ETV Bharat / sukhibhava

ಪಿರಿಯಡ್ಸ್​​​ ಮಿಸ್ಸಾಯ್ತಾ! ಋತುಚಕ್ರದ ಸಮಸ್ಯೆಗೆ ಬಳಸಿ ಮನೆ ಮದ್ದು! - ಮಹಿಳೆ ಆರೋಗ್ಯದಿಂದ ಇರಲು ಮಾಸಿಕ ಋತುಬಂಧ

ತಡವಾಗಿ ಮಾಸಿಕ ಋತುಬಂಧನಕ್ಕೆ ಒಳಗಾಗುವುದರ ಹಿಂದಿನ ಕಾರಣ ಒತ್ತಡ ಮತ್ತು ಹಾರ್ಮೋನ್​ಗಳ ಅಸಮತೋಲನ. ಇಂತಹ ಸಮಸ್ಯೆ ನಿಮಗೂ ಕಾಡುತ್ತಿದ್ದರೆ, ಅದರಿಂದ ಹೊರ ಬರಲು ಇಲ್ಲಿದೆ ನೈಸರ್ಗಿಕ ಉಪಾಯಗಳು.

http://10.10.50.85:6060/reg-lowres/27-October-2023/cup_2710newsroom_1698392515_1076.jpg

author img

By ETV Bharat Karnataka Team

Published : Oct 27, 2023, 1:41 PM IST

ಋತು ಚಕ್ರ ಎಂಬುದು ಎಲ್ಲ ಮಹಿಳೆಯರಿಗೆ ಒಂದೇ ರೀತಿಯ ಅನುಭವ ನೀಡದು. ಕೆಲವರಲ್ಲಿ ಇದು ಸರಾಗವಾಗಿದ್ದರೆ ಮತ್ತೆ ಕೆಲವರಲ್ಲಿ ವಿಳಂಬ, ನೋವು ಮತ್ತಿತ್ತರ ಸಮಸ್ಯೆಗೆ ಕಾರಣವಾಗುತ್ತದೆ. ಮಹಿಳೆ ಆರೋಗ್ಯದಿಂದ ಇರಲು ಮಾಸಿಕ ಋತುಬಂಧಕ್ಕೆ ಒಳಗಾಗುವುದು ಅವಶ್ಯ. ಈ ಹಿನ್ನೆಲೆ ಋತುಚಕ್ರದಲ್ಲಿ ಆಗುವ ಬದಲಾವಣೆಗಳನ್ನು ನಿರ್ಲಕ್ಷ್ಯಿಸಬಾರದು ಎಂದು ತಜ್ಞರು ತಿಳಿಸುತ್ತಾರೆ.

ಇನ್ನು ಬಹುತೇಕ ಮಹಿಳೆಯರು, ಯುವತಿಯರನ್ನು ಅನಿಯಮಿತ ಋತುಚಕ್ರ ಕಾಡುತ್ತದೆ. ಕೆಲವರಲ್ಲಿ ಈ ಋತುಚಕ್ರ ತಡವಾದರೆ, ಮತ್ತೆ ಕೆಲವರಲ್ಲಿ ಯಾವುದೇ ಸಮಸ್ಯೆ ಕಂಡುಬರುವುದಿಲ್ಲ. ಈ ರೀತಿ ಅವಧಿ ಪೂರ್ವ ಮತ್ತು ತಡವಾಗಿ ಮಾಸಿಕ ಋತುಬಂಧನಕ್ಕೆ ಒಳಗಾಗುವುದರ ಹಿಂದಿನ ಕಾರಣ ಒತ್ತಡ ಮತ್ತು ಹಾರ್ಮೋನ್​ಗಳ ಅಸಮತೋಲನ. ಇಂತಹ ಸಮಸ್ಯೆ ನಿಮಗೂ ಕಾಡುತ್ತಿದ್ದರೆ, ಅದರಿಂದ ಹೊರ ಬರಲು ಇಲ್ಲಿದೆ ನೈಸರ್ಗಿಕ ಉಪಾಯಗಳು.

ಶುಂಠಿ ಚಹಾ: ನಿಯಮಿತ ಋತುಚಕ್ರಕ್ಕೆ ಪ್ರತಿನಿತ್ಯ ಶುಂಠಿ ಚಹಾ ಸೇವನೆ ಉತ್ತಮ ಪರಿಹಾರವಾಗಿದೆ,. ಇದು ದೇಹದಲ್ಲಿ ಶಾಖವನ್ನು ಉತ್ಪಾದಿಸುತ್ತದೆ. ಇದರಿಂದ ಋತುಚಕ್ರಕ್ಕೆ ಪ್ರಚೋದನೆ ನೀಡುತ್ತದೆ. ಅಷ್ಟೆ ಅಲ್ಲದೇ, ಈ ಸಮಯದಲ್ಲಿ ಕಾಣಿಸಿಕೊಳ್ಳುವ ನೋವಿಗೂ ಇದು ಮದ್ದಾಗಲಿದೆ. ಶುಂಠಿಯಲ್ಲಿನ ಆ್ಯಂಟಿ ಆಕ್ಸಿಡೆಂಟ್​ ಮತ್ತು ಊರಿಯೂತ ವಿರೋಧಿ ಗುಣಗಳು ನೋವಿನ ನಿವಾರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಪಪ್ಪಾಯ: ಕಚ್ಛಾ ಪಪ್ಪಾಯವನ್ನು ನಿಮ್ಮ ದೈನಂದಿನ ಡಯಟ್​ನಲ್ಲಿ ಸೇರಿಸುವುದು ಉತ್ತಮ. ಇದು ಋತುಚಕ್ರದ ನಿಯಮಿತಗೊಳಿಸುತ್ತದೆ. ಪಪ್ಪಾಯದಲ್ಲಿರುವ ಎಂಜಿಮಾ ಇದ್ದು, ಇದರನ್ನು ಪಾಪಿನ್​ ಎಂದು ಗುರುತಿಸಲಾಗಿದೆ. ಪಪ್ಪಾಯ ಮಹಿಳೆಯರಲ್ಲಿನ ಹಾರ್ಮೋನ್​ ಅನ್ನು ನಿಯಂತ್ರಸುತ್ತದೆ. ಇದರಲ್ಲಿನ ಕ್ಯಾರೊಟೆನ್​​ ಈಸ್ಟ್ರೋಜನ್​ ಹಾರ್ಮೋನ್​ ಅನ್ನು ಉತ್ತೇಜಿಸುತ್ತದೆ. ಇದು ಋತುಚಕ್ರಕ್ಕೆ ಕಾರಣವಾಗುವ ಅಂಶವಾಗಿದೆ.

ವಿಟಮಿನ್​ ಡಿ: ವಿಟಮಿನ್​ ಡಿ ಅಂಶ ಇರುವ ಮಶ್ರೂಮ್​, ಮೊಟ್ಟೆಯ ಹಳದಿ ಭಾಗ, ಕಿತ್ತಳೆ ಮುಂತಾದವುಗಳ ಸೇವನೆ ಕೂಡ ಅತ್ಯವತ್ಯಕ ಇದರ ಜೊತೆಗೆ ಸೂರ್ಯನ ಬಿಸಿಲಿಗೆ ಪ್ರತಿನಿತ್ಯ 10 ನಿಮಿಷ ಮೈಯೊಡ್ಡುವುದು ಅಗತ್ಯವಾಗಿದೆ. ದೇಹದಲ್ಲಿ ಲಭ್ಯವಾಗುವ ವಿಟಮಿನ್​ ಡಿಯಿಂದ ಹಾರ್ಮೋನ್​ಗಳ ಅಸಮತೋಲನವನ್ನು ನಿಯಂತ್ರಿಸಬಹುದಾಗಿದೆ.

ಬೆಲ್ಲ: ಸಿಹಿಯನನ್ನು ಇಷ್ಟ ಪಡುವ ಮಂದಿ ನೀವಾಗಿದ್ದರೆ, ನಿಮ್ಮ ಆಹಾರದಲ್ಲಿ ಬೆಲ್ಲವನ್ನು ಸೇರಿಸಿ. ಬೆಲ್ಲದಲ್ಲಿ ಅನೇಕ ಔಷಧ ಗುಣವಿದ್ದು, ಇದು ಕೂಡ ಅನಿಯಮಿತ ಋತುಚಕ್ರದ ಸಮಸ್ಯೆಗೆ ಪರಿಹಾರ ನೀಡಿ, ಈ ಸಮಯದಲ್ಲಿ ಕಾಡುವ ನೋವಿನಿಂದ ಮುಕ್ತಿ ನೀಡುತ್ತದೆ.

ಆಲೋವೆರಾ: ಆಲೋವೇರಾ ನಿಮ್ಮ ದೇಹಕ್ಕೆ ಚಯಪಚಯನವನ್ನು ಸುಧಾರಿಸಲು ಕರುಳಿನ ಆರೋಗ್ಯಕ್ಕೆ ಸಹಾಕಾರಿಯಾಗಿದೆ. ಇದು ಕೂಡ ಅನಿಯಮಿತ ಋತುಚಕ್ರಕ್ಕೆ ಮದ್ದಾಗಿದೆ. ಆದರೆ, ಇದನ್ನು ಋತುಚಕ್ರದ ಸಂದರ್ಭದಲ್ಲಿ ಸೇವನೆ ಮಾಡುವುದು ಒಳಿತಲ್ಲ. ಕಾರಣ ಇದು ಗರ್ಭಾಶಯದ ಸಂಕುಚನವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಶೇ 83ರಷ್ಟು ಮಹಿಳೆಯರ ಮುಟ್ಟಿನ ದಿನ ಅತಿ ನೋವುದಾಯಕ; ಸಮೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.