ETV Bharat / sukhibhava

ಬರವಣಿಗೆ ಭರವಸೆ ಹುಟ್ಟಿಸುತ್ತೆ.. ಮಾನಸಿಕ ಆರೋಗ್ಯಕ್ಕೆ ಜರ್ನಲಿಂಗ್ ಬಹುದೊಡ್ಡ ವರ.. ಹೆಂಗ್‌ ಅಂತೀರಾ.. - ವಿಶ್ವ ಮಾನಸಿಕ ಆರೋಗ್ಯ ದಿನ 2021

ಪೆನ್ ಮತ್ತು ಪೇಪರ್ ಬಳಸಿ ಬರೆಯುವುದು ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ ಬಳಸುವುದಕ್ಕಿಂತ ಉತ್ತಮವಾಗಿ ಮಾಹಿತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ದೃಢೀಕರಣಗಳು, ಸಾಧನೆಗಳು ಮತ್ತು ಕಲಿಕೆಗಳನ್ನು ಬರೆಯುವುದು ನಮಗೆ ಮಾಹಿತಿ ತಿಳಿದುಕೊಳ್ಳಲು ಮತ್ತು ಹಿಂದಿನದರಿಂದ ಕಲಿಯಲು ಸಹಾಯ ಮಾಡುತ್ತದೆ..

journaling
ಜರ್ನಲಿಂಗ್
author img

By

Published : Oct 10, 2021, 9:18 PM IST

ಕೋವಿಡ್​-19 ಸಾಂಕ್ರಾಮಿಕವು ನಿಸ್ಸಂದೇಹವಾಗಿ ಪ್ರಪಂಚದಾದ್ಯಂತ ಜನರ ಮಾನಸಿಕ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಿದೆ. 2020 ಮತ್ತು 2021ರ ಆರಂಭದಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಬೇಡಿಕೆಯಲ್ಲಿ ಹಠಾತ್ ಏರಿಕೆ ಕಂಡು ಬಂದಿದೆ. ಆದ್ದರಿಂದ, ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತದೆ. ಈ ವೇಳೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಜರ್ನಲಿಂಗ್​ ಹೇಗೆ ಸಹಾಯಕ ಎಂಬುದನ್ನು ತಿಳಿದುಕೊಳ್ಳೋಣ..

ಮಾನಸಿಕ ಆರೋಗ್ಯಕ್ಕೆ ಜರ್ನಲಿಂಗ್ ಹೇಗೆ ಸಹಾಯಕ?

ಜಗತ್ತನ್ನು ತಂತ್ರಜ್ಞಾನ ಆವರಿಸಿರುವ ಈ ಸಮಯದಲ್ಲಿ ಬರವಣಿಗೆಯ ಸಂತೋಷ ಸಂಪೂರ್ಣ ಮರೆಯಾಗಿದೆ. ನಮಗೆ ವಯಸ್ಸಾದಂತೆ ಡಿಜಿಟಲೀಕರಣ ಬೆಳೆಯುತ್ತಿದೆ. ಇದರೊಂದಿಗೆ ನಮ್ಮ ಬರವಣಿಗೆ ಕಣ್ಮರೆಯಾಗುತ್ತಿದೆ. ಆದರೆ, ಸಾಂಕ್ರಾಮಿಕ ರೋಗ ಕೊರೊನಾ ಕಾಲಿಟ್ಟ ಗಳಿಗೆಯಲ್ಲಿ ಜನ ಮತ್ತೆ ಬರವಣಿಗೆಯತ್ತ ಮುಖಮಾಡಿದ್ದಾರೆ. ಇದರಿಂದ ಅವರು ತಮ್ಮ ಮಾನಸಿಕ ಸಂತೋಷವನ್ನು ಮತ್ತೆ ಮರಳಿ ಪಡೆದುಕೊಂಡಿದ್ದಾರೆ.

ಕೊರೊನಾ ಬಂದ ನಂತರ ಸಾಕಷ್ಟು ಜನರು ತಮ್ಮ ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಿದರು. ಅನೇಕರು ತಮ್ಮ ಸೃಜನಶೀಲ ಆಸಕ್ತಿಗಳನ್ನು (ಬರವಣಿಗೆ,ಚಿತ್ರಕಲೆ) ಹಿಂದೆಂದಿಗಿಂತಲೂ ಗಂಭೀರವಾಗಿ ಬಳಸಿಕೊಂಡರು. ಅದೇ ರೀತಿ ಜರ್ನಲಿಂಗ್​ನಲ್ಲೂ ಕೂಡ ಜನ ಆಸಕ್ತಿ ಬೆಳೆಸಿಕೊಂಡರು. ಇದರ ಮೂಲಕ ಜನರು ತಮ್ಮ ಪ್ರಶಾಂತತೆಯನ್ನು ಮರಳಿ ಪಡೆದರು.

ಪ್ರತಿ ವರ್ಷ ಅಕ್ಟೋಬರ್ 10ರಂದು ಆಚರಿಸಲ್ಪಡುವ ಮಾನಸಿಕ ಆರೋಗ್ಯ ದಿನದ ಸಂದರ್ಭದಲ್ಲಿ ಜರ್ನಲಿಂಗ್​ನ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳೋಣ. ವಿಶೇಷವಾಗಿ ಇದರ ಮೂಲಕ ವ್ಯಕ್ತಿಯ ಯೋಗಕ್ಷೇಮಕ್ಕೆ ಅದು ಹೇಗೆ? ಸಹಾಯಕವಾಗಲಿದೆ ಎಂಬುದನ್ನು ನೋಡೋಣ..

ಒತ್ತಡ ಮತ್ತು ಆತಂಕ ನಿರ್ವಹಿಸಲು ಸಹಾಯ ಮಾಡುತ್ತದೆ

ದಿನಚರಿಯನ್ನು ಬರೆಯವುದರಿಂದ ನಮ್ಮ ಆಲೋಚನೆಗಳನ್ನು ಕ್ರಮವಾಗಿರಿಸಲು ಸಹಾಯಕವಾಗುತ್ತದೆ. ಅಲ್ಲದೇ, ದೈನಂದಿನ ಜೀವನದ ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜರ್ನಲಿಂಗ್ ನಮಗೆ ನೆನಪುಗಳು ಮತ್ತು ಅನುಭವಗಳನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಆದರೆ, ನಮ್ಮನ್ನು ನಾವು ಚೆನ್ನಾಗಿ ತಿಳಿದುಕೊಳ್ಳಲು ಮತ್ತು ನಮ್ಮ ಆಳವಾದ ಭಯಗಳು, ಭಾವೋದ್ರೇಕಗಳು, ಆಲೋಚನೆಗಳು ಮತ್ತು ಭಾವನೆಗಳನ್ನು ಬಹಿರಂಗಪಡಿಸಲು ವೇದಿಕೆ ಒದಗಿಸುತ್ತದೆ.

ಜರ್ನಲಿಂಗ್ ಒಂದು ಆತ್ಮೀಯ ಗೆಳೆಯನೊಂದಿಗೆ ಮಾತನಾಡಿದ ಅನುಭವವನ್ನು ನೀಡುತ್ತದೆ. ಆದ್ದರಿಂದ, ಜೀವನವನ್ನು ಆನಂದದಾಯಕವಾಗಿಸಲು ಮತ್ತು ನಿಮ್ಮ ಮನಸ್ಥಿತಿಯನ್ನು ಉತ್ತಮವಾಗಿರಿಸಿಕೊಳ್ಳಲು ವರ್ಣರಂಜಿತ ಸ್ಟೇಷನರಿಯಲ್ಲಿ ಹೂಡಿಕೆ ಮಾಡಿ. ಜೊತೆಗೆ ನಿಮ್ಮ ಸೃಜನಶೀಲ ಅನುಭೂತಿಯನ್ನು ಪಡೆಯಿರಿ.

ವೈಯಕ್ತಿಕ ಅನುಭವಗಳಿಂದ ಕಲಿಯಲು ಸಹಾಯ ಮಾಡುತ್ತದೆ

ಪೆನ್ ಮತ್ತು ಪೇಪರ್ ಬಳಸಿ ಬರೆಯುವುದು ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ ಬಳಸುವುದಕ್ಕಿಂತ ಉತ್ತಮವಾಗಿ ಮಾಹಿತಿಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ದೃಢೀಕರಣಗಳು, ಸಾಧನೆಗಳು ಮತ್ತು ಕಲಿಕೆಗಳನ್ನು ಬರೆಯುವುದು ನಮಗೆ ಮಾಹಿತಿ ತಿಳಿದುಕೊಳ್ಳಲು ಮತ್ತು ಹಿಂದಿನದರಿಂದ ಕಲಿಯಲು ಸಹಾಯ ಮಾಡುತ್ತದೆ.

ನಾವು ಉತ್ತಮ ಮತ್ತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ವಿಭಿನ್ನ ವಿಧಾನಗಳ ಮೂಲಕ ಅನುಭವಗಳನ್ನು ನೋಡಲು ಇದು ಸಹಾಯ ಮಾಡುತ್ತದೆ.

ಮನಸ್ಥಿತಿ ಸುಧಾರಿಸುತ್ತದೆ ಮತ್ತು ನಿದ್ರೆ ಹೆಚ್ಚಿಸುತ್ತದೆ

ಕಂಪ್ಯೂಟರ್​ ಬಳಕೆಯಿಂದ ಜನ ಮಾನಸಿಕವಾಗಿ ಬಳಲುತ್ತಾರೆ. ಇದರಿಂದ ಅವರ ನಿದ್ರೆಯ ಗುಣಮಟ್ಟವೂ ಕುಸಿಯುತ್ತದೆ. ಆದರೆ, ಬರವಣಿಗೆಯು ಮನಸ್ಸಿಗೆ ಹಿತವನ್ನು ನೀಡುವ ಮೂಲಕ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂಬುದು ತಿಳಿದು ಬಂದಿದೆ.

ಸೃಜನಶೀಲತೆಯನ್ನು ಹೆಚ್ಚಿಸುತ್ತದೆ

ಜರ್ನಲಿಂಗ್ ಮೆದುಳನ್ನು ಮುಕ್ತಗೊಳಿಸುತ್ತದೆ. ಏಕೆಂದರೆ, ಇದು ಯಾವುದೇ ತೀರ್ಮಾನವಿಲ್ಲದೆ ಬರೆಯಲು, ವಿವರಿಸಲು ಮತ್ತು (ಚಿತ್ರಕಲೆ) ಬಣ್ಣ ಹಚ್ಚಲು ನಮಗೆ ಅವಕಾಶವನ್ನು ಒದಗಿಸುತ್ತದೆ. ಬರವಣಿಗೆ ಆಲೋಚನೆಗಳನ್ನು ಹೊರ ಹಾಕುತ್ತದೆ. ಅಲ್ಲದೇ, ತಾಜಾ ಆಲೋಚನೆಗಳಿಗಾಗಿ ಮನಸ್ಸನ್ನು ಶುದ್ಧಗೊಳಿಸುತ್ತದೆ. ನಮ್ಮ ಮನಸ್ಸು ಅಲೆದಾಡಲು ಮತ್ತು ಕನಸು ಕಾಣಲು ಸಹಾಯ ಮಾಡುತ್ತದೆ.

ಬಲವಾದ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಹೆಚ್ಚಿನ ಐಕ್ಯೂ ನಿರ್ಮಿಸಲು ಸಹಾಯ

ಪ್ರಪಂಚದಾದ್ಯಂತ ಹಲವಾರು ಅಧ್ಯಯನಗಳು ನಿಯಮಿತ ಜರ್ನಲಿಂಗ್ ಉತ್ತಮ ನಿದ್ರೆ, ಬಲವಾದ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಅಂತಿಮವಾಗಿ ಹೆಚ್ಚಿನ ಐಕ್ಯೂಗೆ ಕಾರಣವಾಗುತ್ತದೆ ಎಂದು ತೋರಿಸುತ್ತದೆ. ಆಸ್ಟಿನ್​ನಲ್ಲಿನ ಟೆಕ್ಸಾಸ್ ವಿಶ್ವವಿದ್ಯಾಲಯದ ಸಾಮಾಜಿಕ ಮನಃಶಾಸ್ತ್ರಜ್ಞ ಜೇಮ್ಸ್ ಡಬ್ಲ್ಯೂಪೆನ್ನೆಬೇಕರ್ ಅವರು, 'ಬರವಣಿಗೆಯು ಚಿಕಿತ್ಸೆಯ ಪ್ರವರ್ತಕ'ರೆಂದು ಪರಿಗಣಿಸಿದ್ದಾರೆ.

ಭಾವನೆಗಳನ್ನು ಗುರುತಿಸುವುದು. ಆಘಾತಕಾರಿ ಘಟನೆಗಳನ್ನು ಒಪ್ಪಿಕೊಳ್ಳುವುದು ಜನರ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಅದು ನಮ್ಮ ಕೆಲಸವನ್ನು ಸುಧಾರಿಸುತ್ತದೆ. ಕಾರಣ, ಅತಿಯಾದ ಕೆಲಸದಿಂದ ಮೆದುಳಿನ ಮೇಲೆ ಬೀಳುವ ಒತ್ತಡವನ್ನು ಅದು ಕಡಿಮೆ ಮಾಡುತ್ತದೆ. ಇದರಿಂದ ನಾವು ಚೆನ್ನಾಗಿ ನಿದ್ರಿಸುತ್ತೇವೆ. ವಾಸ್ತವವಾಗಿ ನಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಎಂದಿದ್ದಾರೆ.

ಈ ವರ್ಷದ ಮಾನಸಿಕ ಆರೋಗ್ಯ ದಿನವನ್ನು ಹೊಸ ಅಭ್ಯಾಸದೊಂದಿಗೆ ಪ್ರಾರಂಭಿಸಿ. ಅದು ನಿಮಗೆ ಧನಾತ್ಮಕವಾಗಿ ಪ್ರಯೋಜನವನ್ನು ನೀಡುತ್ತದೆ. ಅಲ್ಲದೇ, ಡಿಜಿಟಲ್ ಸಂವಹನದಿಂದ ಉಂಟಾಗುವ ತೊಂದರೆಯಿಂದ ನಿಮ್ಮನ್ನು ರಕ್ಷಿಸುತ್ತದೆ.

ಓದಿ: ವಿಶ್ವ ಮಾನಸಿಕ ಆರೋಗ್ಯ ದಿನ: ವಾಸ್ತವಿಕ ನೆಲೆಯಲ್ಲಿ ಪ್ರತಿಯೊಬ್ಬರ ಮಾನಸಿಕ ಆರೋಗ್ಯದ ಕಾಳಜಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.