ETV Bharat / sukhibhava

ರುಚಿಯಷ್ಟೇ ಅಲ್ಲ.. ಲೈಂಗಿಕ ಸಮಸ್ಯೆಗಳಿಗೂ ಪರಿಹಾರ ಈ ಪೌಷ್ಟಿಕಾಂಶಭರಿತ ಅಂಜೂರ

ಭಾರತದಲ್ಲಿ ಸಾಮಾನ್ಯವಾಗಿ 'ಅಂಜೀರ್' ಎಂದು ಕರೆಯಲ್ಪಡುವ ಒಣ ಅಂಜೂರದ ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಂಜೂರದ ಕೆಲವು ಅದ್ಭುತ ಆರೋಗ್ಯ ಪ್ರಯೋಜನಗಳು ಇಲ್ಲಿವೆ.

How are figs good for health?
ರುಚಿಯಷ್ಟೇ ಅಲ್ಲ; ಲೈಂಗಿಕ ಸಮಸ್ಯೆಗಳಿಗೂ ಪರಿಹಾರವಂತೆ ಪೌಷ್ಟಿಕಾಂಶಭರಿತ ಅಂಜೂರ
author img

By

Published : May 15, 2022, 7:40 PM IST

ಒಣ ಹಣ್ಣುಗಳು ರುಚಿ ಅಷ್ಟೇ ಅಲ್ಲ, ಆರೋಗ್ಯಕ್ಕೂ ಉಪಕಾರಿ. ಬಹುತೇಕ ಎಲ್ಲಾ ಒಣ ಹಣ್ಣುಗಳು ಹೆಚ್ಚು ಪೌಷ್ಟಿಕಾಂಶಭರಿತವಾಗಿರುತ್ತವೆ ಮತ್ತು ಅವು ನಮ್ಮ ದೇಹದ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ಅನೇಕ ರೋಗಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತವೆ. ಅಂತಹ ಒಂದು ಒಣ ಹಣ್ಣು 'ಅಂಜೂರ' ಅಥವಾ 'ಅಂಜೀರ್'.

ಇದು ಪೋಷಣೆಯ ಜೊತೆಗೆ, ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಿ, ಒಟ್ಟಾರೆ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಅಂಜೂರ ಹಣ್ಣುಗಳನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ದೆಹಲಿ ಮೂಲದ ಡಯೆಟಿಷಿಯನ್ ಮತ್ತು ಪೌಷ್ಟಿಕಾಂಶ ತಜ್ಞೆ ಡಾ.ದಿವ್ಯಾ ಶರ್ಮಾ. ಒಣ ಹಣ್ಣಾಗಿ ಮಾತ್ರವಲ್ಲದೆ, ಇದನ್ನು ನೀರಿನಲ್ಲಿ ಅಥವಾ ಹಾಲಿನಲ್ಲಿ ನೆನೆಸಿಟ್ಟು ಕೂಡ ಸೇವಿಸಬಹುದು. ಅಥವಾ ತಾಜಾ ಅಂಜೂರದ ಹಣ್ಣನ್ನು ಸಹ ಸೇವಿಸಬಹುದು.

ಅಂಜೂರದಲ್ಲಿರುವ ಪೋಷಕಾಂಶಗಳು: ಅಂಜೂರದಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್, ಫೈಬರ್, ಫೋಲೇಟ್, ಪೊಟ್ಯಾಸಿಯಮ್, ಸತು, ರಂಜಕ, ಮ್ಯಾಂಗನೀಸ್, ತಾಮ್ರ, ಒಮೆಗಾ 3 ಕೊಬ್ಬಿನಾಮ್ಲಗಳು ಮತ್ತು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಪೌಷ್ಟಿಕುಯುಕ್ತವಾಗಿದೆ ಎಂಬುದಾಗಿ ಡಾ. ದಿವ್ಯಾ ವಿವರಿಸುತ್ತಾರೆ.

ಅಂಜೂರದ ಪ್ರಯೋಜನಗಳೇನು?

  • ಅಂಜೂರದಲ್ಲಿ ಕಬ್ಬಿಣದ ಅಂಶವು ತುಂಬಾ ಹೆಚ್ಚಿರುವುದರಿಂದ, ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಇದರ ಸೇವನೆ ಒಳ್ಳೆಯದು. ಇದರ ನಿಯಮಿತ ಸೇವನೆಯು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ದೌರ್ಬಲ್ಯದಂತಹ ಸಮಸ್ಯೆಗೆ ಪರಿಹಾರವನ್ನೂ ನೀಡುತ್ತದೆ.
  • ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಇದರಲ್ಲಿ ಹೇರಳವಾಗಿರುವ ಕಾರಣ, ಇದು ಮೂಳೆಗಳನ್ನು ಇನ್ನಷ್ಟು ಬಲಪಡಿಸಿ ಆರೋಗ್ಯಯುತವಾಗಿರುವಂತೆ ನೋಡಿಕೊಳ್ಳುತ್ತದೆ.
  • ಇದರಲ್ಲಿರುವ ಪೊಟ್ಯಾಸಿಯಮ್ ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
  • ಅಂಜೂರದಲ್ಲಿರುವ ಖನಿಜಗಳು, ವಿಟಮಿನ್ ಎ, ವಿಟಮಿನ್ ಬಿ ಮತ್ತು ಇತರ ಪೋಷಕಾಂಶಗಳು ಚಯಾಪಚಯ ಕ್ರಿಯೆಯನ್ನು ವೃದ್ಧಿಗೊಳಿಸುವುದಲ್ಲದೆ, ಚಯಾಪಚಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
  • ಅಂಜೂರದಲ್ಲಿ ನಾರಿನಂಶ ಅಧಿಕವಾಗಿದೆ. ಅಲ್ಲದೆ, ಫಿಸಿನ್ ಎಂಬ ಜೀರ್ಣಕಾರಿ ಕಿಣ್ವವು ಅಂಜೂರದಲ್ಲಿರುವುದರಿಂದ ಇದು ಆಹಾರವನ್ನು ತ್ವರಿತವಾಗಿ ಜೀರ್ಣಿಸಿಕೊಳ್ಳಲು ಜೀರ್ಣಾಂಗ ವ್ಯವಸ್ಥೆಯ ಇತರ ಕಿಣ್ವಗಳೊಂದಿಗೆ ಜೊತೆಯಾಗಿ ಕೆಲಸ ಮಾಡುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುವುದರೊಂದಿಗೆ ಹೊಟ್ಟೆ, ಸೊಂಟ ಭಾಗದ ಕೊಬ್ಬು ಮತ್ತು ದೇಹದ ತೂಕವನ್ನು ಕಡಿಮೆ ಮಾಡುತ್ತದೆ.
  • ಅಂಜೂರದಲ್ಲಿ ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದು ಕೆಟ್ಟ ಕೊಲೆಸ್ಟ್ರಾಲ್​ ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ರಾಡಿಕಲ್ ಹಾನಿಯಿಂದಲೂ ನಮ್ಮನ್ನು ಕಾಪಾಡುತ್ತದೆ. ಇದಲ್ಲದೆ, ಅಂಜೂರದಲ್ಲಿರುವ ಪೆಕ್ಟಿನ್ ಎಂಬ ಕರಗುವ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿ ಒಳ್ಳೆಯ ಕೊಬ್ಬನಾಂಶವನ್ನು ಹೆಚ್ಚಿಸುತ್ತದೆ.
  • ಅಂಜೂರದ ಹಣ್ಣುಗಳು ಸ್ವಾಭಾವಿಕವಾಗಿ ರುಚಿಯಲ್ಲಿ ಸಿಹಿಯಾಗಿರುತ್ತವೆ. ಆದರೂ ಮಧುಮೇಹಿಗಳು ಅವುಗಳನ್ನು ಸೇವಿಸಬಹುದು ಎಂದು ಹೇಳಲಾಗುತ್ತದೆ. 2003ರಲ್ಲಿ, ಅದರ ಪ್ರಯೋಜನಗಳ ಕುರಿತಾದ ಸಂಶೋಧನೆಯು ಅಂಜೂರದ ಸಾರಗಳು ರಕ್ತದಲ್ಲಿನ ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಇ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹವನ್ನು ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಆದಾಗ್ಯೂ, ಮಧುಮೇಹಿಗಳು ಅದನ್ನು ಸೇವಿಸುವ ಮೊದಲು ತಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂದು ಸಲಹೆ ನೀಡಿದೆ.
  • ಅಂಜೂರದ ನಿಯಮಿತ ಸೇವನೆಯು ಪುರುಷರಲ್ಲಿ ಫಲವತ್ತತೆಯನ್ನು ಸುಧಾರಿಸುತ್ತದೆ. ಅವರ ವೀರ್ಯ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ಕೆಲವು ಲೈಂಗಿಕ ಸಮಸ್ಯೆಗಳಿಗೆ ಪರಿಹಾರವನ್ನೂ ನೀಡುತ್ತದೆ ಎಂದು ಆಯುರ್ವೇದ ಹೇಳುತ್ತದೆ.
  • ಅಂಜೂರದಲ್ಲಿ ಸತು, ಮ್ಯಾಂಗನೀಸ್, ಮೆಗ್ನಿಸಿಯಮ್ ಮತ್ತು ಕಬ್ಬಿಣದಂತಹ ಖನಿಜಗಳು ಸಮೃದ್ಧವಾಗಿವೆ. ಇದು ರಕ್ತಹೀನತೆಯ ಸಮಸ್ಯೆಯ ಜೊತೆಗೆ ಸಂತಾನೋತ್ಪತ್ತಿ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದರ ಆಂಟಿಆಕ್ಸಿಡೆಂಟ್ ಮತ್ತು ಫೈಬರ್ ಅಂಶವು ಹಾರ್ಮೋನ್ ಅಸಮತೋಲನ ಮತ್ತು ಮುಟ್ಟಿನ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ದೇಹವನ್ನು ಬಲಪಡಿಸಲು ಮತ್ತು ದೈಹಿಕ ದೌರ್ಬಲ್ಯವನ್ನು ತೊಡೆದುಹಾಕಲು ಮಹಿಳೆಯರು ಅಂಜೂರದ ಹಣ್ಣುಗಳನ್ನು ತಿನ್ನುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಮಕ್ಕಳಿಗಾಗುವ ಪ್ರಯೋಜನಗಳು: ಅಂಜೂರದ ಹಣ್ಣುಗಳ ಸೇವನೆಯು ಎಲ್ಲಾ ವಯಸ್ಸಿನರಿಗೂ ಪ್ರಯೋಜನಕಾರಿಯಾಗಿದೆ. ಮಕ್ಕಳಿಗೆ ಹೇಳುವುದಾದರೆ, ಅಂಜೂರದ ಹಣ್ಣುಗಳು ಮಕ್ಕಳಲ್ಲಿ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿರಿಸಲು, ಮಕ್ಕಳ ಬೆಳವಣಿಗೆಗೆ ಮತ್ತು ಜ್ವರ, ಇತರ ಸೋಂಕುಗಳಿಂದ ಮಕ್ಕಳಿಗೆ ರಕ್ಷಣೆ ನೀಡುತ್ತದೆ ಎನ್ನುತ್ತಾರೆ ಡಾ.ದಿವ್ಯಾ. ಅಂಜೂರದಲ್ಲಿಯೂ ಫೋಲೇಟ್ ಕಂಡುಬರುತ್ತದೆ. ಇದು ಬದಲಾಗುತ್ತಿರುವ ಹವಾಮಾನದಿಂದಾಗಿ ಉಂಟಾಗುವ ಸೋಂಕು ಮತ್ತು ಕೆಮ್ಮಿಗೆ ಪರಿಹಾರವನ್ನು ನೀಡುವುದಲ್ಲದೆ ಮೆದುಳಿನ ಸರಿಯಾದ ಬೆಳವಣಿಗೆಗೆ ಸಹಾಯ ಮಾಡುತ್ತದೆ. 6 ತಿಂಗಳ ನಂತರ ಮಕ್ಕಳು ಘನ ಆಹಾರವನ್ನು ಸೇವಿಸಲು ಪ್ರಾರಂಭಿಸುತ್ತಾರೆ. ವೈದ್ಯರ ಸಲಹೆ ಮತ್ತು ಅವರು ಸೂಚಿಸಿದ ಪ್ರಮಾಣದಲ್ಲಿ ಮಕ್ಕಳಿಗೆ ಪ್ಯೂರಿ ಅಥವಾ ಪೇಸ್ಟ್ ರೂಪದಲ್ಲಿ ಅಂಜೂರದ ಹಣ್ಣುಗಳನ್ನು ನೀಡಬಹುದು.

ಸೇವಿಸುವುದು ಹೇಗೆ?: ಅಂಜೂರದ ಹಣ್ಣನ್ನು ಯಾವ ರೂಪದಲ್ಲಿ ಸೇವಿಸಿದರೂ ಸಹ ಆರೋಗ್ಯಕ್ಕೆ ಒಳ್ಳೆಯದು. ಆದರೆ ಡಾ.ದಿವ್ಯಾ ಅವರ ಪ್ರಕಾರ, ಅಂಜೂರದ ಹಣ್ಣುಗಳನ್ನು ನೆನೆಸಿಟ್ಟು ಸೇವಿಸಿದರೆ ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ. ರಾತ್ರಿಯಿಡೀ 1-2 ಅಂಜೂರದ ಹಣ್ಣುಗಳನ್ನು ಅರ್ಧ ಕಪ್ ನೀರಿನಲ್ಲಿ ನೆನೆಯಲು ಹಾಕಿಟ್ಟು ಮತ್ತು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ ಉತ್ತಮ. ನೆನೆಸಿದ ಅಂಜೂರದ ಹಣ್ಣುಗಳು ವಿಶೇಷವಾಗಿ ಬೇಸಿಗೆಯಲ್ಲಿ ನಿಮ್ಮ ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಅಂಜೂರದ ಹಣ್ಣುಗಳೊಂದಿಗೆ, ಬಾದಾಮಿ, ವಾಲ್​ನಟ್ಸ್ ಅಥವಾ ಇತರ ಒಣ ಹಣ್ಣುಗಳನ್ನು ಸಹ ನೆನೆಸಿಡಬಹುದು. ಅಂಜೂರವನ್ನು ಓಟ್ಸ್​ಗೂ ಸೇರಿಸಬಹುದು.

ಇದನ್ನೂ ಓದಿ: ಆರೋಗ್ಯದ ಗುಟ್ಟು ಉಪವಾಸದಲ್ಲಿ: ಮಧ್ಯಂತರ ಉಪವಾಸದ ಏಳು ದಾರಿಗಳ ನಕ್ಷೆ ಇಲ್ಲಿದೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.