ETV Bharat / sukhibhava

ಸಾಂಪ್ರದಾಯಿಕ ಭಕ್ಷ್ಯಗಳೊಂದಿಗೆ ರಂಗಿನ ಹಬ್ಬ ಹೋಳಿ ಆಚರಿಸಿ.. - ದಹಿ ಭಲ್ಲಾ

ರಂಗಿನ ಹಬ್ಬ ಹೋಳಿ ಸಂದರ್ಭದಲ್ಲಿ ನೀವು ಸವಿಯಲೇಬೇಕಾದ ಹೋಳಿ ವಿಶೇಷ ಸಿಹಿತಿಂಡಿಗಳು ಮತ್ತು ಖಾದ್ಯಗಳ ಪಟ್ಟಿ ಇಲ್ಲಿದೆ.

Holi sweets
ಸಾಂಪ್ರದಾಯಿಕ ಭಕ್ಷ್ಯಗಳೊಂದಿಗೆ ರಂಗಿನ ಹಬ್ಬ ಹೋಳಿ ಆಚರಿಸಿ
author img

By

Published : Mar 8, 2023, 9:48 PM IST

ನವದೆಹಲಿ: ರಂಗಿನ ಹಬ್ಬದ ಹೋಳಿ ಆಚರಣೆ ಅಂತಿಮ ಹಂತಕ್ಕೆ ಬಂದಿದೆ. ಈ ಹಬ್ಬದ ಆಚರಣೆ ಎಲ್ಲೆಡೆ ಅದ್ಧೂರಿಯಾಗಿ ನಡೆಯುತ್ತಿದೆ. ಗುಲಾಲ್ ಬಣ್ಣವು ಹೋಳಿಯ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ. ತಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬಣ್ಣಗಳ ಹಬ್ಬವನ್ನು ಸಂಭ್ರಮ ಆಚರಿಸುತ್ತಿದ್ದಾರೆ. ಈ ಹೋಳಿ ಹಬ್ಬಕ್ಕೆ ಜನರು ರುಚಿಕರವಾದ ಸಿಹಿ ತಿನಿಸುಗಳ ಸವಿದು ಖುಷಿಪಡುತ್ತಾರೆ. ಸಾಂಪ್ರದಾಯಿಕ ಆಹಾರ ಮತ್ತು ಪಾನೀಯಗಳಿಲ್ಲದೇ ಹೋಳಿ ಹಬ್ಬ ಮಾತ್ರ ಪೂರ್ಣವಾಗುವುದಿಲ್ಲ.

ಹಬ್ಬದ ದಿನದಂದು, ಬುತೇಕರ ಮನೆಗಳಲ್ಲಿ ರುಚಿಕರವಾದ ಸಿಹಿ ಭಕ್ಷ್ಯಗಳ ಪರಿಮಳ ಬರುತ್ತದೆ. ಇದು ಹಬ್ಬದ ಆಚರಣೆಯನ್ನು ಮತ್ತಷ್ಟು ಇಮ್ಮಡಿಗೊಳಿಸುತ್ತದೆ. ಗುಜಿಯಾಗಳು, ಮಾಲ್ಪುವಾಗಳು, ದಹಿ ಭಲ್ಲಾಗಳು ಈ ಬಾಯಲ್ಲಿ ನೀರು ತರಿಸುವ ಸಾಂಪ್ರದಾಯಿಕ ರುಚಿ ಸಿಹಿ ತಿಂಡಿಗಳು ಹಬ್ಬ ಆಚರಣೆಯಲ್ಲಿ ತೊಡಗಿರುವವರಿಗೆ ತೃಪ್ತಿಪಡಿಸುತ್ತವೆ. ನೀವು ನಿಮ್ಮ ಕುಟುಂಬದ ಸದಸ್ಯರಿಗೆ ಹೋಳಿ ಹಬ್ಬದ ವಿಶೇಷ ಸಿಹಿ ತಿಂಡಿಗಳನ್ನು ಸವಿಯಲು ಯೋಜಿಸುತ್ತಿದ್ದಿರಾ? ಹಾಗಾದ್ರೆ ನೀವೇ ಕೆಲವು ಸಾಂಪ್ರದಾಯಿಕ ಆಹಾರ ಪದಾರ್ಥಗಳನ್ನು ತಯಾರಿಸಲು ಪ್ರಯತ್ನಿಸಬಹುದು...

ಮಾಲ್ಪುವಾ: ಮಾಲ್ಪುವಾ ಸಾಂಪ್ರದಾಯಿಕ ಭಾರತೀಯ ಸಿಹಿಯಾಗಿದೆ. ಇದು ಪ್ಯಾನ್‌ಕೇಕ್ ತರಹದ ಖಾದ್ಯವಾಗಿದೆ. ತುಪ್ಪದಲ್ಲಿ ಹುರಿದು ಸಕ್ಕರೆ ಪಾಕದಲ್ಲಿ ನೆನೆಸಲಾಗುತ್ತದೆ. ಇದರಲ್ಲಿ ತೆಂಗಿನಕಾಯಿ, ಹಿಟ್ಟು, ಹಾಲು ಮತ್ತು ಒಣ ಹಣ್ಣುಗಳು ಸೇರಿವೆ. ಜೊತೆಗೆ ಏಲಕ್ಕಿ ಸ್ಪರ್ಶವು ರುಚಿ ಹೆಚ್ಚು ಮಾಡುತ್ತದೆ. ಮಾಲ್ಪುವಾವು ರೇಷ್ಮೆಯಂತಹ ಸುವಾಸನೆ ಹೊಂದಿರುತ್ತದೆ. ಇದನ್ನು ಸರಳ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. ನೀವು ಇದನ್ನು ರಬ್ದಿಯೊಂದಿಗೆ ಪ್ರಯತ್ನಿಸಬೇಕು. ಈ ಖಾದ್ಯ ಮತ್ತಷ್ಟು ರುಚಿಯಾಗಿರುತ್ತದೆ.

ಹಲ್ವಾ: ಈ ವರ್ಣರಂಜಿತ ಹಬ್ಬವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಲ್ವಾ ಸವಿಯುವ ಮೂಲಕ ಆಚರಿಸಬಹುದು. ಹೋಳಿ, ದೀಪಾವಳಿ ಮುಂತಾದ ಹಬ್ಬಗಳಲ್ಲಿ ಇದನ್ನು ಸಾಮಾನ್ಯವಾಗಿ ಮಾಡಲಾಗುತ್ತದೆ. 'ಸೂಜಿ ಕಾ ಹಲ್ವಾ' ತುಂಬಾ ಸರಳ ಮತ್ತು ಸುಲಭವಾಗಿ ಮಾಡಲಾಗುತ್ತದೆ. ರವೆ (ಸೂಜಿ), ಹಾಲು ಮತ್ತು ಸಕ್ಕರೆ ಪಾಕದೊಂದಿಗೆ ತಯಾರಿಸಿದ ಈ ವಿಶೇಷ ತಿಂಡಿಯನ್ನು ಆನಂದಿಸಬಹುದು. ಈ ಮಿಶ್ರಣಕ್ಕೆ ಸಕ್ಕರೆ ಮತ್ತು ಖೋಯಾ ಸೇರಿಸಿ. ನಂತರ ಕತ್ತರಿಸಿದ ಬಾದಾಮಿ ಅಥವಾ ಕತ್ತರಿಸಿದ ಪಿಸ್ತಾ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಬಿಸಿ ಮಾಡಬೇಕು.

ಗುಜಿಯಾ: ಹೋಳಿ ವಿಶೇಷ ಖಾದ್ಯವಾದ ಕಾರಂಜಿಸ್ ಎಂದೂ ಕರೆಯಲ್ಪಡುವ ಗುಜಿಯಾಸ್, ಈ ಹಬ್ಬದ ಸಮಯದಲ್ಲಿ ಪ್ರತಿ ಭಾರತೀಯ ಮನೆಯಲ್ಲೂ ತಯಾರಿಸಲಾಗುವ ಅತ್ಯಂತ ಸಾಮಾನ್ಯವಾದ ಸಿಹಿತಿಂಡಿಗಳಲ್ಲಿ ಒಂದಾಗಿದೆ. ಇದನ್ನು ಖೋಯಾದಿಂದ ತಯಾರಿಸಲಾಗುತ್ತದೆ. ಅದನ್ನು ಡೀಪ್ - ಫ್ರೈ ಮಾಡುವ ಮೂಲಕ ಗರಿಗರಿಯಾಗಿ ಮಾಡಬೇಕಾತ್ತದೆ. ನೀವು ಮನೆಯಲ್ಲಿ ತಯಾರಿಸಿದ ಗುಜಿಯಾಗಳನ್ನು ಬಯಸಿದರೆ, ನೀವು ಅವುಗಳನ್ನು ತೆಂಗಿನಕಾಯಿ, ಸಕ್ಕರೆ ಅಥವಾ ಬೆಲ್ಲ ಮತ್ತು ಪುಡಿ ಮಾಡಿದ ಒಣ ಹಣ್ಣುಗಳೊಂದಿಗೆ ಸುಲಭವಾಗಿ ತಯಾರಿಸಬಹುದು. ಆದಾಗ್ಯೂ, ಅದನ್ನು ನೀವೇ ಮಾಡಲು ಸಾಧ್ಯವಾಗದಿದ್ದರೆ, ಅದನ್ನು ಮಾರುಕಟ್ಟೆಯಿಂದ ಖರೀದಿಸಿಬಹುದು.

ದಹಿ ಭಲ್ಲಾ: ಹೋಳಿ ಹಬ್ಬದ ಸಮಯದಲ್ಲಿ ದಹಿ ಭಲ್ಲಾ ಬಹಳ ಜನಪ್ರಿಯವಾಗಿದೆ. ನೀವು ದಹಿ ಭಲ್ಲೆಯನ್ನು ಹೇಗೆ ಮಾಡಬಹುದು ಎಂಬುದು ಇಲ್ಲಿದೆ. ಉದ್ದಿನಬೇಳೆ ರಾತ್ರಿ ನೆನೆಸಿ, ನಂತರ ಪೇಸ್ಟ್ ತಯಾರಿಸಿ, ಅದಕ್ಕೆ ಚಿಟಿಕೆ ಉಪ್ಪು ಸೇರಿಸಿ, ತದನಂತರ ಡೀಪ್ ಫ್ರೈ ಮಾಡಬೇಕು. ಒಂದು ತಟ್ಟೆಯನ್ನು ತೆಗೆದುಕೊಂಡು ಭಲ್ಲಾದ ಕೆಲವು ತುಂಡುಗಳನ್ನು ಮಾಡಬೇಕು. ಅದರ ಮೇಲೆ ಹುರಿದ ಮಸಾಲೆಗಳನ್ನು ಸಿಂಪಡಿಸಿ ಮತ್ತು ನಿಮ್ಮ ಮೆಚ್ಚಿನ ಚಟ್ನಿಯೊಂದಿಗೆ ಸಿಹಿ ದಹಿಯನ್ನು ಸೇರಿಸಿ ಸೇವಿಸಬಹುದು.

ಸಾಂಪ್ರದಾಯಿಕ ತಂದೈ: ಥಂಡೈ ಹಾಲು, ಸಕ್ಕರೆ ಮತ್ತು ಬೀಜಗಳಿಂದ ಮಾಡಿದ ರಿಫ್ರೆಶ್ ಪಾನೀಯವಾಗಿದೆ. ಒಂದು ಲೋಟ ಥಂಡೈ ತ್ವರಿತ ಶಕ್ತಿಯನ್ನು ನೀಡುತ್ತದೆ ಮತ್ತು ಇಡೀ ದಿನ ಬಣ್ಣಗಳೊಂದಿಗೆ ಆಟವಾಡುವ ಮನಸ್ಥಿತಿ ಹೊಂದಿಸುತ್ತದೆ. ಉತ್ತರ ಭಾರತದಲ್ಲಿ ಪ್ರಚಲಿತದಲ್ಲಿರುವ ಥಂಡೈ ಸಂಪ್ರದಾಯವಿದೆ. ಅಲ್ಲಿ ನೀವು ಗಾಂಜಾ ಗಿಡದ ಎಲೆಗಳು ಮತ್ತು ಹೂವುಗಳಿಂದ 'ಭಾಂಗ್ ಕಿ ಥಂಡೈ' ಅನ್ನು ಸಹ ಮಾಡಬಹುದು. ಅದರ ಪರಿಣಾಮವು ಅದರಲ್ಲಿ ಬಳಸುವ ಗಾಂಜಾದ ಸಾಮರ್ಥ್ಯ ಅವಲಂಬಿಸಿರುತ್ತದೆ. ಇದನ್ನು ಕಟ್ಟುನಿಟ್ಟಾಗಿ ಮಕ್ಕಳಿಂದ ದೂರವಿಡಬೇಕಾಗುತ್ತದೆ. ಏಕೆಂದರೆ, ವಯಸ್ಕರು ಮಾತ್ರ ಇದನ್ನು ಸೇವಿಸಬೇಕು.

ಇದನ್ನೂ ಓದಿ: ಬಣ್ಣದಿಂದ ನಿಮ್ಮ ಚರ್ಮ ಮತ್ತು ಕೂದಲು ರಕ್ಷಿಸಿಕೊಳ್ಳುವುದು ಹೇಗೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.