ನವದೆಹಲಿ: ಏಷ್ಯಾ, ಯುರೋಪ್, ಆಫ್ರಿಕಾ, ಮಧ್ಯ ಪ್ರಾಚ್ಯದಲ್ಲಿ ಹೃದಯ ಸಂಬಂಧಿ ಸಾವಿನ ಅಪಾಯ ಹೆಚ್ಚು ಹೆಚ್ಚಿದೆ. ಅಧಿಕ ರಕ್ತದೊತ್ತಡ, ಕೊಲೆಸ್ಟ್ರಾಲ್ ಹೆಚ್ಚಳ, ಆಹಾರ ಅಪಾಯ ಮತ್ತು ವಾಯು ಮಾಲಿನ್ಯ ಸಮಸ್ಯೆಗಳು ಹೃದಯ ಸಂಬಂಧಿ ಸಮಸ್ಯೆಗೆ ಕಾರಣವಾಗುವ ಅಂಶವಾಗಿದೆ ಎಂದು ಅಧ್ಯಯನ ಪತ್ತೆ ಮಾಡಿದೆ.
ಜಾಗತಿಕವಾಗಿ ಹೃದಯ ಸಂಬಂಧಿ ಸಾವಿನ ಸಂಖ್ಯೆ ಪ್ರಕರಣದಲ್ಲಿ ಏರಿಕೆ ಕಂಡಿದೆ. 1990ರಲ್ಲಿ 12.4 ಮಿಲಿಯನ್ ಇದ್ದ ಪ್ರಕರಣ 2022ರಲ್ಲಿ 19.8 ಮಿಲಿಯನ್ ಆಗಿದೆ. ದೇಶದೆಲ್ಲೆಡೆ 21 ಪ್ರದೇಶದಲ್ಲಿ ಅನಾರೋಗ್ಯ ದರ ಗಮನಾರ್ಹ ಏರಿಕೆ ಕಂಡಿದೆ. ಅಧ್ಯಯನ ಮಾಡಿದ 204 ಸ್ಥಳಗಳಲ್ಲಿ 27 ರಲ್ಲಿ 2015 ರಿಂದ 2022ರವರೆಗೆ ಸಾವುಗಳು ಹೆಚ್ಚಾಗಿದೆ ಎಂದು ಕಂಡು ಬಂದಿದೆ.
ನ್ಯಾಷನಲ್ ಇನ್ಸುಟಿಟ್ಯೂಟ್ ಆಫ್ ಹೆಲ್ತ್ ಅಂಡ್ ಇನ್ಸುಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಎವಲ್ಯೂಷನ್ (ಐಎಚ್ಎಂಇ), ವಾಷಿಂಗ್ಟನ್ ಯುನಿವರ್ಸಿಟಿಗಳು ಈ ಅಧ್ಯಯನದಲ್ಲಿ ಸೇರಿದೆ. ಜಾಗತಿಕ ಜನಸಂಖ್ಯೆ ಬೆಳವಣಿಗೆ ಮತ್ತು ವಯಸ್ಸಾಗುವಿಕೆ ಮತ್ತು ತಡೆಗಟ್ಟಬಹುದಾದ ಚಯಾಪಚಯ, ಪರಿಸರ ಮತ್ತು ನಡವಳಿಕೆಯ ಅಪಾಯಗಳು ಕೊಡುಗೆ ಹೊಂದಿದೆ.
ಅಧ್ಯಯನದಲ್ಲಿ ರಕ್ತ ಕೊರತೆ ಹೃದಯ ರೋಗವೂ ಜಾಗತಿಕ ಹೃದಯ ರಕ್ತನಾಳದ ರೋಗದ ಸಾವಿಗೆ ಕಾರಣವಾಗುತ್ತದೆ ಎಂದು ಅಧ್ಯಯನದಲ್ಲಿ ಪತ್ತೆಯಾಗಿದೆ. ಈ ಸಾವಿನ ದರವು ಲಕ್ಷ ಜನಸಂಖ್ಯೆಗೆ 110 ಇದೆ. ಇದಾದ ಬಳಿಕ ಬ್ರೈನ್ ಹ್ಯಾಮರೇಜ್ ಮತ್ತು ರಕ್ತಕೊರತೆ ಪಾರ್ಶ್ವವಾಯು ಸಾವು ಪ್ರಮುಖ ಕಾರಣವಾಗಿದೆ.
ಆಹಾರದ ಅಪಾಯಗಳು ಹೃದಯ ರೋಗದ ಹೊರೆಯನ್ನು ಹೆಚ್ಚಿಸಲಿದ್ದು, ಇದು ಏಷ್ಯಾದ ಕೇಂದ್ರ ಭಾಗ, ಓಸೆನಿಯಾ, ಉತ್ತರ ಆಫ್ರಿಕಾ ಮತ್ತು ಮಧ್ಯ ಪ್ರಾಚ್ಯದಲ್ಲಿ ಹೆಚ್ಚಿದೆ. ಹೃದಯ ರಕ್ತನಾಳ ರೋಗಗಳು ನಿರಂತರ ಸವಾಲಾಗಿದ್ದು, ಇದರಿಂದ ಉಂಟಾಗುವ ಅಕಾಲಿಕ ಸಾವು ಮತ್ತು ಸಾವನ್ನು ತಡೆಯಬಹುದಾಗಿದೆ.
ಪೂರ್ವ ಯುರೋಪ್ನಲ್ಲಿ ಅಧಿಕ ಮಟ್ಟದ ಸಿವಿಡಿ ಸಾವಿನ ದರಗಳು ಕಂಡು ಬಂದಿದೆ. ಇದಲ್ಲಿ ಲಕ್ಷ ಜನಸಂಖ್ಯೆಗೆ 553 ಸಾವು ಕಂಡು ಬಂದಿದೆ. ಇಲ್ಲಿ ಆಸ್ಟ್ರೇಲಿಯಾದಲ್ಲಿ ಈ ಸಿವಿಡಿ ಅಪಾಯ ಕಡಿಮೆ ಇದ್ದು, ಇಲ್ಲಿ ಲಕ್ಷ ಜನರಿಗೆ 122.5 ಸಾವಿನ ದರ ಹೊಂದಿದೆ.
ಈ ಅಧ್ಯಯನವೂ 204 ದೇಶಗಳು ಮತ್ತು ಪ್ರಾಂತ್ಯಗಳ ಡೇಟಾ ಒಳಗೊಂಡಿದೆ. ಪ್ರಮುಖ ಜಾಗತಿಕ ಮಾರ್ಪಡಿಸಬಹುದಾದ ಹೃದಯರಕ್ತನಾಳದ ಅಪಾಯದ ಅಂಶಗಳು, ರೋಗದ ತಡೆಗಟ್ಟುವಿಕೆ ಪ್ರಗತಿಗಳನ್ನು ಇದು ತೋರಿಸಿದೆ. (ಪಿಟಿಐ)
ಇದನ್ನೂ ಓದಿ: ಗೋರಖ್ಪುರ ಏಮ್ಸ್ನ ಎಂಬಿಬಿಎಸ್ ವಿದ್ಯಾರ್ಥಿಗೆ ಹೃದಯಾಘಾತ: ಆತಂಕ ಮೂಡಿಸಿದ ಪ್ರಕರಣ