ಹೈದರಾಬಾದ್: ಚಿಕ್ಕವರು, ದೊಡ್ಡವರು ಎಂಬ ಬೇಧ - ಭಾವ ಇಲ್ಲದೇ ಎಲ್ಲರೂ ಸಂತಸದಿಂದ ಭಾಗಿಯಾಗುವ ಹಬ್ಬ ಹೋಳಿ. ಈ ರಂಗಿನಾಟ ಎಷ್ಟು ಸಂಭ್ರಮ ನೀಡುತ್ತದೆಯೋ ಅಷ್ಟೇ ಹಲವರಿಗೆ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹೋಳಿ ಹಬ್ಬದಂದು ತಮ್ಮ ಆತ್ಮೀಯರೊಂದಿಗೆ ಬಣ್ಣದಾಟವಾಡುವ ಸಮಯದಲ್ಲಿ ಈ ಬಣ್ಣಗಳು ಅವರ ಕಣ್ಣು, ಕೂದಲಿಗೆ ಹಾನಿ ಮಾಡಬಹುದು. ಜೊತೆಗೆ ಈ ಹಬ್ಬದಂದು ಸೇವಿಸುವ ಪಕೋಡಾ ಸೇರಿದಂತೆ ಚಾಟ್, ಭಾಂಗ್ ಅಥವಾ ಆಲ್ಕೋಹಾಲ್ ಆರೋಗ್ಯದ ಮೇಲೆ ಹಾನಿ ಮಾಡುತ್ತದೆ. ಇದರಿಂದಾಗಿ ಹೋಳಿ ಹಬ್ಬದ ಸಮಯದಲ್ಲಿ ಆಸ್ಪತ್ರೆಗೆ ದಾಖಲಾಗುವರ ಸಂಖ್ಯೆ ಕಡಿಮೆ ಇಲ್ಲ.
ಸೋಂಕಿನ ಸಮಸ್ಯೆ: ಈ ಸಂಬಂಧ ಮಾತನಾಡಿರುವ ಡಾ ರಾಜೇಶ್ ಶರ್ಮಾ, ಈ ಹಬ್ಬದ ಸಂದರ್ಭದಲ್ಲಿ ಅನೇಕರು ಜನರು ಚರ್ಮದ ಸಮಸ್ಯೆ, ಉಸಿರಾಟ ಮತ್ತು ಹೊಟ್ಟೆ ಸೋಂಕಿನಿಂದ ಬಳಲುತ್ತಾರೆ. ವಾತಾವರಣದಲ್ಲಿನ ಬದಲಾವಣೆ ಕೂಡ ಕೆಲವರು ಈ ಸಂದರ್ಭದಲ್ಲಿ ಗಾಳಿಯಿಂದ ಹರಡುವ ವೈರಸ್ಗೆ ತುತ್ತಾಗುತ್ತಾರೆ. ಇದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಮಕ್ಕಳು ಮತ್ತು ಹಿರಿಯರ ವಿಚಾರದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಿದೆ.
ಮಕ್ಕಳನ್ನು ಈ ಹೋಳಿ ಆಡದಂತೆ ತಡೆಯಲು ಸಾಧ್ಯವಿಲ್ಲ. ಮಕ್ಕಳು ಪಿಚಕಾರಿ, ಬಣ್ಣ ಮತ್ತು ನೀರಿನ ಬಲೂನ್ನಲ್ಲಿ ಈ ಸಂದರ್ಭದಲ್ಲಿ ಆಟವಾಡುತ್ತಾರೆ. ಈ ವೇಳೆ ಬಣ್ಣಗಳಿಂದ ತುಂಬಿದ ಕೈಯಲ್ಲೇ ಅವರು ನೀರು ಸೇರಿದಂತೆ ಆಹಾರ ಸೇವಿಸುತ್ತಾರೆ. ಇದರಿಂದ ಅವರ ದೇಹದಲ್ಲಿ ಕೀಟಾಣುಗಳು ಸೇರಿ, ಅವರಿಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಹೊಟ್ಟೆ ನೋವಿನ ಸಮಸ್ಯೆ ಅತಿಯಾಗಿ ಕಾಡಬಹುದು.
ಜ್ವರ- ಶೀತದ ಬಗ್ಗೆ ಎಚ್ಚರಿಕೆ ಇರಲಿ; ಶೀತ ಮತ್ತು ಜ್ವರದ ಸೋಂಕಿನ ಹೊರತಾಗಿ ಹವಾಮಾನ ವಿಚಾರದಲ್ಲಿ ಎಚ್ಚರವಹಿಸುವುದು ಅವಶ್ಯ. ಇತ್ತೀಚಿನ ದಿನದಲ್ಲಿ ಕೋವಿಡ್ -19ನಿಂದ ರೋಗ ನಿರೋಧಕ ಶಕ್ತಿ ಕೂಡ ದುರ್ಬಲವಾಗಿದ್ದು, ಅನಾರೋಗ್ಯದ ಪ್ರಕರಣ ಹೆಚ್ಚಾಗಿದೆ. ಅನೇಕ ಮಕ್ಕಳು ಜೀರ್ಣ ಸಮಸ್ಯೆ, ಆಯಾಸ ಮತ್ತು ವೀಕ್ನೆಸ್ನಿಂದ ಬಳಲುತ್ತಾರೆ. ಈ ಹಿನ್ನೆಲೆಯಲ್ಲಿ ಮಕ್ಕಳು ಆರೋಗ್ಯ ಹದಗೆಡದಂತೆ ಕಾಪಾಡಲು ಕೆಲವು ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕ. ಮಕ್ಕಳ ಡಯಟ್ ಬಗ್ಗೆ ಹೆಚ್ಚಿನ ಬಗ್ಗೆ ಕಾಳಜಿವಹಿಸಬೇಕಿದೆ. ಸಾಧ್ಯವಾದಷ್ಟು ಮಟ್ಟಿಗೆ ಅವರಿ ಮನೆಯ ಊಟವನ್ನು ನೀಡಿ. ಮಕ್ಕಳು ಕೊಳಕಾದ ಕೈಗಳಿಂದ ಊಟವನ್ನು ಸೇವಿಸದಂತೆ ನೋಡಿಕೊಳ್ಳಿ. ಊಟ- ತಿಂಡಿಗೆ ಮೊದಲು ಮಕ್ಕಳು ಸೋಪಿನಿಂದ ಚೆನ್ನಾಗಿ ಕೈ ತೊಳೆಯುವಂತೆ ಮನವರಿಕೆ ಮಾಡಿಕೊಡಬೇಕಿದೆ.
ಬಣ್ಣದ ಕೈಯಿಂದ ತಿನ್ನಲು ಬಿಡಬೇಡಿ: ಮಕ್ಕಳಿಗೆ ಅತಿ ತಂಪು ಪಾನೀಯ, ಚಿಪ್ಸ್, ಸಂಸ್ಕರಿಸಿದ ಮತ್ತು ಉಪ್ಪು ಭರಿತ ಅಹಾರ ಮತ್ತು ಸಿಹಿ ಹೆಚ್ಚಿಗೆ ನೀಡಬೇಡಿ. ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು, ಡ್ರೈ ಪ್ರೂಟ್ಸ್, ತಾಜಾ ಹಣ್ಣಿನ ರಸ ಮತ್ತು ಎಳನೀರು ಅನ್ನು ನೀಡಿ. ಪರ್ಮನೆಂಟ್ ಮತ್ತು ಕೆಮಿಕಲ್ ಯುಕ್ತ ಬಣ್ಣಗಳ ಬಳಕೆಯಿಂದ ಹಾನಿ ಆಗುವ ಕುರಿತು ಮಕ್ಕಳಿಗೆ ತಿಳಿ ಹೇಳಿ. ಹೋಳಿಯಲ್ಲಿ ಆಟವಾಡುವ ಮುನ್ನವೇ ಮಕ್ಕಳ ದೇಹಕ್ಕೆ ಎಣ್ಣೆ ಹಚ್ಚಿ, ಜೊತೆಗೆ ಅವರ ದೇಹವನ್ನು ಬಟ್ಟೆಯಿಂದ ಆದಷ್ಟು ಕವರ್ ಆಗಿರುವಂತೆ ನೋಡಿಕೊಳ್ಳುವ ಮೂಲಕ ಚರ್ಮ ಮತ್ತು ಕೂದಲಿಗೆ ಹಾನಿ ತಡೆಗಟ್ಟುಬಹುದು.
ಹಸಿ ಬಟ್ಟೆಯಲ್ಲೇ ಮಕ್ಕಳನ್ನ ದೀರ್ಘಕಾಲ ಬಿಡಬೇಡಿ: ಮಕ್ಕಳನ್ನು ದೀರ್ಘಕಾಲದ ಕಾಲ ಹಸಿ ಬಟ್ಟೆಯಲ್ಲಿ ಬಿಡಬೇಡಿ. ಮಕ್ಕಳ ಜೊತೆಗೆ ದೊಡ್ಡವರೂ ಕೂಡ ಹೋಳಿ ಹಬ್ಬದ ಸಂಭ್ರಮದಲ್ಲಿ ಜಾಗ್ರತೆ ವಹಿಸುವುದು ಅವಶ್ಯಕವಾಗಿದೆ. ದೊಡ್ಡವರು ಕೂಡ ಈ ಸಮಯದಲ್ಲು ಚರ್ಮದ ಸಮಸ್ಯೆ ಅಥವಾ ಜೀರ್ಣದ ಸಮಸ್ಯೆ ಕಾಡಬಹುದು. ಅಲ್ಲದೇ, ಈ ಸಂದರ್ಭದಲ್ಲಿ ಅತಿ ಹೆಚ್ಚಿನ ಆಲ್ಕೋಹಾಲ್ ಸೇವನೆಯಿಂದಾಗಿ ರಸ್ತೆ ಅಪಘಾತ ಅಥವಾ ಇನ್ನಿತರ ಗಾಯಗಳಿಗೆ ಕಾಣಬಹುದಾಗಿದೆ. ದೀರ್ಘಕೋವಿಡ್ ಲಕ್ಷಣವಿದ್ದವರಲ್ಲಿ ಹೃದಯದ ಬಡಿತ, ಉಸಿರಾಟದ ಸಮಸ್ಯೆ, ವೀಕ್ನೆಸ್ ಸೇರಿದಂತೆ ಇನ್ನಿತರ ಸಮಸ್ಯೆ ಕಾಡಲಿದೆ. ಜೊತೆಗೆ ಋತುಮಾನದ ವೈಪರೀತ್ಯದಿಂದ ಸೋಂಕು ತಗಲಿದ್ದು, ಈ ಸಂಬಂಧ ಕೆಲವು ಮುನ್ನೆಚ್ಚರಿಕೆ ವಹಿಸುವುದು ಅವಶ್ಯಕವಾಗಿದೆ.
ಉಸಿರಾಟ ಸಮಸ್ಯೆ ಮತ್ತು ಚರ್ಮದ ಆಲರ್ಜಿ ತಪ್ಪಿಸಲು ಕೆಮಿಕಲ್ ಹೊರತಾದ ಬಣ್ಣಗಳ ಬಳಕೆ ಮಾಡಿ. ಡಯಟ್ನಲ್ಲಿ ಎಚ್ಚರಿಕೆ ಇರಲಿದೆ. ಸಿಹಿ, ಆಹಾರ ಸೇರಿದಂತೆ ಮುಂತಾದ ಆಹಾರ ಸೇವನೆಯಲ್ಲಿ ಎಚ್ಚರ ಇರಲಿ. ಡಯಾಬೀಟಿಸ್, ಹೃದಯದ ಸಮಸ್ಯೆ ಅಥವಾ ಹೈಪರ್ಟೆನ್ಷನ್ ಸಮಸ್ಯೆಯಿಂದ ಮುಕ್ತಿ ಪಡೆಯಲು ಆಹಾರ ಸೇವನೆಯಲ್ಲಿ ಎಚ್ಚರಿಕೆ ಇರಲಿ. ಅನಾರೋಗ್ಯದಿಂದ ತಪ್ಪಿಸಿಕೊಳ್ಳಲು ಹೆಚ್ಚಿನ ನೀರುನ್ನು ಸೇವಿಸಿ.
ಇದನ್ನೂ ಓದಿ: ಈ ಬಾರಿಯ ಹೋಳಿ ಕಾಮ ದಹನಕ್ಕೆ ಶುಭ ಮೂಹೂರ್ತ ಯಾವುದು ಗೊತ್ತಾ..?