ ನಿಯೋನಾಟಾಲಜಿಸ್ಟ್ ನಿಶಾಂತ್ ಬನ್ಸಾಲ್ ಮಕ್ಕಳಲ್ಲಿ ಕೋವಿಡ್-19ನ ಕೆಲವು ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಪಟ್ಟಿಮಾಡಿದ್ದಾರೆ:

ಮಕ್ಕಳಲ್ಲಿ ಕೋವಿಡ್-19 ರೋಗಲಕ್ಷಣಗಳು:

  • ಜ್ವರ
  • ಕೆಮ್ಮು
  • ಉಸಿರಾಟ ತೊಂದರೆ
  • ನೋಯುತ್ತಿರುವ ಗಂಟಲು
  • ಶೀತ
  • ಸ್ನಾಯು ನೋವು
  • ತಲೆನೋವು
  • 8 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಲ್ಲಿ ರುಚಿ ಅಥವಾ ವಾಸನೆಯ ನಷ್ಟ
  • ವಾಕರಿಕೆ ಅಥವಾ ವಾಂತಿ
  • ಅತಿಸಾರ
  • ದಣಿವು

ವೈರಸ್ ಸೋಂಕಿಗೆ ಒಳಗಾದ ಹಲವಾರು ವಾರಗಳ ನಂತರವೂ ದೇಹದಾದ್ಯಂತ ಉರಿಯೂತ ಇರುತ್ತಿದ್ದು, ಇದು ಒಂದು ಪ್ರಮುಖ ಕಾಳಜಿಯಾಗಿದೆ. ಇದನ್ನು ಮಕ್ಕಳಲ್ಲಿ ಮಲ್ಟಿಸಿಸ್ಟಮ್ ಇನ್ಫ್ಲಮೇಟರಿ ಸಿಂಡ್ರೋಮ್ (ಎಂಐಎಸ್-ಸಿ) ಎಂದು ಕರೆಯಲಾಗುತ್ತದೆ. ಈ ಲಕ್ಷಣಗಳು ಕೊರೊನಾ ವೈರಸ್​ ಸಾಂಕ್ರಾಮಿಕಕ್ಕೆ ಹೇಗೆ ಸಂಬಂಧಿಸಿವೆ ಎಂಬುದನ್ನು ಕಂಡುಹಿಡಿಯಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ.

ಎಂಐಎಸ್-ಸಿಯ ರೋಗಲಕ್ಷಣಗಳು:

  • ಜ್ವರ
  • ಹೊಟ್ಟೆ ನೋವು
  • ವಾಂತಿ ಅಥವಾ ಅತಿಸಾರ
  • ದದ್ದು
  • ಕುತ್ತಿಗೆ ನೋವು
  • ಕೆಂಪಾಗುವ ಕಣ್ಣುಗಳು
  • ತುಂಬಾ ದಣಿವು
  • ಕೆಂಪು, ಬಿರುಕು ಬಿಟ್ಟ ತುಟಿಗಳು
  • ಊದಿಕೊಂಡ ಕೈ ಅಥವಾ ಕಾಲುಗಳು

ನಿಮ್ಮ ಮಗು ಎಂಐಎಸ್-ಸಿನಿಂದ ಬಳಲುತ್ತಿದ್ದರೆ, ಅವಳು ಅಥವಾ ಅವನಿಗೆ ಉಸಿರಾಟದ ತೊಂದರೆ, ಎದೆಯಲ್ಲಿ ನೋವು ಅಥವಾ ಒತ್ತಡ, ನೀಲಿಯಾದ ತುಟಿ ಅಥವಾ ಮುಖ, ಗೊಂದಲ ಅಥವಾ ಎಚ್ಚರವಾಗಿರಲು ತೊಂದರೆ ಇರಬಹುದು.

ಅಂತಹ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು ಮತ್ತು ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ಆ ಮಕ್ಕಳು ಆಸ್ಪತ್ರೆಯ ಆರೈಕೆ, ಕೆಲವೊಮ್ಮೆ ಐಸಿಯು ದಾಖಲಾತಿಯಿಂದ ಉತ್ತಮಗೊಳ್ಳುತ್ತಾರೆ ಎಂದು ಗಮನಿಸಲಾಗಿದೆ. ಮಗುವಿನ ಸ್ಥಿತಿಯನ್ನು ನೋಡಿ ಮತ್ತು ಪರೀಕ್ಷಿಸಿದಾಗ, ಚಿಕಿತ್ಸೆ ಕುರಿತು ವೈದ್ಯರು ನಿರ್ಧರಿಸುತ್ತಾರೆ.

ಮಗುವಿಗೆ ರೋಗಲಕ್ಷಣಗಳಿದ್ದರೆ ಇತರ ಸದಸ್ಯರನ್ನು ಹೇಗೆ ಸುರಕ್ಷಿತವಾಗಿರಿಸುವುದು?

ಕುಟುಂಬದ ಎಲ್ಲ ಸದಸ್ಯರು ತಮ್ಮ ಪರೀಕ್ಷಾ ವರದಿಗಳು ಬರುವವರೆಗೂ ಮನೆಯಲ್ಲಿಯೇ ಇರುವುದು ಅತ್ಯಗತ್ಯ. ಮನೆಯಲ್ಲಿರುವ ಜನರು ಮತ್ತು ಸಾಕುಪ್ರಾಣಿಗಳು ಮಗುವಿನಿಂದ ಸಾಧ್ಯವಾದಷ್ಟು ದೂರವಿರುವುದು ಉತ್ತಮ. ಕುಟುಂಬದಲ್ಲಿ ಒಬ್ಬ ವ್ಯಕ್ತಿ ಮಾತ್ರ ಅನಾರೋಗ್ಯ ಪೀಡಿತ ಮಗುವಿನ ಆರೈಕೆ ಮಾಡಬೇಕು.

ಸೋಂಕಿತ ಮಗು ಎರಡು ವರ್ಷಕ್ಕಿಂತ ಮೇಲ್ಪಟ್ಟಿದ್ದರೆ ಅವನು / ಅವಳು ಮಾಸ್ಕ್ ಧರಿಸಬೇಕು. ಮಗುವಿಗೆ ದೀರ್ಘಕಾಲದವರೆಗೆ ಮಾಸ್ಕ್ ಹಾಕಿ ಒಬ್ಬಂಟಿಯಾಗಿ ಬಿಡಬಾರದು. ಮಗು ಬೇರೆಯೇ ವಾಶ್ ರೂಂ ಬಳಸುವುದು ಉತ್ತಮ. ಕುಟುಂಬ ಸದಸ್ಯರು ಕೂಡಾ ಅದೇ ವಾಶ್ ರೂಂ ಬಳಸುತ್ತಾರೆ ಎಂದಾದರೆ ಚೆನ್ನಾಗಿ ಸ್ಯಾನಿಟೈಸ್ ಮಾಡುವುದು ಅತ್ಯಗತ್ಯ. ಇತರ ಕುಟುಂಬ ಸದಸ್ಯರು ನಿಯಮಿತವಾಗಿ ತಮ್ಮ ಕೈಗಳನ್ನು ಸ್ವಚ್ಛಗೊಳಿಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.